ಕರ್ನಾಟಕದಲ್ಲಿ ಜಪಾನ್ ಕಂಪನಿಗಳಿಂದ ಹೂಡಿಕೆ: ಹಾರೋಹಳ್ಳಿಯಲ್ಲಿ ನೆಚುರೇನ್ ನೂತನ ಘಟಕ: ಎಂಬಿ ಪಾಟೀಲ್

ಬೆಂಗಳೂರು: ಜಪಾನ್ ಪ್ರವಾಸದಲ್ಲಿರುವ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ಒಂದೇ ದಿನ ಆರು ಪ್ರಮುಖ ಕಂಪನಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ರಾಜ್ಯದ ಆಟೋಮೋಟೀವ್ ಮತ್ತು ಅಡ್ವಾನ್ಸ್ಡ್ ಎಂಜಿನಿಯರಿಂಗ್ ವಲಯಗಳ ಬಲವರ್ಧಗೆ ಸಂಬಂಧಿಸಿದಂತೆ ಚರ್ಚೆಗಳು ಆಗಿವೆ. ಈ ಪೈಕಿ ನೆಚುರೇನ್ ಮತ್ತು ಜೆಎಕ್ಸ್ ಮೆಟಲ್ ಟ್ರೇಡಿಂಗ್ ಕಂಪನಿಗಳು ರಾಜ್ಯದಲ್ಲಿ ಅತ್ಯಾಧುನಿಕ ತಯಾರಿಕಾ ಸ್ಥಾವರಗಳನ್ನು ಹೊಂದಲು ಬಯಸಿವೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಜಪಾನ್ ಪ್ರವಾಸ ಕೈಗೊಂಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಮಂಗಳವಾರ ನೆಚುರೇನ್, ಅಜಿನೋಮೋಟೋ ಮತ್ತು ಜೆಟ್ರೋ ಸೇರಿದಂತೆ ಒಟ್ಟು ಆರು ಕಂಪನಿಗಳ ಪ್ರಮುಖರೊಂದಿಗೆ ಸಭೆ ನಡೆಸಿದರು.

Manufacturing Plants in Karnataka

ಅಲ್ಲಿನ ಸಭೆ ಬಳಿಕ ಜಪಾನಿನ ಅಗ್ರಪಂಕ್ತಿಯ ಕಂಪನಿಗಳಲ್ಲಿ ಒಂದಾಗಿರುವ ನೆಚುರೇನ್, ರಾಜ್ಯದ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅತ್ಯಾಧುನಿಕ ತಯಾರಿಕಾ ಸ್ಥಾವರ ಸ್ಥಾಪಿಸಲು ಆಸಕ್ತಿ ತೋರಿಸಿದೆ ಕಂಪನಿಯು ವಿಶೇಷ ಇಂಡಕ್ಷನ್ ಹೀಟಿಂಗ್ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದೆ. ಇದನ್ನು ಬಳಿಸಿಕೊಂಡು ವಾಹನಗಳ ಸಸ್ಪೆನ್ಶನ್ ಸ್ಪ್ರಿಂಗುಗಳಿಗೆ ಅಗತ್ಯವಿರುವ ಅಧಿಕ ಸಾಮರ್ಥ್ಯದ ವೈರ್ ತಯಾರಿಸುವ ತಂತ್ರಜ್ಞಾನವು ಈ ಯೋಜನೆಯ ಪ್ರಮುಖ ಪ್ರಸ್ತಾವನೆಯಾಗಿದೆ ಎಂದು ಮಾಹಿತಿ ನೀಡಿದರು.

Startup Park: 1000 ಎಕ್ರೆಯಲ್ಲಿ ಬೆಂಗಳೂರು ಸುತ್ತಮುತ್ತ ಮಾದರಿ ಸ್ಟಾರ್ಟಪ್ ಪಾರ್ಕ್ ನಿರ್ಮಾಣ
Startup Park: 1000 ಎಕ್ರೆಯಲ್ಲಿ ಬೆಂಗಳೂರು ಸುತ್ತಮುತ್ತ ಮಾದರಿ ಸ್ಟಾರ್ಟಪ್ ಪಾರ್ಕ್ ನಿರ್ಮಾಣ

ಹಾರೋಹಳ್ಳಿಯಲ್ಲಿ ಭೂಮಿ ನೀಡಲು ಸಿದ್ದ

ವೈರ್ ತಯಾರಿಸುವ ಯೋಜನೆ ಅನುಷ್ಠಾನಕ್ಕೆ ಕಂಪಿಗೆ ಕಂಪನಿಗೆ ಅಗತ್ಯವಿರುವ ಭೂಮಿಯನ್ನು ಹಾರೋಹಳ್ಳಿಯಲ್ಲಿ ಒದಗಿಸಲು ಸರ್ಕಾರ ಸಿದ್ದವಿದೆ. ಈ ಯೋಜನೆಯಿಂದ ರಾಜ್ಯದ ಆಟೋಮೋಟೀವ್ ಮತ್ತು ಅಡ್ವಾನ್ಸ್ಡ್ ಎಂಜಿನಿಯರಿಂಗ್ ವಲಯಗಳ ಬಲವರ್ಧನೆಯಾಗಲಿದೆ ಎಂದು ತಿಳಿಸಿದರು.

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಬೇಕಾಗುವ ವಿದ್ಯುನ್ಮಾನ ಬಿಡಿಭಾಗಗಳು ಮತ್ತಿತರ ಉತ್ಪನ್ನಗಳನ್ನು ತಯಾರಿಸುವ ಜೆಎಕ್ಸ್ ಮೆಟಲ್ ಟ್ರೇಡಿಂಗ್ ಕಂಪನಿ ರಾಜ್ಯದಲ್ಲಿನ ಪೂರೈಕೆ ಸರಪಳಿಯಲ್ಲಿ ತನಗಿರುವ ಅವಕಾಶಗಳನ್ನು ಗುರುತಿಸಿದೆ. ಈ ಕಂಪನಿಯು ಮೂಲ ಸಾಧನಗಳನ್ನು ತಯಾರಿಸುವ ಕಂಪನಿಗಳು (ಒಇಎಂ) ಮತ್ತು ಬಿಡಿಭಾಗಗಳನ್ನು ತಯಾರಿಸುವ ಕಂಪನಿಗಳೊಂದಿಗೆ ವ್ಯವಹರಿಸುವ ಆಸಕ್ತಿ ತೋರಿಸಿದೆ. ಇದು ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ, ಎಲೆಕ್ಟ್ರಾನಿಕ್ ಸಾಧನಗಳ ತಯಾರಿಕೆಯ ಮಾರುಕಟ್ಟೆಯನ್ನು ರಾಜ್ಯದಲ್ಲಿ ವಿಸ್ತರಿಸಬಹುದು.

ರಾಜ್ಯದಲ್ಲಿ ಹೂಡಿಕೆ ಮಾಡುವ ಜಪಾನ್ ಕಂಪನಿಗಳಿಗೆ ನೆರವು

ಜೆಟ್ರೋ ಕಂಪನಿಯೊಂದಿಗೆ ಜಪಾನ್ ಮತ್ತು ಕರ್ನಾಟಕ ನಡುವಿನ ಕೈಗಾರಿಕಾ ಸಹಭಾಗಿತ್ವಕ್ಕೆ ಇರುವ ಹೆಚ್ಚಿನ ಅವಕಾಶಗಳ ಬಗ್ಗೆ ಚರ್ಚಿಸಲಾಯಿತು. ಜಪಾನ್ ಟೌನ್-ಶಿಪ್ ಪ್ರದೇಶದಲ್ಲಿ ಜಪಾನೀಸ್ ಶಾಲೆ ತೆರೆಯುವ ಬಗ್ಗೆ ಚರ್ಚಿಸಲಾಗಿದೆ. ರಾಜ್ಯದಲ್ಲಿ ಹೂಡಿಕೆ ಮಾಡುವ ಜಪಾನಿನ ಕಂಪನಿಗಳಿಗೆ ನೆರವು ನೀಡುವುದು ಇದರ ಹಿಂದಿನ ಉದ್ದೇಶವಾಗಿದೆ. ಇದಕ್ಕಾಗಿ ರಾಜ್ಯ ಸರಕಾರದಿಂದ ಅವರಿಗೆ ಸಿ.ಎ. ನಿವೇಶನ ಕೊಡಲಾಗುವುದು ಎಂದು ಹೇಳಿದರು.

ಜಪಾನಿ ಕಂಪನಿಗಳಲ್ಲಿ ಉದ್ಯೋಗಾವಕಾಶ

ರಾಜ್ಯದ ಯುವಕರಿಗೆ ಜಪಾನಿ ಕಂಪನಿಗಳಲ್ಲಿ ಉದ್ಯೋಗಾವಕಾಶ ಸಿಗಬೇಕು. ಇದಕ್ಕಾಗಿ ನಮ್ಮ ಐಟಿಐ ವಿದ್ಯಾರ್ಥಿಗಳಿಗೆ ಜಪಾನಿ ಭಾಷೆ ಕಲಿಸುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಇದರ ರೂಪುರೇಷೆ ಹೇಗಿರಬೇಕು ಎನ್ನುವುದನ್ನು ಮುಂದಿನ ದಿನಗಳಲ್ಲಿ ಈ ಬಗ್ಗೆ ನಿರ್ಧರಿಸಲಾಗುವುದು.

ಶಿವಮೊಗ್ಗ ಏರ್‌ಪೋರ್ಟ್ ಭವಿಷ್ಯದ ಆತಂಕಕ್ಕೆ ತೆರೆ: 3 ತಿಂಗಳಲ್ಲಿ ಹಾರಾಟ ಶುರು, ಮಲೆನಾಡಿಗರಿಗೆ ಕೇಂದ್ರ ಗುಡ್‌ನ್ಯೂಸ್
ಶಿವಮೊಗ್ಗ ಏರ್‌ಪೋರ್ಟ್ ಭವಿಷ್ಯದ ಆತಂಕಕ್ಕೆ ತೆರೆ: 3 ತಿಂಗಳಲ್ಲಿ ಹಾರಾಟ ಶುರು, ಮಲೆನಾಡಿಗರಿಗೆ ಕೇಂದ್ರ ಗುಡ್‌ನ್ಯೂಸ್

ಕರ್ನಾಟಕದಲ್ಲಿ ಜೈವಿಕ ವಿಜ್ಞಾನ, ಬಯೋಫಾರ್ಮಾ ಮತ್ತು ಜೀವವಿಜ್ಞಾನ ಕ್ಷೇತ್ರಗಳು ಅಗಾಧವಾಗಿ ಬೆಳೆಯುತ್ತಿವೆ. ಅಜಿನೋಮೋಟೋ ಕಂಪನಿಯು ಕರ್ನಾಟಕದಲ್ಲಿ ಬಂಡವಾಳ ಹೂಡಲು ಚಿಂತನೆ ನಡೆಸಿದೆ. ಅದಕ್ಕಾಗಿ ಅದು ಸೂಕ್ತ ಪ್ರತಿಭಾವಂತರು ತನಗೆ ಅಗತ್ಯ ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ಕಂಪನಿಗೂ ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳು, ಪ್ರಾಧ್ಯಾಪಕರು, ಶಿಕ್ಷಣ ಸಂಸ್ಥೆಗಳೊಂದಿಗೂ ಸಂಪರ್ಕ ಸಾಧಿಸಿ ಕೊಡುವ ಭರವಸೆ ಕೊಟ್ಟಿದ್ದೇವೆ. ಮಾತುಕತೆಯ ವೇಳೆ ಎಲ್ಲ ಕಂಪನಿಗಳನ್ನೂ ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನಿಸಲಾಗಿದೆ ಎಂದು ಮಾಹಿತಿ ಕೊಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+