Gold: ಭಾರತದಲ್ಲಿ 880.52 ಮೆಟ್ರಿಕ್ ಟನ್ ಚಿನ್ನ ಸಂಗ್ರಹ: ವಿದೇಶಿ ಬ್ಯಾಂಕ್‌ಗಳಲ್ಲಿದ್ದ 60 ಟನ್ ಬಂಗಾರ ಮರಳಿ ತಂದ RBI

Gold Price Reduced: ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಮೌಲ್ಯ (Gold Price Today) ಕುಸಿಯುತ್ತಿದೆ. ಜನರು ಖರೀದಿಗೆ ಸೂಕ್ತ ಕಾಲ ಎನ್ನುವಾಗಲೇ ಕಳೆದ ಎರಡು ದಿನಗಳಿಂದ ಏರಿಕೆ ಆಗುತ್ತಿದೆ. ಈ ಹೊತ್ತಿನಲ್ಲಿ ತನ್ನ ಈ ಹಿಂದಿನ ಭಾಗವಾಗಿ ಭಾರತವು ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿದ್ದ ಚಿನ್ನವನ್ನು ಮರಳಿ ದೇಶಕ್ಕೆ ತರುತ್ತಿದೆ. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ (RBI) 2026ರ ಏಪ್ರಿಲ್‌-ಸೆಪ್ಟೆಂಬರ್ ಅವಧಿಯಲ್ಲಿ RBI ಸುಮಾರು 60 ಟನ್ ಚಿನ್ನ ಭಾರತಕ್ಕೆ ಮರಳಿ ತಂದಿದೆ ಎಂದು ಬುಧವಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳು ತಿಳಿಸಿವೆ.

2026ರ ಕಳೆದ ತಿಂಗಳ ಸೆಪ್ಟೆಂಬರ್ ಅಂತ್ಯದ ವೇಳೆಗೆ ದೇಶದ ಒಟ್ಟು ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನದ ಪಾಲು ತಗ್ಗಿದೆ. ಭಾರತದಲ್ಲಿರುವ ಬಂಗಾರದ ಪ್ರಮಾಣ ಹೆಚ್ಚಾಗಿದೆ. ಆದರೂ ಒಟ್ಟು ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನದ ಪಾಲು ಸೆಪ್ಟೆಂಬರ್ ಅಂತ್ಯಕ್ಕೆ ಶೇ.14.38ರಷ್ಟು ಕುಸಿತದಿದೆ. ಇದೇ ನಿಧಿ ಕಳೆದ ಆರು ತಿಂಗಳ ಹಿಂದಷ್ಟೇ ಶೇ.16.7ರಷ್ಟಿತ್ತು ಎಂದು RBI ವರದಿ ತಿಳಿಸಿದೆ.

RBI Brings Back Around 60 Tonnes of Gold to India Between April and September 2026 Amid Risks

ವಿದೇಶಗಳಲ್ಲಿ ಭದ್ರವಾಗಿಟ್ಟಿದ್ದ ಚಿನ್ನದಲ್ಲಿ ಬಹುತೇಕ ಬಂಗಾರವನ್ನು ಭಾರತಕ್ಕೆ ಆರ್ಮರಳಿ ತಂದಿದೆ. RBI ತನ್ನ ಅರ್ಧವಾರ್ಷಿಕ ವರದಿಯಲ್ಲಿ ತಿಳಿಸಿದಂತೆ ಸೆಪ್ಟೆಂಬರ್ ಅಂತ್ಯಕ್ಕೆ ಭಾರತದ ಚಿನ್ನದ ಸಂಗ್ರಹವು 880.52 ಮೆಟ್ರಿಕ್ ಟನ್‌ಗಳಷ್ಟಿತ್ತು. ಇದರಲ್ಲಿ 740.13 ಮೆಟ್ರಿಕ್ ಟನ್ ಚಿನ್ನ (ಒಟ್ಟು ಸಂಗ್ರಹದ ಶೇ.84ರಷ್ಟು ಭಾಗ) ಭಾರತದಲ್ಲಿಯೇ ಇದೆ. ಉಳಿದ ಚಿನ್ನವು (140.39 ಮೆಟ್ರಿಕ್ ಟನ್) ವಿದೇಶಿ ಬ್ಯಾಂಕ್‌ಗಳಾದ 'ಬ್ಯಾಂಕ್ ಆಫ್ ಇಂಗ್ಲೆಂಡ್', 'ಬ್ಯಾಂಕ್ ಫಾರ್ ಇಂಟರ್‌ನ್ಯಾಶನಲ್ ಸೆಟಲ್‌ಮೆಂಟ್ಸ್' (BIS) ಬಳಿ ಇಡಲಾಗಿದೆ. ಮುಂದಿನ ದಿನಗಳಲ್ಲಿ ಆ ಚಿನ್ನವನ್ನು ತರುತ್ತಾ ಕಾದು ನೋಡಬೇಕಿದೆ.

 Gold Price Today: ಚಿನ್ನ ಖರೀದಿದಾರರಿಗೆ ಮತ್ತೆ ಶಾಕ್: ಮತ್ತೆ ಏರಿಕೆ ಕಂಡ ಬಂಗಾರ; ಇಲ್ಲಿದೆ ದರ ಪಟ್ಟಿ!
Gold Price Today: ಚಿನ್ನ ಖರೀದಿದಾರರಿಗೆ ಮತ್ತೆ ಶಾಕ್: ಮತ್ತೆ ಏರಿಕೆ ಕಂಡ ಬಂಗಾರ; ಇಲ್ಲಿದೆ ದರ ಪಟ್ಟಿ!

RBI ಚಿನ್ನ ಮರಳಿ ತರಲು ಕಾರಣವೇನು?

ಜಾಗತಿಕವಾಗಿ ಭೌಗೋಳಿಕ-ರಾಜಕೀಯ ಅಪಾಯಗಳ ಸ್ಥಿತಿ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಭಾರತವು ಕಳೆದ ಎರಡು ವರ್ಷಗಳಿಂದ ತನ್ನ ಚಿನ್ನದ ಸಂಗ್ರಹ ಹಂತ ಹಂತವಾಗಿ ಮರಳಿ ತರಲು ಮುಂದಾಯಿತು. ಅಲ್ಲಿಂದ ಮಾರ್ಚ್ 2026 ವರೆಗೆ ದೇಶದದಲ್ಲಿ ಒಟ್ಟು ಸಂಗ್ರಹಿಸಿದ ಭಾರತದ ಚಿನ್ನದ ಪೈಕಿ ಶೇ. 77ರಷ್ಟು ನಮ್ಮ ದೇಶದಲ್ಲೇ ಇದೆ. ನಂತರ ಏಪ್ರಿಲ್‌ನಿಂದ ನಿರಂತರವಾಗಿ ಚಿನ್ನದ ತರಲಾಗಿದ್ದು, ಸದ್ಯ ಭಾರತದಲ್ಲಿನ ಚಿನ್ನದ ಪ್ರಮಾಣ ಶೇ.84ರಷ್ಟಿದೆ ಎಂದು RBI ತಿಳಿಸಿದೆ.

ಭಾರತದ ವಿದೇಶಿ ವಿನಿಮಯ ಮೀಸಲು ಏರಿಕೆ

RBI ಪ್ರಕಾರ, ಭಾರತದ ವಿದೇಶಿ ವಿನಿಮಯ ಮೀಸಲು ಮೊತ್ತವು 705.3 ಶತಕೋಟಿ ಡಾಲರ್‌ ಗೆ ಮುಟ್ಟಿದೆ. ಈ ಮೊತ್ತವು 2026ರ ಜೂನ್ ಹೊತ್ತಿಗೆ 668.6 ಶತಕೋಟಿ ಡಾಲರ್‌ನಷ್ಟಿತ್ತು. ಅದು 9.8 ತಿಂಗಳ ಆಮದು ವೆಚ್ಚ ಭರಿಸಲು ಸಾಕಾಗುವಷ್ಟಿತ್ತು ಎಂದು ವಿವರಿಸಲಾಗಿದೆ.

ಈ ವರ್ಷದ ಮಾರ್ಚ್ ಅಂತ್ಯಕ್ಕೆ ಶೆ.21.6 ರಷ್ಟಿದ್ದ ಅಲ್ಪಾವಧಿಯ ಸಾಲ ಮತ್ತು ವಿದೇಶಿ ವಿನಿಮಯ ಮೀಸಲುಗಳ ಅನುಪಾತವು, ಜೂನ್ ಗೆ ಶೇ.23ಕ್ಕೆ ಹೆಚ್ಚಾಯಿತು. ಅಸ್ಥಿರ ಬಂಡವಾಳ ಹರಿವು ಮತ್ತು ಮೀಸಲುಗಳ ನಡುವಿನ ಅನುಪಾತ ಸಹ ಏರಿಕೆ ಆಯಿತು. ದೇಶದ ಬಹುತೇಕ ವಿದೇಶಿ ವಿನಿಮಯ ಮೀಸಲಿನ ಹೆಚ್ಚಿನ ಪಾಲು ವಿದೇಶಿ ಸರ್ಕಾರಗಳು ಹೊರಡಿಸಿದ ಭದ್ರತಾ ಪತ್ರಗಳಲ್ಲಿ ಹೂಡಿಕೆ ಮಾಡಿದ್ದಾಗಿದೆ. ಕೇಂದ್ರ ಬ್ಯಾಂಕ್‌ಗಳಲ್ಲಿ 35.95 ಶತಕೋಟಿ ಡಾಲರ್ ಮೊತ್ತ ಠೇವಣಿಯಾಗಿ ಇಡಲಾಗಿದೆ. ಜೊತೆಗೆ 42.75 ಶತಕೋಟಿ ಡಾಲರ್ ಮೊತ್ತವನ್ನು ವಿದೇಶಿ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿ ಇಡಲಾಗಿದೆ.

Gold Rate Today: ಆಭರಣ ಪ್ರಿಯರಿಗೆ ಮತ್ತೆ ಶಾಕ್! ದಿಢೀರ್ ಏರಿಕೆ ಕಂಡ ಚಿನ್ನದ ದರ, ಬೆಳ್ಳಿ ಸ್ವಲ್ಪ ಅಗ್ಗ
Gold Rate Today: ಆಭರಣ ಪ್ರಿಯರಿಗೆ ಮತ್ತೆ ಶಾಕ್! ದಿಢೀರ್ ಏರಿಕೆ ಕಂಡ ಚಿನ್ನದ ದರ, ಬೆಳ್ಳಿ ಸ್ವಲ್ಪ ಅಗ್ಗ

ಚಿನ್ನದ ಬೆಲೆಯಲ್ಲಿ ಶೇ.9ರಷ್ಟು ಇಳಿಕೆ

ಏಷ್ಯಾ ರಾಷ್ಟ್ರಗಳ ನಡುವಿನ ಯುದ್ಧ, ಸಂಘರ್ಷ, ಇಂಧನ ಪೂರೈಕೆ ವ್ಯತ್ಯಯ ಅಲ್ಲದೇ ಬ್ಯಾಂಕ್‌ಗಳ ಜಾರಿಗೊಳಿಸಿದ ಕಠಿಣ ಹಣಕಾಸು ನೀತಿಗಳು ಜಾಗತಿಕ ರಾಜಕೀಯ ಅನಿಶ್ಚಿತತೆ ಕಾರಣವಾಯಿತು. ಚಿನ್ನದ ಮೌಲ್ಯ ನಿರಂತರವಾಗಿ ಸುಮಾರು 9 ರಷ್ಟು ಕುಸಿಯುತ್ತಾ ಬಂತು. 2026ರ ಏಪ್ರಿಲ್‌ನಲ್ಲಿ ಪ್ರತಿ ಟ್ರಾಯ್ ಔನ್ಸ್‌ಗೆ 4,721 ಸರಾಸರಿ ಡಾಲರ್‌ ದರವು, ಸೆಪ್ಟೆಂಬರ್‌ ವೇಳೆಗೆ 4,319 ಡಾಲರ್‌ಗೆ ಕುಸಿಯಿತು. ಇದನ್ನು ಒಂದಷ್ಟು ಸಮಸ್ಯೆಗಳ ಮುನ್ಸೂಚನೆ ಎಂಬಂತೆ ಅರಿತ ಭಾರತೀಯ ರಿಸರ್ವ್ ಬ್ಯಾಂಕ್‌ ಚಿನ್ನ ಮರಳಿ ಭಾರತಕ್ಕೆ ತರುವ ಪ್ರಕ್ರಿಯೆಗೆ ವೇಗ ನೀಡಿತು.

RBI ವರದಿ ಪ್ರಕಾರ, ಜಾಗತಿಕ ವಿದೇಶಿ ವಿನಿಮಯ ಮೀಸಲು ನಿಧಿಯ ಸಂಯೋಜನೆ ಸಾಕಷ್ಟು ಬದಲಾವಣೆ ಆಗಿವೆ. 2026ರ ಮೊದಲ ತ್ರೈಮಾಸಿಕದಲ್ಲಿ ಶೆ.57.18 ರಷ್ಟಿದ್ದ ಅಮೆರಿಕದ ಡಾಲರ್‌ನ ಪಾಲು, ಎರಡನೇ ತ್ರೈಮಾಸಿಕದಲ್ಲಿ ಶೇ.56.70 ಕ್ಕೆ ಕುಸಿಯಿತು. ಯೂರೋ ಪಾಲು ಸಹ ಇಳಿಕೆ ಆಯಿತು ಎಂದು ಅಂಕಿ ಅಂಶಗಳು ದೃಢಪಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+