Karnataka Dams: ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತ; ಯಾವ ಡ್ಯಾಂನಲ್ಲಿ ಎಷ್ಟಿದೆ ನೀರು?

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಪೂರ್ಣಗೊಂಡು ಚಳಿಗಾಲ ಆರಂಭವಾಗುತ್ತಿದ್ದಂತೆ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದಲ್ಲಿ ಇಳಿಕೆ ಕಂಡುಬರುತ್ತಿದೆ. ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಬಹುತೇಕ ಅಣೆಕಟ್ಟುಗಳಿಗೆ ಒಳಹರಿವು ಸ್ಥಗಿತಗೊಂಡಿದೆ. ಆದರೆ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿನ ಅಗತ್ಯಕ್ಕಾಗಿ ಜಲಾಶಯಗಳಿಂದ ನೀರು ಹೊರಬಿಡುವುದು ಮುಂದುವರಿದಿದೆ. ಇದರಿಂದ ಬೇಸಿಗೆ ಆರಂಭಕ್ಕೂ ಮುನ್ನವೇ ಕೆಲವು ಜಲಾಶಯಗಳ ನೀರಿನ ಮಟ್ಟ ಆತಂಕ ಮೂಡಿಸುತ್ತಿದೆ.

ನವೆಂಬರ್ 25 ಮತ್ತು 26ರ ಅಂಕಿಅಂಶಗಳ ಪ್ರಕಾರ, ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಉತ್ತರ ಕರ್ನಾಟಕದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದರೆ, ಬೆಳಗಾವಿ ಜಿಲ್ಲೆಯ ಹಿಡ್ಕಲ್ ಜಲಾಶಯದಲ್ಲಿ ಉತ್ತಮ ಪ್ರಮಾಣದ ನೀರು ಸಂಗ್ರಹವಾಗಿದೆ.

Karnataka Dams Check the latest water levels of major dams across the Cauvery and Krishna river basins

ತುಂಗಭದ್ರಾದಲ್ಲಿ ನೀರಿನ ಸಂಗ್ರಹ ಶೇ.22ಕ್ಕಿಂತ ಕಡಿಮೆ

ಉತ್ತರ ಕರ್ನಾಟಕದ ರೈತರ ಪ್ರಮುಖ ಆಶ್ರಯವಾಗಿರುವ ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಆತಂಕಕಾರಿಯಾಗಿ ಇಳಿಕೆಯಾಗಿದೆ. ಒಟ್ಟು 105.788 ಟಿಎಂಸಿ ಅಡಿ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಸದ್ಯ 22.942 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಅಂದರೆ ಜಲಾಶಯದ ಒಟ್ಟು ಸಾಮರ್ಥ್ಯದ ಶೇ.21.687ರಷ್ಟು ನೀರಿದೆ. ಇದರಲ್ಲಿ ಬಳಕೆಗೆ ಯೋಗ್ಯವಾಗಿರುವ ನೀರು ಕೇವಲ 12.526 ಟಿಎಂಸಿ ಅಡಿಯಷ್ಟಿದೆ.

ಜಲಾಶಯಕ್ಕೆ ಒಳಹರಿವು ಸಂಪೂರ್ಣ ಶೂನ್ಯವಾಗಿದ್ದರೂ, ಪ್ರತಿದಿನ 6,513 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇನ್ನು ಆಲಮಟ್ಟಿ ಜಲಾಶಯದಲ್ಲಿ 123.081 ಟಿಎಂಸಿ ಅಡಿ ಸಾಮರ್ಥ್ಯಕ್ಕೆ ಪ್ರತಿಯಾಗಿ 52.794 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಬಳಕೆಗೆ 35.184 ಟಿಎಂಸಿ ಅಡಿ ನೀರು ಲಭ್ಯವಿದೆ.

ರಾಜ್ಯದಲ್ಲಿ ಮಳೆ ಮುಂದುವರಿಕೆ; ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಅಲರ್ಟ್‌? ಇಂದಿನ ಹವಾಮಾನ ವರದಿ ಇಲ್ಲಿದೆ!
ರಾಜ್ಯದಲ್ಲಿ ಮಳೆ ಮುಂದುವರಿಕೆ; ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಅಲರ್ಟ್‌? ಇಂದಿನ ಹವಾಮಾನ ವರದಿ ಇಲ್ಲಿದೆ!

ಹಿಡ್ಕಲ್ ಡ್ಯಾಂನಲ್ಲಿ ಶೇ.82ರಷ್ಟು ನೀರು ಸಂಗ್ರಹ

ಇತರ ಜಲಾಶಯಗಳಿಗೆ ಹೋಲಿಸಿದರೆ ಬೆಳಗಾವಿ ಜಿಲ್ಲೆಯ ಹಿಡ್ಕಲ್ (ಘಟಪ್ರಭಾ) ಜಲಾಶಯದ ನೀರಿನ ಸಂಗ್ರಹ ಉತ್ತಮವಾಗಿದೆ. ಒಟ್ಟು 51 ಟಿಎಂಸಿ ಅಡಿಗೂ ಅಧಿಕ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ 41.977 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಶೇ.82.308ರಷ್ಟು ಭರ್ತಿಯಾಗಿದೆ. ಹೀಗಾಗಿ ಸದ್ಯದ ಅಂಕಿಅಂಶಗಳ ಪ್ರಕಾರ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಹೆಚ್ಚು ನೀರು ಹೊಂದಿರುವ ಅಣೆಕಟ್ಟುಗಳಲ್ಲಿ ಹಿಡ್ಕಲ್ ಮುಂಚೂಣಿಯಲ್ಲಿದೆ.

ಇನ್ನು ಭದ್ರಾ ಜಲಾಶಯದಲ್ಲಿ ಶೇ.75.907ರಷ್ಟು ಅಂದರೆ 54.300 ಟಿಎಂಸಿ ಅಡಿ ನೀರು ಸಂಗ್ರಹವಿದೆ. ವಾಣಿವಿಲಾಸ ಸಾಗರದಲ್ಲಿ ಶೇ.64.863ರಷ್ಟು (19.459 ಟಿಎಂಸಿ), ನಾರಾಯಣಪುರದಲ್ಲಿ ಶೇ.61.505ರಷ್ಟು (20.489 ಟಿಎಂಸಿ) ಹಾಗೂ ಮಲಪ್ರಭಾ ಜಲಾಶಯದಲ್ಲಿ ಶೇ.46.183ರಷ್ಟು (17.425 ಟಿಎಂಸಿ) ನೀರಿದೆ.

Bengaluru: ಗಾಳಿ-ಮಳೆ ಬೆನ್ನಲ್ಲೇ ಕಟ್ಟೆಚ್ಚರ: ಅಪಾಯಕಾರಿ ಮರಗಳ ತೆರವಿಗೆ ರಾತ್ರಿ ಕಾರ್ಯಾಚರಣೆಗೆ ಸೂಚನೆ
Bengaluru: ಗಾಳಿ-ಮಳೆ ಬೆನ್ನಲ್ಲೇ ಕಟ್ಟೆಚ್ಚರ: ಅಪಾಯಕಾರಿ ಮರಗಳ ತೆರವಿಗೆ ರಾತ್ರಿ ಕಾರ್ಯಾಚರಣೆಗೆ ಸೂಚನೆ

ಕಾವೇರಿ ಕೊಳ್ಳದ ಜಲಾಶಯಗಳಲ್ಲೂ ನೀರಿನ ಮಟ್ಟ ಇಳಿಕೆ

ಹಳೇ ಮೈಸೂರು ಭಾಗದ ಪ್ರಮುಖ ಜಲಾಶಯಗಳಲ್ಲೂ ನೀರಿನ ಸಂಗ್ರಹ ಅರ್ಧಕ್ಕಿಂತ ಕೆಳಗಿಳಿದಿದೆ. ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದಲ್ಲಿ ಒಟ್ಟು 49.452 ಟಿಎಂಸಿ ಅಡಿ ಸಾಮರ್ಥ್ಯಕ್ಕೆ ಪ್ರತಿಯಾಗಿ 19.556 ಟಿಎಂಸಿ ಅಡಿ ನೀರು ಮಾತ್ರ ಉಳಿದಿದೆ. ಇದು ಜಲಾಶಯದ ಒಟ್ಟು ಸಾಮರ್ಥ್ಯದ ಶೇ.39.545ರಷ್ಟಾಗಿದೆ. ಇದರಲ್ಲಿ ಬಳಕೆಗೆ ಯೋಗ್ಯವಾಗಿರುವ ನೀರು ಕೇವಲ 11.178 ಟಿಎಂಸಿ ಅಡಿಯಷ್ಟಿದೆ.

ಜಲಾಶಯದ ನೀರಿನ ಮಟ್ಟ ಮತ್ತಷ್ಟು ಕುಸಿತ

ಕೆಆರ್‌ಎಸ್ ಜಲಾಶಯಕ್ಕೆ 376 ಕ್ಯೂಸೆಕ್ ಒಳಹರಿವು ದಾಖಲಾಗಿದ್ದರೆ, ನದಿ ಹಾಗೂ ಕಾಲುವೆಗಳ ಮೂಲಕ 5,473 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಳಹರಿವಿಗಿಂತ ಹೊರಹರಿವು ಹೆಚ್ಚಿರುವುದರಿಂದ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ.

ಇನ್ನು ಕಾವೇರಿ ಕೊಳ್ಳದ ಜಲಾಶಯಗಳ ಪೈಕಿ ಕಬಿನಿ ಉತ್ತಮ ಸ್ಥಿತಿಯಲ್ಲಿದೆ. ಪ್ರಸ್ತುತ ಶೇ.60.438ರಷ್ಟು ನೀರು ಸಂಗ್ರಹವಾಗಿದೆ. ಹಾರಂಗಿ ಜಲಾಶಯದಲ್ಲಿ ಶೇ.52.224ರಷ್ಟು (4.439 ಟಿಎಂಸಿ) ಹಾಗೂ ಹೇಮಾವತಿ ಜಲಾಶಯದಲ್ಲಿ ಶೇ.48.252ರಷ್ಟು (17.903 ಟಿಎಂಸಿ) ನೀರು ಉಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+