KEA: ಆಯುಷ್ ಅಭ್ಯರ್ಥಿಗಳಿಗೆ ಕೆಇಎ ಮಹತ್ವದ ಮಾಹಿತಿ: ನ. 29 ಅಂತಿಮ ಫಲಿತಾಂಶ, ಸ್ಟ್ರೇ ವೇಕೆನ್ಸಿ ಸುತ್ತಿಗೂ ಅವಕಾಶ

ಬೆಂಗಳೂರು: ಸ್ನಾತಕೋತ್ತರ ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇಂದು ಬುಧವಾರ ಪ್ರಕಟಿಸಿದೆ. ಇದಲ್ಲದೇ ಯುಜಿ ಆಯುಷ್ (UGAyush-2026 ) ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಹೊಸದಾಗಿ ಪ್ರವೇಶ ಬಯಸುವವರಿಗೆ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಗೆ ತೀರ್ಮಾನಿಸಿದ್ದು, ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೂ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದರು.

ಪಿಜಿ ಆಯುಷ್ ಕೋರ್ಸ್‌ಗೆ ಇದುವರೆಗೂ ನೋಂದಣಿ ಮಾಡದಿರುವವರು ಇವತ್ತಿನವರೆಗೆ (ನ.25) ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದೆಲ್ಲ ಅರ್ಜಿಗಳನ್ನು ನ.26ರಂದು ಬೆಳಗ್ಗೆ 11ಗಂಟೆಯೊಳಗೆ ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ.

KEA Releases PG AYUSH Round 1 Mock Result Final Seat Allotment on November 29 for Aspirants

ಗುರುವಾರ ಲಭ್ಯ ಸೀಟುಗಳ ಮಾಹಿತಿ ಪ್ರಕಟ

ನವೆಂಬರ್ 26 ರಂದು 2 ಗಂಟೆಯೊಳಗೆ ₹50 ಸಾವಿರ ಮುಂಗಡ ಹಣ ಪಾವತಿಗೆ ಕೊನೆ ದಿನ. ಅದೇ ದಿನ ಸಂಜೆ 4 ಗಂಟೆಗೆ ಲಭ್ಯ ಸೀಟುಗಳ ವಿವರ ಪ್ರಕಟಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

KEA: ಪಿಜಿ ದಂತ, ವೈದ್ಯಕೀಯ, ಯುಜಿ ಆಯುಷ್ ಅಭ್ಯರ್ಥಿಗಳಿಗೆ ಸಿಹಿಸುದ್ದಿ: ಸೀಟು ಹಂಚಿಕೆ ಫಲಿತಾಂಶ ಪ್ರಕಟ
KEA: ಪಿಜಿ ದಂತ, ವೈದ್ಯಕೀಯ, ಯುಜಿ ಆಯುಷ್ ಅಭ್ಯರ್ಥಿಗಳಿಗೆ ಸಿಹಿಸುದ್ದಿ: ಸೀಟು ಹಂಚಿಕೆ ಫಲಿತಾಂಶ ಪ್ರಕಟ

ನವೆಂಬರ್ 29 ಅಂತಿಮ ಫಲಿತಾಂಶ

ನವೆಂಬರ್ 28ರಂದು ಬೆಳಿಗ್ಗೆ 10ಗಂಟೆವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು. ಅದೇ ದಿನ ಸಂಜೆ 4 ಗಂಟೆಗೆ ತಾತ್ಕಾಲಿಕ ಫಲಿತಾಂಶ ಹಾಗೂ ನವೆಂಬರ್ 29 ರಂದು ಬೆಳಗ್ಗೆ 10 ಗಂಟೆಗೆ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದರು.

ಸೀಟು ಹಂಚಿಕೆಯಾದ ಅಭ್ಯರ್ಥಿಗಳು ನವೆಂಬರ್ 30ರೊಳಗೆ ಶುಲ್ಕ ಪಾವತಿಸಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು. ಇದುವರೆಗೂ ಸೀಟು ಹಂಚಿಕೆಯಾಗದವರು ಈ ಸುತ್ತಿನಲ್ಲಿ ಭಾಗವಹಿಸಬಹುದು. 3ನೇ ಸುತ್ತಿನಲ್ಲಿ ಸೀಟು ರದ್ದುಪಡಿಸಿಕೊಂಡವರಿಗೆ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.

ಯುಜಿ ಆಯುಷ್ ಅಭ್ಯರ್ಥಿಗಳ ಗಮನಕ್ಕೆ

ಯುಜಿ ಆಯುಷ್ ಸೀಟು ಹಂಚಿಕೆಯ ಅಭ್ಯರ್ಥಿಗಳು ಮಾಹಿತಿಯನ್ನು ಇಲ್ಲಿ ನೀಡಲಾಗಿರುವ http://share.google/vwfNmWUAUuw09pHtJ ಲಿಂಕ್ ಬಳಸಿ ತಿಳಿಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+