SWR: ಶಬರಿಮಲೆ, ಕ್ರಿಸ್‌ಮಸ್ ಪ್ರಯಾಣಿಕರಿಗೆ ಸಿಹಿಸುದ್ದಿ! ವಿಶೇಷ ರೈಲುಗಳ ಸೇವೆ 2027ರವರೆಗೆ ವಿಸ್ತರಣೆ, ವೇಳಾಪಟ್ಟಿ
ಬೆಂಗಳೂರು: ಶಬರಿಮಲೈ ಭಕ್ತರು, ಸಾರ್ವಜನಿಕರು ಮತ್ತು ಮುಂದಿನ ಡಿಸೆಂಬರ್ 25 ರಂದು ಸಂಚಾರ ಮಾಡುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹಾಗೂ ದಟ್ಟಣೆ ತಡೆಯಲು ನೈಋತ್ಯ ರೈಲ್ವೆಯು ಕರ್ನಾಟಕದಿಂದ ತಮಿಳುನಾಡಿಗೆ ತೆರಳುವ ಹಲವು ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು 2027ರ ಜನವರಿ ತಿಂಗಳವರೆಗೂ ವಿಸ್ತರಿಸಲಾಗಿದೆ. ಹುಬ್ಬಳ್ಳಿಯಿಂದ ತೆರಳುವ ಒಂದು ರೈಲಿನ ಸಮಯ ಪರಿಷ್ಕರಿಸಲಾಗಿದೆ.
ವಿಸ್ತರಣೆ ಅವಧಿಯಲ್ಲಿ ಈ ಕೆಳಗಿನ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲುಗಳ ತಮ್ಮ ಪ್ರಸ್ತುತ ಸಮಯ, ನಿಲ್ದಾಣಗಳು ಮತ್ತು ಬೋಗಿಗಳ ಸಂಯೋಜನೆಯೊಂದಿಗೆ ಸಂಚರಿಸಲಿವೆ. ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು ತಿಳಿಸಿದ್ದಾರೆ. ರೈಲುಗಳು ಹೆಸರು, ಸಂಖ್ಯೆ, ಮಾರ್ಗ ಸೇರಿದಂತೆ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ವಿಸ್ತರಣೆಗೊಂಡ ರೈಲುಗಳ ಪಟ್ಟಿ ಹೀಗಿದೆ.
* ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ತಿರುವನಂತಪುರಂ ನಾರ್ತ್ ವಿಶೇಷ ರೈಲು (06555) ಪ್ರತಿ ಶುಕ್ರವಾರ SMTV ಬೆಂಗಳೂರಿನಿಂದ ಹೊರಡಲಿದ್ದು, ಮೊದಲು ಈ ರೈಲು ನವೆಂಬರ್ 27ರವರೆಗೆ ಮಾತ್ರವೇ ಸಂಚರಿಸಲಿತ್ತು. ಇದೀಗ ಈ ರೈಲಿನ ಸಂಚಾರ ಸೇವಾ ಅವಧಿಯನ್ನು ಡಿಸೆಂಬರ್ 04, 2026 ರಿಂದ ಜನವರಿ 29, 2027 ರವರೆಗೆ ವಿಸ್ತರಿಸಲಾಗಿದೆ.
* ತಿರುವನಂತಪುರಂ ನಾರ್ತ್ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ರೈಲು (06556) ಪ್ರತಿ ಭಾನುವಾರ ತಿರುವನಂತಪುರಂ ನಾರ್ತ್‌ನಿಂದ ಹೊರಡುತ್ತದೆ. ನವೆಂಬರ್ 29ರವರೆಗಿನ ಬದಲಾಗಿ ಡಿಸೆಂಬರ್ 6, 2026 ರಿಂದ ಜನವರಿ 31, 2027 ರವರೆಗೆ ವಿಸ್ತರಣೆ ಆಗಿದೆ.
* ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ತಿರುವನಂತಪುರಂ ನಾರ್ತ್ ವಿಶೇಷ ರೈಲು (06523) ಪ್ರತಿ ಸೋಮವಾರ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಡುತ್ತದೆ. ನವೆಂಬರ್ 30, 2026 ರವರೆಗೆ ಸಂಚರಿಸಬೇಕಿದ್ದ ಈ ರೈಲು ಇದೀಗ ಸಂಚಾರ ಅವಧಿ ಡಿಸೆಂಬರ್ 07, 2026 ರಿಂದ ಜನವರಿ 25,2027 ರವರೆಗೆ ವಿಸ್ತರಣೆ ಮಾಡಲಾಗಿದೆ.
* ತಿರುವನಂತಪುರಂ ನಾರ್ತ್ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ರೈಲು (06524) ಪ್ರತಿ ಮಂಗಳವಾರ ತಿರುವನಂತಪುರಂ ನಾರ್ತ್‌ನಿಂದ ಹೊರಡಲಿದೆ. ಈ ಹಿಂದೆ ಡಿಸೆಂಬರ್ 01ರವರೆಗೆ ಮಾತ್ರವೇ ಸಂಚರಿಸಲು ಅವಕಾಶ ಇತ್ತು. ಇದರ ಅವಧಿಯು ಡಿಸೆಂಬರ್ 08,2026ರಿಂದ ಜನವರಿ 26ವರೆಗೆ ವಿಸ್ತರಣೆ ಆಗಿದೆ.
* ಪ್ರತಿ ಬುಧವಾರ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಚಲಿಸುತ್ತಿದ್ದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ತಿರುವನಂತಪುರಂ ನಾರ್ತ್ ವಿಶೇಷ ರೈಲು (06547) ನವೆಂಬರ್ 25ರ ಬದಲಾಗಿ ಡಿಸೆಂಬರ್ 02, 2026 ರಿಂದ ಜನವರಿ 27ರವರೆಗೆ ವಿಸ್ತರಣೆ ಆಗಿದೆ.
* ಪ್ರತಿ ಗುರುವಾರ ತಿರುವನಂತಪುರಂ ನಾರ್ತ್‌ನಿಂದ ಹೊರಡುವ ರೈಲು (06548) ತಿರುವನಂತಪುರಂ ನಾರ್ತ್ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ರೈಲು ನವೆಂಬರ್ 26 ಅವಧಿವರೆಗಿನ ಬದಲಾಗಿ ಡಿಸೆಂಬರ್ 03ರಿಂದ ಜನವರಿ 28, 2027 ರವರೆಗೆ ಸೇವೆ ನೀಡಲಿದೆ.
ಎಸ್.ಎಸ್.ಎಸ್. ಹುಬ್ಬಳ್ಳಿ - ಕೊಲ್ಲಂ ವಿಶೇಷ ರೈಲು (07313) ಪ್ರತಿ ಭಾನುವಾರ ಹುಬ್ಬಳ್ಳಿಯಿಂದ ನವೆಂಬರ್ 29ರವರೆಗೆ ಮಾತ್ರ ಸೇವೆ ನೀಡುವುದಿತ್ತು. ಇದೀಗ ಅದರ ಸೇವೆಯನ್ನು ಡಿಸೆಂಬರ್ 06 ರಿಂದ ಜನವರಿ 17 ರವರೆಗೆ ವಿಸ್ತರಣೆ ಆಗಿದೆ.
* ಪ್ರತಿ ಸೋಮವಾರ ಕೊಲ್ಲಂನಿಂದ ಹೊರಡುವ ಕೊಲ್ಲಂ - ಎಸ್.ಎಸ್.ಎಸ್. ಹುಬ್ಬಳ್ಳಿ ವಿಶೇಷ ರೈಲು (07314) ನವೆಂಬರ್ 30ರವರೆಗೆ ಸಂಚರಿಸಲಿತ್ತು. ಅದರ ಸೇವೆಯನ್ನು ಈಗ ಡಿಸೆಂಬರ್ 07, 2026 ರಿಂದ ಜನವರಿ 18, 2027 ರವರೆಗೆ ವಿಸ್ತರಣೆ ಮಾಡಲಾಗಿದೆ.
ಹುಬ್ಬಳ್ಳಿ - ಕೊಲ್ಲಂ ರೈಲು ಸಮಯ ಪರಿಷ್ಕರಣೆ
ಎಸ್.ಎಸ್.ಎಸ್. ಹುಬ್ಬಳ್ಳಿ - ಕೊಲ್ಲಂ ವಿಶೇಷ ರೈಲಿನ (07313) ಸಮಯವನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.
ಈ ರೈಲು ಬದಲಾದ ಸಮಯದಲ್ಲಿ ಸೇಲಂಗೆ 03:07 ಗಂಟೆಗೆ ಆಗಮಿಸಿ/03:10 ಗಂಟೆಗೆ ನಿರ್ಗಮಿಸುವಂತೆ ಅದೇ ರೀತಿ ಮುಂದಿನ ನಿಲ್ದಾಣಗಳಲ್ಲಿ ಕ್ರಮವಾಗಿ ಈರೋಡ್‌ಗೆ (04:00/04:10ಕ್ಕೆ), ತಿರುಪ್ಪೂರ್‌ಗೆ (04:53/04:55 ಗಂಟೆಗೆ), ಪೋದನೂರಿಗೆ (06:23/06:25), ಪಾಲಕ್ಕಾಡ್‌ಗೆ (07:37/07:40), ತ್ರಿಶೂರ್‌ಗೆ (09:40/09:43), ಆಲುವಾಗೆ (10:47/10:49 ಗಂಟೆಗೆ, ಎರ್ನಾಕುಲಂ ಟೌನ್‌ಗೆ (11:15/11:20), ಕೊಟ್ಟಾಯಂಗೆ (12:22/12:25), ಚಂಗನಾಶೇರಿಗೆ (12:40/12:41), ತಿರುವಲ್ಲಾಗೆ (12:51/12:52), ಚೆಂಗನ್ನೂರಿಗೆ (13:01/13:03), ಮಾವೇಲಿಕರಾಗೆ (13:12/13:13), ಕಾಯಂಕುಳಂಗೆ (13:23/13:25), ಕರುನಾಗಪ್ಪಳ್ಳಿಗೆ (13:39/13:40) ಮತ್ತು ಶಾಸ್ತಂಕೊಟ್ಟಾಗೆ (13:49/13:50) ಗಂಟೆಗೆ ಆಗಮಿಸಿ/ನಿರ್ಗಮಿಸುತ್ತದೆ. ಈ ರೈಲು ತನ್ನ ಅಂತಿಮ ನಿಲ್ದಾಣವಾ ಕೊಲ್ಲಂಗೆ 15:00 ಗಂಟೆಗೆ ತಲುಪಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.




Click it and Unblock the Notifications
