ಚಿನ್ನದ ಬೆಲೆ ಇಳಿದಿದ್ದೇ ಮುಳುವಾಯ್ತು! ಹೆಚ್ಚು ಹಣ ಕಟ್ಟಿ, ಇಲ್ಲ ಚಿನ್ನ ಇಡಿ.. ಗೋಲ್ಡ್ ಲೋನ್ ಗ್ರಾಹಕರಿಗೆ ಫೈನಾನ್ಸ್ ಕಿರುಕುಳ

ಬೆಂಗಳೂರು: ಇತ್ತೀಚೆಗೆ ಬಂಗಾರದ ದರದಲ್ಲಿ ಇಳಿಕೆಯಾಗಿರುವುದು ಎಲ್ಲರಿಗೂ ಗೊತ್ತೇಯಿದೆ. ಇದು ಆಭರಣ ಪ್ರಿಯರಿಗೆ ಸಂತಸ ತಂದಿದ್ದರೂ, ಚಿನ್ನ ಅಡವಿಟ್ಟು ಸಾಲ ಪಡೆದಿರುವ ಗ್ರಾಹಕರಿಗೆ ಮಾತ್ರ ದೊಡ್ಡ ಸಂಕಷ್ಟ ತಂದೊಡ್ಡಿದೆ.

ಹೌದು, ರಾಜ್ಯದ ಗೋಲ್ಡ್ ಲೋನ್ ಮಾರುಕಟ್ಟೆಯಲ್ಲಿ ಇದೀಗ ಖಾಸಗಿ ಫೈನಾನ್ಸ್ ಸಂಸ್ಥೆಗಳು (NBFC) ಗ್ರಾಹಕರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಚಿನ್ನದ ಬೆಲೆ ಕುಸಿದಿರುವುದರಿಂದ ಸಾಲದ ಮೊತ್ತವನ್ನ ಸರಿದೂಗಿಸಲು ತಕ್ಷಣವೇ ಹೆಚ್ಚುವರಿ ಹಣ ಪಾವತಿಸಿ, ಇಲ್ಲವಾದರೆ ಮತ್ತಷ್ಟು ಚಿನ್ನ ತಂದು ಅಡವಿಡಿ ಎಂದು ಸಂಸ್ಥೆಗಳು ಗ್ರಾಹಕರ ಮೇಲೆ ಒತ್ತಡ ಹೇರುತ್ತಿವೆ.

Gold Price Drop Triggers NBFC Harassment In Karnataka Borrowers Forced To Pay Extra Money Or Pledge More Gold

ದೇಶದಲ್ಲೇ ಕರ್ನಾಟಕ ಅಗ್ರ: ಎನ್‌ಬಿಎಫ್‌ಸಿ ಚಿನ್ನದ ಸಾಲದ ಬಾಕಿ ಬರೋಬ್ಬರಿ 2.4 ಲಕ್ಷ ಕೋಟಿ ರೂ.!

ಕೇಂದ್ರ ಸರ್ಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ದೇಶದ ಇತರ ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಚಿನ್ನದ ಮೇಲೆ ಸಾಲ ಪಡೆಯುವ ಮಾರುಕಟ್ಟೆಯಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ. 2026ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಾಗೂ ಎನ್‌ಬಿಎಫ್‌ಸಿ ಚಿನ್ನದ ಸಾಲ ಸೇರಿ ಒಟ್ಟು ಬಾಕಿ ಮೊತ್ತ ಅಂದಾಜು 2.4 ಲಕ್ಷ ಕೋಟಿ ರೂ. ತಲುಪಿದೆ.

ಇದರಲ್ಲಿ 2026ರ ಮಾರ್ಚ್ 31ರ ವೇಳೆಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 98,962 ಕೋಟಿ ರೂಪಾಯಿ ಬಾಕಿ ಉಳಿದಿದ್ದರೆ, ಉಳಿದ ಬಹುಪಾಲು ಸಾಲವನ್ನು ಜನರು ಖಾಸಗಿ ಫೈನಾನ್ಸ್ ಸಂಸ್ಥೆಗಳಿಂದಲೇ ಪಡೆದುಕೊಂಡಿದ್ದಾರೆ.

ಬೆಲೆ ಕಡಿಮೆಯಾಗಿದೆ ಅಂತ ಬೇಕಾಬಿಟ್ಟಿ ಚಿನ್ನ ಕೊಳ್ಳುವ ಮುನ್ನ ಎಚ್ಚರ! ITAT ಪ್ರಕಾರ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?
ಬೆಲೆ ಕಡಿಮೆಯಾಗಿದೆ ಅಂತ ಬೇಕಾಬಿಟ್ಟಿ ಚಿನ್ನ ಕೊಳ್ಳುವ ಮುನ್ನ ಎಚ್ಚರ! ITAT ಪ್ರಕಾರ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?

ಚಿನ್ನದ ದರ ಇಳಿಕೆಯಿಂದ ಸಂಸ್ಥೆಗಳಿಗೆ ನಷ್ಟದ ಭೀತಿ: ಗ್ರಾಹಕರಿಗೆ ಹರಾಜು ಬೆದರಿಕೆ!

ಕಳೆದ ಆರೇಳು ತಿಂಗಳ ಹಿಂದೆ ಚಿನ್ನದ ಬೆಲೆ ಗಗನಕ್ಕೇರಿದ್ದಾಗ ಅದೇ ದರಕ್ಕೆ ಅನುಗುಣವಾಗಿ ಗ್ರಾಹಕರಿಗೆ ಹೆಚ್ಚಿನ ಸಾಲ ನೀಡಲಾಗಿತ್ತು. ಆದರೆ ಈಗ ಚಿನ್ನದ ದರ ಇಳಿಕೆಯಾಗಿರುವುದರಿಂದ ಒಂದೊಂದು ಎನ್‌ಬಿಎಫ್‌ಸಿ ಸಂಸ್ಥೆಯೂ ಕನಿಷ್ಠ 4 ಕೋಟಿ ರೂ.ಗೂ ಅಧಿಕ ಹಣವನ್ನ ಹೆಚ್ಚುವರಿಯಾಗಿ ಸಾಲ ನೀಡಿದಂತಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಈ ನಷ್ಟದ ಹೊರೆಯಿಂದ ಪಾರಾಗಲು ಪ್ರತಿಷ್ಠಿತ ಫೈನಾನ್ಸ್ ಸಂಸ್ಥೆಗಳೇ ಈಗ ಗ್ರಾಹಕರಿಗೆ ನೋಟಿಸ್ ಜಾರಿ ಮಾಡುತ್ತಿವೆ. ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು ತಕ್ಷಣ ಕಟ್ಟಬೇಕು, ಇಲ್ಲವೇ ಈಗಿನ ಮಾರುಕಟ್ಟೆ ದರಕ್ಕೆ ಸಾಲದ ಮೊತ್ತ ಸರಿದೂಗುವಂತೆ ಹೆಚ್ಚುವರಿ ಚಿನ್ನ ತಂದು ಅಡಮಾನವಿಡಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಈ ಎರಡಕ್ಕೂ ಒಪ್ಪದಿದ್ದರೆ ಅಡವಿಟ್ಟಿರುವ ಚಿನ್ನವನ್ನು ಹರಾಜು ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ, ದಿಢೀರ್ ಹಣ ಅಥವಾ ಚಿನ್ನ ಎಲ್ಲಿಂದ ತರುವುದು ಎಂದು ಮಧ್ಯಮ ವರ್ಗದ ಗ್ರಾಹಕರು ಕಂಗಾಲಾಗಿದ್ದಾರೆ.

Gold: ತಿರುಪತಿ ತಿಮ್ಮಪ್ಪನಿಗೆ ಇತಿಹಾಸದಲ್ಲೇ ಅತ್ಯಧಿಕ ಕೆಜಿ ಚಿನ್ನಾಭರಣ ದಾನ ಮಾಡಿದ ಚೆನ್ನೈ ಉದ್ಯಮಿ, ಎಷ್ಟು ಕೋಟಿ ಮೌಲ್ಯ?
Gold: ತಿರುಪತಿ ತಿಮ್ಮಪ್ಪನಿಗೆ ಇತಿಹಾಸದಲ್ಲೇ ಅತ್ಯಧಿಕ ಕೆಜಿ ಚಿನ್ನಾಭರಣ ದಾನ ಮಾಡಿದ ಚೆನ್ನೈ ಉದ್ಯಮಿ, ಎಷ್ಟು ಕೋಟಿ ಮೌಲ್ಯ?

ಲಿಖಿತ ನೋಟಿಸ್ ಇಲ್ಲದೆ ಫೋನ್ ಕರೆ: ಎನ್‌ಪಿಎ ಸಾಲದ ನೆಪದಲ್ಲಿ ಪೂರ್ತಿ ಹಣಕ್ಕೆ ಒತ್ತಾಯ!

ಇನ್ನೊಂದೆಡೆ, ಕೆಲವು ಬ್ಯಾಂಕ್ ಮತ್ತು ಫೈನಾನ್ಸ್ ಸಂಸ್ಥೆಗಳು ಗ್ರಾಹಕರಿಗೆ ಯಾವುದೇ ಲಿಖಿತ ನೋಟಿಸ್ ನೀಡದೆ ಕೇವಲ ಫೋನ್ ಕರೆಗಳ ಮೂಲಕ ಒತ್ತಡ ಹೇರುತ್ತಿವೆ. "ನಿಮ್ಮ ಗೋಲ್ಡ್ ಲೋನ್ ಬಡ್ಡಿ ಬಾಕಿ ಇದೆ, ಶಾಖೆಗೆ ಬಂದು ರಿನೀವಲ್ ಮಾಡಿಸಿಕೊಳ್ಳಿ" ಎಂದು ಕರೆಸಿ, ಗ್ರಾಹಕರು ಶಾಖೆಗೆ ಹೋದ ಬಳಿಕ ವರಸೆ ಬದಲಿಸುತ್ತಿವೆ.

"ನಿಮ್ಮ ಖಾತೆ ಈಗಾಗಲೇ ಎನ್‌ಪಿಎ ಸಾಲ (ಅನುತ್ಪಾದಕ ಆಸ್ತಿ - NPA) ಆಗಿದೆ. ಹೀಗಾಗಿ ಬಡ್ಡಿ ಪಾವತಿಸಿದರೂ ಸಾಲ ನವೀಕರಣ ಮಾಡಲು ಸಾಧ್ಯವಿಲ್ಲ, ಪಡೆದಿರುವ ಪೂರ್ತಿ ಹಣವನ್ನ ಒಮ್ಮೆಲೆ ಕಟ್ಟಿ ಚಿನ್ನ ಬಿಡಿಸಿಕೊಳ್ಳಿ" ಎಂದು ಸಿಬ್ಬಂದಿ ಒತ್ತಾಯಿಸುತ್ತಿರುವ ಅನೇಕ ಪ್ರಕರಣಗಳು ರಾಜ್ಯಾದ್ಯಂತ ವರದಿಯಾಗುತ್ತಿವೆ. ಇದರಿಂದ ತುರ್ತು ಅಗತ್ಯಕ್ಕೆ ಚಿನ್ನ ಅಡವಿಟ್ಟಿದ್ದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+