KSET 2026: ಸಹಾಯಕ ಪ್ರಾಧ್ಯಾಪಕರಾಗುವವರಿಗೆ ಗುಡ್‌ನ್ಯೂಸ್, ಅರ್ಜಿ ಸಲ್ಲಿಕೆ ಆರಂಭ: ಪರೀಕ್ಷೆ ದಿನಾಂಕ, ಪಟ್ಟಿ ಗಮನಿಸಿ
ಬೆಂಗಳೂರು: 2026ರ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (KSET-2026) ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ. ಆನ್‌ಲೈನ್ ಲಿಂಕ್ ಮುಂದೆ ಕೊಡಲಾಗಿದ್ದು, ಆಸಕ್ತರು ಕೂಡಲೇ ಅಗತ್ಯ ಎಲ್ಲ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬಹುದಾಗಿದೆ. ಹಾಲ್‌ಟಿಕೆಟ್ ಬಿಡುಗಡೆ ಸೇರಿದಂತೆ ಪ್ರಮುಖ ದಿನಾಂಕಗಳು, ಅಗತ್ಯ ಮಾಹಿತಿ ಇಲ್ಲಿದೆ.
ಸ್ನಾತಕೋತ್ತರ ಪದವೀಧರರಿಗೆ ಪ್ರತಿ ವರ್ಷ ನಡೆಸಲಾಗುವ ಕೆಸೆಟ್ ಲಿಖಿತ ಪರೀಕ್ಷೆಯು ಈ ವರ್ಷ ಅಕ್ಟೋಬರ್ 11ರಂದು ನಡೆಸಲಾಗುತ್ತದೆ. ಪ್ರಸಕ್ತ ಸಾಲಿನ ಕೆಸೆಟ್ ಪರೀಕ್ಷೆಯನ್ನು ಒಟ್ಟು 37 ವಿಷಯಗಳಿಗೆ ನಡೆಸುತ್ತಿದೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 5ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ ಪಾವತಿಗೆ ಸೆಪ್ಟಂಬರ್ 6ಕೊನೆಯ ದಿನವಾಗಿದೆ.

ಒಂದಕ್ಕಿಂತ ಹೆಚ್ಚು ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು, ಯಾವುದಾದರು ಒಂದು ವಿಷಯದಲ್ಲಿ ಮಾತ್ರ ಕೆಸೆಟ್ ಪರೀಕ್ಷೆ ತೆಗೆದುಕೊಳ್ಳಬಹುದು. ಒಮ್ಮೆ ವಿಷಯ ಆಯ್ಕೆ ಮಾಡಿದ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ. ಹೆಚ್ಚಿನ ವಿವರ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ )https://kearecruitment.karnataka.gov.in/kset2026/Account/Login)
ಅಧಿಸೂಚನೆಗಾಗಿ ನೀವು ಇಲ್ಲಿನ (KSET_NOTI_KAN_10082026kannada.pdf https://share.google/LJwkLSyXY5w8Gl1Il) ಲಿಂಕ್ ಮೂಲಕ ವೆಬ್‌ಸೈಟ್ ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕೆಇಎ ವೆಬ್‌ಸೈಟ್ ಪರಿಶೀಲಿಸುವಂತೆ ತಿಳಿಸಲಾಗಿದೆ.
ಕೆಸೆಟ್ ಪರೀಕ್ಷೆ ವೇಳಾಪಟ್ಟಿ
1) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 10.08.2026
2) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ : 05.09.2026
3) ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 06.09.2026
4) ಪ್ರವೇಶ ಪತ್ರ (Hall Ticket) ಬಿಡುಗಡೆ ದಿನಾಂಕ : 01.10.2026
5) ಪರೀಕ್ಷಾ ದಿನಾಂಕ: 11.10.2026
ಅಭ್ಯರ್ಥಿಗಳೇ ಗಮನಿಸಿ
* ಅರ್ಜಿಯನ್ನು ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಈ ಅಧಿಸೂಚನೆಯನ್ನು ಗಮನವಿಟ್ಟು ಓದಿ ನಂತರ ಅರ್ಜಿಯನ್ನು ಭರ್ತಿಮಾಡಬೇಕು.
* ಕೆಸೆಟ್ (KSET) 2026ರ ಪರೀಕ್ಷೆಯನ್ನು 37 ವಿಷಯಗಳಲ್ಲಿ ನಡೆಸಲಾಗುತ್ತಿದ್ದು, ಪರೀಕ್ಷಾ ಕೇಂದ್ರಗಳ ವಿವರಗಳ ಗಮನಿಸಬೇಕು.
* ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ / ಪ್ರಥಮ ದರ್ಜೆ ಪದವಿ ಕಾಲೇಜು / ಉನ್ನತ ಶಿಕ್ಷಣ ಸಂಸ್ಥೆ (ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ ಹಾಗೂ ಆಯಾ ಸಂಸ್ಥೆಗಳ ನಿಯಮ ಮತ್ತು ಕಾಯ್ದೆಗಳಿಗೆ ಒಳಪಟ್ಟಿರುತ್ತಾರೆ.
* ವಿಶೇಷ ಚೇತನ (PwD), ತೃತೀಯ ಲಿಂಗ, ಪರಿಶಿಷ್ಟ ಜಾತಿ (SC-A/SC-B/SC-C), ಪರಿಶಿಷ್ಟ ಪಂಗಡ (ST), ಮತ್ತು ಇತರೆ ಹಿಂದುಳಿದ ವರ್ಗದ (ಪ್ರವರ್ಗ-I, IIA, IIB, IIIA, ಮತ್ತು IIIB) ಅಭ್ಯರ್ಥಿಗಳು, ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದವರ https://bcwd.karnataka.gov.in/. ಪಟ್ಟಿಯಲ್ಲಿರುವಂತಿರಬೇಕು ಎಂದು ಕೆಇಎ ತಿಳಿಸಿದೆ.


Click it and Unblock the Notifications
