ಆಫೀಸ್‌ಗೆ ಹೋಗಲು Gen Z ಉದ್ಯೋಗಿಗಳೇ ಹೆಚ್ಚು ಆಸಕ್ತಿ; ವಾರಕ್ಕೆ ಎಷ್ಟು ದಿನ ಕೆಲಸ ಮಾಡ್ತಾರಂತೆ ಗೊತ್ತಾ?

ನವದೆಹಲಿ: ಇಂದಿನ ಉದ್ಯೋಗ ಕ್ಷೇತ್ರದಲ್ಲಿ ಯುವಜನರ ಕೆಲಸದ ಆದ್ಯತೆಗಳು ಬದಲಾಗುತ್ತಿವೆ. ಜನರೇಷನ್‌ Z (Gen Z) ಉದ್ಯೋಗಿಗಳು ವಾರಕ್ಕೆ ಸರಾಸರಿ 3.4 ದಿನ ಕಚೇರಿಯಿಂದಲೇ ಕೆಲಸ ಮಾಡಲು ಇಷ್ಟಪಡುತ್ತಾರೆ ಎಂದು ಸಾವಿಲ್ಸ್ ಇಂಡಿಯಾ (Savills India) ವರದಿ ತಿಳಿಸಿದೆ. ಈ ಪ್ರಮಾಣ ಮಿಲೇನಿಯಲ್‌ ಉದ್ಯೋಗಿಗಳಿಗಿಂತ ಹೆಚ್ಚಾಗಿದ್ದು, ಜನರೇಷನ್‌ X ಮತ್ತು ಬೇಬಿ ಬೂಮರ್‌ ಉದ್ಯೋಗಿಗಳಿಗಿಂತ ಸ್ವಲ್ಪ ಕಡಿಮೆಯಾಗಿದೆ.

1997ರಿಂದ 2012ರ ನಡುವೆ ಜನಿಸಿದವರನ್ನು ಜನರೇಷನ್‌ Z ಎಂದು ಕರೆಯಲಾಗುತ್ತದೆ. ಈ ಪೀಳಿಗೆಯ ಉದ್ಯೋಗಿಗಳು ಕಚೇರಿಯಲ್ಲಿ ಉತ್ತಮ ವೈ-ಫೈ ಸೌಲಭ್ಯ, ಸಾರ್ವಜನಿಕ ಸಾರಿಗೆ ಸಂಪರ್ಕ, ಜಿಮ್‌ ಹಾಗೂ ಪಿಲೇಟ್ಸ್‌ ಸ್ಟುಡಿಯೋಗಳಂತಹ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ವರದಿ ತಿಳಿಸಿದೆ.

Gen Z Employees Gen Z Prefer Working from the office an average of 3 4 days a week Savills India report

ವಾರಕ್ಕೆ ಎಷ್ಟು ದಿನ ಕಚೇರಿಗೆ ಹೋಗಲು ಇಷ್ಟ?

ಯುವ ಉದ್ಯೋಗಿಗಳು ವಾರದಲ್ಲಿ ಕಡಿಮೆ ದಿನ ಕಚೇರಿಗೆ ಹೋಗಲು ಬಯಸುತ್ತಾರೆ ಎಂಬ ಸಾಮಾನ್ಯ ಅಭಿಪ್ರಾಯಕ್ಕೆ Gen Z ಉದ್ಯೋಗಿಗಳ ಆದ್ಯತೆ ವಿಭಿನ್ನವಾಗಿದೆ. ವರದಿಯ ಪ್ರಕಾರ, ಎಲ್ಲ ಪೀಳಿಗೆಯ ಉದ್ಯೋಗಿಗಳು ಪ್ರಸ್ತುತ ವಾರಕ್ಕೆ ಸರಾಸರಿ ನಾಲ್ಕು ದಿನ ಕಚೇರಿಗೆ ಹಾಜರಾಗುತ್ತಿದ್ದಾರೆ.

ವಿವಿಧ ಪೀಳಿಗೆಯ ಉದ್ಯೋಗಿಗಳ ಕಚೇರಿ ಹಾಜರಾತಿಯ ಆದ್ಯತೆ ಹೀಗಿದೆ:

- ಕಿರಿಯ ಮಿಲೇನಿಯಲ್‌ಗಳು: ವಾರಕ್ಕೆ 3.2 ದಿನ
- ಹಿರಿಯ ಮಿಲೇನಿಯಲ್‌ಗಳು: ವಾರಕ್ಕೆ 3.3 ದಿನ
- ಜನರೇಷನ್‌ Z: ವಾರಕ್ಕೆ 3.4 ದಿನ
- ಜನರೇಷನ್‌ X ಮತ್ತು ಬೇಬಿ ಬೂಮರ್‌ಗಳು: ವಾರಕ್ಕೆ 3.5 ದಿನ

Gen Z ಉದ್ಯೋಗಿಗಳು ಇತರ ಯುವ ಪೀಳಿಗೆಗಳಿಗಿಂತ ಹೆಚ್ಚು ದಿನ ಕಚೇರಿಯಲ್ಲಿ ಕೆಲಸ ಮಾಡಲು ಇಷ್ಟಪಡುತ್ತಿದ್ದರೂ, ಕೆಲಸ ಮತ್ತು ವೈಯಕ್ತಿಕ ಜೀವನದ ನಡುವಿನ ಸಮತೋಲನಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಈ ಪೀಳಿಗೆಯ ಎಲ್ಲ ಪ್ರತಿಕ್ರಿಯಿಸಿದವರೂ ಕೆಲಸ-ಜೀವನ ಸಮತೋಲನವು ತಮಗೆ ಮಧ್ಯಮ ಅಥವಾ ಅತ್ಯಂತ ಮುಖ್ಯ ಎಂದು ತಿಳಿಸಿದ್ದಾರೆ.

ಉತ್ತಮ ವೈ-ಫೈ, ಸಾರಿಗೆ ಸಂಪರ್ಕಕ್ಕೆ ಆದ್ಯತೆ

ಕಚೇರಿಯಲ್ಲಿ ಉತ್ತಮ ಗುಣಮಟ್ಟದ ವೈ-ಫೈ ಸೌಲಭ್ಯವು ಎಲ್ಲ ವಯೋಮಾನದ ಉದ್ಯೋಗಿಗಳಿಗೂ ಅತ್ಯಂತ ಅಗತ್ಯವಾದ ಸೌಲಭ್ಯವಾಗಿದೆ. ಆದರೆ ಯುವ ಉದ್ಯೋಗಿಗಳು ಸಾರ್ವಜನಿಕ ಸಾರಿಗೆ ಸಂಪರ್ಕಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ವಯಸ್ಸು ಹೆಚ್ಚಾದಂತೆ ಕಚೇರಿಯಲ್ಲಿನ ಸಭೆ ಕೊಠಡಿಗಳ ಸೌಲಭ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ವರದಿಯಲ್ಲಿ ಕಂಡುಬಂದಿದೆ.

ಸಾವಿಲ್ಸ್ ಇಂಡಿಯಾದ ಸಂಶೋಧನೆ ಮತ್ತು ಸಲಹಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ನಂದನ್ ಮಾತನಾಡಿ, ಭಾರತದ ಉದ್ಯೋಗ ಕ್ಷೇತ್ರವು ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಗಳು ಕಚೇರಿ ವಿನ್ಯಾಸ, ವಿಶ್ವಾಸಾರ್ಹ ತಂತ್ರಜ್ಞಾನ ಮತ್ತು ಸಂಪರ್ಕ ವ್ಯವಸ್ಥೆಗಳ ಬಗ್ಗೆ ಗಮನಹರಿಸಬೇಕಿದೆ ಎಂದು ಹೇಳಿದ್ದಾರೆ.

ಯುವ ಉದ್ಯೋಗಿಗಳ ನಿರೀಕ್ಷೆಗಳಿಗೆ ತಕ್ಕಂತೆ ಕಚೇರಿಗಳನ್ನು ರೂಪಿಸಲು ಸಾರ್ವಜನಿಕ ಸಾರಿಗೆ ಸಂಪರ್ಕ ಹಾಗೂ ಸಮೀಪದಲ್ಲಿರುವ ಜೀವನಶೈಲಿ ಸೌಲಭ್ಯಗಳು ಪ್ರಮುಖವಾಗಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Gen Z ಉದ್ಯೋಗಿಗಳಿಗೆ ದೂರದ ಪ್ರಯಾಣದ ಸಮಸ್ಯೆ

ವರದಿಯ ಪ್ರಕಾರ, Gen Z ಉದ್ಯೋಗಿಗಳು ಇತರ ಪೀಳಿಗೆಯ ಉದ್ಯೋಗಿಗಳಿಗಿಂತ ಹೆಚ್ಚು ಸಮಯ ಪ್ರಯಾಣಕ್ಕಾಗಿ ವ್ಯಯಿಸುತ್ತಿದ್ದಾರೆ. ಈ ಪೀಳಿಗೆಯ ಶೇ. 46ರಷ್ಟು ಉದ್ಯೋಗಿಗಳು ಕಚೇರಿಗೆ ತಲುಪಲು 41 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಪ್ರಯಾಣಿಸುತ್ತಾರೆ.

ನಗರ ಕೇಂದ್ರಗಳ ಹೊರಭಾಗದಲ್ಲಿ ಕೈಗೆಟುಕುವ ದರದಲ್ಲಿ ಮನೆಗಳು ಲಭ್ಯವಿರುವುದರಿಂದ ಯುವ ಉದ್ಯೋಗಿಗಳು ದೂರದ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಕಚೇರಿಗೆ ತೆರಳಲು ಹೆಚ್ಚಿನ ಸಮಯ ಬೇಕಾಗುತ್ತಿದೆ ಎಂದು ವರದಿ ತಿಳಿಸಿದೆ.

Gen Z Employees: ಜಿಮ್‌, ವೆಲ್‌ನೆಸ್‌ ಕೇಂದ್ರಗಳಿಗೆ ಯುವಜನರ ಒಲವು

ಕಚೇರಿಯ ಸಮೀಪವಿರುವ ಸೌಲಭ್ಯಗಳ ಪೈಕಿ ರೆಸ್ಟೋರೆಂಟ್‌ಗಳು ಎಲ್ಲ ವಯೋಮಾನದ ಉದ್ಯೋಗಿಗಳಿಂದಲೂ ಹೆಚ್ಚಿನ ಮೆಚ್ಚುಗೆ ಪಡೆದಿವೆ. ಆದರೆ ಜಿಮ್‌ಗಳು ಮತ್ತು ವೆಲ್‌ನೆಸ್‌ ಕೇಂದ್ರಗಳ ಬಗ್ಗೆ ಯುವ ಉದ್ಯೋಗಿಗಳು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+