ಮಂಗಳೂರಲ್ಲಿ ತಂತ್ರಜ್ಞಾನ ಕ್ರಾಂತಿ! ಭಾರತದ ಮೊದಲ 'ಸುಸ್ಥಿರ ಕರಾವಳಿ ದತ್ತಾಂಶ ಕೇಂದ್ರ' ಸ್ಥಾಪನೆ: ಪ್ರಿಯಾಂಕ್ ಖರ್ಗೆ

ಮಂಗಳೂರು: ಕರ್ನಾಟಕ ಕರಾವಳಿ ಮಂದಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಕರಾವಳಿ ಪ್ರಮುಖ ನಗರ ಮಂಗಳೂರು ಶೀಘ್ರದಲ್ಲೇ ಭಾರತದ ಮೊದಲ 'ಸುಸ್ಥಿರ ಕರಾವಳಿ ದತ್ತಾಂಶ ಕೇಂದ್ರ' ಸ್ಥಾಪನೆಗೆ ಸಾಕ್ಷಿಯಾಗಲಿದೆ.

ಹೌದು, ಕರ್ನಾಟಕದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಇಂದು ಗುರುವಾರ ಮಂಗಳೂರಿನ ತಣ್ಣೀರುಬಾವಿಯಲ್ಲಿ 49 ಎಕರೆ ಭೂಮಿಯಲ್ಲಿ ನವೀಕರಿಸಬಹುದಾದ ಇಂಧನ, ಸುಧಾರಿತ ತಂಪಾಗಿಸುವ ತಂತ್ರಜ್ಞಾನಗಳು ಬಳಸಿಕೊಂಡು 'ಸುಸ್ಥಿರ ಕರಾವಳಿ ದತ್ತಾಂಶ ಕೇಂದ್ರ' ಸ್ಥಾಪನೆ ಕುರಿತು ಅನ್ವೇಷಿಸಿದ್ದಾರೆ.

Sustainable Coastal Data Centre

1 GW ದತ್ತಾಂಶ ಸಾಮರ್ಥ್ಯದ ಕೇಂದ್ರ!

ಪರಿಸರಕ್ಕೆ ತೊಂದರೆ ಆಗದಂತೆ ಜವಾಬ್ದಾರಿಯುತ ಡಿಜಿಟಲ್ ಮೂಲಸೌಕರ್ಯ ಬಳಸಿಕೊಂಡು ಈ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ಕಾರ್ಯ ಸಾಧ್ಯತೆ ಕುರಿತು ಖರ್ಗೆ ನೇತೃತ್ವದ ತಂಡವು ಪರಿಶೀಲಿಸಿದೆ. ಕರ್ನಾಟಕ ಸುಸ್ಥಿರ ದತ್ತಾಂಶ ಕೇಂದ್ರ ನೀತಿ 2026-2031 ರ ಅಡಿಯಲ್ಲಿ, ಯಾವುದೇ ಪರಿಸರ ರಾಜಿ ಇಲ್ಲದೇ 1 GW ದತ್ತಾಂಶ ಕೇಂದ್ರ ಸಾಮರ್ಥ್ಯ ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

'ಆಶಾ' ಕಾರ್ಯಕರ್ತೆಯರು ಇಲ್ಲದಿದ್ರೂ ಕೆಲಸ ನಡೆಯುತ್ತೆ ಎಂದ ಯುಟಿ ಖಾದರ್! ಲಾಜಿಕ್ ತಿಳಿಸಿದ ಆರ್.ಅಶೋಕ್ ಕಿಡಿ
'ಆಶಾ' ಕಾರ್ಯಕರ್ತೆಯರು ಇಲ್ಲದಿದ್ರೂ ಕೆಲಸ ನಡೆಯುತ್ತೆ ಎಂದ ಯುಟಿ ಖಾದರ್! ಲಾಜಿಕ್ ತಿಳಿಸಿದ ಆರ್.ಅಶೋಕ್ ಕಿಡಿ

ಜಿಸಿಸಿಗಳು, ಸ್ಟಾರ್ಟ್‌ಅಪ್‌ಗಳು, ಡೀಪ್‌ಟೆಕ್, ಸಾಗರ ಜೈವಿಕ ತಂತ್ರಜ್ಞಾನ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಒತ್ತು ನೀಡಲಾಗುವುದು. ಎಐ ಸೇರಿ ತಂತ್ರಜ್ಞಾನ ಉದ್ಯಮ ನೇತೃತ್ವದ ಕೌಶಲ್ಯದಿಂದ ಪೂರಕವಾಗಿರುವ ಕರಾವಳಿ ಕರ್ನಾಟಕ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯಾಗಿ ಪರಿವರ್ತಿಸುವುದು ಸರ್ಕಾರದ ಪ್ರಮುಖ ದೂರದೃಷ್ಠಿಯಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.

ಬೆಂಗಳೂರಿನಾಚೆಗೂ ತಂತ್ರಜ್ಞಾನ ಆರ್ಥಿಕತೆ ವಿಸ್ತರಣೆ

ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆಯು ಸ್ಪರ್ಧಾತ್ಮಕ ಆದ್ಯತೆಗಳಾಗಿಯೇ ಇರಬೇಕೆಂದಿಲ್ಲ. ಅವು ಒಂದಕ್ಕೊಂದು ಪೂರಕವಾಗಿರಬಹುದು ಎಂಬುದನ್ನು ಕರ್ನಾಟಕ ತೋರಿಸಲಿದೆ. ರಾಜ್ಯವು ತಂತ್ರಜ್ಞಾನ ಆರ್ಥಿಕತೆಯ ಭವಿಷ್ಯವು ಬೆಂಗಳೂರಿಗೆ ಸೀಮಿತವಾಗಿಲ್ಲ. ರಾಜ್ಯಾದ್ಯಂತ ಜಾಗತಿಕವಾಗಿ ಸ್ಪರ್ಧಾತ್ಮಕ ತಂತ್ರಜ್ಞಾನ ಕ್ಲಸ್ಟರ್‌ಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಸ್ಥಳದ ಲಭ್ಯತೆ ನೋಡಿಕೊಂಡು ಮೂಲಸೌಕರ್ಯ ಅವಶ್ಯಕತೆಗಳನ್ನು ಗುರುತಿಸಲು ಮತ್ತು ಯೋಜನೆಯ ಕುರಿತು ಶ್ವೇತಪತ್ರ ತಯಾರಿಸುವಂತೆ ರಾಜ್ಯ ಸರ್ಕಾರವು ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಮತ್ತು ಇತರ ಪಾಲುದಾರರೊಂದಿಗೆ ಸೂಚಿಸಲಿದೆ.

SWR: ಶಬರಿಮಲೆ, ಕ್ರಿಸ್‌ಮಸ್ ಪ್ರಯಾಣಿಕರಿಗೆ ಸಿಹಿಸುದ್ದಿ! ವಿಶೇಷ ರೈಲುಗಳ ಸೇವೆ 2027ರವರೆಗೆ ವಿಸ್ತರಣೆ, ವೇಳಾಪಟ್ಟಿ
SWR: ಶಬರಿಮಲೆ, ಕ್ರಿಸ್‌ಮಸ್ ಪ್ರಯಾಣಿಕರಿಗೆ ಸಿಹಿಸುದ್ದಿ! ವಿಶೇಷ ರೈಲುಗಳ ಸೇವೆ 2027ರವರೆಗೆ ವಿಸ್ತರಣೆ, ವೇಳಾಪಟ್ಟಿ

ಡೇಟಾ ಸೆಂಟರ್: ಕರ್ನಾಟಕಕ್ಕೆ ಮೂರನೇ ಸ್ಥಾನ

ಡೇಟಾ ಸೆಂಟರ್ ಕಾರ್ಯಾಚರಣೆ ಸಾಮರ್ಥ್ಯದ ವಿಷಯದಲ್ಲಿ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರ ಕರ್ನಾಟಕವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಒಂದು ವರದಿಯ ಪ್ರಕಾರ, ಮಹಾರಾಷ್ಟ್ರವು 1,023 ಮೆಗಾವ್ಯಾಟ್, ತಮಿಳುನಾಡು 214 ಮೆಗಾವ್ಯಾಟ್ ಮತ್ತು ಕರ್ನಾಟಕವು 162 ಮೆಗಾವ್ಯಾಟ್ ಕಾರ್ಯಾಚರಣೆ ಸಾಮರ್ಥ್ಯವನ್ನು ಹೊಂದಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+