ಬೆಂಗಳೂರು ಇನ್ಮುಂದೆ ಹಸಿರು ನಗರವಲ್ಲ; ಚೆನ್ನೈ, ಹೈದರಾಬಾದ್ - ದೆಹಲಿ ಸಾಲಿಗೆ ಸೇರಲಿದೆ ಗಾರ್ಡನ್ ಸಿಟಿ!
ಬೆಂಗಳೂರು ನಗರವು ಉದ್ಯಾನ ನಗರ, ಗಾರ್ಡ್ ಸಿಟಿ ಎಂದೇ ಖ್ಯಾತಿ ಗಳಿಸಿದೆ. ಬೆಂಗಳೂರಿನ ಹಸಿರು ವಾತಾವರಣದಿಂದ ದೇಶದಲ್ಲಿ ಅಭಿವೃದ್ಧಿ ಹೊಂದಿರುವ ನಗರಗಳಿಗಿಂತಲೂ ಬೆಂಗಳೂರು ಭಿನ್ನವಾಗಿದೆ. ಬೆಂಗಳೂರು ನಗರದಲ್ಲಿ ತಂಪಾದ ವಾತಾವರಣ ಇರುವುದಕ್ಕೇ ಹಲವು ಉದ್ಯಮಗಳು ಹಾಗೂ ಬೇರೆ ಬೇರೆ ರಾಜ್ಯ ಮತ್ತು ದೇಶಗಳಿಂದಲೂ ಜನ ಇಲ್ಲಿ ಬಂದು ನೆಲೆಸಿರುವುದು ಇದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಬಿಸಿಲು ಇನ್ನಷ್ಟು ಹೆಚ್ಚಳವಾಗಬಹುದು ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ಹೊಸ ಅಧ್ಯಯನವು ಎಚ್ಚರಿಸಿದೆ. ಹೌದು ಬೆಂಗಳೂರಿನ ವಾತಾವರಣವು ಚೆನ್ನಾಗಿದೆ.
ಹೌದು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬಿಸಿಲ ಝಳ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ನಗರ ಪ್ರದೇಶಗಳಲ್ಲಿ ತೀವ್ರ ಶಾಖ ಹೆಚ್ಚಾಗುತ್ತಿದೆ. ಈ ರೀತಿ ವರ್ಷದಿಂದ ವರ್ಷಕ್ಕೆ ಶಾಕ ಹೆಚ್ಚಾಗುತ್ತಿರುವ ನಗರಗಳಲ್ಲಿ ಬೆಂಗಳೂರು ಸಹ ಒಂದಾಗಿದೆ. ವಿಶ್ವದಲ್ಲಿ ತೀವ್ರ ಶಾಖದ ಅಪಾಯವನ್ನು ಎದುರಿಸುತ್ತಿರುವ ನಾಲ್ಕು ದೇಶಗಳಲ್ಲಿ ಭಾರತವೂ ಸಹ ಒಂದಾಗಿದೆ. ಅಧ್ಯಯನದ ಪ್ರಕಾರ, ಬೆಂಗಳೂರು ಸೇರಿದಂತೆ 14 ಭಾರತೀಯ ನಗರಗಳು ವಿಶ್ವದ 50 ಅತ್ಯಂತ ಶಾಖದ ಅಲೆಯನ್ನು ಎದುರಿಸುವ ಅಥವಾ ಬಿಸಿಲು ಹೆಚ್ಚಾಗುವ ನಗರಗಳ ಪಟ್ಟಿಯಲ್ಲಿವೆ. ಇದು ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ತುರ್ತು ಕ್ರಮಗಳನ್ನು ಅನುಸರಿಸುವುದು ಹಾಗೂ ಹಸಿರೀಕರಣ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯವಾಗಿದೆ.

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಬಿಸಿಲ ಝಳವು ವರ್ಷದಿಂದ ವರ್ಷಕ್ಕೆ ತೀವ್ರ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಬೆಂಗಳೂರಿನಲ್ಲಿಯೂ ಮೊದಲಿನಂತಹ ಪರಿಸ್ಥಿತಿ ಇಲ್ಲ.
ಭಾರತವು ಅತಿ ಹೆಚ್ಚು ಶಾಖದ ಅಪಾಯವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿದೆ. ವಿಶ್ವದ 205 ದೊಡ್ಡ ನಗರಗಳು ತೀವ್ರ ಶಾಖದ ವಾತಾವರಣ ಎದುರಾಗುವ ಪಟ್ಟಿಯಲ್ಲಿವೆ. ಮುಖ್ಯವಾಗಿ ಭಾರತ, ಪಾಕಿಸ್ತಾನ, ನೈಜೀರಿಯಾ ಮತ್ತು ಘಾನಾದಲ್ಲಿ ಭಾರೀ ಬಿಸಿಲಿನ ವಾತಾವರಣ ಎದುರಾಗಲಿದೆ. ಹೆಚ್ಚಿನ ಅಪಾಯದಲ್ಲಿದೆ ಎಂದು ಗುರುತಿಸಲಾದ ನಗರಗಳಲ್ಲಿ ಶೇಕಡಾ 95 ಕ್ಕಿಂತ ಹೆಚ್ಚು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಮತ್ತು ಉಪ-ಸಹಾರನ್ ಆಫ್ರಿಕಾ ಭಾಗದಲ್ಲಿಯೇ ಇದೆ ಎಂದು ಹೇಳಲಾಗಿದೆ.
ಬೆಂಗಳೂರು ಸೇರಿ ಭಾರತದ ಈ 15 ನಗರಗಳಿಗೆ ಸಂಕಷ್ಟ
ಇನ್ನು ಬೆಂಗಳೂರು ಸೇರಿದಂತೆ ಭಾರತದ 15 ನಗರಗಳಿಗೆ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗಿದೆ. ವಿಶ್ವದ ಟಾಪ್ 50 ನಗರಗಳಲ್ಲಿ ಭಾರತದ 15 ನಗರಗಳಿವೆ. ಬೆಂಗಳೂರು, ನಾಗ್ಪುರ, ಪುಣೆ, ಮಧುರೈ, ಚೆನ್ನೈ, ಕಾನ್ಪುರ, ಲಕ್ನೋ ಹಾಗೂ ಜೈಪುರ ಸೇರಿದಂತೆ ಪ್ರಮುಖ ನಗರಗಳಲ್ಲಿ ಬಿಸಿಲು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 15 ಲಕ್ಷ ಸಸಿ
ಇನ್ನು ಬೆಂಗಳೂರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಈಚೆಗೆ 15 ಲಕ್ಷ ಸ್ಥಳೀಯ ಸಸಿಗಳನ್ನು ನೆಡಲಾಗಿದೆ. ಹಸಿರಿಗಾಗಿ ವಯಸ್ಸು ಲೆಕ್ಕಿಸದೇ ಜವಾಬ್ದಾರಿ ತೋರುವ ಹಿರಿಯ ಉತ್ಸಾಹಿಗಳಿಗೆ ನಾವು ಸಾಕ್ಷಿಯಾಗಿದ್ದೇವೆ. 15 ಲಕ್ಷ ಸ್ಥಳೀಯ ಸಸಿಗಳನ್ನು ನೆಟ್ಟು, ಅದನ್ನು ಕಾಳಜಿಯಿಂದ ಪೋಷಿಸುವುದಕ್ಕಾಗಿ ತೋರುವ ಹುಮ್ಮಸ್ಸು ನಿಜಕ್ಕೂ ಸ್ಫೂರ್ತಿದಾಯಕ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಟ್ವೀಟ್ ಮಾಡಿದೆ. ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯ ಸಹಯೋಗದೊಂದಿಗೆ, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಗಿಡಗಳ ನಿರ್ವಹಣೆಗಾಗಿ ಬೇಲಿ ನಿರ್ಮಾಣ, ಆಧಾರ ಕಂಬಗಳ ನೆಡುವಿಕೆ, ಗಿಡಗಳಿಗೆ ನೀರುಣಿಸುವಿಕೆ ಹಾಗೂ ಸ್ಥಳದ ಸ್ವಚ್ಛತೆಯ ಕಾರ್ಯ ನಡೆಯುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹೇಳಿದೆ.


Click it and Unblock the Notifications
