SWR: ಮುಂಬೈ-ಹುಬ್ಬಳ್ಳಿ, ಮೈಸೂರಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಚರಣೆ, ವೇಳಾಪಟ್ಟಿ ಇಲ್ಲಿದೆ
ಹುಬ್ಬಳ್ಳಿ: ಛತ್ ಹಬ್ಬದ ನಂತರದ ಜನದಟ್ಟಣೆ ಗಮನದಲ್ಲಿಟ್ಟುಕೊಂಡು, ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್‌ಟಿಟಿ) ನಿಂದ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ಏಕಮುಖ ವಿಶೇಷ ರೈಲು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಈ ರೈಲಿನ ಸಂಚಾರ ಸಮಯ, ವೇಳಾಪಟ್ಟಿ ಇಲ್ಲಿದೆ.
ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್- ಎಸ್‌ಎಸ್‌ಎಸ್ ಹುಬ್ಬಳ್ಳಿ ರೈಲು (01151) ಏಕಮುಖ ವಿಶೇಷ ಎಕ್ಸ್‌ಪ್ರೆಸ್ ರೈಲು ಇದೇ ನವೆಂಬರ್ 26 ರಂದು ಸಂಚಾರ ಮಾಡಲಿದೆ.

ಲೋಕಮಾನ್ಯ ತಿಲಕ್ ಟರ್ಮಿನಸ್ ಮುಂಬೈ-ಎಸ್‌ಎಸ್‌ಎಸ್ ಹುಬ್ಬಳ್ಳಿ ಏಕಮುಖ ವಿಶೇಷ ಎಕ್ಸ್‌ಪ್ರೆಸ್ ರೈಲು (01151) ಗುರುವಾರ (ನ.26) ರಂದು ರಾತ್ರಿ 23:55 ಗಂಟೆಗೆ ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಹೊರಡಲಿದೆ. ಮಾರನೇ ದಿನ ಶುಕ್ರವಾರ ನವೆಂಬರ್ 27 ರಂದು ಸಂಜೆ 16:35 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.
ರೈಲು ಸಂಚಾರದ ಮಾರ್ಗ, ನಿಲುಗಡೆ ವಿವರ
ಒಟ್ಟು 20 ಬೋಗಿಗಳ ಈ ಲೋಕಮಾನ್ಯ ತಿಲಕ್ ಟರ್ಮಿನಸ್ ಮುಂಬೈ-ಎಸ್‌ಎಸ್‌ಎಸ್ ಹುಬ್ಬಳ್ಳಿ ರೈಲು ಥಾಣೆ, ಕಲ್ಯಾಣ್, ಲೋನಾವಾಲಾ, ಪುಣೆ, ಲೋಣಂದ್, ಸತಾರಾ, ಕರಾಡ್, ಸಾಂಗ್ಲಿ, ಮಿರಜ್, ಕುಡಚಿ, ರಾಯಬಾಗ, ಘಟಪ್ರಭಾ, ಬೆಳಗಾವಿ, ಲೋಂಡಾ ಮತ್ತು ಧಾರವಾಡ ಮಾರ್ಗವಾಗಿ ಸಂಚರಿಸಲಿದೆ. ಆಯಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ರೈಲಿನ ವಿವರ ಸಮಯ ಮತ್ತು ವೇಳಾಪಟ್ಟಿ ಹಾಗೂ ಹೆಚ್ಚುವರಿ ಮಾಹಿತಿಗಾಗಿ ನೀವು ಭಾರತೀಯ ರೈಲ್ವೆ ಇಲಾಖೆ ಅಧಿಕೃತ ವೆಬ್‌ಸೈಟ್‌ಗೆ www.enquiry.indianrail.gov.in ಗೆ ಭೇಟಿ ನೀಡಬೇಕು. ಇಲ್ಲವೇ NTES ಆ್ಯಪ್ ಮೂಲಕ ಅಥವಾ 139 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ತಿಳಿಯಬಹುದು.
ಇತರ ಮಾರ್ಗದಲ್ಲೂ ಏಕ ಮುಖ ರೈಲು ಸಂಚಾರ
ದರ್ಬಂಗಾದಿಂದ ಮೈಸೂರಿಗೆ ಒಂದು-ಮುಖ ವಿಶೇಷ ರೈಲು ಮತ್ತು ದಾನಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ಒಂದು-ಟ್ರಿಪ್ ವಿಶೇಷ ರೈಲು ಸೇವೆ ಸಿಗಲಿದೆ. ನವೆಂಬರ್ 27ರಂದು (05513) ದರ್ಭಾಂಗ-ಮೈಸೂರು ಏಕಮಾರ್ಗ ವಿಶೇಷ ರೈಲು 04:20 ಗಂಟೆಗೆ ದರ್ಭಾಂಗದಿಂದ ಹೊರಟು ನ.29 ರಂದು (ಭಾನುವಾರ) 14:30 ಗಂಟೆಗೆ ಮೈಸೂರಿಗೆ ಆಗಮಿಸಲಿದೆ.
ನಿಲುಗಡೆ ನಿಲ್ದಾಣಗಳು
ಮಾರ್ಗದಲ್ಲಿ ಈ ರೈಲು ಸಮಸ್ತಿಪುರ್ ಜಂಕ್ಷನ್, ಬರೌನಿ ಜಂಕ್ಷನ್, ಮೊಕಾಮಾ, ಭಕ್ತಿಯಾರ್ಪುರ್ ಜಂಕ್ಷನ್, ಪಾಟ್ನಾ ಜಂಕ್ಷನ್, ದಾನಾಪುರ, ಬಕ್ಸರ್, ಪಂ. ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಮಿರ್ಜಾಪುರ್, ಪ್ರಯಾಗ್‌ರಾಜ್ ಪಿಪಾರಿಯಾ, ಇಟಾರ್ಸಿ ಜಂಕ್ಷನ್, ಪುಣೆ, ಸತಾರಾ, ಧಾರವಾಡ, ಎಸ್‌ಎಸ್‌ಎಸ್ ಹುಬ್ಬಳ್ಳಿ, ದಾವಣಗೆರೆ, ಅರಸೀಕೆರೆ ಮತ್ತು ಮೈಸೂರುವರೆಗೆ ವಿವಿಧ ನಿಲ್ದಾನಗಳಲ್ಲಿ ನಿಲುಗಡೆ ನೀಡಲಿದೆ.
ಅದೇ ರೀತಿ ದಾನಾಪುರ-ಬೆಂಗಳೂರು ಕಂಟೋನ್ಮೆಂಟ್-ದಾನಾಪುರ ವಿಶೇಷ ರೈಲು (03241/03242) ನವೆಂಬರ್ 25 ರಿಂದ ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್ ಸೇವೆ ನೀಡಲಿದೆ.
ದಾನಾಪುರ-ಬೆಂಗಳೂರು ಕಂಟೋನ್ಮೆಂಟ್ ರೈಲು
ದಾನಾಪುರ-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು (03241) ನವೆಂಬರ್ 25 ರಂದು 20:45 ಗಂಟೆಗೆ ದಾನಾಪುರದಿಂದ ಹೊರಡುತ್ತದೆ. ನವೆಂಬರ್ 28 (ಶನಿವಾರ) 01:00 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ಗೆ ಬರಲಿದೆ.
ಮರಳಿ ಅದೇ ದಿಕ್ಕಿನಲ್ಲಿ ಬೆಂಗಳೂರು ಕಂಟೋನ್ಮೆಂಟ್-ದಾನಾಪುರ ವಿಶೇಷ ರೈಲು (03242) ನವೆಂಬರ್ 28 (ಶನಿವಾರ) ರಂದು 15:00 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಡಲಿದೆ. ನವೆಂಬರ್ 30 ರಂದು 18:00 ಗಂಟೆಗೆ ದಾನಾಪುರ ತಲುಪಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.




Click it and Unblock the Notifications
