BTech, MBA ಓದಿದವರಿಗಿಂತ ಹೆಚ್ಚು ಸಂಪಾದನೆ! ಬೆಂಗಳೂರಿನ ಮನೆ ಕೆಲಸದ ಮಹಿಳೆಯ ಸಂಬಳ ಕೇಳಿ ಎಲ್ಲರೂ ಅಚ್ಚರಿ!

ಬೆಂಗಳೂರು: ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಪದವಿ, ತಾಂತ್ರಿಕ ಶಿಕ್ಷಣ ಮತ್ತು ಹೆಚ್ಚಿನ ಕೌಶಲ್ಯಗಳನ್ನು ಹೊಂದಿರುವ ಯುವಕರೇ ಉತ್ತಮ ಸಂಬಳದ ಉದ್ಯೋಗ ಪಡೆಯಲು ಪರದಾಡುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಬಾಡಿಗೆ, ಊಟ, ಪ್ರಯಾಣ ಸೇರಿದಂತೆ ಜೀವನ ನಿರ್ವಹಣೆಯ ವೆಚ್ಚ ಹೆಚ್ಚಾಗಿದ್ದು, ₹30 ಸಾವಿರದಿಂದ ₹40 ಸಾವಿರ ಸಂಬಳ ಪಡೆಯುವ ಉದ್ಯೋಗಿಗಳಿಗೆ ಜೀವನ ನಡೆಸುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮನೆ ಕೆಲಸ ಹಾಗೂ ಅಡುಗೆ ಮಾಡುವ ಮಹಿಳೆಯೊಬ್ಬರು ತಿಂಗಳಿಗೆ ₹40 ಸಾವಿರ ಸಂಪಾದಿಸುತ್ತಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

ಬೆಂಗಳೂರಿನಲ್ಲಿ ಮಾರ್ಕೆಟರ್ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡುವ ಕಾರ್ತಿಕೇಯ್ ಉನಿಯಾಲ್ (Kartikeya Uniyal) ತಮ್ಮ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ತನ್ನ ಮನೆಯಲ್ಲಿ ಅಡುಗೆ ಮಾಡುವ ಮಹಿಳೆಯ ಸಂಪಾದನೆಯ ಕುರಿತು ರಿವೀಲ್ ಮಾಡಲಾಗಿದೆ.

Monthly salary Bengaluru Domestic Cook Earns 40 000 a Month More Than Many BTech and MBA Graduates

5ರಿಂದ 6 ಮನೆಗಳಲ್ಲಿ ಅಡುಗೆ, ತಿಂಗಳಿಗೆ ₹40 ಸಾವಿರ ಆದಾಯ!

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಅನುಭವದ ಪ್ರಕಾರ, ಬೆಂಗಳೂರಿನಲ್ಲಿ ಮನೆಗಳಿಗೆ ಅಡುಗೆ ಮಾಡಲು ತೆರಳುವ ಮಹಿಳೆಯೊಬ್ಬರು ತಿಂಗಳಿಗೆ ಸುಮಾರು ₹40 ಸಾವಿರ ಸಂಪಾದಿಸುತ್ತಿದ್ದಾರೆ. ಅವರ ಕೆಲಸದ ಸಮಯ ಮತ್ತು ಸೌಲಭ್ಯಗಳನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ.

ಈ ಮಹಿಳೆ ಪ್ರತಿದಿನ ಬೆಳಗ್ಗೆ ಸುಮಾರು 8 ಗಂಟೆಗೆ ತಮ್ಮ ಕೆಲಸ ಆರಂಭಿಸುತ್ತಾರೆ. ಒಂದೇ ಮನೆಯಲ್ಲಿ ಕೆಲಸ ಮಾಡುವ ಬದಲು 5ರಿಂದ 6 ಮನೆಗಳಿಗೆ ತೆರಳಿ ಅಡುಗೆ ಮಾಡುತ್ತಾರೆ. ಮಧ್ಯಾಹ್ನ ಊಟ ಮತ್ತು ವಿಶ್ರಾಂತಿಗಾಗಿ 2ರಿಂದ 3 ಗಂಟೆಗಳ ಕಾಲ ಬಿಡುವು ಪಡೆಯುತ್ತಾರೆ. ಬಳಿಕ ಸಂಜೆ ಮತ್ತೆ ಕೆಲಸ ಆರಂಭಿಸಿ ರಾತ್ರಿ 8 ಗಂಟೆಯೊಳಗೆ ತಮ್ಮ ಕೆಲಸ ಮುಗಿಸುತ್ತಾರೆ.

ಕೆಲಸ ಬಿಡಲು ಬಯಸಿದ್ದ ಟೆಕ್ಕಿಗೆ ಲೇಆಫ್ ಲಾಟರಿ! 15 ತಿಂಗಳ ಸಂಬಳ ನೀಡಿ ಮನೆಗೆ ಕಳುಹಿಸಿದ ಕಂಪನಿ
ಕೆಲಸ ಬಿಡಲು ಬಯಸಿದ್ದ ಟೆಕ್ಕಿಗೆ ಲೇಆಫ್ ಲಾಟರಿ! 15 ತಿಂಗಳ ಸಂಬಳ ನೀಡಿ ಮನೆಗೆ ಕಳುಹಿಸಿದ ಕಂಪನಿ

ಭಾನುವಾರ ರಜೆ, ಹಬ್ಬಕ್ಕೂ ರಜೆ!

ಇಲ್ಲಿ ಗಮನ ಸೆಳೆಯುವ ಮತ್ತೊಂದು ವಿಚಾರವೆಂದರೆ ಅವರಿಗೆ ಸಿಗುತ್ತಿರುವ ಕೆಲಸದ ಸೌಲಭ್ಯಗಳು. ವಾರದಲ್ಲಿ ಭಾನುವಾರ ರಜೆ ಇರುತ್ತದೆ. ಹಬ್ಬಗಳ ಸಂದರ್ಭದಲ್ಲಿಯೂ ರಜೆ ಸಿಗುತ್ತದೆ. ವೈಯಕ್ತಿಕ ಕಾರಣಗಳಿಂದ ಒಂದು ದಿನ ರಜೆ ಬೇಕಾದರೂ ಸಂಬಳ ಕಡಿತ ಮಾಡುವುದಿಲ್ಲ ಎನ್ನಲಾಗಿದೆ.

ಅಷ್ಟೇ ಅಲ್ಲ, ರಾತ್ರಿ 8 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೋದ ಬಳಿಕ ಯಾರೂ ಕರೆ ಮಾಡಿ ಕೆಲಸದ ಬಗ್ಗೆ ವಿಚಾರಿಸುವುದಿಲ್ಲ. ಭಾನುವಾರ ಅಥವಾ ಹಬ್ಬದ ದಿನಗಳಲ್ಲಿಯೂ ಹೆಚ್ಚುವರಿ ಕೆಲಸದ ಒತ್ತಡ ಇರುವುದಿಲ್ಲ. ಅಂದರೆ ಕೆಲಸದ ಸಮಯದ ಹೊರತಾಗಿ ಸಂಪೂರ್ಣ ವೈಯಕ್ತಿಕ ಜೀವನ ನಡೆಸಲು ಅವಕಾಶವಿದೆ.

Severance Pay: ಸಂಬಳ ಇರುವಾಗ ಟ್ಯಾಕ್ಸ್‌ ಕಟ್ಟಬೇಕು, ಕೆಲಸ ಕಳೆದುಕೊಂಡ್ರೂ ಟ್ಯಾಕ್ಸ್‌ ಕಟ್ಬೇಕಾ? ಏನನ್ಯಾಯ!
Severance Pay: ಸಂಬಳ ಇರುವಾಗ ಟ್ಯಾಕ್ಸ್‌ ಕಟ್ಟಬೇಕು, ಕೆಲಸ ಕಳೆದುಕೊಂಡ್ರೂ ಟ್ಯಾಕ್ಸ್‌ ಕಟ್ಬೇಕಾ? ಏನನ್ಯಾಯ!

ಪದವೀಧರರಿಗೆ ₹30 ಸಾವಿರ ಸಂಬಳ, ಒತ್ತಡವೂ ಹೆಚ್ಚು!

ಇದಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಹೊಸದಾಗಿ ಉದ್ಯೋಗಕ್ಕೆ ಸೇರುವ ಬಿಟೆಕ್ ಮತ್ತು ಎಂಬಿಎ ಪದವೀಧರರ ಪರಿಸ್ಥಿತಿ ಭಿನ್ನವಾಗಿದೆ. ಅನೇಕ ಕಂಪನಿಗಳು ಪದವಿ, ಮಾರ್ಕೆಟಿಂಗ್ ಜ್ಞಾನ, ಸಾಮಾಜಿಕ ಜಾಲತಾಣ ನಿರ್ವಹಣೆ ಸೇರಿದಂತೆ ಹಲವು ಕೌಶಲ್ಯಗಳನ್ನು ಕೇಳುತ್ತವೆ. ಆದರೆ ಇಂತಹ ಹುದ್ದೆಗಳಿಗೆ ನೀಡುವ ಮಾಸಿಕ ವೇತನ ಕೇವಲ ₹30 ಸಾವಿರದ ಆಸುಪಾಸಿನಲ್ಲಿರುತ್ತದೆ.

ಕೆಲವು ಉದ್ಯೋಗಗಳಲ್ಲಿ ಕಚೇರಿಗೆ ತೆರಳಿ ಕೆಲಸ ಮಾಡುವುದು ಕಡ್ಡಾಯವಾಗಿರುತ್ತದೆ. ನಿಗದಿತ ಕೆಲಸದ ಅವಧಿಯ ಜೊತೆಗೆ ನಿರಂತರ ಒತ್ತಡ, ಹೆಚ್ಚುವರಿ ಕೆಲಸ ಮತ್ತು ಕಚೇರಿ ಸಮಯದ ನಂತರವೂ ಬರುವ ಕರೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ₹30 ಸಾವಿರದಿಂದ ₹40 ಸಾವಿರ ಸಂಬಳದಲ್ಲಿ ಬೆಂಗಳೂರಿನಲ್ಲಿ ಜೀವನ ನಡೆಸುವುದು ಸುಲಭವಲ್ಲ. ಮನೆ ಬಾಡಿಗೆ, ಆಹಾರ, ದಿನನಿತ್ಯದ ಪ್ರಯಾಣ ಮತ್ತು ಇತರ ಖರ್ಚುಗಳನ್ನು ಭರಿಸಿದ ಬಳಿಕ ಕೈಯಲ್ಲಿ ಉಳಿಯುವ ಹಣ ಬಹಳ ಕಡಿಮೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+