Adani: ಪಶ್ಚಿಮ ಬಂಗಾಳದಿಂದ ಅದಾನಿ ಕಂಪನಿಗೆ ಬೃಹತ್ ಗುತ್ತಿಗೆ; 25 ವರ್ಷಕ್ಕೆ 1,750 MW ವಿದ್ಯುತ್ ಪೂರೈಕೆ

Adani: ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ (AESL) ಕಂಪನಿಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಪವರ್‌ಪಲ್ಸ್ ಟ್ರೇಡಿಂಗ್ ಸೊಲ್ಯೂಷನ್ಸ್ ಲಿಮಿಟೆಡ್ (PTSL), ಪಶ್ಚಿಮ ಬಂಗಾಳ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್‌ನಿಂದ ಮಹತ್ವದ ಗುತ್ತಿಗೆ ಪತ್ರವನ್ನು (LoA) ಪಡೆದುಕೊಂಡಿದೆ. ಈ ಒಪ್ಪಂದದ ಪ್ರಕಾರ, ಮುಂದಿನ 25 ವರ್ಷಗಳ ಅವಧಿಗೆ 1,750 ಮೆಗಾವ್ಯಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಆಧಾರಿತ ದಿನದ 24 ಗಂಟೆಯೂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕಾಗಿದೆ.

ಈ ಗುತ್ತಿಗೆ ಪತ್ರವು (LoA) ಹೆಚ್ಚುವರಿಯಾಗಿ 750 ಮೆಗಾವ್ಯಾಟ್ ಗ್ರೀನ್‌ಶೂ ಆಯ್ಕೆಯನ್ನು ಸಹ ಒಳಗೊಂಡಿದೆ. ಒಂದು ವೇಳೆ ಪಶ್ಚಿಮ ಬಂಗಾಳ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ ಈ ಆಯ್ಕೆಯನ್ನು ಬಳಸಿಕೊಂಡರೆ, ಒಟ್ಟು ಒಪ್ಪಂದದ ವಿದ್ಯುತ್ ಪೂರೈಕೆ ಸಾಮರ್ಥ್ಯವು 2,500 ಮೆಗಾವ್ಯಾಟ್‌ಗೆ ಏರಿಕೆಯಾಗಲಿದೆ.

Adani Energy Solutions Wins 1 750 Megawatt Power Supply Contract from West Bengal for 25 Years

ಯಶಸ್ವಿ ಬಿಡ್‌ದಾರರಾಗಿ ಘೋಷಣೆ

ಇ-ರಿವರ್ಸ್ ಹರಾಜಿನ ಬಳಿಕ ಪವರ್‌ಪಲ್ಸ್ ಟ್ರೇಡಿಂಗ್ ಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆಯನ್ನು ಯಶಸ್ವಿ ಬಿಡ್‌ದಾರರಾಗಿ ಘೋಷಿಸಲಾಗಿದೆ. ಈ ಒಪ್ಪಂದದ ಪ್ರಕಾರ, 1,750 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಪೂರೈಕೆಯು ಜುಲೈ 1, 2028 ರಿಂದ ಆರಂಭವಾಗಲಿದೆ. ಒಂದು ವೇಳೆ ಗ್ರೀನ್‌ ಶೂ ಆಯ್ಕೆಯನ್ನು ಬಳಸಿಕೊಂಡರೆ, ಹೆಚ್ಚುವರಿ 750 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯು ಏಪ್ರಿಲ್ 1, 2029ರಿಂದ ಪ್ರಾರಂಭವಾಗಲಿದೆ.

ಕಂದರ್ಪ್ ಪಟೇಲ್ ಹೇಳಿದ್ದೇನು?

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ ಸಿಇಒ ಕಂದರ್ಪ್ ಪಟೇಲ್ ಅವರು, 'ನವೀಕರಿಸಬಹುದಾದ ಇಂಧನದ ಸುಸ್ಥಿರತೆ ಮತ್ತು ಪ್ರಸರಣ ವ್ಯವಸ್ಥೆಗಳ ಉತ್ತಮ ಬಳಕೆಯನ್ನು ಇದು ಒಟ್ಟುಗೂಡಿಸಲಿದೆ. ಇದರಿಂದ ದಿನದ 24 ಗಂಟೆಯೂ ನಿರಂತರವಾಗಿ ಲಭ್ಯವಿರುವ ನವೀಕರಿಸಬಹುದಾದ ವಿದ್ಯುತ್ ಭಾರತದ ಇಂಧನ ಪರಿವರ್ತನೆಗೆ ನಿರ್ಣಾಯಕವಾಗಲಿದೆ,' ಎಂದು ಹೇಳಿದ್ದಾರೆ.

ಈ ಒಪ್ಪಂದವು ವಿಸ್ತರಿಸಬಹುದಾದ ಇಂಧನ ಪರಿಹಾರಗಳನ್ನು ಒದಗಿಸುವ ಕಂಪನಿಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಅಲ್ಲದೆ, ಪಶ್ಚಿಮ ಬಂಗಾಳದ ದೀರ್ಘಕಾಲೀನ ಸುಸ್ಥಿರ ವಿದ್ಯುತ್ ಅಗತ್ಯಗಳನ್ನು ಪೂರೈಸುವಲ್ಲಿ ಪಶ್ಚಿಮ ಬಂಗಾಳ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (WBSEDCL) ಜೊತೆ ಕೈಜೋಡಿಸಲು ಇದು ಅವಕಾಶ ನೀಡುತ್ತದೆ ಎಂದು ತಿಳಿಸಿದರು.

ಬೃಹತ್ ಪ್ರಮಾಣದ ವಿದ್ಯುತ್ ಬಳಕೆದಾರರ ನಿರ್ದಿಷ್ಟ ಇಂಧನ ಅಗತ್ಯಗಳಿಗೆ ತಕ್ಕಂತೆ ವಿಶೇಷವಾಗಿ ವಿನ್ಯಾಸಗೊಳಿಸಿದ ಮತ್ತು ವಿಸ್ತರಿಸಬಹುದಾದ ಪರಿಹಾರಗಳನ್ನು ರೂಪಿಸುವ ಸಾಮರ್ಥ್ಯದೊಂದಿಗೆ, ಪವರ್‌ಪಲ್ಸ್ ಟ್ರೇಡಿಂಗ್ ಸೊಲ್ಯೂಷನ್ಸ್ ಲಿಮಿಟೆಡ್ (PTSL) ಸಂಸ್ಥೆಯು ಅತ್ಯಂತ ವೇಗವಾಗಿ ಗ್ರಾಹಕರ ನೆಚ್ಚಿನ ಪಾಲುದಾರನಾಗಿ ಹೊರಹೊಮ್ಮುತ್ತಿದೆ ಎಂದು ಅವರು ಇದೇ ವೇಳೆ ಹೇಳಿದರು.

ಈ ಗುತ್ತಿಗೆಯು ಪವರ್‌ಪಲ್ಸ್ ಟ್ರೇಡಿಂಗ್ ಸೊಲ್ಯೂಷನ್ಸ್ ಲಿಮಿಟೆಡ್‌ನ ವಿಸ್ತರಿಸುತ್ತಿರುವ ಇಂಧನ ಪರಿಹಾರಗಳ ಪೋರ್ಟ್‌ಫೋಲಿಯೊಗೆ ಒಂದು ಮಹತ್ವದ ಸೇರ್ಪಡೆಯಾಗಿದೆ ಎಂದು ಕಂಪನಿ ತಿಳಿಸಿದೆ. ವಿದ್ಯುತ್ ಸಂಗ್ರಹಣೆಯ ವಿಚಾರಕ್ಕೆ ಬಂದರೆ, PTSL ಈಗಾಗಲೇ ಸುಮಾರು 4.6 ಗಿಗಾವ್ಯಾಟ್ ಸೌರ ಮತ್ತು ಪವನ ವಿದ್ಯುತ್ ಸಾಮರ್ಥ್ಯ ಹಾಗೂ ಸುಮಾರು 3.5 ಗಿಗಾವ್ಯಾಟ್-ಅವರ್ (GWh) ಬ್ಯಾಟರಿ ಇಂಧನ ಸಂಗ್ರಹಣಾ ವ್ಯವಸ್ಥೆಯ (BESS) ಒಪ್ಪಂದಗಳನ್ನು ಮಾಡಿಕೊಂಡಿದೆ. ಇದರೊಂದಿಗೆ ಕೈಗಾರಿಕೆಗಳು, ಡೇಟಾ ಸೆಂಟರ್‌ಗಳು, ವಾಣಿಜ್ಯ ಸಂಸ್ಥೆಗಳು ಮತ್ತು ವಿದ್ಯುತ್ ವಿತರಣಾ ಕಂಪನಿಗಳಂತಹ ಬೃಹತ್ ಬಳಕೆದಾರರೊಂದಿಗೆ ದೀರ್ಘಕಾಲೀನ ಪೂರೈಕೆ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ತನ್ನ ಪೂರೈಕೆ ಜಾಲವನ್ನು ಕಂಪನಿಯು ನಿರಂತರವಾಗಿ ಬಲಪಡಿಸುತ್ತಿದೆ.

ಅದಾನಿ ಗ್ರೂಪ್‌ನ ಭಾಗವಾಗಿರುವ ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ (AESL), ವಿದ್ಯುತ್ ಪ್ರಸರಣ , ವಿತರಣೆ (Distribution), ಸ್ಮಾರ್ಟ್ ಮೀಟರಿಂಗ್ ಮತ್ತು ಕೂಲಿಂಗ್ ಪರಿಹಾರಗಳ (Cooling solutions) ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಟ್ಟು 30,683 ಸರ್ಕ್ಯೂಟ್ ಕಿಲೋ ಮೀಟರ್ ವಿದ್ಯುತ್ ಪ್ರಸರಣ ಜಾಲ ಮತ್ತು 1,46,585 MVA ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುವ ಇದು, ದೇಶದ ಅತಿದೊಡ್ಡ ಖಾಸಗಿ ವಿದ್ಯುತ್ ಪ್ರಸರಣ ಕಂಪನಿಯಾಗಿದೆ.

ಚಿಲ್ಲರೆ ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ, ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ ಮಹಾನಗರ ಮುಂಬೈ ಮತ್ತು ಕೈಗಾರಿಕಾ ಕೇಂದ್ರವಾದ ಮುಂದ್ರಾ ವಿಶೇಷ ಆರ್ಥಿಕ ವಲಯದಲ್ಲಿ ಸುಮಾರು 1.3 ಕೋಟಿ (13 ಮಿಲಿಯನ್) ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಇದರ ಜೊತೆಗೆ ಕಂಪನಿಯು ತನ್ನ ಸ್ಮಾರ್ಟ್ ಮೀಟರಿಂಗ್ ವ್ಯವಹಾರವನ್ನೂ ವೇಗವಾಗಿ ವಿಸ್ತರಿಸುತ್ತಿದ್ದು, ಭಾರತದ ಪ್ರಮುಖ ಸ್ಮಾರ್ಟ್ ಮೀಟರಿಂಗ್ ಸಂಯೋಜಕ ಸಂಸ್ಥೆಯಾಗಿ ಹೊರಹೊಮ್ಮುವ ಹಾದಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+