ಬಿಜೆಪಿ ಪ್ರತಿಭಟನೆಗೆ ರಾಜ್ಯ ಸರ್ಕಾರದ ತಿರುಗೇಟು: ಬೆಲೆ ಏರಿಕೆ, ಬರ ಪರಿಹಾರದ ಬಗ್ಗೆ ಕೇಂದ್ರದತ್ತ ಬೊಟ್ಟು!

ಬೆಂಗಳೂರು: ಬೆಲೆ ಏರಿಕೆ, ಬರ ಪರಿಹಾರ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಮುಂದಿಟ್ಟುಕೊಂಡು ಬಿಜೆಪಿ ಕರ್ನಾಟಕದಲ್ಲಿ ಪ್ರತಿಭಟನೆ ಆರಂಭಿಸಿದೆ. ಜನಸಾಮಾನ್ಯರ ಸಮಸ್ಯೆಗಳ ಕುರಿತು ಹೋರಾಟ ನಡೆಸುವ ಪ್ರತಿಯೊಂದು ರಾಜಕೀಯ ಪಕ್ಷದ ಹಕ್ಕನ್ನು ಗೌರವಿಸುತ್ತಲೇ, ಕೋಟ್ಯಂತರ ಕುಟುಂಬಗಳ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರದ ನೀತಿ ನಿರ್ಧಾರಗಳ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮೊದಲು ಉತ್ತರಿಸಬೇಕೆಂದು ಡಾ.ಜಿ.ಪರಮೇಶ್ವರ ಅವರು ಕೆಲವು ಪ್ರಶ್ನೆಗಳನ್ನು ರಾಜ್ಯ ಬಿಜೆಪಿ ನಾಯಕರ ಮುಂದಿಟ್ಟಿದ್ದಾರೆ.

ಕಚ್ಚಾ ತೈಲ ಬೆಲೆ ಏರಿಕೆ, ಬರಗಾಲ ಪರಿಹಾರ ನೀಡುವಲ್ಲಿ ವಿಳಂಬ, ರಾಜ್ಯಗಳಿಗೆ ತಾರತಮ್ಯ ಸೇರಿದಂತೆ ಕೇಂದ್ರದ ಆರ್ಥಿಕ ನೀತಿಗಳ ವೈಫಲ್ಯದ ಸಂಪೂರ್ಣ ಹೊಣೆಯನ್ನು ರಾಜ್ಯ ಸರ್ಕಾರದ ಮೇಲೆ ಹೊರಿಸುವುದು ಸರಿಯಲ್ಲ. ಬಿಜೆಪಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಇಂದು ಸೋಮವಾರ ತಿಳಿಸಿದ್ದಾರೆ.

Karnataka Govt Counters BJP Protests Questions Centre Over Inflation Rupee Fall and Drought Relief

ಜನ, ರೈತರು, ಉದ್ಯಮಿಗಳಿಗೆ ಸಂಕಷ್ಟ

ಇಂದು ದೇಶದ ಪ್ರತಿಯೊಂದು ಕುಟುಂಬವೂ ಆಹಾರ ಪದಾರ್ಥಗಳು, ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿದೆ. ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳದಿಂದ ರೈತರು ತೊಂದರೆಗೀಡಾಗಿದ್ದಾರೆ. ವ್ಯಾಪಾರ ಮತ್ತು ನಿರ್ವಹಣಾ ವೆಚ್ಚಗಳ ಏರಿಕೆಯಿಂದ ಸಣ್ಣ ಉದ್ಯಮಿಗಳು ಸಂಕಷ್ಟದಲ್ಲಿದ್ದಾರೆ. ಸಾಮಾನ್ಯ ಕುಟುಂಬಗಳಿಗೆ ತಿಂಗಳ ಖರ್ಚುಗಳನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಈ ಸಮಸ್ಯೆ ಕೇವಲ ಕರ್ನಾಟಕದ್ದಷ್ಟೇ ಅಲ್ಲ. ಇಂತಹ ಸಮಯದಲ್ಲಿ ಎಲ್ಲರನ್ನು ಸಮಾನರಾಗಿ ಕಂಡು ಆರ್ಥಿಕ ರಕ್ಷಣೆ ಒದಗಿಸಬೇಕಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ತಿಳಿಸಿದರು.

A-Khata: ಕೃಷ್ಣ ಬೈರೇಗೌಡರ ಕ್ಷೇತ್ರದಲ್ಲೇ ಭಾರಿ ಅಕ್ರಮ? 49 ಅನಧಿಕೃತ ಸೈಟ್‌ಗಳಿಗೆ ಎ-ಖಾತಾ, ಫೋರ್ಜರಿ ಸಹಿ!
A-Khata: ಕೃಷ್ಣ ಬೈರೇಗೌಡರ ಕ್ಷೇತ್ರದಲ್ಲೇ ಭಾರಿ ಅಕ್ರಮ? 49 ಅನಧಿಕೃತ ಸೈಟ್‌ಗಳಿಗೆ ಎ-ಖಾತಾ, ಫೋರ್ಜರಿ ಸಹಿ!

ಹಣದುಬ್ಬರ ಸಮಸ್ಯೆಯ ಅಂಕಿ ಅಂಶ, ಕೇಂದ್ರದ ಕ್ರಮವೇನು?

ಕೇಂದ್ರ ಸರ್ಕಾರವೇ ಹೇಳಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, 2026ರ ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.09ಕ್ಕೆ ಹಾಗೂ ಆಹಾರ ಪದಾರ್ಥಗಳ ಹಣದುಬ್ಬರ ಶೇ. 8.94ಕ್ಕೆ ತಲುಪಿದೆ. 2014ರಲ್ಲಿ ಒಂದು ಡಾಲರ್‌ಗೆ ₹58.59ರಷ್ಟಿದ್ದ ರೂಪಾಯಿ ಮೌಲ್ಯ 2026ರ ಮೇ ತಿಂಗಳಲ್ಲಿ ₹96.96ಕ್ಕೆ ಕುಸಿತ ಕಂಡಿದೆ.

ಕಚ್ಚಾ ತೈಲದ ಆಮದು ವೆಚ್ಚ ಶೇ. 53.5ರಷ್ಟು ಹೆಚ್ಚಾಗಿದೆ. ಇದರ ಪರಿಣಾಮವಾಗಿ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಈರುಳ್ಳಿ, ಬೆಳ್ಳುಳ್ಳಿ ಹಾಗೂ ಬೇಳೆಕಾಳುಗಳ ಬೆಲೆ ಗಗನಕ್ಕೇರಿದೆ. ಅಲ್ಲದೆ, ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ವರ್ಷಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು ಒಂಬತ್ತರಿಂದ ನಾಲ್ಕಕ್ಕೆ ಇಳಿಸಿ ಬಡವರಿಗೆ ಇನ್ನಷ್ಟು ಹೊರೆ ಮಾಡಲಾಗಿದೆ. ಇದೆಲ್ಲವು ದೇಶದ ಪ್ರತಿ ನಾಗರಿಕರನ್ನು ಆತಂಕಕ್ಕೀಡು ಮಾಡಿದೆ ಎಂದು ಅವರು ವಿವರಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಪದಾರ್ಥಗಳ ಹಣದುಬ್ಬರವು ಶೇ. 9.09ರಷ್ಟಿದ್ದು, ಕೃಷಿ ಕಾರ್ಮಿಕರು, ರೈತರು ಮತ್ತು ಕಡಿಮೆ ಆದಾಯದ ಕುಟುಂಬಗಳ ಮೇಲೆ ತೀವ್ರ ಆರ್ಥಿಕ ಹೊರೆ ಬೀಳುತ್ತಿದೆ.

ಹನ್ನೆರಡು ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿದ್ದರೂ ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯ ಏರಿಳಿತಗಳಿಗೆ ಭಾರತ ಇಷ್ಟೊಂದು ದುರ್ಬಲವಾಗಿ ಪ್ರತಿಕ್ರಿಯಿಸುವ ಪರಿಸ್ಥಿತಿ ಏಕೆ ಮುಂದುವರಿದಿದೆ?. ಇಂಧನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಯಾವ ನಿರ್ದಿಷ್ಟ ಕ್ರಮ ಕೈಗೊಂಡಿದೆ ಎಂದು ತಿಳಿಸಿ ಎಂದರು. ವಿದೇಶಾಂಗ ನೀತಿಯ ಯಶಸ್ಸನ್ನು ಕೇವಲ ವಿದೇಶ ಪ್ರವಾಸಗಳು, ಛಾಯಾಚಿತ್ರಗಳು ಮತ್ತು ರಾಜತಾಂತ್ರಿಕ ಘೋಷಣೆಗಳಿಂದ ಅಳೆಯಲು ಸಾಧ್ಯವಿಲ್ಲ ಕಿಡಿ ಕಾರಿದರು.

ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ದೊರೆಯಬೇಕು. ಅದೇ ಸಮಯದಲ್ಲಿ ಸಾಮಾನ್ಯ ಗ್ರಾಹಕರಿಗೆ ಅಗತ್ಯ ಆಹಾರ ಪದಾರ್ಥಗಳು ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕು. ಅಡುಗೆ ಎಣ್ಣೆಯ ಬೆಲೆ ಏರಿಕೆಯೂ ಕುಟುಂಬಗಳ ಆರ್ಥಿಕ ಹೊರೆಯನ್ನು ಹೆಚ್ಚಿಸಿದೆ.

ರವಿ ಹಂಜ್ ಕೃತಿ ವಿವಾದ: RSS ವಿರುದ್ಧ ಅಪಪ್ರಚಾರ, ಸಂಘದಲ್ಲಿದೆ ಜಾತಿರಹಿತ ಸಮಾಜದ ನೆಲೆ
ರವಿ ಹಂಜ್ ಕೃತಿ ವಿವಾದ: RSS ವಿರುದ್ಧ ಅಪಪ್ರಚಾರ, ಸಂಘದಲ್ಲಿದೆ ಜಾತಿರಹಿತ ಸಮಾಜದ ನೆಲೆ

ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮೊದಲೇ ಪರಿಣಾಮಕಾರಿ ಕ್ರಮಗಳನ್ನು ಏಕೆ ಕೈಗೊಳ್ಳಲಿಲ್ಲ? ಆಮದು ಸುಂಕ ಕಡಿತದ ಸಂಪೂರ್ಣ ಪ್ರಯೋಜನ ಗ್ರಾಹಕರಿಗೆ ತಲುಪಿದೆಯೇ?
ಇವು ಕೇಂದ್ರ ಸರ್ಕಾರ ಉತ್ತರಿಸಲೇಬೇಕಾದ ನ್ಯಾಯಸಮ್ಮತ ಪ್ರಶ್ನೆಗಳಿಗೆ ರಾಜ್ಯ ಬಿಜೆಪಿ ನಾಯಕರು ಉತ್ತರಿಸಬೇಕೆಂದು ಆಗ್ರಹಿಸಿದ್ದಾರೆ.

ಸಿಲಿಂಡರ್ ಬೆಲೆ ದುಬಾರಿ, ಉದ್ಯಮ ತತ್ತರ

ಬೆಂಗಳೂರಿನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಸುಮಾರು ₹944.50ರಷ್ಟಿದ್ದರೆ, 19 ಕೆ.ಜಿ. ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಸುಮಾರು ₹2,909ಕ್ಕೆ ತಲುಪಿದೆ. ವಾಣಿಜ್ಯ ಬಳಕೆಯ ಅಡುಗೆ ಅನಿಲದ ಬೆಲೆ ಏರಿಕೆಯಿಂದ ಸಣ್ಣ ಹೋಟೆಲ್‌ಗಳು, ದರ್ಶಿನಿಗಳು, ಕ್ಯಾಂಟೀನ್‌ಗಳು, ಬೇಕರಿಗಳು ಹಾಗೂ ಸಾವಿರಾರು ಸಣ್ಣ ಆಹಾರೋದ್ಯಮಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳೂ ಗಂಭೀರ ಆತಂಕಕ್ಕೆ ಕಾರಣವಾಗಿವೆ.

ಜನಹಿತ ರಕ್ಷಣೆಗೆ ರಾಜ್ಯ ಸರ್ಕಾರದ ಕ್ರಮಗಳು

ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರಗಳಿಗೆ ಯಾವುದೇ ಜವಾಬ್ದಾರಿಯಿಲ್ಲ ಎಂದು ಹೇಳುತ್ತಿಲ್ಲ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಅರಿತಿದೆ. ಗ್ರಾಹಕರು, ರೈತರು ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಹಿತ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದನ್ನು ಮುಂದುವರಿಸಲಿದೆ.

ಕರ್ನಾಟಕ ಇತ್ತೀಚೆಗೆ ನಂದಿನಿ ಹಾಲಿನ ದರ ಪರಿಷ್ಕರಿಸಿದೆ. ಈ ಹೆಚ್ಚಳದ ಪೈಕಿ ₹7 ನೇರವಾಗಿ ಹೈನುಗಾರರಿಗೆ ತಲುಪಲಿದೆ. ಉಳಿದ ₹1 ಹಾಲು ಒಕ್ಕೂಟಕ್ಕೆ ಸಿಗಲಿದೆ. ಬರಗಾಲ, ಪಶು ಆಹಾರ ಸೇರಿದಂತೆ ಉತ್ಪಾದನಾ ವೆಚ್ಚಗಳ ಹೆಚ್ಚಳ ಹಾಗೂ ಹಾಲು ಉತ್ಪಾದನೆಯಲ್ಲಿನ ಕುಸಿತದಿಂದ ಈಗಾಗಲೇ ಸಂಕಷ್ಟದಲ್ಲಿರುವ ಹೈನುಗಾರರ ಜೀವನೋಪಾಯ ರಕ್ಷಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಕೊಳ್ಳುವ ಶಕ್ತಿ ಹೆಚ್ಚಿಸಲಾಗಿದೆ. ನಮ್ಮ ಯೋಜನೆ ಜನರಿಗೆ ನೆರವಾಗಿವೆ.

ಕರ್ನಾಟಕದಲ್ಲಿ ಟೊಯೋಟಾ ಉತ್ಪಾದನೆ ವಿಸ್ತರಣೆಗೆ ಸಹಕಾರ: ಜಪಾನ್ ಟ್ಯಾಕ್ಸಿ ಮಾಡೆಲ್ ಪರಿಚಯಿಸಲು ಡಿಕೆಶಿ ಒಲವು
ಕರ್ನಾಟಕದಲ್ಲಿ ಟೊಯೋಟಾ ಉತ್ಪಾದನೆ ವಿಸ್ತರಣೆಗೆ ಸಹಕಾರ: ಜಪಾನ್ ಟ್ಯಾಕ್ಸಿ ಮಾಡೆಲ್ ಪರಿಚಯಿಸಲು ಡಿಕೆಶಿ ಒಲವು

ರಾಜ್ಯದ ರೈತರ ಸಮಸ್ಯೆಗೆ ಸರ್ಕಾರ ಸ್ಪಂದನೆ

ಬರ ಪರಿಹಾರಕ್ಕೆ ಕರ್ನಾಟಕ ಸರ್ಕಾರ ಕ್ರಮ ಕೈಗೊಂಡಿದೆ. ಆದರೆ ಕೇಂದ್ರ ಸರ್ಕಾರವೂ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಬಿಜೆಪಿ ನಾಯಕರು ಬರ ಪರಿಹಾರದ ವಿಚಾರವನ್ನೂ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಸ್ಥಿತಿ ಗಂಭೀರತೆ ಅರಿತು ಕರ್ನಾಟಕ ಸರ್ಕಾರವು ಅರ್ಹ ರೈತರಿಗೆ ಗರಿಷ್ಠ ₹5,000ವರೆಗೆ ಕೃಷಿ ಪರಿಕರಗಳ ವೆಚ್ಚಕ್ಕಾಗಿ ನೆರವು ನೀಡಲಿದೆ. ಈಗಾಗಲೇ ₹2,500 ಪರಿಹಾರ ಡಿಬಿಟಿ ಮಾಡಲಾಗಿದೆ. ಹೀಗೆ ಹತ್ತಾರು ಪ್ರಶ್ನೆಗಳನ್ನು ಬಿಜೆಪಿ ನಾಯಕರ ಮುಂದಿಟ್ಟಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಟೀಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+