ಆಭರಣ ಪ್ರಿಯರಿಗೆ ಮತ್ತೆ ಶಾಕ್: ಒಂದೇ ದಿನ ಭರ್ಜರಿ ಏರಿಕೆ ಕಂಡ ಚಿನ್ನದ ದರ

ಆಭರಣ ಪ್ರಿಯರಿಗೆ ಇಂದು ಮುಂಜಾನೆಯೇ ಚಿನ್ನದ ಮಾರುಕಟ್ಟೆ ಮತ್ತೆ ಶಾಕ್ ನೀಡಿದೆ. ಸದ್ಯ ಮದುವೆ ಸೀಸನ್ ಜೋರಾಗಿರುವುದರಿಂದ ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಇಂದಿನ ಬಂಗಾರದ ದರ ಎಷ್ಟಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಗ್ರಾಹಕರಲ್ಲಿ ಇದ್ದೇ ಇರುತ್ತದೆ. ಕಳೆದ ಎರಡು ದಿನಗಳಿಂದ ಏರಿಳಿತ ಕಾಣುತ್ತಿದ್ದ ಹಳದಿ ಲೋಹ, ಇಂದು ಮತ್ತೆ ಭರ್ಜರಿ ಜಿಗಿತ ಕಂಡಿದೆ.

ಹಾಗಾದರೆ, ಇಂದು ಅಂದರೆ ನವೆಂಬರ್ 27, 2026ರಂದು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿರಬಹುದು? ಪ್ರಮುಖ ನಗರಗಳ ಬೆಲೆ ಪಟ್ಟಿಯಲ್ಲಿ ಏಷ್ಟಿದೆ ದರ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Gold and Silver Price Today in India 27 November 2026 MCX Rates in Bengaluru and Top Indian Cities

ಬೆಂಗಳೂರಿನಲ್ಲಿ ಇಂಧು ಏಷ್ಟಿದೆ ಚಿನ್ನ, ಬೆಳ್ಳಿ ಬೆಲೆ

ಬೆಂಗಳೂರಿನಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಎಂದು ಗಮನಿಸುವುದಾದರೆ, 22 ಕ್ಯಾರಟ್ ಆಭರಣ ಚಿನ್ನದ ದರ ಪ್ರತಿ 1 ಗ್ರಾಂಗೆ 11,600 ರೂಪಾಯಿಗಳಿಗೆ ತಲುಪಿದೆ. ಅಂದರೆ 10 ಗ್ರಾಂಗೆ 1,16,000 ರೂಪಾಯಿಯಾಗಿದೆ. ಇನ್ನು 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 1 ಗ್ರಾಂಗೆ 12,655 ರೂಪಾಯಿಗಳಾಗಿದ್ದು, 10 ಗ್ರಾಂಗೆ 1,26,550 ರೂಪಾಯಿ ನಿಗದಿಯಾಗಿದೆ. ಹಾಗೆಯೇ 18 ಕ್ಯಾರಟ್ ಚಿನ್ನದ ದರ 1 ಗ್ರಾಂಗೆ 9,491 ರೂಪಾಯಿ ಇದೆ.

ಇನ್ನೂ ಈ ಬೆಳ್ಳಿಯ ಬೆಲೆಯನ್ನಾ ನೋಡುವುದಾದ್ರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ 164.90 ರೂಪಾಯಿಗಳಾಗಿದ್ದು, 1 ಕೆಜಿ ಬೆಳ್ಳಿಗೆ 1,64,900 ರೂಪಾಯಿ ದರವಿದೆ.

ಬೆಲೆ ಕಡಿಮೆಯಾಗಿದೆ ಅಂತ ಬೇಕಾಬಿಟ್ಟಿ ಚಿನ್ನ ಕೊಳ್ಳುವ ಮುನ್ನ ಎಚ್ಚರ! ITAT ಪ್ರಕಾರ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?
ಬೆಲೆ ಕಡಿಮೆಯಾಗಿದೆ ಅಂತ ಬೇಕಾಬಿಟ್ಟಿ ಚಿನ್ನ ಕೊಳ್ಳುವ ಮುನ್ನ ಎಚ್ಚರ! ITAT ಪ್ರಕಾರ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?

ನಿನ್ನೆಯ ಚಿನ್ನ ಮತ್ತು ಬೆಳ್ಳಿ ಬೆಲೆಯೊಂದಿಗೆ ಹೋಲಿಕೆ

ನಿನ್ನೆಯ (ನವೆಂಬರ್ 26) ದರಕ್ಕೆ ಹೋಲಿಕೆ ಮಾಡಿ ನೋಡಿದರೆ, ಇಂದು ಚಿನ್ನ ಖರೀದಿಸುವವರಿಗೆ ತುಸು ಹೊರೆಯಾಗಿದೆ ಎನ್ನಬಹುದು. ನಿನ್ನೆ ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ 1 ಗ್ರಾಂಗೆ 11,440 ರೂಪಾಯಿಗಳಷ್ಟಿತ್ತು. ಆದರೆ ಇಂದು ಒಂದೇ ದಿನದಲ್ಲಿ ಪ್ರತಿ ಗ್ರಾಂಗೆ 160 ರೂಪಾಯಿಗಳಷ್ಟು ಏರಿಕೆಯಾಗಿ 11,600 ರೂಪಾಯಿಗೆ ತಲುಪಿದೆ. ಅಂದರೆ 10 ಗ್ರಾಂಗೆ 1,600 ರೂಪಾಯಿ ಹೆಚ್ಚಳ ಆಗಿದೆ. ಅದೇ ರೀತಿ ನಿನ್ನೆ 12,480 ರೂಪಾಯಿಗಳಷ್ಟಿದ್ದ 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ, ಇಂದು 175 ರೂಪಾಯಿಗಳಷ್ಟು ಹೆಚ್ಚಳವಾಗಿ 12,655 ರೂಪಾಯಿಗೆ ಮುಟ್ಟಿದೆ. 18 ಕ್ಯಾರಟ್ ಚಿನ್ನದ ದರವೂ ಪ್ರತಿ ಗ್ರಾಂಗೆ 131 ರೂಪಾಯಿ ಏರಿಕೆಯಾಗಿದೆ.

ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳಿ ಗ್ರಾಹಕರಿಗೆ ಸಣ್ಣ ಸಮಾಧಾನ ನೀಡಿದ್ದು, ನಿನ್ನೆ ಪ್ರತಿ ಕೆಜಿಗೆ 1,65,000 ರೂಪಾಯಿಗಳಷ್ಟಿದ್ದ ಬೆಳ್ಳಿ ದರ ಇಂದು 100 ರೂಪಾಯಿಗಳಷ್ಟು ಅಲ್ಪ ಇಳಿಕೆ ಕಂಡು 1,64,900 ರೂಪಾಯಿಗೆ ತಲುಪಿದೆ.

ನಗರವಾರು 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ

ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ ಈ ಕೆಳಗಿನಂತಿದೆ:

ಬೆಂಗಳೂರು - 11,600 ರೂಪಾಯಿ

ದೆಹಲಿ - 11,615 ರೂಪಾಯಿ

ಚೆನ್ನೈ - 11,600 ರೂಪಾಯಿ

ಮುಂಬೈ - 11,600 ರೂಪಾಯಿ

ಹೈದರಾಬಾದ್ - 11,600 ರೂಪಾಯಿ

ಅಹಮದಾಬಾದ್ - 11,605 ರೂಪಾಯಿ

ಪುಣೆ - 11,600 ರೂಪಾಯಿ

ಕೋಲ್ಕತ್ತಾ - 11,600 ರೂಪಾಯಿ

ಚಿನ್ನದ ಬೆಲೆ ಇಳಿದಿದ್ದೇ ಮುಳುವಾಯ್ತು! ಹೆಚ್ಚು ಹಣ ಕಟ್ಟಿ, ಇಲ್ಲ ಚಿನ್ನ ಇಡಿ.. ಗೋಲ್ಡ್ ಲೋನ್ ಗ್ರಾಹಕರಿಗೆ ಫೈನಾನ್ಸ್ ಕಿರುಕುಳ
ಚಿನ್ನದ ಬೆಲೆ ಇಳಿದಿದ್ದೇ ಮುಳುವಾಯ್ತು! ಹೆಚ್ಚು ಹಣ ಕಟ್ಟಿ, ಇಲ್ಲ ಚಿನ್ನ ಇಡಿ.. ಗೋಲ್ಡ್ ಲೋನ್ ಗ್ರಾಹಕರಿಗೆ ಫೈನಾನ್ಸ್ ಕಿರುಕುಳ

ಗಮನಿಸಿ: ಮೇಲೆ ನೀಡಲಾದ ಚಿನ್ನ ಮತ್ತು ಬೆಳ್ಳಿಯ ದರಗಳು ಮಾರುಕಟ್ಟೆಯ ಮೂಲ ದರಗಳಾದ್ದು, ಇವುಗಳಲ್ಲಿ ಜಿಎಸ್‌ಟಿ ಮತ್ತು ಇತರೆ ತೆರಿಗೆಗಳು ಸೇರಿರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+