ಜಾಬ್‌ ಮಾರುಕಟ್ಟೆ ಫ್ರೀಜ್ ಆಗಿದೆ, ಆದ್ರೆ Gen Zಗಳಿಗೆ ಎಐ ಬಲವಿದೆ! ಕೆಲಸ ಪಡೆಯಲು ಲಿಂಕ್ಡ್‌ಇನ್ CEO ಕೊಟ್ಟ ಟಿಪ್ಸ್ ಏನು?

ಬೆಂಗಳೂರು: ಕೃತಕ ಬುದ್ಧಿಮತ್ತೆ ಅಥವಾ ಈ ಎಐ ಇಡೀ ಜಾಗತಿಕ ಕಾರ್ಯಕ್ಷೇತ್ರದ ಚಿತ್ರಣವನ್ನೇ ಬದಲಿಸುತ್ತಿರುವ ಈ ಹೊತ್ತಿನಲ್ಲಿ, ಹೊಸದಾಗಿ ವೃತ್ತಿಜೀವನ ಆರಂಭಿಸುತ್ತಿರುವ ಯುವಕರಿಗೆ ಕೆಲಸ ಹುಡುಕುವುದೇ ದೊಡ್ಡ ಸವಾಲಾಗಿದೆ. ಆದರೆ, ಈ ಇಂತಹಃ ಪರಿಸ್ಥಿತಿಯಲ್ಲೂ ಯುವ ಪೀಳಿಗೆಗೆ ಒಂದು ಅನಿರೀಕ್ಷಿತ ಲಾಭವಿದೆ ಎಂದು ಲಿಂಕ್ಡ್‌ಇನ್ ಸಿಇಒ ಡೇನಿಯಲ್ ಶಪಿರೊ ಭರವಸೆ ವ್ಯಕ್ತಪಡಿಸಿದ್ದಾರೆ.

ಫಾರ್ಚೂನ್ ಮ್ಯಾಗಜಿನ್ನಿಗೆ ನೀಡಿದ ಸಂದರ್ಶನದಲ್ಲಿ ಜೆನ್ ಝೀ ಉದ್ಯೋಗ ಮಾರುಕಟ್ಟೆಯ ಕುರಿತು ಮಾತನಾಡಿರುವ ಅವರು, "ಸದ್ಯ ಉದ್ಯೋಗ ಮಾರುಕಟ್ಟೆ ಸಂಪೂರ್ಣ ಫ್ರೀಜ್ ಆಗಿದೆ. ಇದು ವೃತ್ತಿಜೀವನದ ಆರಂಭದಲ್ಲಿರುವವರಿಗೆ ಕಷ್ಟಕರವಾಗಿದೆ ಎಂಬುದು ನಿಜ. ಆದರೆ, ಕಂಪನಿಗಳು ಜೆನ್ ಝೀ ಯುವಕರನ್ನ ಎಐ ತಂತ್ರಜ್ಞಾನಕ್ಕೆ ಹೆಚ್ಚು ಒಗ್ಗಿಕೊಂಡವರು ಎಂದು ಭಾವಿಸುವುದೇ ಅವರಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

LinkedIn CEO Daniel Shapero Says Job Market Is Frozen But Gen Z Holds An Unexpected AI Advantage

ಟೆಕ್ ವಲಯಕ್ಕೆ ಮಾತ್ರವಲ್ಲ, ಎಲ್ಲೆಡೆ ಎಐ ಕೌಶಲ್ಯ ಉದ್ಯೋಗಕ್ಕೆ ಭಾರಿ ಬೇಡಿಕೆ

ಕಂಪನಿಗಳು ತಮ್ಮ ಕಾರ್ಯವೈಖರಿಯನ್ನ ಆಧುನೀಕರಿಸಲು ಬಯಸುತ್ತಿದ್ದು, ಹೊಸ ತಂತ್ರಜ್ಞಾನವನ್ನ ಬಳಸಬಲ್ಲ ಯುವ ಪ್ರತಿಭೆಗಳ ಹುಡುಕಾಟದಲ್ಲಿವೆ. "ಇಂದಿನ ದಿನಗಳಲ್ಲಿ ಪ್ರತಿಯೊಂದು ಕಂಪನಿಯೂ ಒಂದು ರೀತಿಯಲ್ಲಿ ಟೆಕ್ ಕಂಪನಿಯೇ ಆಗಿದೆ" ಎಂದು ಶಪಿರೊ ಹೇಳಿದ್ದಾರೆ.

ಲಿಂಕ್ಡ್‌ಇನ್ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ-ಅಂಶಗಳು ಎಐ ಕೌಶಲ್ಯ ಉದ್ಯೋಗದ ಮಹತ್ವವನ್ನ ಸ್ಪಷ್ಟಪಡಿಸುತ್ತವೆ:

* ಕಳೆದ 12 ತಿಂಗಳಲ್ಲಿ ಎಐ ಸಾಕ್ಷರತೆ ಬಯಸುವ ಉದ್ಯೋಗಾವಕಾಶಗಳ ಪ್ರಮಾಣ ಶೇ. 65ರಷ್ಟು ಹೆಚ್ಚಾಗಿದೆ.

* ತಮ್ಮ ಪ್ರೊಫೈಲ್‌ನಲ್ಲಿ ಎಐ ಕೌಶಲ್ಯಗಳನ್ನ ಉಲ್ಲೇಖಿಸಿರುವ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಶೇ. 78ರಷ್ಟು ಹೆಚ್ಚು ಹಾಗೂ ಪ್ರಮೋಷನ್‌ ಸಿಗುವ ಸಾಧ್ಯತೆ ಶೇ. 11ರಷ್ಟು ಹೆಚ್ಚಿದೆ.

* ಎಐ ತಂತ್ರಜ್ಞಾನದಿಂದ ಸುಮಾರು 20 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿದ್ದು, ಆರಂಭಿಕ ಹಂತದ ಎಐ ಎಂಜಿನಿಯರ್‌ಗಳ ನೇಮಕಾತಿ ಅಮೆರಿಕದಲ್ಲಿ ಶೇ. 68 ಹಾಗೂ ಭಾರತದಲ್ಲಿ ಶೇ. 55ರಷ್ಟು ಏರಿಕೆಯಾಗಿದೆ.

ಆಫೀಸ್‌ಗೆ ಹೋಗಲು Gen Z ಉದ್ಯೋಗಿಗಳೇ ಹೆಚ್ಚು ಆಸಕ್ತಿ; ವಾರಕ್ಕೆ ಎಷ್ಟು ದಿನ ಕೆಲಸ ಮಾಡ್ತಾರಂತೆ ಗೊತ್ತಾ?
ಆಫೀಸ್‌ಗೆ ಹೋಗಲು Gen Z ಉದ್ಯೋಗಿಗಳೇ ಹೆಚ್ಚು ಆಸಕ್ತಿ; ವಾರಕ್ಕೆ ಎಷ್ಟು ದಿನ ಕೆಲಸ ಮಾಡ್ತಾರಂತೆ ಗೊತ್ತಾ?

ವಿಶೇಷವೆಂದರೆ, ಎಐ ಕೌಶಲ್ಯದ ಬೇಡಿಕೆ ಕೇವಲ ಎಂಜಿನಿಯರಿಂಗ್ ಅಥವಾ ಐಟಿ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಮಾರ್ಕೆಟಿಂಗ್, ಡಿಸೈನಿಂಗ್, ಬರವಣಿಗೆ, ಆಡಳಿತ ಹಾಗೂ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸೇರಿದಂತೆ ಎಲ್ಲಾ ವಲಯಗಳಲ್ಲೂ ಎಐ ಬಳಸಬಲ್ಲವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.

ಕೇವಲ ಅರ್ಜಿ ಸಲ್ಲಿಸಿದರೆ ಸಾಲದು: ಪ್ರೊಫೆಷನಲ್ ನೆಟ್‌ವರ್ಕಿಂಗ್ ಏಕೆ ಮುಖ್ಯ?

ಲಿಂಕ್ಡ್‌ಇನ್‌ನಲ್ಲಿ ಪ್ರಸ್ತುತ 130 ಕೋಟಿಗೂ ಹೆಚ್ಚು ಸದಸ್ಯರಿದ್ದು, ಪ್ರತಿ ನಿಮಿಷಕ್ಕೆ ಸುಮಾರು 9,000 ಉದ್ಯೋಗ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಇಂತಹ ತೀವ್ರ ಪೈಪೋಟಿಯ ನಡುವೆ ಕೇವಲ ಆನ್‌ಲೈನ್ ಅರ್ಜಿ ಸಲ್ಲಿಸುವುದರಿಂದ ಕೆಲಸ ಸಿಗುವುದು ಕಷ್ಟ.

"ಉದ್ಯೋಗ ಹುಡುಕುವುದು ಸ್ಟಾರ್ಟ್‌ಅಪ್‌ಗೆ ಬಂಡವಾಳ ಸಂಗ್ರಹಿಸಿದಂತೆ. ಕೇವಲ ಇಮೇಲ್ ಕಳುಹಿಸಿ ಕೂರುವ ಬದಲು ಜನರನ್ನ ಭೇಟಿಯಾಗಿ ಪರಿಚಯ ಬೆಳೆಸಿಕೊಳ್ಳಬೇಕು" ಎಂದು ಶಪಿರೊ ಸಲಹೆ ನೀಡಿದ್ದಾರೆ.

ಲಿಂಕ್ಡ್‌ಇನ್ ನಡೆಸಿದ ಅಧ್ಯಯನದ ಪ್ರಕಾರ, ತಾವು ಅರ್ಜಿ ಸಲ್ಲಿಸುವ ಕಂಪನಿಯಲ್ಲಿ ಈಗಾಗಲೇ ಪರಿಚಯಸ್ಥರನ್ನು ಹೊಂದಿರುವ ಅಭ್ಯರ್ಥಿಗಳಿಗೆ ಕೆಲಸ ಸಿಗುವ ಸಾಧ್ಯತೆ ಇತರರಿಗಿಂತ ಏಳು ಪಟ್ಟು ಹೆಚ್ಚಿರುತ್ತದೆ. ಹೀಗಾಗಿ ಪ್ರೊಫೆಷನಲ್ ನೆಟ್‌ವರ್ಕಿಂಗ್ ತುಂಬ ಮುಖ್ಯ.

ನೆರವು ಕೇಳಲು ಹಿಂಜರಿಯುತ್ತಿರುವ ಜೆನ್ ಝೀ ಯುವಕರು: ಅಧ್ಯಯನದ ಕಂಡುಬಂದ ಅಚ್ಚರಿಯ ಅಂಶಗಳು

ಭಾರತ, ಅಮೆರಿಕ, ಬ್ರಿಟನ್ ಸೇರಿದಂತೆ 12 ದೇಶಗಳ 18,050 ಉದ್ಯೋಗಿಗಳ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಅಚ್ಚರಿಯ ಸಂಗತಿಗಳು ಹೊರಬಿದ್ದಿವೆ. ಸದಾ ಆನ್‌ಲೈನ್‌ನಲ್ಲಿ ಸಕ್ರಿಯವಾಗಿರುವ ಜೆನ್ ಝೀ ಯುವಕರು, ವೃತ್ತಿಪರ ಸಂಬಂಧ ಬೆಳೆಸುವಲ್ಲಿ ಹಿಂದೆ ಬಿದ್ದಿದ್ದಾರೆ:

* ಶೇ. 72ರಷ್ಟು ಜೆನ್ ಝೀ ಉದ್ಯೋಗಿಗಳು ತಮ್ಮ ವೃತ್ತಿ ಬೆಳವಣಿಗೆಗೆ ನೆರವಾಗುವ ಜನರೊಂದಿಗೆ ಸಂಪರ್ಕವಿಲ್ಲ ಎಂದು ಭಾವಿಸಿದ್ದಾರೆ.

* ಶೇ. 37ರಷ್ಟು ಮಂದಿ ಇತರರಿಗೆ ತೊಂದರೆಯಾಗಬಹುದು ಎಂದು ಭಯಪಟ್ಟರೆ, ಅಷ್ಟೇ ಪ್ರಮಾಣದವರು ಇತರರು ತಮ್ಮನ್ನ ತಪ್ಪಾಗಿ ಭಾವಿಸಬಹುದು ಎಂಬ ಆತಂಕದಲ್ಲಿದ್ದಾರೆ.

* ಶೇ. 64ರಷ್ಟು ಯುವಕರಿಗೆ ವೃತ್ತಿಪರ ನೆಟ್‌ವರ್ಕ್ ಬೆಳೆಸಿಕೊಳ್ಳುವುದು ಹೇಗೆ ಎಂಬ ಸ್ಪಷ್ಟ ಮಾರ್ಗದರ್ಶನವೇ ಸಿಕ್ಕಿಲ್ಲ.

LinkedIn Viral Post: “ನಾನು ಸಂತೋಷವಾಗಿದ್ದೇನೆ” ಕೆಲಸ ಇದ್ರೆ ಹೇಳಿ ಪ್ಲೀಸ್ ಎಂದ ಜೆನ್ ಜೀ ಯುವಕ, ಕಾಲೆಳೆದ ನೆಟ್ಟಿಗರು!
LinkedIn Viral Post: “ನಾನು ಸಂತೋಷವಾಗಿದ್ದೇನೆ” ಕೆಲಸ ಇದ್ರೆ ಹೇಳಿ ಪ್ಲೀಸ್ ಎಂದ ಜೆನ್ ಜೀ ಯುವಕ, ಕಾಲೆಳೆದ ನೆಟ್ಟಿಗರು!

ಆದರೆ, ಮತ್ತೊಂದೆಡೆ ಶೇ. 83ರಷ್ಟು ಹಿರಿಯ ಉದ್ಯೋಗಿಗಳು (Millennials ಮತ್ತು Gen X), ತಮಗೆ ವೈಯಕ್ತಿಕ ಪರಿಚಯವಿಲ್ಲದಿದ್ದರೂ ವೃತ್ತಿಜೀವನದ ಆರಂಭದಲ್ಲಿರುವ ಯುವಕರಿಗೆ ಮಾರ್ಗದರ್ಶನ ನೀಡಲು ಸಿದ್ಧವಿರುವುದಾಗಿ ಹೇಳಿದ್ದಾರೆ.

ಹೀಗಾಗಿ, ಹಿಂಜರಿಕೆ ಬಿಟ್ಟು ಎಐ ಕೌಶಲ್ಯದ ಜೊತೆಗೆ ಉತ್ತಮ ನೆಟ್‌ವರ್ಕ್ ಬೆಳೆಸಿಕೊಂಡರೆ ಜೆನ್ ಝೀ ಯುವಕರು ಸುಲಭವಾಗಿ ಉತ್ತಮ ಉದ್ಯೋಗ ಗಿಟ್ಟಿಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+