Dam Water Levels: ಬೇಸಿಗೆಗೂ ಮುನ್ನವೇ ಕರ್ನಾಟಕದ ಡ್ಯಾಂಗಳಲ್ಲಿ ನೀರಿನ ಬರ!: ಯಾವ ಡ್ಯಾಂನಲ್ಲಿ ಎಷ್ಟಿದೆ ನೀರು?

ಬೆಂಗಳೂರು: ರಾಜ್ಯದಲ್ಲಿ ನವೆಂಬರ್ ತಿಂಗಳ ಅಂತ್ಯದಲ್ಲೇ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಆತಂಕಕಾರಿ ಏರಿಳಿತ ಕಂಡುಬಂದಿದೆ. ಮುಂಗಾರು ಮಳೆ ಮುಗಿದು ಹಿಂಗಾರು ಮಳೆಯ ನಿರೀಕ್ಷೆಯ ನಡುವೆಯೇ ರಾಜ್ಯದ ಹಲವು ಪ್ರಮುಖ ಅಣೆಕಟ್ಟುಗಳಿಗೆ ಒಳಹರಿವು ಗಣನೀಯವಾಗಿ ಕುಸಿದಿದೆ. ಆದರೆ ಕೆಲವು ಜಲಾಶಯಗಳಿಂದ ನೀರಿನ ಹೊರಹರಿವು ಮುಂದುವರಿದಿರುವುದರಿಂದ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿದೆ. ವಿಶೇಷವಾಗಿ ಕಾವೇರಿ ಕಣಿವೆ ಹಾಗೂ ಉತ್ತರ ಕರ್ನಾಟಕದ ಕೆಲವು ಪ್ರಮುಖ ಜಲಾಶಯಗಳಲ್ಲಿನ ನೀರಿನ ಸಂಗ್ರಹದ ಪ್ರಮಾಣ ಕಡಿಮೆಯಾಗಿದೆ

ನೀರಾವರಿ ಇಲಾಖೆಯ 2026ರ ನವೆಂಬರ್ 24 ಮತ್ತು 25ರ ಅಂಕಿಅಂಶಗಳ ಪ್ರಕಾರ, ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಒಂದೇ ರೀತಿಯಾಗಿಲ್ಲ. ಕೆಲವು ಅಣೆಕಟ್ಟುಗಳು ಉತ್ತಮ ಮಟ್ಟದಲ್ಲಿ ನೀರು ಹೊಂದಿದ್ದರೆ, ಇನ್ನು ಕೆಲವು ಜಲಾಶಯಗಳಲ್ಲಿ ಸಂಗ್ರಹ ಪ್ರಮಾಣ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಒಳಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ನೀರು ನಿರ್ವಹಿಸುವುದು ಸವಾಲಾಗುವ ಸಾಧ್ಯತೆಯಿದೆ.

Dam Water Levels Karnataka Dam Water Levels Drop KRS at 39 Tungabhadra at Just 22 Full Reservoir Report

ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಸಂಗ್ರಹ ಎಷ್ಟಿದೆ?

ಮಂಡ್ಯ, ಮೈಸೂರು ಮತ್ತು ಬೆಂಗಳೂರು ಭಾಗದ ಜನರಿಗೆ ಪ್ರಮುಖ ನೀರಿನ ಮೂಲವಾಗಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನ ನೀರಿನ ಮಟ್ಟ ಈಗ ಗಮನಾರ್ಹವಾಗಿ ಇಳಿಕೆಯಾಗಿದೆ. ಒಟ್ಟು 49.452 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 19.556 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಅಂದರೆ ಜಲಾಶಯದ ಒಟ್ಟು ಸಾಮರ್ಥ್ಯದ ಶೇ.39.545ರಷ್ಟು ನೀರು ಮಾತ್ರ ಲಭ್ಯವಿದೆ. ಇದರಲ್ಲಿ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ 11.178 ಟಿಎಂಸಿ ಅಡಿಯಷ್ಟಿದೆ.

ಜಲಾಶಯಕ್ಕೆ ಪ್ರಸ್ತುತ 376 ಕ್ಯೂಸೆಕ್ ಒಳಹರಿವು ಇದ್ದರೆ, ಹೊರಹರಿವು 5,473 ಕ್ಯೂಸೆಕ್ ಇದೆ. ಒಳಹರಿವಿಗೆ ಹೋಲಿಸಿದರೆ ಹೊರಹರಿವಿನ ಪ್ರಮಾಣ ಹೆಚ್ಚಿರುವುದರಿಂದ ಜಲಾಶಯದ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಇನ್ನು ಕಾವೇರಿ ಕಣಿವೆಯ ಇತರ ಪ್ರಮುಖ ಜಲಾಶಯಗಳಾದ ಹಾರಂಗಿ, ಹೇಮಾವತಿ ಮತ್ತು ಕಬಿನಿಯಲ್ಲಿಯೂ ನೀರಿನ ಮಟ್ಟದಲ್ಲಿ ವ್ಯತ್ಯಾಸ ಕಂಡುಬಂದಿದೆ.

- ಹಾರಂಗಿ ಜಲಾಶಯ ಶೇ.52.412ರಷ್ಟು ಭರ್ತಿಯಾಗಿದೆ.
- ಹೇಮಾವತಿ ಜಲಾಶಯ ಶೇ.48.648ರಷ್ಟು ನೀರು ಹೊಂದಿದೆ.
- ಕಬಿನಿ ಜಲಾಶಯದಲ್ಲಿ ಶೇ.60.586ರಷ್ಟು ನೀರಿನ ಸಂಗ್ರಹವಿದೆ.

ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಿಗೆ ಮಳೆ; ದೆಹಲಿ, ಪಂಜಾಬ್‌ನಲ್ಲಿ ದಟ್ಟ ಮಂಜಿನ ಆತಂಕ!
ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಿಗೆ ಮಳೆ; ದೆಹಲಿ, ಪಂಜಾಬ್‌ನಲ್ಲಿ ದಟ್ಟ ಮಂಜಿನ ಆತಂಕ!

ತುಂಗಭದ್ರಾ ಜಲಾಶಯ

ಉತ್ತರ ಕರ್ನಾಟಕದ ರೈತರ ಪಾಲಿಗೆ ಪ್ರಮುಖ ಆಸರೆಯಾಗಿರುವ ತುಂಗಭದ್ರಾ ಅಣೆಕಟ್ಟಿನ ನೀರಿನ ಸಂಗ್ರಹದ ಪ್ರಮಾಣ ಆತಂಕ ಮೂಡಿಸಿದೆ. ಒಟ್ಟು 105.788 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಸದ್ಯ 23.537 ಟಿಎಂಸಿ ಅಡಿ ನೀರು ಮಾತ್ರ ಇದೆ. ಇದು ಜಲಾಶಯದ ಒಟ್ಟು ಸಾಮರ್ಥ್ಯದ ಶೇ.22.249ರಷ್ಟಾಗಿದೆ. ಅಂದರೆ ಒಟ್ಟು ಸಾಮರ್ಥ್ಯಕ್ಕೆ ಹೋಲಿಸಿದರೆ ನೀರಿನ ಸಂಗ್ರಹ ನಾಲ್ಕನೇ ಒಂದು ಭಾಗಕ್ಕೂ ಕಡಿಮೆಯಾಗಿದೆ.

ಇನ್ನೂ ಆತಂಕಕಾರಿ ಸಂಗತಿಯೆಂದರೆ ಜಲಾಶಯಕ್ಕೆ ಒಳಹರಿವು ಶೂನ್ಯಕ್ಕೆ ಇಳಿದಿದೆ. ಆದರೆ ಕಾಲುವೆಗಳು ಮತ್ತು ನದಿಗೆ ಸೇರಿ 6,513 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ ಎಂದು ಅಂಕಿಅಂಶಗಳು ತಿಳಿಸಿವೆ.

 Karnataka weather: ಇಂದು ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ 13 ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆ ಎಚ್ಚರಿಕೆ
Karnataka weather: ಇಂದು ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ 13 ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆ ಎಚ್ಚರಿಕೆ

ಭದ್ರಾ, ಹಿಡ್ಕಲ್ ಜಲಾಶಯ

ರಾಜ್ಯದ ಎಲ್ಲ ಜಲಾಶಯಗಳಲ್ಲಿಯೂ ನೀರಿನ ಕೊರತೆಯ ಪರಿಸ್ಥಿತಿ ಇಲ್ಲ. ಕೆಲವು ಪ್ರಮುಖ ಅಣೆಕಟ್ಟುಗಳು ಇನ್ನೂ ಉತ್ತಮ ಪ್ರಮಾಣದ ನೀರನ್ನು ಹೊಂದಿವೆ. ಉತ್ತರ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಿಡ್ಕಲ್ ಅಣೆಕಟ್ಟು ಶೇ.82.333ರಷ್ಟು ಭರ್ತಿಯಾಗಿದೆ. ಪ್ರಸ್ತುತ ಅಂಕಿಅಂಶಗಳ ಪ್ರಕಾರ ಇದು ಉತ್ತಮ ಸಂಗ್ರಹ ಹೊಂದಿರುವ ಜಲಾಶಯಗಳಲ್ಲಿ ಒಂದಾಗಿದೆ.

ಮತ್ತೊಂದೆಡೆ, ಭದ್ರಾ ಜಲಾಶಯದಲ್ಲಿಯೂ ಶೇ.76.066ರಷ್ಟು ನೀರು ಸಂಗ್ರಹವಾಗಿದೆ. ಒಟ್ಟು 71.55 ಟಿಎಂಸಿ ಅಡಿ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ 54.414 ಟಿಎಂಸಿ ಅಡಿ ನೀರು ಲಭ್ಯವಿದೆ. ಇನ್ನು ವಾಣಿವಿಲಾಸ ಸಾಗರ ಜಲಾಶಯ ಶೇ.64.863ರಷ್ಟು ಹಾಗೂ ನಾರಾಯಣಪುರ ಜಲಾಶಯ ಶೇ.62.414ರಷ್ಟು ನೀರನ್ನು ಹೊಂದಿವೆ. ಈ ಜಲಾಶಯಗಳ ನೀರಿನ ಸಂಗ್ರಹ ಸದ್ಯಕ್ಕೆ ತುಸು ಸಮಾಧಾನಕರವಾಗಿದೆ.

ಆಲಮಟ್ಟಿ ಡ್ಯಾಂನಲ್ಲೂ ನೀರಿನ ಮಟ್ಟ ಇಳಿಕೆ

ರಾಜ್ಯದ ಅತಿದೊಡ್ಡ ಜಲಾಶಯಗಳಲ್ಲಿ ಒಂದಾಗಿರುವ ಆಲಮಟ್ಟಿ ಅಣೆಕಟ್ಟಿನ ನೀರಿನ ಸಂಗ್ರಹವೂ ಅರ್ಧಕ್ಕಿಂತ ಕಡಿಮೆಯಾಗಿದೆ. ಒಟ್ಟು 123.081 ಟಿಎಂಸಿ ಅಡಿ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಜಲಾಶಯದಲ್ಲಿ ಪ್ರಸ್ತುತ 52.870 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಇದು ಜಲಾಶಯದ ಒಟ್ಟು ಸಾಮರ್ಥ್ಯದ ಶೇ.42.955ರಷ್ಟಾಗಿದೆ. ಕೃಷ್ಣಾ ಕಣಿವೆಯ ಪ್ರಮುಖ ನೀರಾವರಿ ಯೋಜನೆಗಳಿಗೆ ಆಲಮಟ್ಟಿ ಜಲಾಶಯ ಮಹತ್ವದ ನೀರಿನ ಮೂಲವಾಗಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ನಿರ್ವಹಣೆ ಪ್ರಮುಖವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+