2027 Holiday List: ಮುಂದಿನ ವರ್ಷ ಲಾಂಗ್ ವೀಕೆಂಡ್ ಪ್ರಿಯರಿಗೆ ಶಾಕ್! 8 ಪ್ರಮುಖ ರಜೆಗಳು ಶನಿವಾರ, ಭಾನುವಾರ
2027 Holiday List: ಪ್ರಸ್ತುತ ವರ್ಷ 2026 ಮುಗಿಯಲು ಇನ್ನೂ 60 ದಿನ ಬಾಕಿ ಇವೆ. ಹೀಗಿರುವಾಗಲೇ ಅದೆಷ್ಟೋ ಜನರಿಗೆ 2027ರಲ್ಲಿ ಯಾವೆಲ್ಲ ರಜಾ ದಿನಗಳು ಬರುತ್ತವೆ ಎಂಬುದು ಯೋಚನೆಯಾಗಿದೆ. ಎಷ್ಟು ರಜೆ ಹಾಕಿ, ಮೋಜು ಮಸ್ತಿ ಮಾಡಬೇಕೆಂದು ಕೆಲವು ಯೋಚಿಸಿದ್ದಾರೆ. ಅವರಿಗೆಲ್ಲ 2027ರಲ್ಲಿ ಆಘಾತ ಎದರಾಗಲಿದೆ.!
ಪ್ರತಿ ಹಬ್ಬ, ಇತರ ಕಾರಣಗಳಿಗೆ ಹಾಲಿಡೇ ಬಂದಾಗ, ಜೊತೆಗೊಂದಷ್ಟು ದಿನ ರಜೆ ಹಾಕಿ ಲಾಂಗ್ ವೀಕೆಂಡ್ (ದೀರ್ಘ ವಾರಾಂತ್ಯ) ಕಳೆಯುತ್ತಾರೆ. ಆದರೆ 2027ರಲ್ಲಿ ನಿಮ್ಮ 'ಲಾಂಗ್ ವೀಕೆಂಡ್' (ದೀರ್ಘ ವಾರಾಂತ್ಯ) ಯೋಜನೆಗಳಿಗೆ ಅಸಹಿತಕರ ಸುದ್ದಿಯೊಂದು ಸಿಕ್ಕಿದೆ.

ಹೌದು, 2027ರಲ್ಲಿ ಕರ್ನಾಟಕ ಸೇರಿದಂತೆ ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬ, ಆಚರಣೆಗಳು ರಜಾದಿನಗಳಾದ (ಶನಿವಾರ ಅಥವಾ ಭಾನುವಾರ) ಬಂದಿವೆ. ಇದು ಲಾಂಗ್ ವೀಕೆಂಡ್ ಪ್ರಿಯರ ಬೇಸರಕ್ಕೆ ಕಾರಣವಾಗಿದೆ.
2027ರಲ್ಲಿ ಪ್ರಮುಖ ರಜೆಗಳು/ಆಚರಣೆಗಳು 09 ದಿನ ಇದ್ದು, ಅವು ಶನಿವಾರ ಮತ್ತು ಭಾನುವಾರವೇ ಬಂದಿವೆ. ಅವುಗಳ ಮಾಹಿತಿ/ಪಟ್ಟಿ ಮುಂದಿದೆ.
2027ರ ಪ್ರಮುಖ ಆಚರಣೆಗಳ ರಜಾ ಪಟ್ಟಿ
* ಮಾರ್ಚ್ 6 - ಮಹಾ ಶಿವರಾತ್ರಿ (ಶನಿವಾರ)
* ಮೇ 1 - ಕಾರ್ಮಿಕ ದಿನ (ಶನಿವಾರ)
* ಆಗಸ್ಟ್ 15 - ಸ್ವಾತಂತ್ರ್ಯ ದಿನಾಚರಣೆ (ಭಾನುವಾರ)
* ಸೆಪ್ಟೆಂಬರ್ 4 - ಗಣೇಶ ಚತುರ್ಥಿ (ಶನಿವಾರ)
* ಅಕ್ಟೋಬರ್ 2 - ಗಾಂಧಿ ಜಯಂತಿ (ಶನಿವಾರ)
* ಅಕ್ಟೋಬರ್ 9 - ವಿಜಯದಶಮಿ / ದಸರಾ (ಶನಿವಾರ)
* ನವೆಂಬರ್ 14 - ಗುರು ನಾನಕ್ ಜಯಂತಿ (ಭಾನುವಾರ)
* ಡಿಸೆಂಬರ್ 25 - ಕ್ರಿಸ್‌ಮಸ್ (ಶನಿವಾರ)
2027ರ ಸಂಪೂರ್ಣ ಹಬ್ಬಗಳ/ಆಚರಣೆಗಳ ರಜಾ ಪಟ್ಟಿ ಹೀಗಿದೆ
* 1 ಜನವರಿ (ಶುಕ್ರವಾರ) ಹೊಸ ವರ್ಷದ ದಿನ
* 14 ಜನವರಿ (ಗುರುವಾರ) ಮಕರ ಸಂಕ್ರಾಂತಿ
* 15 ಜನವರಿ (ಶುಕ್ರವಾರ) ಪೊಂಗಲ್
* 15 ಜನವರಿ (ಶುಕ್ರವಾರ) ಗುರು ಗೋವಿಂದ ಸಿಂಗ್ ಜಯಂತಿ
* 26 ಜನವರಿ (ಮಂಗಳವಾರ) ಗಣರಾಜ್ಯೋತ್ಸವ
* 6 ಫೆಬ್ರವರಿ (ಶನಿವಾರ) ಚಂದ್ರಮಾನ ಹೊಸ ವರ್ಷ ಆಚರಣೆ
* 9 ಫೆಬ್ರವರಿ (ಮಂಗಳವಾರ) ರಂಜಾನ್ ಆರಂಭ (ಅಂದಾಜು ದಿನಾಂಕ)
* 11 ಫೆಬ್ರವರಿ (ಗುರುವಾರ) ವಸಂತ ಪಂಚಮಿ
* 14 ಫೆಬ್ರವರಿ (ಭಾನುವಾರ) ವ್ಯಾಲೆಂಟೈನ್ಸ್ ಡೇ
* 19 ಫೆಬ್ರವರಿ (ಶುಕ್ರವಾರ) ಶಿವಾಜಿ ಜಯಂತಿ
* 20 ಫೆಬ್ರವರಿ (ಶನಿವಾರ) ಗುರು ರವಿದಾಸ್ ಜಯಂತಿ
* 2 ಮಾರ್ಚ್ (ಮಂಗಳವಾರ) ಮಹರ್ಷಿ ದಯಾನಂದ ಸರಸ್ವತಿ ಜಯಂತಿ
* 5 ಮಾರ್ಚ್ (ಶುಕ್ರವಾರ) ಜಮಾತ್-ಉಲ್-ವಿದಾ
* 6 ಮಾರ್ಚ್ (ಶನಿವಾರ) ಮಹಾ ಶಿವರಾತ್ರಿ
* 10 ಮಾರ್ಚ್ (ಬುಧವಾರ) ರಂಜಾನ್ ಈದ್ (ಅಂದಾಜು ದಿನಾಂಕ)
* 21 ಮಾರ್ಚ್ (ಭಾನುವಾರ) ಮಾರ್ಚ್ ವಿಷುವತ್ ಸಂಕ್ರಾಂತಿ
* 22 ಮಾರ್ಚ್ (ಸೋಮವಾರ) ಹೋಳಿ ಸರ್ಕಾರಿ ರಜೆ
* 22 ಮಾರ್ಚ್ (ಸೋಮವಾರ) ಡೋಲಯಾತ್ರಾ
* 22 ಮಾರ್ಚ್ (ಸೋಮವಾರ) ಹೋಲಿಕಾ ದಹನ
* 25 ಮಾರ್ಚ್ (ಗುರುವಾರ) ಮೌಂಡಿ ಥರ್ಸ್‌ಡೇ (Maundy Thursday) ಆಚರಣೆ, ಕ್ರೈಸ್ತ ಧರ್ಮ
* 26 ಮಾರ್ಚ್ (ಶುಕ್ರವಾರ) ಗುಡ್ ಫ್ರೈಡೇ
* 28 ಮಾರ್ಚ್ (ಭಾನುವಾರ) ಈಸ್ಟರ್ ದಿನ
* 7 ಏಪ್ರಿಲ್ (ಬುಧವಾರ) ಚೈತ್ರ ಶುಕ್ಲಾದಿ
* 7 ಏಪ್ರಿಲ್ (ಬುಧವಾರ) ಯುಗಾದಿ
* 7 ಏಪ್ರಿಲ್ (ಬುಧವಾರ) ಗುಡಿ ಪಾಡ್ವಾ
* 7 ಏಪ್ರಿಲ್ (ಬುಧವಾರ) ಚೇತಿ ಚಾಂದ್
* 14 ಏಪ್ರಿಲ್ (ಬುಧವಾರ) ವೈಶಾಖಿ
* 14 ಏಪ್ರಿಲ್ (ಬುಧವಾರ) ವಿಷು
* 14 ಏಪ್ರಿಲ್ (ಬುಧವಾರ) ಮೇಸಾಡಿ
* 14 ಏಪ್ರಿಲ್ (ಬುಧವಾರ) ಅಂಬೇಡ್ಕರ್ ಜಯಂತಿ ಆಚರಣೆ
* 15 ಏಪ್ರಿಲ್ (ಗುರುವಾರ) ರಾಮ ನವಮಿ ಸರ್ಕಾರಿ ರಜೆ
* 15 ಏಪ್ರಿಲ್ (ಗುರುವಾರ) ಬಹಾಗ್ ಬಿಹು (ಅಸ್ಸಾಂ)
* 15 ಏಪ್ರಿಲ್ (ಗುರುವಾರ) ವೈಶಾಖಾದಿ (ಬಂಗಾಳ)
* 19 ಏಪ್ರಿಲ್ (ಸೋಮವಾರ) ಮಹಾವೀರ ಜಯಂತಿ
* 22 ಏಪ್ರಿಲ್ (ಗುರುವಾರ) ಪಾಸ್ಸೋವರ್‌ನ (Passover) ಮೊದಲ ದಿನ
* 1 ಮೇ (ಶನಿವಾರ) ಅಂತರರಾಷ್ಟ್ರೀಯ ಕಾರ್ಮಿಕ ದಿನ
* 9 ಮೇ (ಭಾನುವಾರ) ತಾಯಂದಿರ ದಿನ (Mother's Day)
* ಮೇ 9 (ಭಾನುವಾರ) ರವೀಂದ್ರನಾಥರ ಜನ್ಮದಿನ
* ಮೇ 17 (ಸೋಮವಾರ) ಬಕ್ರೀದ್ (ಅಂದಾಜು ದಿನಾಂಕ)
* ಮೇ 20 (ಗುರುವಾರ) ಬುದ್ಧ ಪೂರ್ಣಿಮೆ
* ಜೂನ್ 16 (ಬುಧವಾರ) ಮೊಹರಂ/ಆಶುರಾ (ಅಂದಾಜು ದಿನಾಂಕ)
* ಜೂನ್ 20 (ಭಾನುವಾರ) ತಂದೆಯಂದಿರ ದಿನ (Father's Day) ಆಚರಣೆ
* ಜೂನ್ 21 (ಸೋಮವಾರ) ಜೂನ್ ಅಯನ ಸಂಕ್ರಾಂತಿ (Solstice) ಋತುಮಾನ
* ಜುಲೈ 5 (ಸೋಮವಾರ) ರಥಯಾತ್ರೆ
* ಆಗಸ್ಟ್ 1 (ಭಾನುವಾರ) ಸ್ನೇಹಿತರ ದಿನ (Friendship Day) ಆಚರಣೆ
* ಆಗಸ್ಟ್ 15 (ಭಾನುವಾರ) ಸ್ವಾತಂತ್ರ್ಯ ದಿನಾಚರಣೆ
* ಆಗಸ್ಟ್ 15 (ಭಾನುವಾರ) ಮಿಲಾದ್-ಉನ್-ನಬಿ (ಅಂದಾಜು ದಿನಾಂಕ)
* ಆಗಸ್ಟ್ 15 (ಭಾನುವಾರ) ಪಾರ್ಸಿ ಹೊಸ ವರ್ಷ
* ಆಗಸ್ಟ್ 17 (ಮಂಗಳವಾರ) ರಕ್ಷಾ ಬಂಧನ
* ಆಗಸ್ಟ್ 25 (ಬುಧವಾರ) ಜನ್ಮಾಷ್ಟಮಿ
* ಆಗಸ್ಟ್ 25 (ಬುಧವಾರ) ಜನ್ಮಾಷ್ಟಮಿ (ಸ್ಮಾರ್ತ ಸಂಪ್ರದಾಯ) ಆಚರಣೆ
* ಸೆಪ್ಟೆಂಬರ್ 4 (ಶನಿವಾರ) ಗಣೇಶ ಚತುರ್ಥಿ
* ಸೆಪ್ಟೆಂಬರ್ 12 (ಭಾನುವಾರ) ಓಣಂ
* ಸೆಪ್ಟೆಂಬರ್ 23 (ಗುರುವಾರ) ಸೆಪ್ಟೆಂಬರ್ ವಿಷುವತ್ ಸಂಕ್ರಾಂತಿ
* ಸೆಪ್ಟೆಂಬರ್ 30 (ಗುರುವಾರ) ಶರದ್ ನವರಾತ್ರಿಯ ಮೊದಲ ದಿನ ಆಚರಣೆ (ಹಿಂದೂ)
* ಅಕ್ಟೋಬರ್ 2 (ಶನಿವಾರ) ಮಹಾತ್ಮ ಗಾಂಧಿ ಜಯಂತಿ
* ಅಕ್ಟೋಬರ್ 5 (ಮಂಗಳವಾರ) ದುರ್ಗಾ ಪೂಜಾ ಉತ್ಸವಗಳ ಮೊದಲ ದಿನ ಆಚರಣೆ (ಹಿಂದೂ)
* ಅಕ್ಟೋಬರ್ 6 (ಬುಧವಾರ) ಮಹಾ ಸಪ್ತಮಿ
* ಅಕ್ಟೋಬರ್ 7 (ಗುರುವಾರ) ಮಹಾ ಅಷ್ಟಮಿ
* ಅಕ್ಟೋಬರ್ 8 (ಶುಕ್ರವಾರ) ಮಹಾ ನವಮಿ
* ಅಕ್ಟೋಬರ್ 9 (ಶನಿವಾರ) ದಸರಾ
* ಅಕ್ಟೋಬರ್ 15 (ಶುಕ್ರವಾರ) ಮಹರ್ಷಿ ವಾಲ್ಮೀಕಿ ಜಯಂತಿ
* ಅಕ್ಟೋಬರ್ 18 (ಸೋಮವಾರ) ಕರಕ ಚತುರ್ಥಿ
* ಅಕ್ಟೋಬರ್ 28 (ಗುರುವಾರ) ನರಕ ಚತುರ್ದಶಿ
* ಅಕ್ಟೋಬರ್ 29 (ಶುಕ್ರವಾರ) ದೀಪಾವಳಿ
* ಅಕ್ಟೋಬರ್ 30 (ಶನಿವಾರ) ಗೋವರ್ಧನ ಪೂಜೆ
* ಅಕ್ಟೋಬರ್ 31 (ಭಾನುವಾರ) ಹ್ಯಾಲೋವೀನ್ ಆಚರಣೆ
* ಅಕ್ಟೋಬರ್ 31 (ಭಾನುವಾರ) ರಜೆ
* 12 ಡಿಸೆಂಬರ್ (ಭಾನುವಾರ) ಹಜರತ್ ಅಲಿ ಅವರ ಜನ್ಮದಿನ
* 22 ಡಿಸೆಂಬರ್ (ಬುಧವಾರ) ಡಿಸೆಂಬರ್ ಅಯನ ಸಂಕ್ರಾಂತಿ (Solstice) ಋತುಮಾನದ ಸಂದರ್ಭ
* 24 ಡಿಸೆಂಬರ್ (ಶುಕ್ರವಾರ) ಕ್ರಿಸ್‌ಮಸ್ ಮುನ್ನಾದಿನ
* 25 ಡಿಸೆಂಬರ್ (ಶನಿವಾರ) ಹನುಕ್ಕಾ
* 25 ಡಿಸೆಂಬರ್ (ಶನಿವಾರ) ಕ್ರಿಸ್‌ಮಸ್
* 31 ಡಿಸೆಂಬರ್ (ಶುಕ್ರವಾರ) ಹೊಸ ವರ್ಷದ ಮುನ್ನಾದಿನ ಆಚರಣೆ


Click it and Unblock the Notifications
