Daily Horoscope July 13: ಇಂದು ಈ ರಾಶಿಯವರ ಅದೃಷ್ಟ ಬದಲಾಗುವುದು! ಹಣ, ಯಶಸ್ಸು ಒಲಿದು ಬರುವುದು

Daily Horoscope July 13: ಜುಲೈ 13ರ ಸೋಮವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದಿರುವ ದಿನ ಭವಿಷ್ಯವಾಗಿದೆ. 12 ರಾಶಿಗಳಿಗೆ ಸೋಮವಾರದ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ವಿವರ ನೋಡೋಣ.

ಮೇಷ ರಾಶಿ (Aries)

ಕುಟುಂಬ ಸದಸ್ಯರ ನೆರವಿನಿಂದ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ವ್ಯಾಪಾರದಲ್ಲಿ ಅತಿ ಹೆಚ್ಚು ಲಾಭ ಪಡೆಯುವ ದಿನ. ಉದ್ಯೋಗಿಗಳಿಗೂ ಲಾಭದಾಯಕ ದಿನ. ಹೊಸ ಉದ್ಯೋಗದ ಆಫರ್ ಸಿಗಬಹುದು.

ವೃಷಭ ರಾಶಿ (Taurus)

ಇಂದು ಇಡೀ ದಿನ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಸಾಲದ ಸಮಸ್ಯೆಯಿಂದ ಮುಕ್ತಿ ಸಿಗುವುದು. ಆರೋಗ್ಯದಲ್ಲಿ ಕೆಲವು ಪ್ರಮುಖ ಬದಲಾವಣೆಗಳಾಗುವುದು.

Daily Horoscope July 13

ಮಿಥುನ ರಾಶಿ (Gemini)

ಉತ್ತಮ ಅವಕಾಶಗಳು ಸಿಗಬಹುದು. ಹೊಸ ಉದ್ಯೋಗಾವಕಾಶಗಳು ಸಿಗಬಹುದು. ದೀರ್ಘಕಾಲದಿಂದ ಎದುರಿಸುತ್ತಿರವ ಸಮಸ್ಯೆಗಳು ಬಗೆಹರಿಯುವುದು. ಮಕ್ಕಳಿಂದ ಸಿಹಿ ಸುದ್ದಿ ಸಿಗುವುದು. ಬರುವ ಒಳ್ಳೆಯ ಸುದ್ದಿ ನಿಮ್ಮ ಮನೆಗೆ ಸಂತೋಷ ತರುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಕರ್ಕಾಟಕ ರಾಶಿ (Cancer)

ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಮಕ್ಕಳು ತಮ್ಮ ಅಧ್ಯಯನದ ಮೇಲೆ ಗಮನಹರಿಸಬೇಕು. ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ಮನಸ್ಸಿನ ಶಾಂತಿ ಹೆಚ್ಚಾಗುವುದು.ಹಣಕಾಸಿನ ಸಮಸ್ಯೆಗೂ ಪರಿಹಾರ ಸಿಗುವುದು.

ಸಿಂಹ ರಾಶಿ (Leo)

ನಿರೀಕ್ಷೆಗಿಂತ ಹೆಚ್ಚಿನ ಲಾಭವಾಗುವುದು. ಕುಟುಂಬ ಮತ್ತು ವ್ಯವಹಾರ ನಿರ್ವಹಣೆ ಉತ್ತಮವಾಗಿರುತ್ತದೆ. ಅಂದುಕೊಂಡ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣವಾಗುವುದು. ಕುಟುಂಬ ಸಾಮರಸ್ಯ ಬಲಗೊಳ್ಳುತ್ತದೆ. ಆರೋಗ್ಯವು ಸ್ಥಿರವಾಗಿರುತ್ತದೆ.

ಕನ್ಯಾ ರಾಶಿ (Virgo)

ನೀವು ಮಾಡುವ ಕೆಲಸಕ್ಕೆ ಕಚೇರಿಯ ಮೇಲಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗುವುದು. ಪ್ರಮುಖ ವಿಚಾರದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು.

ತುಲಾ ರಾಶಿ (Libra)

ಇಂದು ಅದೃಷ್ಟ ನಿಮ್ಮ ಜೊತೆಗಿರುವುದು. ನಿಮ್ಮ ಜೀವನಶೈಲಿಯ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಅಗತ್ಯ. ವ್ಯವಹಾರವನ್ನು ವಿಸ್ತರಿಸಲು ಹೊಸ ಅವಕಾಶಗಳನ್ನು ಕಂಡುಕೊಳ್ಳುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಸಿಗುವುದು.

ವೃಶ್ಚಿಕ ರಾಶಿ (Scorpio)

ಇಂದಿನ ದಿನ ಸಂತೋಷದಿಂದ ಕಳೆಯುವಿರಿ. ಅರ್ಧಕ್ಕೆ ನಿಂತು ಹೋಗಿರುವ ಕೆಲಸವನ್ನು ಮತ್ತೆ ಆರಂಭಿಸಲು ಇದು ಸರಿಯಾದ ಸಮಯ. ನಿಮ್ಮ ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಸುವಿರಿ. ವಿಶೇಷ ಅತಿಥಿಗಳ ಆಗಮನವು ಸಂತೋಷವನ್ನು ಹೆಚ್ಚಿಸುತ್ತದೆ. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ.

ಧನು ರಾಶಿ (Sagitarius)

ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಹೊಸ ಸ್ನೇಹಿತರ ಪರಿಚಯವಾಗುವುದು. ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಕುಟುಂಬ ಸದಸ್ಯರ ಸಲಹೆ ಪಡೆಯುವುದನ್ನು ಮರೆಯಬೇಡಿ. ಕೆಲಸದಲ್ಲಿ ಯಶಸ್ಸು ಸಿಗುವುದು. ಸಂತೋಷ ಹೆಚ್ಚುವುದು. ಮನೆಯಲ್ಲಿ ಸಂತಸದ ವಾತಾವರಣ ಇರುವುದು.

ಮಕರ ರಾಶಿ (Capricorn)

ವೃತ್ತಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಹೊಸ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಮೇಲಧಿಕಾರಿಗಳಿಂದ ಬೆಂಬಲ ಸಿಗುವುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ.

ಕುಂಭ ರಾಶಿ (Aquarius)

ನಿಂತು ಹೋಗಿರುವ ಕೆಲಸ ಪುನರಾರಂಭವಾಗಬಹುದು. ಬಹಳ ದಿನಗಳಿಂದ ಬಾಕಿ ಉಳಿದಿರುವ ಸರ್ಕಾರಿ ಕೆಲಸಗಳು ಇಂದು ಪೂರ್ಣಗೊಳ್ಳುತ್ತವೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು.

ಮೀನ ರಾಶಿ (Pisces)

ಸಂತೋಷದಿಂದಲೇ ದಿನದ ಆರಂಭವಾಗುವುದು. ಎಲ್ಲಾ ಕೆಲಸಗಳು ಕ್ರಮಬದ್ಧವಾಗಿ ಪೂರ್ಣಗೊಳ್ಳುತ್ತವೆ. ಕೆಲಸದ ಹೊರೆ ಹೆಚ್ಚುವುದು. ಇಂದು ಮಾಡಿದ ಹೂಡಿಕೆಗಳು ಭವಿಷ್ಯದಲ್ಲಿ ಪ್ರಯೋಜನ ಕಾರಿಯಾಗುವುದು. ನೀವು ಮಾಡುವ ಕೆಲಸದಿಂದ ಪೋಷಕರು ಸಂತೋಷಗೊಳ್ಳುವರು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+