ಹಗರಣ ನಡೆದಿದ್ದಾಗಿ ಸಿದ್ದರಾಮಯ್ಯ ಒಪ್ಪಿಕೊಂಡ್ರು ಬಿ.ನಾಗೇಂದ್ರಗೆ ಕ್ಲೀನ್ ಚೀಟ್! ವಿಪಕ್ಷ ನಾಯಕ ಕಿಡಿ
ಬೆಂಗಳೂರು: ರಾಜ್ಯದಾದ್ಯಂತ ತೀವ್ರ ಚರ್ಚೆ ಸೃಷ್ಟಿಸಿದ್ದ ಕರ್ನಾಟಕ ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ₹187 ಕೋಟಿ ಹಗರಣ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ನ್ಯಾಯಾಲಯಕ್ಕೆ ಎಸ್‌ಐಟಿ ಕ್ಲೀನ್ ಚೀಟ್ ನೀಡಿದೆ. ದಲಿತ ಹಣ ಲೂಟಿ ಹೊಡೆದವರಿಗೆ "ಕ್ಲೀನ್ ಚಿಟ್ ಭಾಗ್ಯ"! ನೀಡುವುದೇ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರೆಂಟಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ.
ರಾಜ್ಯ ವಾಲ್ಮೀಕಿ ನಿಗಮದ ಹಗರಣ ಮತ್ತು ಮಾಜಿ ಸಚಿವ ನಾಗೇಂದ್ರ ಅವರಿಗೆ ಎಸ್‌ಐಟಿ ಕ್ಲೀನ್ ಚೀಟ್ ನೀಡಿರುವುದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಎಕ್ಸ್ ಪೋಸ್ಟ್ ಮಾಡಿದ್ದಾರೆ. ರಾಜ್ಯ ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ಹಗರಣ ನಡೆದಿರುವುದು ಅಕ್ಷರಶಃ ನಿಜ ಎಂದು ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪವಿತ್ರವಾದ ಸದನದ ಒಳಗೆ ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ ದಲಿತರ ಹಣ ನುಂಗಿದ ನಾಗೇಂದ್ರ ಅವರಿಗೆ ಕ್ಲೀನ್ ಚೀಟ್ ನೀಡಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಕ್ಲೀನ್ ಚೀಟ್ ಪ್ರಕಾರ, ಸಚಿವ ಸಂಪುಟದ ಮುಖ್ಯಸ್ಥರಾದ ಮುಖ್ಯಮಂತ್ರಿಗಳು ಜವಾಬ್ದಾರರಲ್ಲವಂತೆ. ಅಂದಿನ ಹಣಕಾಸು ಸಚಿವರೂ ಆಗಿದ್ದ ಸಿಎಂ ಸಿದ್ದರಾಮಯ್ಯ ಜವಾಬ್ದಾರರಲ್ಲವಂತೆ. ಇಲಾಖೆಯ ಸಚಿವರಾಗಿದ್ದ ನಾಗೇಂದ್ರ ಜವಾಬ್ದಾರರಲ್ಲ ಹಾಗೂ ನಿಗಮದ ಅಧ್ಯಕರೂ ಆದ ಕಾಂಗ್ರೆಸ್ ಶಾಸಕ ಬಸವರಾಜ ದದ್ದಲ್ ಜವಾಬ್ದಾರರಲ್ಲ ಎಂದಾದರೆ ವಾಲ್ಮಿಕಿ ನಿಗದಮ ಹಣ ಲೂಟಿ ಹೊಡೆದಿದ್ದು ಯಾರು? ದೆವ್ವಾನಾ? ಪಿಶಾಚಿನಾ? ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಹಣ ದುರ್ಬಳಕೆ ಕುರಿತು ಜನರಿಗೆ ಲೆಕ್ಕ ಕೊಡಿ
ಇಷ್ಟಕ್ಕೂ ಲೂಟಿ ಆಗಿದ್ದು ನಿಜವಾದರೆ, ನಿಮ್ಮ ಪ್ರಕಾರ ಲೂಟಿ ಹೊಡೆದವರಾದರೂ ಯಾರು? ಉತ್ತರ ಕೊಡಿ, ತೆರಿಗೆ ಕಟ್ಟುವ ಕನ್ನಡಿಗರಿಗೆ ಲೆಕ್ಕ ಕೊಡಿ. ಪರಿಶಿಷ್ಟ ಸಮುದಾಯಗಳ ಹಣ ಲೂಟಿ ಹೊಡೆದು, ಒಬ್ಬ ಪ್ರಾಮಾಣಿಕ ದಲಿತ ಅಧಿಕಾರಿಯ ಆತ್ಮಹತ್ಯೆಗೆ ಕಾರಣವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರಿಗೆ, ಶಾಸಕರಿಗೆ ಇಂದು ಸಂವಿಧಾನ ದಿನ ಆಚರಿಸುವ ಯಾವ ನೈತಿಕತೆ ಇದೆ? ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದ ಇತಿಹಾಸದಲ್ಲಿ ಮಾತ್ರವಲ್ಲ, ಇಡೀ ದೇಶದ ಇತಿಹಾಸದಲ್ಲಿ ಇಂತಹ ಲಜ್ಜೆಗೆಟ್ಟ ಪಕ್ಷ, ಮಾನಗೆಟ್ಟ ಸರ್ಕಾರ ಮತ್ತೊಂದಿರಲಿಕ್ಕಿಲ್ಲ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.
ನ್ಯಾಯಾಲಯಕ್ಕೆ SIT ಕ್ಲೀನ್ ಚೀಟ್ ಸಲ್ಲಿಕೆ
ದಲಿತ ಹಣ ಲೂಟಿ ಹೊಡೆದಿದ್ದೇ ಅಂದು ಸಚಿವರಾಗಿದ್ದ ಬಿ. ನಾಗೇಂದ್ರ ಅವರು. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಆಗ್ರಹಿಸಿ ಪಾದಯಾತ್ರೆ ನಡೆಸಿದವರು. ವಿಧಾನಸಭೆ ಅಧಿವೇಶನದಲ್ಲಿ ಪಟ್ಟು ಹಿಡಿದು ಬಾವಿಗಿಳಿದು ಪ್ರತಿಭಟಿಸಿದರು. ಕೊನೆಗೂ ಸುದ್ದಿಗೋಷ್ಠಿ ನಡೆಸಿ ಕಣ್ಣೀರಿಡುತ್ತಲೇ ನಾಗೇಂದ್ರ ಅವರು ರಾಜೀನಾಮೆ ನೀಡಬೇಕಾಯಿತು.
ಈ ಪ್ರಕರಣ ತನಿಖೆಯನ್ನು ಎಸ್‌ಐಟಿ ನಡೆಸಿದ್ದು, ತನಿಖೆ ಪೂರ್ಣಗೊಂಡ ಬೆನ್ನಲ್ಲೆ ವಾಲ್ಮಿಕಿ ನಿಗಮದ ಹಣವನ್ನು ದುರ್ಬಳಕೆಯಲ್ಲಿ ಬಿ.ನಾಗೇಂದ್ರರ ಪಾತ್ರವಿಲ್ಲ ಎಂದು ನ್ಯಾಯಾಲಯಕ್ಕೆ ಕ್ಲೀನ್ ಚೀಟ್ ಸಲ್ಲಿಸಿದ್ದಾರೆ. ಇದೇ ಪ್ರಕರಣದಲ್ಲಿ ಬಿ. ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷರಾಗಿದ್ದ ಶಾಸಕ ಬಸವರಾಜ್ ದದ್ದಲ್ ಅವರನ್ನು ಪ್ರಕರಣದ ಸಾಕ್ಷ್ಯಗಳಾಗಿ ಪರಿಗಣಿಸಲಾಗಿದೆ.




Click it and Unblock the Notifications
