ಶಬರಿಮಲೆ ಭಕ್ತರಿಗೆ ಮಹತ್ವದ ಅಪ್ಡೇಟ್ಸ್‌: ರದ್ದಾದ ವರ್ಚುವಲ್ ಕ್ಯೂ ಸ್ಲಾಟ್ ಮರುಬುಕಿಂಗ್‌ಗೆ ಇಷ್ಟು ಗಂಟೆ ಕಾಯಬೇಕು!

ಶಬರಿಮಲೆ ಭಕ್ತಾದಿಗಳಿಗೆ ಮಹತ್ವದ ಅಪ್ಡೇಟ್ಸ್‌ ಹಂಚಿಕೊಳ್ಳಲಾಗಿದೆ. ಶಬರಿಮಲೆ ದರ್ಶನ, ಪೂಜೆ ಮತ್ತು ಪ್ರಸಾದಕ್ಕಾಗಿ ಅಧಿಕೃತ Travancore Devaswom Board ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದಾಗಿದೆ.

ಇದೀಗ ಶಬರಿಮಲೆಯಲ್ಲಿ ಬುಕಿಂಗ್ ಮಾಡಿದ ನಂತರ ರದ್ದುಪಡಿಸಲಾದ ವರ್ಚುವಲ್ ಕ್ಯೂ ಸ್ಲಾಟ್‌ಗಳು 8 ಗಂಟೆಗಳ ನಂತರ ಮಾತ್ರ ಮರು ಬುಕಿಂಗ್‌ಗೆ ಲಭ್ಯವಾಗಲಿವೆ. ಇನ್ನು ಶಬರಿಮಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದರ್ಶನದ ಸಮಯವನ್ನು ಕಾಯ್ದಿರಿಸಿ, ನಂತರ ಅವುಗಳನ್ನು ರದ್ದುಪಡಿಸಿ ಬೇರೆಯವರಿಗೆ ವರ್ಗಾಯಿಸುವಂತಹ ಅಕ್ರಮ ಪ್ರಯತ್ನಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Sabarimala Darshan Update Devotees Must Wait 8 Hours to Rebook Cancelled Virtual Queue Slots

ಮುಂದುವರಿದು ವರ್ಚುವಲ್ ಕ್ಯೂ ಮೂಲಕ ದರ್ಶನದ ಸಮಯ ಕಾಯ್ದಿರಿಸಿಕೊಂಡು, ದರ್ಶನಕ್ಕೆ ಬಾರದವರ ವಿವರಗಳನ್ನು ಪೊಲೀಸರು, ದೇವಸ್ವಂ ಜಾಗೃತ ದಳ ಮತ್ತು ಸೈಬರ್ ಪೊಲೀಸರು ಪರಿಶೀಲಿಸುತ್ತಿದ್ದಾರೆ. ದೇವಸ್ವಂ ಮಂಡಳಿಯ ವೆಬ್‌ಸೈಟ್ ರೂಪಿಸಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಸಂಸ್ಥೆಯಿಂದಲೂ ಮಾಹಿತಿ ಕೇಳಲಾಗಿದೆ. ವರ್ಚುವಲ್ ಕ್ಯೂ ಮೂಲಕ ದರ್ಶನದ ಸಮಯ ಕಾಯ್ದಿರಿಸಲು ಆಧಾರ್ ದಾಖಲೆಯನ್ನು ಕಡ್ಡಾಯಗೊಳಿಸಲಾಗಿದೆ.

Bengaluru E-Khata: ಬೆಂಗಳೂರು ಆಸ್ತಿದಾರರಿಗೆ ಗುಡ್‌ನ್ಯೂಸ್: 24 ಲಕ್ಷ ಮಂದಿಗೆ ವಾಟ್ಸಾಪ್ ಮೂಲಕ ಉಚಿತ ಇ-ಖಾತಾ ವಿತರಣೆ!
Bengaluru E-Khata: ಬೆಂಗಳೂರು ಆಸ್ತಿದಾರರಿಗೆ ಗುಡ್‌ನ್ಯೂಸ್: 24 ಲಕ್ಷ ಮಂದಿಗೆ ವಾಟ್ಸಾಪ್ ಮೂಲಕ ಉಚಿತ ಇ-ಖಾತಾ ವಿತರಣೆ!

ಇದೇ ವೇಳೆ, ಕೇರಳದ ದೇವಸ್ವಂ ಸಚಿವ ಕೆ. ಮುರಳೀಧರನ್ ಅವರು ನೀಲಕ್ಕಲ್‌ನಲ್ಲಿರುವ ಸ್ಥಳದಲ್ಲೇ ದರ್ಶನದ ಸಮಯ ಕಾಯ್ದಿರಿಸುವ ವ್ಯವಸ್ಥೆ ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ. ತಿರುವನಂತಪುರಂ, ಪಂದಳಂ ಮತ್ತು ಎಟ್ಟುಮನೂರ್‌ನಲ್ಲಿಯೂ ಈ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ. ಈ ಪ್ರಸ್ತಾವನೆಗೆ ಹೈಕೋರ್ಟ್ ಅನುಮತಿ ಪಡೆಯಲು ಗೃಹ ಇಲಾಖೆಯೊಂದಿಗೆ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ.

Gold: ಚಿನ್ನದ ಬೆಲೆ ಇಳಿಕೆಗೆ ಮೋದಿ ಮನವಿಯೇ ಕಾರಣವೇ? ಬಂಗಾರ ಬೆಲೆ ಕುಸಿತದ ಹಿಂದಿನ ಅಸಲಿ ಕಾರಣಗಳೇನು?
Gold: ಚಿನ್ನದ ಬೆಲೆ ಇಳಿಕೆಗೆ ಮೋದಿ ಮನವಿಯೇ ಕಾರಣವೇ? ಬಂಗಾರ ಬೆಲೆ ಕುಸಿತದ ಹಿಂದಿನ ಅಸಲಿ ಕಾರಣಗಳೇನು?

ಮಂಡಲ-ಮಕರವಿಳಕ್ಕು ಋತು ಆರಂಭವಾಗಿ ಒಂದು ವಾರ ಕಳೆದಿದ್ದು, ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಸನ್ನಿಧಾನದಲ್ಲಿ ಜನಸಂದಣಿ ಕಡಿಮೆಯಾಗಲು ಸರಿಯಾದ ಯೋಜನೆ ಮತ್ತು ಸಮನ್ವಯವೇ ಕಾರಣ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಕೆ. ಜಯಕುಮಾರ್ ಹೇಳಿದ್ದಾರೆ. ಹಣಕಾಸಿನ ಎಲ್ಲ ವ್ಯವಹಾರಗಳನ್ನು ಡಿಜಿಟಲ್ ಮೂಲಕ ನಡೆಸುವ ಮೂಲಕ ಆದಾಯ ಸೋರಿಕೆಯನ್ನು ತಡೆಗಟ್ಟಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

Bengaluru Weather: ಬೆಂಗಳೂರಿನಲ್ಲಿ ಮುಂದುವರಿದ ಮಳೆ ಆರ್ಭಟ; ಕರ್ನಾಟಕದ ಹಲವೆಡೆ ಇನ್ನೂ 4 ದಿನ ಮಳೆ ಮುನ್ಸೂಚನೆ!
Bengaluru Weather: ಬೆಂಗಳೂರಿನಲ್ಲಿ ಮುಂದುವರಿದ ಮಳೆ ಆರ್ಭಟ; ಕರ್ನಾಟಕದ ಹಲವೆಡೆ ಇನ್ನೂ 4 ದಿನ ಮಳೆ ಮುನ್ಸೂಚನೆ!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+