ತಮಿಳುನಾಡು ಸರ್ಕಾರಿ ನೌಕರರಿಗೆ 15 ದಿನ ಪಿತೃತ್ವ ರಜೆ ಘೋಷಿಸಿದ ಸಿಎಂ ಜೋಸೆಫ್ ವಿಜಯ್

ಚೆನ್ನೈ: ತಮಿಳುನಾಡಿನ ಪುರುಷ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಐತಿಹಾಸಿಕ ಸಿಹಿ ಸುದ್ದಿಯೊಂದನ್ನ ನೀಡಿದೆ. ನವಜಾತ ಶಿಶುವಿನ ಆರೈಕೆ ಹಾಗೂ ಹೆರಿಗೆಯ ಸಮಯದಲ್ಲಿ ಪತ್ನಿಗೆ ಸರಿಯಾದ ಬೆಂಬಲ ನೀಡುವ ಉದ್ದೇಶದಿಂದ ವಿವಾಹಿತ ಪುರುಷ ಸರ್ಕಾರಿ ನೌಕರರಿಗೆ 15 ದಿನಗಳ ಕಾಲ ಪಿತೃತ್ವ ರಜೆ ಮಂಜೂರು ಮಾಡಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಗುರುವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ. ತಮಿಳುನಾಡಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪುರುಷ ನೌಕರರಿಗೆ ಇಂತಹದೊಂದು ಸೌಲಭ್ಯವನ್ನ ಜಾರಿಗೆ ತರಲಾಗಿದೆ.

ಪಿತೃತ್ವ ರಜೆ ನಿಯಮ ಏನು? ಯಾವಾಗ ಈ ರಜೆ ಪಡೆಯಬಹುದು?

ಸರ್ಕಾರಿ ನೌಕರರ ಸಂಘಟನೆಗಳಿಂದ ಬಂದಿದ್ದ ನಿರಂತರ ಮನವಿಗಳನ್ನ ಸಕಾರಾತ್ಮಕವಾಗಿ ಪರಿಗಣಿಸಿರುವ ವಿಜಯ್ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ. ಸರ್ಕಾರ ಹೊರಡಿಸಿರುವ ಈ ಹೊಸ ಪಿತೃತ್ವ ರಜೆ ನಿಯಮದ ಪ್ರಕಾರ:

Tamil Nadu CM Joseph Vijay Announces 15-Day Paternity Leave For Male Government Employees

* ವಿವಾಹಿತ ಪುರುಷ ಸರ್ಕಾರಿ ನೌಕರರು ಮಗು ಜನಿಸುವ ನಿರೀಕ್ಷಿತ ದಿನಾಂಕಕ್ಕಿಂತ 15 ದಿನ ಮುಂಚಿತವಾಗಿ ಅಥವಾ ಮಗು ಜನಿಸಿದ ಆರು ತಿಂಗಳ ಒಳಗಾಗಿ ಈ 15 ದಿನಗಳ ರಜೆಯನ್ನ ಬಳಸಿಕೊಳ್ಳಬಹುದು.

* ಹೆರಿಗೆ ಸಮಯ ತಾಯಿ ಮತ್ತು ಮಗು ಇಬ್ಬರಿಗೂ ಅತ್ಯಂತ ನಿರ್ಣಾಯಕವಾಗಿರುತ್ತದೆ. ಈ ಸಂದರ್ಭದಲ್ಲಿ ತಾಯಿಗೆ ದೈಹಿಕ ಹಾಗೂ ಭಾವನಾತ್ಮಕ ಬೆಂಬಲ ನೀಡಲು ಮತ್ತು ಶಿಶುಪಾಲನೆಯ ಜವಾಬ್ದಾರಿಯನ್ನ ಸಮಾನವಾಗಿ ಹಂಚಿಕೊಳ್ಳಲು ತಂದೆಯ ಪಾತ್ರ ಅತ್ಯಗತ್ಯ ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಾವ್ಯಾ ಮಾರನ್-ಅನಿರುದ್ಧ್ ರಿಸೆಪ್ಷನ್‌ಗೆ ಬಂದ ಸಿಎಂ ವಿಜಯ್-ಸಂಗೀತಾ: ಒಂದೇ ವೇದಿಕೆಯಲ್ಲಿದ್ದರೂ ಜೊತೆಯಾಗಿ ಕಾಣಿಸಿಕೊಳ್ಳದ ದಂಪತಿ
ಕಾವ್ಯಾ ಮಾರನ್-ಅನಿರುದ್ಧ್ ರಿಸೆಪ್ಷನ್‌ಗೆ ಬಂದ ಸಿಎಂ ವಿಜಯ್-ಸಂಗೀತಾ: ಒಂದೇ ವೇದಿಕೆಯಲ್ಲಿದ್ದರೂ ಜೊತೆಯಾಗಿ ಕಾಣಿಸಿಕೊಳ್ಳದ ದಂಪತಿ

ಮಾತೃತ್ವ ರಜೆ ಹಾಗೂ ಇತರ ರಾಜ್ಯಗಳಲ್ಲಿನ ವ್ಯವಸ್ಥೆ ಏನು?

ತಮಿಳುನಾಡಿನ ಮಾತೃತ್ವ ರಜೆ ನೀತಿಯಡಿ ಸದ್ಯ ಮಹಿಳಾ ಸರ್ಕಾರಿ ನೌಕರರಿಗೆ ಬರೋಬ್ಬರಿ 365 ದಿನಗಳ ಮಾತೃತ್ವ ರಜೆ ನೀಡಲಾಗುತ್ತಿದೆ. ವಿಶೇಷವೆಂದರೆ, ಕೇವಲ ಎರಡು ತಿಂಗಳ ಹಿಂದಷ್ಟೇ ಸಿಎಂ ವಿಜಯ್ ಸರ್ಕಾರವು ಮಹಿಳಾ ನೌಕರರ ಮೂರನೇ ಮಗುವಿಗೂ 365 ದಿನಗಳ ಮಾತೃತ್ವ ರಜೆಯನ್ನ ವಿಸ್ತರಿಸಿ ಆದೇಶಿಸಿತ್ತು. ಇದೀಗ ಪುರುಷರಿಗೂ ಪಿತೃತ್ವ ರಜೆ ಘೋಷಿಸುವ ಮೂಲಕ ಕುಟುಂಬ ಸ್ನೇಹಿ ಆಡಳಿತಕ್ಕೆ ಒತ್ತು ನೀಡಿದೆ.

ಕೇಂದ್ರ ಸರ್ಕಾರವು 5ನೇ ವೇತನ ಆಯೋಗದ ಶಿಫಾರಸಿನಂತೆ 1997ರಿಂದಲೇ ತನ್ನ ಪುರುಷ ನೌಕರರಿಗೆ 15 ದಿನಗಳ ಪಿತೃತ್ವ ರಜೆ ನೀಡುತ್ತಿದೆ. ಇನ್ನು ದೇಶದ ಇತರ ರಾಜ್ಯಗಳನ್ನ ಗಮನಿಸಿದರೆ, ಪಶ್ಚಿಮ ಬಂಗಾಳದಲ್ಲಿ 30 ದಿನ, ಒಡಿಶಾ ಮತ್ತು ಮಧ್ಯಪ್ರದೇಶದಲ್ಲಿ 15 ದಿನ, ಅಸ್ಸಾಂನಲ್ಲಿ 14 ದಿನ ಹಾಗೂ ಕೇರಳದಲ್ಲಿ 10 ದಿನಗಳ ಪಿತೃತ್ವ ರಜೆ ಜಾರಿಯಲ್ಲಿದೆ.

ಕಾರ್ತಿಕ ದೀಪಂ: ತಮಿಳುನಾಡು ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ಗರಂ; ಸುಪ್ರೀಂ ಆದೇಶ ಪಾಲನೆ ಟಿವಿಕೆ - ವಿಜಯ್‌ಗೆ 3 ಪ್ರಶ್ನೆ
ಕಾರ್ತಿಕ ದೀಪಂ: ತಮಿಳುನಾಡು ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ಗರಂ; ಸುಪ್ರೀಂ ಆದೇಶ ಪಾಲನೆ ಟಿವಿಕೆ - ವಿಜಯ್‌ಗೆ 3 ಪ್ರಶ್ನೆ

ಪಿತೃತ್ವ ಸೌಲಭ್ಯ ಮಸೂದೆಯ ಹಿನ್ನೆಲೆ

2017ರಲ್ಲಿ ಲೋಕಸಭೆಯಲ್ಲಿ ಮಂಡನೆಯಾಗಿದ್ದ ಪಿತೃತ್ವ ಸೌಲಭ್ಯ ಮಸೂದೆ ದೇಶದಾದ್ಯಂತ ಪುರುಷರಿಗೆ 15 ದಿನಗಳಿಂದ ಮೂರು ತಿಂಗಳವರೆಗೆ ಪಿತೃತ್ವ ರಜೆ ನೀಡುವ ಪ್ರಸ್ತಾವನೆಯನ್ನ ಮುಂದಿಟ್ಟಿತ್ತು. ಅಲ್ಲದೆ, 2023ರ ಆಗಸ್ಟ್‌ನಲ್ಲಿ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಕೂಡ ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಪಿತೃತ್ವ ರಜೆ ಇಲ್ಲದಿರುವುದನ್ನ ಗಮನಿಸಿ, ಈ ಬಗ್ಗೆ ಸೂಕ್ತ ಕಾನೂನು ರೂಪಿಸುವಂತೆ ಸಲಹೆ ನೀಡಿತ್ತು. ಇದೀಗ ತಮಿಳುನಾಡು ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯದ ಲಕ್ಷಾಂತರ ನೌಕರರು ಹಾಗೂ ಕುಟುಂಬಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+