ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಅಭಿವೃದ್ಧಿ ಸಂವಾದದಲ್ಲಿ ಅಕ್ಷಯ ಪಾತ್ರ ಫೌಂಡೇಶನ್ ಭಾಗಿ
ಜಿನೀವಾದ ಪಲೈಸ್ ದೆ ನೇಷನ್ಸ್‌ನಲ್ಲಿ ನಡೆದ ಅಭಿವೃದ್ಧಿ ಸಂವಾದಗಳ ಅಂಗವಾಗಿ ಆಯೋಜಿಸಲಾಗಿದ್ದ ರಿಸ್ಪಾನ್ಸಿಬಿಲಿಟಿ ಬೈ ಡಿಸೈನ್: ಪ್ರಾಮಿಸಿಂಗ್ ಬಿಸಿನೆಸ್ ಪ್ರಾಕ್ಟಿಸಸ್ ಎಂಬ ಶೀರ್ಷಿಕೆಯ ಪ್ಯಾನಲ್ ಚರ್ಚೆಯಲ್ಲಿ ಅಕ್ಷಯ ಪಾತ್ರ ಫೌಂಡೇಶನ್ ಭಾಗವಹಿಸಿತು. ಅಭಿವೃದ್ಧಿಯ ಹಕ್ಕಿನ ಕುರಿತ ವಿಶ್ವಸಂಸ್ಥೆಯ ವಿಶೇಷ ವರದಿಗಾರರಾದ ಪ್ರೊ. ಸೂರ್ಯ ದೇವಾ ಅವರು ಈ ಸಂವಾದವನ್ನು ಆಯೋಜಿಸಿದ್ದರು. ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಮಾನವ ಹಕ್ಕುಗಳ ವೇದಿಕೆ ಅಂಗವಾಗಿ ಈ ಚರ್ಚೆ ನಡೆಯಿತು.

ಸಂವಾದದಲ್ಲಿ ಚರ್ಚೆಯಾಗಿದ್ದೇನು?
ಸಂಸ್ಥೆಗಳು ತಮ್ಮ ಉದ್ಯಮ ಮಾದರಿಗಳು, ಆಡಳಿತ ವ್ಯವಸ್ಥೆ, ಪ್ರೋತ್ಸಾಹಕ ಕ್ರಮಗಳು ಹಾಗೂ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಜನರ ಮತ್ತು ಪರಿಸರದ ಬಗೆಗಿನ ಜವಾಬ್ದಾರಿಯನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಕುರಿತು ಈ ಚರ್ಚೆ ಕೇಂದ್ರೀಕೃತವಾಗಿತ್ತು.
ಈ ಸಂವಾದದಲ್ಲಿ ಅಕ್ಷಯ ಪಾತ್ರ ಫೌಂಡೇಶನ್‌ನ ಕಾರ್ಯತಂತ್ರ ಮತ್ತು ಅಂತಾರಾಷ್ಟ್ರೀಯ ಕಾರ್ಯನಿರ್ವಾಹಕ ನಿರ್ದೇಶಕರಾದ ನವೀನ್ ನೀರದ ದಾಸರು ಮಾತನಾಡಿ, "ಶಾಲಾ ಮಕ್ಕಳಿಗೆ ಊಟ ಒದಗಿಸುವುದು ಒಂದು ವ್ಯವಸ್ಥಿತ ಮತ್ತು ಕಾರ್ಯತಂತ್ರದ ಸಾಮಾಜಿಕ ಹೊಣೆ. ಇದು ಮಕ್ಕಳ ಬೆಳವಣಿಗೆ ಮೂಲಕ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಒದಗಿಸುವ ಜೊತೆಗೆ, ಸಾಮಾಜಿಕ ಸುರಕ್ಷತಾ ಕವಚವಾಗಿಯೂ ಕಾರ್ಯನಿರ್ವಹಿಸಬಲ್ಲದು. ಕಳೆದ 26 ವರ್ಷಗಳಿಂದಲೂ ಮಹತ್ವಾಕಾಂಕ್ಷೆಯ ಪಿಎಂ ಪೋಷಣ್ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಅಕ್ಷಯ ಪಾತ್ರೆ ಸಂಸ್ಯ ಬಗ್ಗೆ ನಮಗೆ ಹೆಮ್ಮೆ ಇದೆ, ಎಂದರು.
Akshaya Patra ಎಂಬ ಬಡವರ ಪಾಲಿನ ಸಂಜೀವಿನಿ
ಅಕ್ಷಯ ಪಾತ್ರವು ಮೂಲತಃ success ಹಾಗೂ ಕಾಲಪರೀಕ್ಷೆಯಲ್ಲಿ ಸಾಬೀತಾಗಿರುವ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ PPP (ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್ಶಿಪ್) ಮಾದರಿ. ಲಾಭದ ಉದ್ದೇಶ ಹೊಂದಿರುವ ಮತ್ತು ಲಾಭರಹಿತ ವಲಯಗಳ ಶ್ರೇಷ್ಠ ಪರಿಣತರು ಹಾಗೂ ಸರ್ಕಾರ ಜೊತೆಯಾಗಿ, ಹಸಿವು ಎಂಬುದು ಪರಿಹರಿಸಬಹುದಾದ ಸಮಸ್ಯೆ ಎಂಬ ಸಾಮಾನ್ಯ ನಂಬಿಕೆಯಿಂದ ಕಾರ್ಯನಿರ್ವಹಿಸುತ್ತಿವೆ. ಮಗುವಿಗೆ ನೀಡುವ ಪ್ರತಿಯೊಂದೂ ಊಟವೂ ಸುಸ್ಥಿರ ಭವಿಷ್ಯಕ್ಕಾಗಿ ಮಾಡುವ ಹೂಡಿಕೆ ಎಂಬುದು ನಮ್ಮ ನಂಬಿಕೆ ಎಂದು.
ಉದ್ಯಮ ಮಾದರಿಯಲ್ಲಿ ಮಾನವೀಯ ಅಂಶ
ವಿವಿಧ ವಲಯಗಳ ನಡುವಿನ ಪರಸ್ಪರ ಕಲಿಕೆಯ ಮಹತ್ವವನ್ನು ಒತ್ತಿ ಹೇಳುತ್ತಾ, ವಿವಿಧ ವಲಯಗಳಲ್ಲಿ, ಎಲ್ಲ ಗಾತ್ರದ ಹಲವು ಉತ್ತಮ companyಗಳು ಮಾನವೀಯ ಮತ್ತು ಪರಿಸರ ಸಂಬಂಧಿತ ಅಂಶಗಳನ್ನು ತಮ್ಮ ಉದ್ಯಮ ಮಾದರಿಗಳಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡು, ಅದೇ ಸಮಯದಲ್ಲಿ ಲಾಭದಾಯಕವಾಗಿಯೂ ಕಾರ್ಯನಿರ್ವಹಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇಂತಹ ಯಶಸ್ವಿ ಮತ್ತು ಸಾಬೀತಾದ ಮಾದರಿ ಸಂಸ್ಥೆಗಳು ಇತರರಿಗೆ ಆದರ್ಶವಾಗಬೇಕು ಎಂಬುದು ನನ್ನ ಅಭಿಪ್ರಾಯ. ಈ 'ಪರಿಕಲ್ಪನೆಯ ಪ್ರಾಯೋಗಿಕ ಸಾಬೀತು' ಅಧ್ಯಯನಗಳನ್ನು ವ್ಯಾಪಕವಾಗಿ ಪ್ರಚಾರಗೊಳಿಸಬೇಕು. ಇದರಿಂದ ಇತರ ಸಂಸ್ಥೆಗಳಲ್ಲಿಯೂ ಜಾಗೃತಿ ಮೂಡಿಸುವ ಜೊತೆಗೆ, ತಮ್ಮ ಉದ್ಯಮ ಮಾದರಿಗಳಲ್ಲಿ ಮಾನವ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆಯ ಅಂಶಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬ ಕುರಿತು ಅರಿವು ಮತ್ತು ತಿಳುವಳಿಕೆಯನ್ನು ಬೆಳೆಸಲು ಸಾಧ್ಯ," ಎಂದರು.
ಇಸ್ಕಾನ್‌ನ ಅಕ್ಷಯ್ ಪಾತ್ರಾ ಫೌಂಡೇಷನ್ ಕಳೆದ 26 ವರ್ಷಗಳಿಂದಲೂ ಸರ್ಕಾರ ಹಾಗೂ ಇತರೆ ಖಾಸಗಿ ಸಂಸ್ಥೆಗಳೊಂದಿಗೆ ಕೈ ಜೋಡಿಸಿ, ದೇಶದೆಲ್ಲೆಡೆ ಮಕ್ಕಳಿಗೆ ಮಧ್ಯಾಹ್ನದ ಪೌಷ್ಟಿಕ ಬಿಸಿಯೂಟ ನೀಡುತ್ತಿದ್ದು, ಬಡತನದಲ್ಲಿರೋ ಮಕ್ಕಳು ಹೊಟ್ಟೆ ತುಂಬೂ ಊಟ ಮಾಡಿ, ಆರೋಗ್ಯ ಕಾಪಾಡಿಕೊಳ್ಳಲು ಈ ಯೋಜನೆ ನೆರವಾಗಿದೆ. ಆ ಮೂಲಕ ಓದಬೇಕಾದ ಮಕ್ಕಳು ಹಸಿವಿನಿಂದ ಬಳಲದಂತೆ ನೋಡಿಕೊಳ್ಳುತ್ತಿದ್ದು, ವಿಭಿನ್ನ ಕಾರ್ಯತಂತ್ರದಿಂದ ಈ ಯೋಜನೆ ಯಶಸ್ವಿಯಾಗಿದೆ.



Click it and Unblock the Notifications
