Bengaluru: ಗಾಳಿ-ಮಳೆ ಬೆನ್ನಲ್ಲೇ ಕಟ್ಟೆಚ್ಚರ: ಅಪಾಯಕಾರಿ ಮರಗಳ ತೆರವಿಗೆ ರಾತ್ರಿ ಕಾರ್ಯಾಚರಣೆಗೆ ಸೂಚನೆ

ಬೆಂಗಳೂರು: ನಗರದಲ್ಲಿ ಕಳೆದ ಎರಡು ದಿನಗಳಲ್ಲಿ ಜೋರು ಗಾಳಿ ಮಳೆ ಸುರಿಯುತ್ತಿದೆ. ಮುಜಾಗ್ರತಾ ಕ್ರಮವಾಗಿ ಬೀಳುವ ಹಂತದಲ್ಲಿರುವ ಅಪಾಯಕಾರಿ ಮರಗಳು, ಕೊಂಬೆಗಳು, ಸದ್ಯದ ಮಳೆಗೆ ಮುರಿದು ಬಿದ್ದ ಮರದ ಕೊಂಬೆಗಳ ತೆರವಿಗೆ ರಾತ್ರಿ ಕಾರ್ಯಾಚರಣೆ ನಡೆಸುವಂತೆ ಕೇಂದ್ರ ನಗರ ಪಾಲಿಕೆಯ ಆಯುಕ್ತ ಜಗದೀಶ್.ಜಿ.ತಿಳಿಸಿದ್ದಾರೆ. ಜೊತೆಗೆ ಜನ ಸಂಚಾರ ಹಾಗೂ ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಮಹತ್ವದ ಸೂಚನೆ ಕೊಟ್ಟಿದ್ದಾರೆ. ಇತ್ತೀಚೆಗೆ ರಾತ್ರಿ ತುರ್ತು ನಿರ್ವಹಣಾ ಕಾರ್ಯಾಚರಣೆಯಿಂದ ವಾಹನ ಸವಾರರಿಗೆ ಕೆಲವು ಸಮಸ್ಯೆಗಳು ಎದುರಾಗಿದ್ದು ವರದಿ ಆಗಿವೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಗಾಳಿ-ಮಳೆ ಸೇರಿದಂತೆ ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಅಪಾಯಕಾರಿಯಾಗಿ ಬೆಳೆದಿರುವ ಮರಗಳ ರೆಂಬೆ-ಕೊಂಬೆಗಳನ್ನು ಮುಂಚಿತವಾಗಿ ತೆರವುಗೊಳಿಸುವುದು ಹಾಗೂ ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ತ್ವರಿತವಾಗಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

Bengaluru Central Civic Body Instructed to Night Tree Clearance After Rain Traffic Safety Measures

ಅರಣ್ಯ ವಿಭಾಗದ ವಾಹನಗಳು, ಉಪಕರಣಗಳು ಹಾಗೂ ಸಿಬ್ಬಂದಿಗಳ ಕಾರ್ಯಸನ್ನದ್ಧತೆಯನ್ನು ಪರಿಶೀಲಿಸಿದರು. ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ಸ್ಪಂದಿಸಲು ವಾಹನಗಳು ಮತ್ತು ಸಿಬ್ಬಂದಿಗಳು ಸಿದ್ಧವಾಗಿರಬೇಕು ಹಾಗೂ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

Bengaluru Video Viral: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ: ಶಾಲಾ ಮಿನಿಬಸ್‌ಗೆ ಟ್ಯಾಂಕರ್ ಡಿಕ್ಕಿ, ನೆಟ್ಟಿಗರು ಕಿಡಿ
Bengaluru Video Viral: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ: ಶಾಲಾ ಮಿನಿಬಸ್‌ಗೆ ಟ್ಯಾಂಕರ್ ಡಿಕ್ಕಿ, ನೆಟ್ಟಿಗರು ಕಿಡಿ

ಕಾರ್ಯಾಚರಣೆಗೆ ತಂಡ ರಚನೆ, ನಿರ್ವಹಣೆ ಹೇಗೆ?

ರಾಜ್ಯ ಅರಣ್ಯ ವಿಭಾಗದ ಕಾರ್ಯನಿರ್ವಹಣೆಗೆ ಪ್ರತಿ ವಿಭಾಗಕ್ಕೆ ಒಂದರಂತೆ ಒಟ್ಟು 6 ತಂಡಗಳನ್ನು ನಿಯೋಜಿಸಲಾಗಿದ್ದೆ. ಪ್ರತಿ ತಂಡಕ್ಕೆ ತಲಾ ಒಂದು ಕ್ರೇನ್ ವಾಹನವನ್ನು ಒದಗಿಸಲಾಗಿದೆ. ಪ್ರತಿ ತಂಡದಲ್ಲಿ ಒಬ್ಬ ಮೇಲ್ವಿಚಾರಕರು, ಒಬ್ಬ ವಾಹನ ಚಾಲಕರು ಹಾಗೂ 7 ಮಂದಿ ಮರ ಕಟಾವು ಮಾಡುವ ಸಿಬ್ಬಂದಿ ಸೇರಿದಂತೆ ಒಟ್ಟು 9 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪ್ರಕಾರ 6 ತಂಡಗಳಲ್ಲಿ ಒಟ್ಟು 54 ಮಂದಿ ಸಿಬ್ಬಂದಿ ಹಾಗೂ 6 ಕ್ರೇನ್ ವಾಹನಗಳು ಕಾರ್ಯನಿರ್ವಹಿಸುತ್ತಿವೆ.

ರಾತ್ರಿ ಪಾಳಿಯ ತುರ್ತು ಕಾರ್ಯಾಚರಣೆಗೆ ಸಜ್ಜಾಗಿ!

ರಾತ್ರಿ ಪಾಳಿಯ ತುರ್ತು ಕಾರ್ಯಾಚರಣೆಗಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಎರಡು ವಲಯಗಳಲ್ಲಿ ತಲಾ 8 ಮಂದಿ ಸಿಬ್ಬಂದಿಗಳ ತಂಡವನ್ನು ನಿಯೋಜಿಸಲಾಗಿದ್ದೆ ಪ್ರತಿ ತಂಡಕ್ಕೆ ಒಬ್ಬ ವಾಹನ ಚಾಲಕರನ್ನು ನಿಯೋಜಿಸಲಾಗಿರುತ್ತದೆ. ಈ ಪ್ರಕಾರ ರಾತ್ರಿ ಪಾಳಿಯಲ್ಲಿ ಒಟ್ಟು 18 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಸುರಕ್ಷತಾ ಕ್ರಮ ಪಾಲನೆ, ಶಿಸ್ತು ಕಡ್ಡಾಯ

ಮರಗಳ ರೆಂಬೆ-ಕೊಂಬೆಗಳನ್ನು ಕತ್ತರಿಸುವ ಹಾಗೂ ಬಿದ್ದ ಮರಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅರಣ್ಯ ವಿಭಾಗದ ಸಿಬ್ಬಂದಿಗಳು ಅಗತ್ಯ ಸುರಕ್ಷತಾ ಸಾಧನಗಳನ್ನು ಕಡ್ಡಾಯವಾಗಿ ಬಳಸಬೇಕು. ತಮ್ಮ ಸುರಕ್ಷತೆಯ ಜೊತೆಗೆ ಸಾರ್ವಜನಿಕರ ಸುರಕ್ಷತೆಗೂ ಆದ್ಯತೆ ನೀಡಬೇಕು. ವಾಹನ ಚಾಲಕರು ಹಾಗೂ ಸಿಬ್ಬಂದಿಗಳು ಕರ್ತವ್ಯದ ವೇಳೆ ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಬಾರದು. ತಂಡಗಳ ಕಾರ್ಯನಿರ್ಹಣೆ ಬಗ್ಗೆ ಯಾವುದೇ ಸಮಯದಲ್ಲಿ ತಪಾಸಣೆ ನಡೆಸಲಾಗುವುದು. ತಪಾಸಣೆ ವೇಳೆ ಮದ್ಯಪಾನ ಮಾಡಿ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬೆಸ್ಕಾಂನ ರಾತ್ರಿ ಕಾಮಗಾರಿ ವೇಳೆ ತಪ್ಪಿದ ಸಂಭವನೀಯ ಅನಾಹುತ! ವಿಡಿಯೋ ವೈರಲ್, ನಾಗರಿಕರು ಆಕ್ರೋಶ
ಬೆಸ್ಕಾಂನ ರಾತ್ರಿ ಕಾಮಗಾರಿ ವೇಳೆ ತಪ್ಪಿದ ಸಂಭವನೀಯ ಅನಾಹುತ! ವಿಡಿಯೋ ವೈರಲ್, ನಾಗರಿಕರು ಆಕ್ರೋಶ

ಗಾಳಿ-ಮಳೆಯಿಂದ ಧರೆಗುರುಳುವ ಮರಗಳ ತ್ವರಿತ ತೆರವು ಹಾಗೂ ರಾತ್ರಿ ಪಾಳಿಯಲ್ಲಿ ತುರ್ತು ಕಾರ್ಯಾಚರಣೆ ಮಾಡಬೇಕಿದೆ. ಮರಗಳ ರೆಂಬೆ-ಕೊಂಬೆಗಳು ಮುರಿದು ಬೀಳುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಅರಣ್ಯ ವಿಭಾಗದ ಅಧಿಕಾರಿ, ಸಿಬ್ಬಂದಿ ತ್ವರಿತ ಕೆಲಸ ಮಾಡಬೇಕು.ವಿಶೇಷವಾಗಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ತ್ವರಿತವಾಗಿ ತೆರವುಗೊಳಿಸಬೇಕು. ಯಾವುದೇ ದೂರುಗಳನ್ನು ನಿರ್ಲಕ್ಷಿಸದೆ ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸಿ ಸಾರ್ವಜನಿಕರಿಗೆ ನೆರವಾಗುವಂತೆ ನಿರ್ದೇಶಿಸಿದರು.

ವಾಹನಗಳ ಮೇಲೆ ನಾಮಫಲಕ

ಅರಣ್ಯ ವಿಭಾಗದ ಕಾರ್ಯಾಚರಣೆಗೆ ನಿಯೋಜಿಸಿರುವ ಎಲ್ಲಾ ವಾಹನಗಳ ಮೇಲೆ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' ಹಾಗೂ 'ಬೆಂಗಳೂರು ಕೇಂದ್ರ ನಗರ ಪಾಲಿಕೆ' ಎಂಬ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಇದರಿಂದ ಸಾರ್ವಜನಿಕರು ಹಾಗೂ ಪೊಲೀಸ್ ಮತ್ತು ಸಂಚಾರ ಪೊಲೀಸ್ ಸಿಬ್ಬಂದಿಗೆ ಪಾಲಿಕೆಯ ಅಧಿಕೃತ ವಾಹನಗಳನ್ನು ಗುರುತಿಸಲು ಅನುಕೂಲವಾಗಲಿದೆ.

ಸಿಬ್ಬಂದಿ ಕೇವಲ ಸಾರ್ವಜನಿಕರಿಂದ ಬರುವ ದೂರುಗಳಿಗೆ ಮಾತ್ರ ಸೀಮಿತವಾಗದೆ, ತಮ್ಮ ಕಾರ್ಯವ್ಯಾಪ್ತಿಯಲ್ಲಿ ಅಪಾಯಕಾರಿಯಾಗಿ ಬೆಳೆದಿರುವ ಅಥವಾ ಮುರಿದು ಬೀಳುವ ಸಾಧ್ಯತೆಯಿರುವ ಮರದ ರೆಂಬೆ-ಕೊಂಬೆಗಳನ್ನು ಸ್ವಯಂಪ್ರೇರಿತವಾಗಿ ಗುರುತಿಸಿ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಅವುಗಳನ್ನು ಕತ್ತರಿಸಿ ತೆರವುಗೊಳಿಸಬೇಕು ಎಂದು ತಿಳಿಸಿದರು. ಅಲ್ಲದೇ ಕಾರ್ಯಾಚರಣೆ ನಡೆಸಿದ, ಮರ, ಕೊಂಬೆ ತೆರವಿನ ಕುರಿತು ವರದಿ ನೀಡುವಂತೆ ಸೂಚಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+