ವೈಭವ್‌ ಸೂರ್ಯವಂಶಿ ವಯಸ್ಸು 15 ಅಲ್ಲ.. 21 ವರ್ಷ ಎಂದ ಪಾಕ್ ಮಾಜಿ ಕ್ರಿಕೆಟರ್‌ಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ತರಾಟೆ

Vaibhav Sooryavanshi: ಕೈಲಾಗದವನು ಮೈಪರಚಿಕೊಂಡ ಎನ್ನುವಂತೆ ಪಾಕಿಸ್ತಾನ ಟೀಮ್ ಇಂಡಿಯಾ ವಿಚಾರದಲ್ಲಿ ಕಾಲು ಕೆರೆದುಕೊಂಡು ಒಂದಲ್ಲ ಒಂದು ಖ್ಯಾತೆ ತೆಗೆದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಲಿರುತ್ತದೆ. ಇದೀಗ ವೈಭವ್ ಸೂರ್ಯವಂಶಿ ವಯಸ್ಸಿನ ಬಗ್ಗೆ ಪಾಕ್ ಮಾಜಿ ಕ್ರಿಕೆಟರ್ ಹೊಟ್ಟೆಕಿಚ್ಚಿನಿಂದ ಇಲ್ಲಸಲ್ಲದ ಹೇಳಿಕೆ ನೀಡಿ ಕಾಮಿಡಿ ಪೀಸ್‌ ಆಗಿದ್ದಾರೆ.

ದೋಹಾದಲ್ಲಿ ನಡೆದ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ಕೇವಲ 53 ಎಸೆತಗಳಲ್ಲಿ 204 ರನ್ ಚಚ್ಚಿದ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಇಡೀ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿದ್ದಾರೆ. ಜಗತ್ತಿನಾದ್ಯಂತ ದಿಗ್ಗಜರು ಈ ಯುವ ಪ್ರತಿಭೆಯನ್ನು ಕೊಂಡಾಡುತ್ತಿದ್ದರೆ, ಪಾಕಿಸ್ತಾನದ ಮಾಜಿ ಕ್ರಿಕೆಟರ್ ತನ್ವೀರ್ ಅಹ್ಮದ್ ಮಾತ್ರ ವೈಭವ್ ಅವರ ವಯಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹೊಸ ವಿವಾದ ಹುಟ್ಟುಹಾಕಿದ್ದಾರೆ.

Pakistan Tanveer Ahmed Questions Vaibhav Sooryavanshi s Age After Record-Breaking 204-Run Knock

'15 ವರ್ಷದ ಹುಡುಗನಿಗೆ ಇಷ್ಟೊಂದು ಶಕ್ತಿ ಇರಲು ಸಾಧ್ಯವಿಲ್ಲ'

ಪಾಡ್‌ಕಾಸ್ಟ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ತನ್ವೀರ್ ಅಹ್ಮದ್, ಒಂದೇ ಇನ್ನಿಂಗ್ಸ್‌ನಲ್ಲಿ 28 ಸಿಕ್ಸರ್ ಸಿಡಿಸುವ ಸಾಮರ್ಥ್ಯ 15 ವರ್ಷದ ಬಾಲಕನಿಗೆ ಇರಲು ಸಾಧ್ಯವೇ ಇಲ್ಲ ಎಂದು ವಾದಿಸಿದ್ದಾರೆ. 'ಅವನಿಗೆ ಖಂಡಿತವಾಗಿಯೂ 15 ವರ್ಷ ವಯಸ್ಸಾಗಿಲ್ಲ. ಕನಿಷ್ಠ 20 ಅಥವಾ 21 ವರ್ಷ ವಯಸ್ಸಾಗಿರಬೇಕು. ಒಬ್ಬ ಹುಡುಗ ಎಷ್ಟೇ ಪ್ರತಿಭಾವಂತನಾಗಿದ್ದರೂ, 15ನೇ ವಯಸ್ಸಿನಲ್ಲಿ 28 ಸಿಕ್ಸರ್‌ಗಳನ್ನು ಬಾರಿಸಲು ಸಾಧ್ಯವಿಲ್ಲ. ಆ ವಯಸ್ಸಿನಲ್ಲಿ ಚೆಂಡನ್ನು ಇಷ್ಟೊಂದು ದೂರ ಹೊಡೆಯುವ ಶಕ್ತಿ ಇರುವುದಿಲ್ಲ,' ಎಂದು ಹೊಟ್ಟೆಕಿಚ್ಚಿನ ಹೇಳಿಕೆ ನೀಡಿದ್ದಾರೆ.

ವೈಭವ್ ವಯಸ್ಸಿನ ಪರೀಕ್ಷೆಗೆ ಒತ್ತಾಯ

ವೈಭವ್ ಸೂರ್ಯವಂಶಿ ಅವರ ದೈಹಿಕ ಸಾಮರ್ಥ್ಯದ ಬಗ್ಗೆಯೂ ಪ್ರಶ್ನೆ ಎತ್ತಿರುವ ಪಾಕ್ ಮಾಜಿ ಆಟಗಾರ, '15 ವರ್ಷದ ಬಾಲಕನ ದೇಹದ ಬೇಸ್ ಇಷ್ಟು ಬಲಿಷ್ಠವಾಗಿರಲು ಸಾಧ್ಯವಿಲ್ಲ. ಅವನ ತೋಳುಗಳು ಮತ್ತು ಭುಜಗಳಲ್ಲಿ ಇಷ್ಟೊಂದು ಶಕ್ತಿ ಹೇಗೆ ಬರುತ್ತದೆ? ಅವನಿಗೆ 15 ವರ್ಷ ಎಂಬುದನ್ನು ನಾನು ನಂಬುವುದಿಲ್ಲ,' ಎಂದು ಹೇಳಿದ್ದಾರೆ.

'ಮೊದಲು ಅವನ ವಯಸ್ಸಿನ ಪರೀಕ್ಷೆ ನಡೆಸಿ, ಆಗ ನಿಜಾಂಶ ಹೊರಬರುತ್ತದೆ,' ಎಂದು ಆಗ್ರಹಿಸಿದ್ದಾರೆ. ಕಾರ್ಯಕ್ರಮದ ನಿರೂಪಕರು ವಯಸ್ಸಿನ ಪರೀಕ್ಷೆಯ ಕುರಿತು ಪ್ರಸ್ತಾಪಿಸಿದಾಗಲೂ, 'ಹೌದು, ಖಂಡಿತ ಪರೀಕ್ಷೆ ಮಾಡಿಸಬೇಕು' ಎಂದು ತನ್ವೀರ್ ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.

ವೈಭವ್ ಸೂರ್ಯವಂಶಿ ಬರೆದ ಐತಿಹಾಸಿಕ ದಾಖಲೆಗಳು

ಮಂಗಳವಾರ (ನವೆಂಬರ್ 24) ದೋಹಾದಲ್ಲಿ ವೈಭವ್ ಆಡಿದ ಇನ್ನಿಂಗ್ಸ್ ಪುರುಷರ ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದೆ. ಯುಎಇ ನೀಡಿದ್ದ 250 ರನ್‌ಗಳ ಗುರಿಯನ್ನು ಭಾರತ 'ಎ' ತಂಡ ಕೇವಲ 14.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು.

ಈ ಪಂದ್ಯದಲ್ಲಿ ವೈಭವ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ, 28 ಎಸೆತಗಳಲ್ಲಿ ವಿಶ್ವದಾಖಲೆಯ ವೇಗದ ಶತಕ, 40 ಎಸೆತಗಳಲ್ಲಿ 150 ರನ್ ಹಾಗೂ ಕೇವಲ 52 ಎಸೆತಗಳಲ್ಲಿ ಲಿಸ್ಟ್-ಎ ಕ್ರಿಕೆಟ್‌ನ ಅತಿ ವೇಗದ ದ್ವಿಶತಕ ಪೂರೈಸಿದರು. ಒಟ್ಟು 53 ಎಸೆತಗಳನ್ನು ಎದುರಿಸಿದ ಈ ಎಡಗೈ ಬ್ಯಾಟರ್ 28 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 204 ರನ್ ಗಳಿಸಿ ಔಟಾದರು. ಒಂದೇ ಲಿಸ್ಟ್-ಎ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ (ಹಿಂದಿನ ದಾಖಲೆ 23 ಸಿಕ್ಸರ್) ಬಾರಿಸಿದ ವಿಶ್ವದಾಖಲೆಯನ್ನೂ ವೈಭವ್ ತಮ್ಮದಾಗಿಸಿಕೊಂಡಿದ್ದಾರೆ.

ನೆಟ್ಟಿಗರಿಂದ ತನ್ವೀರ್‌ಗೆ ತರಾಟೆ

2010 ರಿಂದ 2013 ರವರೆಗೆ ಪಾಕಿಸ್ತಾನ ಪರ ಕೇವಲ 5 ಟೆಸ್ಟ್, 2 ಏಕದಿನ ಹಾಗೂ 1 ಟಿ20 ಪಂದ್ಯವನ್ನಾಡಿರುವ ತನ್ವೀರ್ ಅಹ್ಮದ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಒಬ್ಬ ಯುವ ಆಟಗಾರನ ಅಸಾಧಾರಣ ಪ್ರತಿಭೆಯನ್ನು ಮೆಚ್ಚಿಕೊಳ್ಳುವ ಬದಲು, ಹೊಟ್ಟೆಕಿಚ್ಚಿನಿಂದ ತನಿಖೆಗೆ ಒತ್ತಾಯಿಸುವುದು ಹಾಸ್ಯಾಸ್ಪದ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಅಲ್ಲದೆ, ಕೈಲಾಗದವನು ಮೈಪರಚಿಕೊಂಡ ಅಂತಲೂ ಕಾಮಿಡಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+