ಕೆಲಸ ಬಿಡಲು ಬಯಸಿದ್ದ ಟೆಕ್ಕಿಗೆ ಲೇಆಫ್ ಲಾಟರಿ! 15 ತಿಂಗಳ ಸಂಬಳ ನೀಡಿ ಮನೆಗೆ ಕಳುಹಿಸಿದ ಕಂಪನಿ

ಕೆಲಸದ ವಾತಾವರಣ ಸರಿಯಿಲ್ಲ ಎಂದು ಬೇಸತ್ತು ಕಂಪನಿಯನ್ನು ತೊರೆಯಲು ಬಯಸಿದ್ದ ಉದ್ಯೋಗಿಯೊಬ್ಬರಿಗೆ ಕಂಪನಿಯೇ ಲೇಆಫ್ ನೀಡಿದೆ. ಅಚ್ಚರಿಯ ಸಂಗತಿಯೆಂದರೆ, ಕೆಲಸ ಕಳೆದುಕೊಂಡರೂ ಅವರಿಗೆ ಸುಮಾರು 15 ತಿಂಗಳ ಸಂಬಳಕ್ಕೆ ಸಮಾನವಾದ ಹಣಕಾಸಿನ ಭದ್ರತೆ ಸಿಕ್ಕಿದೆ. ಇದೀಗ ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಜಾಗತಿಕ ಚಿಪ್ ತಯಾರಿಕಾ ಸಂಸ್ಥೆಯಾದ ಕ್ವಾಲ್ಕಾಮ್‌ನಲ್ಲಿ (Qualcomm) ಕೆಲಸ ಮಾಡುತ್ತಿದ್ದ ಭಾರತದ ಹಿರಿಯ ಎಂಜಿನಿಯರ್ ಒಬ್ಬರು ರೆಡ್ಡಿಟ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕಂಪನಿಯಲ್ಲಿ ಐದು ವರ್ಷಗಳ ಅನುಭವ ಹೊಂದಿದ್ದ ಅವರು, ತಾವು ಕೆಲಸ ಮಾಡುತ್ತಿದ್ದ ವಾತಾವರಣ ವಿಷಕಾರಿಯಾಗಿತ್ತು ಎಂದು ಆರೋಪಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಕಂಪನಿಯಿಂದ ಲೇಆಫ್ ದೊರೆತಿರುವುದು ತಮಗೆ ಅನಿರೀಕ್ಷಿತವಾಗಿ ವರದಾನವಾಗಿದೆ ಎಂದು ಹೇಳಿದ್ದಾರೆ.

Reddit Viral Post Qualcomm Employee Receives Severance Package Worth 15 Months Salary After Layoff

Qualcommನಲ್ಲಿ ಉದ್ಯೋಗ ಕಡಿತದ ಭೀತಿ

ಕ್ವಾಲ್ಕಾಮ್ ಜಾಗತಿಕ ಪುನರ್‌ರಚನೆಯ ಭಾಗವಾಗಿ ದೊಡ್ಡ ಮಟ್ಟದ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎನ್ನಲಾಗಿದೆ. ಕಂಪನಿಯ ಒಟ್ಟು 52,000 ಉದ್ಯೋಗಿಗಳ ಪೈಕಿ ಸುಮಾರು ಶೇ.7ರಷ್ಟು ಅಂದರೆ 3,600 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಕನ್ನಡಿಗರಿಗೆ ಶೇ.80 ಉದ್ಯೋಗ ಮೀಸಲಾತಿ ಜಾರಿಗೆ ತನ್ನಿ; ಡಿಕೆಶಿಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಆಗ್ರಹ
ಕನ್ನಡಿಗರಿಗೆ ಶೇ.80 ಉದ್ಯೋಗ ಮೀಸಲಾತಿ ಜಾರಿಗೆ ತನ್ನಿ; ಡಿಕೆಶಿಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಆಗ್ರಹ

ಭಾರತದಲ್ಲಿ ಸುಮಾರು 1,000 ಉದ್ಯೋಗಿಗಳು ಈ ಉದ್ಯೋಗ ಕಡಿತದಿಂದ ಪ್ರಭಾವಿತರಾಗಬಹುದು ಎನ್ನಲಾಗಿದೆ. ಹಿರಿಯ ಎಂಜಿನಿಯರ್‌ಗಳು ಮಾತ್ರವಲ್ಲದೆ, ಇತ್ತೀಚೆಗೆ ಕೆಲಸಕ್ಕೆ ಸೇರಿದ ಉದ್ಯೋಗಿಗಳೂ ಈ ಪಟ್ಟಿಯಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಬೆಂಗಳೂರು, ಹೈದರಾಬಾದ್, ದೆಹಲಿ ಎನ್‌ಸಿಆರ್ ಮತ್ತು ಚೆನ್ನೈ ಸೇರಿದಂತೆ ಭಾರತದ ವಿವಿಧ ಕೇಂದ್ರಗಳಲ್ಲಿ ಕ್ವಾಲ್ಕಾಮ್ ಸುಮಾರು 20,000 ಉದ್ಯೋಗಿಗಳನ್ನು ಹೊಂದಿದೆ.

ಕೆಲಸದ ವಾತಾವರಣದಿಂದ ಬೇಸತ್ತು ಕೆಲಸ ಬಿಡಲು ನಿರ್ಧಾರ

ರೆಡ್ಡಿಟ್ ಪೋಸ್ಟ್‌ನಲ್ಲಿ ಉದ್ಯೋಗಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಸುಮಾರು ಆರು ತಿಂಗಳ ಹಿಂದೆ ಅವರು ಕಂಪನಿಯ ಆಂತರಿಕ ವರ್ಗಾವಣೆ ಮೂಲಕ ಮತ್ತೊಂದು ತಂಡಕ್ಕೆ ಸೇರಿದ್ದರು. ಬೇರೆ ನಗರಕ್ಕೆ ಸ್ಥಳಾಂತರಗೊಂಡಿದ್ದರಿಂದ ಮನೆಯ ಸಮೀಪದಲ್ಲೇ ಕೆಲಸ ಮಾಡಲು ಅನುಕೂಲವಾಗಬಹುದು ಎಂಬ ನಿರೀಕ್ಷೆಯಿಂದ ತಂಡ ಬದಲಾಯಿಸಿಕೊಂಡಿದ್ದರು. ಆದರೆ ಹೊಸ ತಂಡದಲ್ಲಿ ಅವರ ಅನುಭವ ನಿರೀಕ್ಷೆಗೆ ವಿರುದ್ಧವಾಗಿತ್ತು. ಅಲ್ಲಿ ವೈಯಕ್ತಿಕ ಟೀಕೆಗಳು, ತಾಂತ್ರಿಕ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಹಾಗೂ ಸಹೋದ್ಯೋಗಿಗಳಿಂದ ಸೂಕ್ತ ಬೆಂಬಲದ ಕೊರತೆ ಎದುರಾಯಿತು ಎಂದು ಅವರು ಆರೋಪಿಸಿದ್ದಾರೆ.

IT BT ಕಂಪನಿಗಳಲ್ಲಿ ಕನ್ನಡಿಗರ ಉದ್ಯೋಗ: ವಿಪಕ್ಷ ನಾಯಕ ಸೇರಿ ರಾಜಕಾರಣಿಗಳ ಮೌನವೇಕೆ? ಕರವೇ ತರಾಟೆ!
IT BT ಕಂಪನಿಗಳಲ್ಲಿ ಕನ್ನಡಿಗರ ಉದ್ಯೋಗ: ವಿಪಕ್ಷ ನಾಯಕ ಸೇರಿ ರಾಜಕಾರಣಿಗಳ ಮೌನವೇಕೆ? ಕರವೇ ತರಾಟೆ!

ಹಿಂದಿನ ತಂಡದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದರೂ, ಹೊಸ ತಂಡಕ್ಕೆ ಬಂದ ನಂತರ ತಮ್ಮ ಆತ್ಮವಿಶ್ವಾಸ ಮತ್ತು ಕೆಲಸದ ಉತ್ಸಾಹ ಕುಗ್ಗಿತು ಎಂದು ತಿಳಿಸಿದ್ದಾರೆ. ಈ ಹಿಂದೆ ತಮ್ಮ ಪೈಥಾನ್ ಕೌಶಲ್ಯವನ್ನು ಹಿಂದಿನ ಮ್ಯಾನೇಜರ್ ಪ್ರಶಂಸಿಸಿದ್ದರು. ಆದರೆ ಹೊಸ ತಂಡದಲ್ಲಿ ತಮ್ಮ ಸಾಮರ್ಥ್ಯದ ಬಗ್ಗೆಯೇ ಟೀಕೆಗಳು ಕೇಳಿಬಂದವು ಎಂದು ನೆನಪಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಕಂಪನಿಯ ಉದ್ಯೋಗ ಕಡಿತದ ನಿರ್ಧಾರ ಪ್ರಕಟವಾದಾಗ, ತಮ್ಮನ್ನೂ ಲೇಆಫ್ ಪಟ್ಟಿಗೆ ಸೇರಿಸುವಂತೆ ನಿರ್ದೇಶಕರು ಮತ್ತು ಮ್ಯಾನೇಜರ್‌ಗಳನ್ನು ಸ್ವತಃ ಕೇಳಿಕೊಂಡಿದ್ದಾಗಿ ಹೇಳಿದ್ದಾರೆ.

ಲೇಆಫ್ ಆದರೂ 15 ತಿಂಗಳ ಸಂಬಳಕ್ಕೆ ಸಮಾನವಾದ ಹಣ!

ಉದ್ಯೋಗಿಯ ಪೋಸ್ಟ್ ಪ್ರಕಾರ, ಕಂಪನಿಯಿಂದ ಸಿಗುವ ಪರಿಹಾರ ಮೊತ್ತ ಹಲವು ವಿಭಾಗಗಳನ್ನು ಒಳಗೊಂಡಿದೆ.

* 3 ತಿಂಗಳ ಸಂಬಳ: ಸಾಮಾನ್ಯ ಉದ್ಯೋಗ ಕಡಿತ ಪರಿಹಾರ.
* 1 ತಿಂಗಳ ಹೆಚ್ಚುವರಿ ಸಂಬಳ: ಮೂರು ದಿನಗಳೊಳಗೆ ಅಗತ್ಯ ದಾಖಲೆಗಳಿಗೆ ಸಹಿ ಹಾಕಿದ್ದಕ್ಕಾಗಿ.
* 5 ತಿಂಗಳ ಸಂಬಳ: ಕಂಪನಿಯಲ್ಲಿ ಕೆಲಸ ಮಾಡಿದ ಸೇವಾವಧಿಗೆ ಸಂಬಂಧಿಸಿದ ಪರಿಹಾರ.
* 2 ತಿಂಗಳ ಸಂಬಳ: ಸ್ಥಳಾಂತರ ಬೋನಸ್. ಇದನ್ನು ಹಿಂದಿರುಗಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
* 1ರಿಂದ 2 ತಿಂಗಳ ಸಂಬಳ: ಬಳಕೆಯಾಗದೆ ಉಳಿದ ರಜೆಗಳ ನಗದೀಕರಣ.

ಇದರ ಜೊತೆಗೆ ಜನವರಿ ಅಂತ್ಯದವರೆಗೂ ಸಾಮಾನ್ಯ ಸಂಬಳ ಮುಂದುವರಿಯಲಿದೆ ಎಂದು ಉದ್ಯೋಗಿ ತಿಳಿಸಿದ್ದಾರೆ. ಇದರಿಂದ ಹೆಚ್ಚುವರಿಯಾಗಿ ಸುಮಾರು ಮೂರು ತಿಂಗಳ ಆದಾಯ ದೊರೆಯಲಿದೆ. ಈ ಎಲ್ಲ ಮೊತ್ತಗಳನ್ನು ಸೇರಿಸಿದಾಗ ಸುಮಾರು 15 ತಿಂಗಳ ಸಂಬಳಕ್ಕೆ ಸಮಾನವಾದ ಆರ್ಥಿಕ ಭದ್ರತೆ ಸಿಗಲಿದೆ ಎಂಬುದು ಅವರ ಅಂದಾಜು.

ತಕ್ಷಣವೇ ಮತ್ತೊಂದು ಕೆಲಸ ಹುಡುಕುವ ಆತುರವಿಲ್ಲ!

ಲೇಆಫ್ ಆದ ತಕ್ಷಣವೇ ಮತ್ತೊಂದು ಉದ್ಯೋಗಕ್ಕೆ ಸೇರಿಕೊಳ್ಳುವ ಆತುರ ತಮಗಿಲ್ಲ ಎಂದು ಈ ಎಂಜಿನಿಯರ್ ಹೇಳಿದ್ದಾರೆ. ಮೊದಲು ಕುಟುಂಬದವರು ಮತ್ತು ಆಪ್ತ ಸ್ನೇಹಿತರೊಂದಿಗೆ ಸಮಯ ಕಳೆಯಲು ನಿರ್ಧರಿಸಿದ್ದಾರೆ. ನಂತರ ಮತ್ತೆ ಅಧ್ಯಯನ ಆರಂಭಿಸಿ, ಉದ್ಯೋಗ ಸಂದರ್ಶನಗಳಿಗೆ ಸಿದ್ಧತೆ ನಡೆಸಿ ಹೊಸ ಉದ್ಯೋಗಾವಕಾಶಗಳಿಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಒಟ್ಟಿನಲ್ಲಿ, ಕೆಲಸದ ವಾತಾವರಣದಿಂದ ಬೇಸತ್ತು ಕಂಪನಿಯನ್ನು ತೊರೆಯಲು ಬಯಸಿದ್ದ ಉದ್ಯೋಗಿಗೆ ಲೇಆಫ್ ಅನಿರೀಕ್ಷಿತ ಆರ್ಥಿಕ ಭದ್ರತೆ ಒದಗಿಸಿದೆ. ಕ್ವಾಲ್ಕಾಮ್‌ನ ಉದ್ಯೋಗ ಕಡಿತದ ನಡುವೆಯೇ ಈ ಉದ್ಯೋಗಿಯ ಅನುಭವ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+