Bengaluru Metro: ಮೆಟ್ರೋ ಪಿಲ್ಲರ್‌ಗಳ ಸಾಲಿನಲ್ಲಿ ಜಿಬಿಎ ಹೊಸ ವ್ಯವಸ್ಥೆ

ಬೆಂಗಳೂರು: ಮೆಟ್ರೋ ಪಿಲ್ಲರ್‌ಗಳ ವಿಚಾರದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಮೆಟ್ರೋ ಪಿಲ್ಲರ್‌ಗಳ ಸಾಲಿನುದ್ದಕ್ಕೂ ಇರುವ ಚರಂಡಿ ವ್ಯವಸ್ಥೆಯನ್ನು ಪರಿಶೀಲಿಸಿ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಪಾರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ನಿರ್ದೇನ ನೀಡಿದ್ದಾರೆ.

ಬೆಂಗಳೂರು ಪೂರ್ವ ನಗರ ಪಾಲಿಕೆಯ ವ್ಯಾಪ್ತಿಯ ದೊಡ್ಡನೆಕ್ಜಂದಿ ವಿಭಾಗದ ಗರುಡಾಚಾರ್‌ಪಾಳ್ಯ, ಕುಂದಲಹಳ್ಳಿ ಮುಖ್ಯ ರಸ್ತೆ, ಐಟಿಪಿಎಲ್ ರಸ್ತೆ ಹಾಗೂ ಪ್ರಿಯದರ್ಶಿನಿ ವಾರ್ಡ್‌ನಲ್ಲಿ ನಾಗರಿಕ ಮೂಲಸೌಕರ್ಯಗಳ ಅಭಿವೃದ್ಧಿ, ಸ್ವಚ್ಛತೆ, ಮಳೆನೀರು ಸರಾಗ ಹರಿವು, ಪಾದಚಾರಿ ಮಾರ್ಗ ಸುಧಾರಣೆ ಹಾಗೂ ಸಾರ್ವಜನಿಕ ಸ್ಥಳಗಳ ಒತ್ತುವರಿ ತೆರವುಗೊಳಿಸುವ ಕುರಿತು ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಸ್ಥಳ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

Bengaluru Metro GBA Orders Inspection of Drains Along Metro Pillars Directs Removal of Encroachments

ನಗರದ ಪ್ರಮುಖ ಸಂಪರ್ಕ ರಸ್ತೆಗಳು, ವಾಣಿಜ್ಯ ಪ್ರದೇಶಗಳು ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿದ ಅವರು, ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದು, ಪಾದಚಾರಿಗಳ ಸುರಕ್ಷತೆ ಖಚಿತಪಡಿಸುವುದು ಮತ್ತು ಸ್ವಚ್ಛ ಹಾಗೂ ಸುಂದರ ನಗರ ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗರುಡಾಚಾರ್‌ಪಾಳ್ಯ ರಸ್ತೆ ಮತ್ತು ವಾಸಿಯಾ ರಸ್ತೆ ಪರಿಶೀಲನೆ

ಗರುಡಾಚಾರ್‌ಪಾಳ್ಯ ಮುಖ್ಯರಸ್ತೆ ಹಾಗೂ ವಾಸಿಯಾ ರಸ್ತೆ ವ್ಯಾಪ್ತಿಯಲ್ಲಿ ಫುಟ್‌ಪಾತ್ ಅಭಿವೃದ್ಧಿ ಮತ್ತು ರಸ್ತೆ ಬದಿ ಚರಂಡಿ ಸುಧಾರಣೆಗೆ ಸಂಬಂಧಿಸಿದ ಬಾಕಿ ಕಾಮಗಾರಿಗಳನ್ನು ಪರಿಶೀಲಿಸಿದ ಅಪರ ಆಯುಕ್ತರು;

• ಬಾಕಿ ಉಳಿದಿರುವ ಫುಟ್‌ಪಾತ್ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು.

• ಚರಂಡಿಗಳ ಸುಧಾರಣೆ ಹಾಗೂ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವುದು.

• ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿರುವ ಫುಟ್‌ಪಾತ್ ಒತ್ತುವರಿಗಳನ್ನು ತೆರವುಗೊಳಿಸುವುದು.

• ರಸ್ತೆಯ ಬದಿಗಳಲ್ಲಿ ನೀರು ನಿಲ್ಲದಂತೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವುದು.

• ಪಾದಚಾರಿಗಳ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ಇನ್ನಿತರೆ ಕ್ರಮಗಳನ್ನು ಕೈಗೊಳ್ಳಲು ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.

ಕುಂದಲಹಳ್ಳಿ ಮುಖ್ಯ ರಸ್ತೆ ಪರಿಶೀಲನೆ

ಕುಂದಲಹಳ್ಳಿ ಮುಖ್ಯ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ಅಪರ ಆಯುಕ್ತರು,

• ಪೆಟ್ರೋಲ್ ಬಂಕ್ ಸಮೀಪ ರಸ್ತೆಯಲ್ಲಿರುವ ಅನಧಿಕೃತ ಜಾಹೀರಾತು ರಚನೆಗಳನ್ನು ತೆರವುಗೊಳಿಸುವುದು.

• ರಸ್ತೆ ಹಾಗೂ ಚರಂಡಿಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಂಡು ಮಳೆನೀರು ಸರಾಗವಾಗಿ ಹರಿಯುವಂತೆ ಮಾಡುವುದು.

• ಚರಂಡಿಗಳ ಅಂಚುಗಳಲ್ಲಿ ಸಂಗ್ರಹವಾಗಿರುವ ಮಣ್ಣು, ಹೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸುವುದು.

• ಪ್ರತಿ 10 ಮೀಟರ್ ಅಂತರದಲ್ಲಿ ಅಗತ್ಯ ಸ್ಥಳಗಳಲ್ಲಿ ಚರಂಡಿಗೆ ಮಳೆ ನೀರು ಹರಿದು ಹೋಗಲು ಶೋಲ್ಡರ್‌ ತೆರೆದು, ಗ್ರೇಟಿಂಗ್ ಅಳವಡಿಸುವ ಮೂಲಕ ಪ್ಲಾಸ್ಟಿಕ್ ಹಾಗೂ ಘನತ್ಯಾಜ್ಯ ಚರಂಡಿಗೆ ಸೇರದಂತೆ ಕ್ರಮ ಕೈಗೊಳ್ಳುವುದು.

• ಬ್ರಿಗೇಡ್ ಟೆಕ್ ಗಾರ್ಡನ್ ಸಮೀಪದ ವಿ.ಆರ್. ರೆಸಿಡೆನ್ಸಿ ಬಳಿ ಗುರುತಿಸಲಾದ ಕಸದ ಕಪ್ಪು ಚುಕ್ಕೆಯನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಪುನರಾವರ್ತನೆಯಾಗದಂತೆ ನಿಗಾ ವಹಿಸುವುದು.

• ಹಾಳಾಗಿರುವ ಚರಂಡಿ ಗ್ರೇಟಿಂಗ್‌ಗಳನ್ನು ಬದಲಾಯಿಸಲು ಹಾಗೂ ಮುರಿದ ಸ್ಲ್ಯಾಬ್‌ಗಳನ್ನು ಬದಲಾವಣೆ ಮಾಡುವುದು ಸೇರಿದಂತೆ ಇನ್ನಿತರೆ ಕ್ರಮಗಳನ್ನು ಕೈಗೊಳ್ಳಲು ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.

Bengaluru E-Khata: ಬೆಂಗಳೂರು ಆಸ್ತಿದಾರರಿಗೆ ಗುಡ್‌ನ್ಯೂಸ್: 24 ಲಕ್ಷ ಮಂದಿಗೆ ವಾಟ್ಸಾಪ್ ಮೂಲಕ ಉಚಿತ ಇ-ಖಾತಾ ವಿತರಣೆ!
Bengaluru E-Khata: ಬೆಂಗಳೂರು ಆಸ್ತಿದಾರರಿಗೆ ಗುಡ್‌ನ್ಯೂಸ್: 24 ಲಕ್ಷ ಮಂದಿಗೆ ವಾಟ್ಸಾಪ್ ಮೂಲಕ ಉಚಿತ ಇ-ಖಾತಾ ವಿತರಣೆ!

ಮೆಟ್ರೋ ಪಿಲ್ಲರ್ ಮಾರ್ಗದ ಚರಂಡಿ ವ್ಯವಸ್ಥೆ ಪರಿಶೀಲನೆಗೆ ಸೂಚನೆ

ಮೆಟ್ರೋ ಪಿಲ್ಲರ್‌ಗಳ ಸಾಲಿನುದ್ದಕ್ಕೂ ಇರುವ ಚರಂಡಿ ವ್ಯವಸ್ಥೆಯನ್ನು ಮರುಪರಿಶೀಲಿಸಿದ ಅವರು, ಮೆಟ್ರೋ ಪಿಲ್ಲರ್‌ಗಳ ಉದ್ದಕ್ಕೂ ಚರಂಡಿಗಳ ಲಭ್ಯತೆ ಮತ್ತು ಸಂಪರ್ಕ ವ್ಯವಸ್ಥೆಯನ್ನು ಪರಿಶೀಲಿಸುವುದು. ಸಂಪರ್ಕ ಕಡಿತಗೊಂಡಿರುವ ಅಥವಾ ಅಸಮರ್ಪಕವಾಗಿರುವ ಚರಂಡಿಗಳನ್ನು ಗುರುತಿಸುವುದು. ಮಳೆನೀರು ಸಂಗ್ರಹವಾಗುವ ಸ್ಥಳಗಳಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು. ಚರಂಡಿಗಳಲ್ಲಿನ ಹೂಳು ಮತ್ತು ತ್ಯಾಜ್ಯವನ್ನು ನಿಯಮಿತವಾಗಿ ತೆರವುಗೊಳಿಸುವುದು ಹಾಗೂ ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಾರ್ವಜನಿಕ ಸ್ಥಳಗಳು ಪಾದಚಾರಿಗಳು ಮತ್ತು ನಾಗರಿಕರ ಬಳಕೆಗೆ ಮುಕ್ತವಾಗಿರಬೇಕು. ಫುಟ್‌ಪಾತ್‌ಗಳಲ್ಲಿ ವಾಹನ ನಿಲುಗಡೆ, ತ್ಯಾಜ್ಯ ಸಂಗ್ರಹಣೆ, ಅನಧಿಕೃತ ಜಾಹೀರಾತುಗಳು ಹಾಗೂ ಒತ್ತುವರಿಗಳಿಗೆ ಅವಕಾಶ ನೀಡಬಾರದು. ನಿಯಮ ಉಲ್ಲಂಘಿಸುವ ವ್ಯಕ್ತಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ವಿರುದ್ಧ ದಂಡ ಸೇರಿದಂತೆ ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಪರ ಆಯುಕ್ತರು ನಿರ್ದೇಶನ ನೀಡಿದರು.

Bengaluru Property: ನಗರದ ಆಸ್ತಿದಾರರಿಗೆ ಹೊಸ ಶಾಕ್ ಕೊಡಲು ಮುಂದಾದ ಜಿಬಿಎ: ತೆರಿಗೆದಾರರೇ ಈ ವಿಷಯ ಗಮನಿಸಿ
Bengaluru Property: ನಗರದ ಆಸ್ತಿದಾರರಿಗೆ ಹೊಸ ಶಾಕ್ ಕೊಡಲು ಮುಂದಾದ ಜಿಬಿಎ: ತೆರಿಗೆದಾರರೇ ಈ ವಿಷಯ ಗಮನಿಸಿ

ನಗರದ ಮೂಲಸೌಕರ್ಯ ಅಭಿವೃದ್ಧಿ, ಸ್ವಚ್ಛತೆ ಮತ್ತು ಸುಗಮ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸ್ಥಳ ಪರಿಶೀಲನೆಯ ವೇಳೆ ಗುರುತಿಸಲಾದ ಎಲ್ಲಾ ಸಮಸ್ಯೆಗಳಿಗೂ ಆದ್ಯತೆಯ ಮೇರೆಗೆ ಪರಿಹಾರ ಒದಗಿಸಿ, ಕಾಮಗಾರಿಗಳ ಪ್ರಗತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+