Bengaluru-Mangaluru Railway Line: ಇತಿಹಾಸ ಸೇರಲಿವೆ ಡೀಸೆಲ್ ರೈಲುಗಳು, ವಿದ್ಯುತ್ ರೈಲುಗಳ ಸಂಚಾರ ಶೀಘ್ರ
ಬೆಂಗಳೂರು: ರಾಜಧಾನಿ ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ದಶಕಗಳಿಂದಲೂ ಸಂಚಾರ ಮಾಡುತ್ತಿದ್ದ ಲೋಕೋಮೋಟಿವ್ ಇಂಧನ ಚಾಲಿತ ರೈಲುಗಳು ಇತಿಹಾಸ ಪುಟ ಸೇರುವ ದಿನಗಳು ದೂರವಿಲ್ಲ. ಇಲ್ಲಿನ 55 ಕಿಲೋ ಮೀಟರ್ ದುರ್ಗಮ ರೈಲು ಮಾರ್ಗದಲ್ಲಿ ವಿದ್ಯುದೀಕರಣ ಪೂರ್ಣಗೊಂಡು ವರ್ಷ ಉರುಳಿದೆ. ಶೀಘ್ರವೇ ಎಲೆಕ್ಟ್ರಿಕ್ ಚಾಲಿಕ ರೈಲುಗಳ ಸಂಚಾರ ಆರಂಭವಾಗಲಿದೆ.
ವರ್ಷದ ಹಿಂದೆ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಮಧ್ಯದ ಸವಾಲಿನ ಮಾರ್ಗದಲ್ಲಿ 55 ಕಿಲೋ ಮೀಟರ್ ವಿದ್ಯುದೀಕರಣ ಪೂರ್ಣಗೊಂಡಿದೆ. ಇದರ ಬೆನ್ನಲ್ಲೆ ರೈಲುಗಳ ಸಂಚಾರ ಯಾವಾಗ ಎಂಬ ಪ್ರಶ್ನೆ ಉದ್ಭವಿಸಿತ್ತು. ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಈ ಮಾರ್ಗದ ವಿವಿಧ ರೈಲುಗಳ ಡೀಸೆಲ್ ಇಂಜಿನ್‌ಗಳನ್ನು ವಿದ್ಯುತ್ ಎಂಜಿನ್‌ಗಳಾಗಿ ಪರಿವರ್ತಿಸುತ್ತಿದೆ. ಈ ಕಾರ್ಯ ಪ್ರಗತಿಯಲ್ಲಿದೆ. ಇದು ಪೂರ್ಣಗೊಳ್ಳುತ್ತಿದ್ದಂತೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇರಿ ವಿವಿಧ ರೈಲುಗಳು ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸಂಚಾರ ಸೇವೆ ನೀಡಲಿವೆ. ಈ ಮೂಲಕ ಇಷ್ಟು ವರ್ಷಗಳ ಕಾಲ ಸೇವೆ ನೀಡಿದ್ದ ಇಂಧನ ಚಾಲಿತ ರೈಲುಗಳು ಇತಿಹಾಸ ಪುಟ ಸೇರಲಿವೆ.

ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ರೈಲು ಮಾರ್ಗದಲ್ಲಿ ಗುಡ್ಡ ಬೆಟ್ಟಗಳ ಮಧ್ಯ ವಿವಿಧ ಕಡೆಗಳಲ್ಲಿ ಕಡಿದಾದ, ಇಳಿಜಾರು, ಸುರಂಗ ಮತ್ತು ಸೇತುವೆಗಳಿವೆ. ಈ ಮಾರ್ಗದಲ್ಲಿ ಸಂಚರಿಸುವ ಏಳು ರೈಲುಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ಇಂಜಿನ್‌ಗಳಿಗೆ ಬದಲಾಯಿಸಲು ರೈಲ್ವೆ ಅಧಿಕಾರಿಗಳು ಈಗಾಗಲೇ ಕ್ರಮ ವಹಿಸಿದ್ದಾರೆ.
ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಯಾವುವು?
* ಎಸ್‌ಎಂವಿಟಿ ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು
* ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲು
* ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು
* ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು
* ವಿಜಯಪುರ- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು
* ಕೆಎಸ್‌ಆರ್ ಬೆಂಗಳೂರು- ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು
* ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ಇತ್ತೀಚೆಗೆ ಪ್ರಾಯೋಗಿಕ ಸಂಚಾರ ಮಾತ್ರ ಮುಗಿದಿದ್ದು, ವಾಣಿಜ್ಯ ಸೇವೆ ಆರಂಭಿಸಬೇಕಿದೆ)
ಈ ಮೇಲಿನ ರೈಲುಗಳ ಪೈಕಿ ನಾಲ್ಕು ರೈಲುಗಳು ಪ್ರಸ್ತುತ ಡೀಸೆಲ್‌ನಿಂದ ಚಲಿಸುತ್ತಿವೆ. ಉಳಿದವು ವಿದ್ಯುತ್ ಇಂಜಿನ್‌ಗಳು ಮತ್ತು ಭಾಗಶಃ ಡೀಸೆಲ್ ಇಂಜಿನ್ ಹೊಂದಿವೆ. ಇನ್ನು ಮುಂದೆ ಎಲ್ಲ ರೈಲುಗಳು ವಿದ್ಯುತ್‌ನಿಂದಲೇ ಕಾರ್ಯಾಚರಣೆ ಮಾಡಲು ನೈಋತ್ಯ ರೈಲ್ವೆ ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಸವಾಲಿನ ದಾರಿಗೆ ಡೀಸೆಲ್ ಇಂಜಿನ್ ಬೆಸ್ಟ್?
ಇಲ್ಲಿ ಕಡಿದಾದ ಪ್ರದೇಶ, ಸುರಂಗ, ಏರಿಳಿತವಾದ ಸವಾಲಿನ ಪ್ರದೇಶ ಇರುವ ಕಾರಣ ಬೆಂಗಳೂರು ಎಸ್‌ಎಂವಿಟಿ- ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ಮತ್ತು ಉತ್ತರ ಕರ್ನಾಟಕಕ್ಕೆ ಸಂಪರ್ಕಿಸುವ ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಪ್ರಸ್ತುತ ಘಟ್ಟ ಪ್ರದೇಶ ದಾಟಲು ಮಾತ್ರ ಅನುಕೂಲವಾಗುವಂತೆ ಭಾಗಶಃ ಡೀಸೆಲ್ ಇಂಜಿನ್ ಹೊಂದಿದ ರೈಲುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಇನ್ನೂ ಸಕಲೇಶಪುರದಲ್ಲಿ ಟ್ರಾಕ್ಷನ್ ಉಪಕೇಂದ್ರ ನಿರ್ಮಾಣದ ಕೆಲಸ ನಡೆಯುತ್ತಿದೆ. ಅದು ಪೂರ್ಣಗೊಂಡ ನಂತರ, ಈ ವಿಭಾಗದಲ್ಲಿ ವಿದ್ಯುತ್ ಪ್ರವಹಿಸುವುಕ್ಕೆ ಸಂಬಂಧಿಸಿದಂತೆ ಕೆಲವು ಪರೀಕ್ಷೆಗಳು ನಡೆಸಲಾಗುತ್ತದೆ. ವಂದೇ ಭಾರತ್‌ಗಾಗಿ ರಿಸರ್ಚ್ ಡಿಸೈನ್ಸ್ ಆ್ಯಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ರೈಲ್ವೆ ಅಧಿಕಾರಗಳು ಹೇಳಿದ್ದಾರೆ.


Click it and Unblock the Notifications
