ವೈಭವ್ ಸೂರ್ಯವಂಶಿ ವಯಸ್ಸು, ಅನುಭವದ ಬಗ್ಗೆ ಟೀಕೆ ಮಾಡುತ್ತಿದ್ದವರಿಗೆ ಸಿಕ್ತು ಊಹೆಗೂ ಮೀರಿದ ಉತ್ತರ

Vaibhav Sooryavanshi: ಯುಎಇ ವಿರುದ್ಧ ಮಂಗಳವಾರ (ನವೆಂಬರ್ 24) ನಡೆದ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್‌ ಪಂದ್ಯದಲ್ಲಿ ಭಾರತದ ಪರ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಹಲವು ವಿಶ್ವದಾಖಲೆಗಳನ್ನು ಮಾಡಿದ್ದಾರೆ. ಇದು ಟೀಕಾಕಾರರಿಗೆ ಅವರು ಕೊಟ್ಟ ಪ್ರತ್ಯುತ್ತರವಾಗಿದೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿವೆ.

ಚಿಕ್ಕ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಮಟ್ಟದ ಅವಕಾಶ ಗಿಟ್ಟಿಸಿಕೊಂಡಾಗ 'ಈ ಹುಡುಗನಿಗೆ ಇಷ್ಟು ದೊಡ್ಡ ವೇದಿಕೆ ಸರಿಹೊಂದುತ್ತದೆಯೇ? ಆತನ ಆಟ ಕೇವಲ ಕೆಲವೇ ಪಂದ್ಯಗಳಲ್ಲಿ ಅಷ್ಟೇ' ಎಂದಿದ್ದ ಟೀಕಾಕಾರರಿಗೆ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ತಮ್ಮ ಬ್ಯಾಟ್ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ. ಮಂಗಳವಾರ (ನವೆಂಬರ್ 24) ದೋಹಾದಲ್ಲಿ ನಡೆದ ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಯುಎಇ ವಿರುದ್ಧದ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಸಿಡಿಸುವ ಮೂಲಕ, ತಮ್ಮ ಸಾಮರ್ಥ್ಯವನ್ನು ಅನುಮಾನಿಸಿದವರಿಗೆ ಮುಟ್ಟಿನೋಡಿಕೊಳ್ಳುವಂತಹ ಉತ್ತರ ಕೊಟ್ಟಿದ್ದಾರೆ.

Vaibhav Sooryavanshi Silences Critics with Historic 204-Run Knock Against UAE on November 24

ಅನುಮಾನಿಸಿದವರ ಬಾಯಿ ಮುಚ್ಚಿಸಿದ ಸಿಡಿಲಬ್ಬರದ ಇನ್ನಿಂಗ್ಸ್

ವಯಸ್ಸು ಮತ್ತು ಅನುಭವದ ಕೊರತೆಯ ನೆಪವೊಡ್ಡಿ ವೈಭವ್ ಆಯ್ಕೆಯ ಬಗ್ಗೆ ಮೂಗು ಮುರಿಯುತ್ತಿದ್ದವರಿಗೆ ದೋಹಾ ಮೈದಾನದಲ್ಲಿ ಸಿಕ್ಕಿದ್ದು ಊಹೆಗೂ ನಿಲುಕದ ಉತ್ತರ. ಭಾರತ 'ಎ' ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್, ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಎದುರಾಳಿ ಬೌಲರ್‌ಗಳನ್ನು ಅಕ್ಷರಶಃ ದಂಡಿಸಿದ ಈ ಎಡಗೈ ಬ್ಯಾಟರ್, ಕೇವಲ 53 ಎಸೆತಗಳನ್ನು ಎದುರಿಸಿ 28 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ ಬರೋಬ್ಬರಿ 204 ರನ್ ಚಚ್ಚಿದರು. ಈ ಮೂಲಕ ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.

2024ರಲ್ಲಿ ನ್ಯೂಜಿಲೆಂಡ್‌ನ ಚಾಡ್ ಬೋವ್ಸ್ 103 ಎಸೆತಗಳಲ್ಲಿ ಗಳಿಸಿದ್ದ ವೇಗದ ದ್ವಿಶತಕದ ದಾಖಲೆಯನ್ನು ಅರ್ಧಕ್ಕರ್ಧ ಎಸೆತಗಳ ಅಂತರದಲ್ಲಿ ಪುಡಿಗಟ್ಟಿದ ವೈಭವ್, ಒಂದೇ ಲಿಸ್ಟ್-ಎ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ (28) ಸಿಡಿಸಿದ ವಿಶ್ವ ದಾಖಲೆಯನ್ನೂ ನಿರ್ಮಿಸಿದರು. (ಹಿಂದಿನ ದಾಖಲೆ ಆಸ್ಟ್ರೇಲಿಯಾದ ಡಾರ್ಸಿ ಶಾರ್ಟ್ ಹೆಸರಿನಲ್ಲಿತ್ತು - 23 ಸಿಕ್ಸರ್).

ಯುಎಇ ರನ್‌ ವೇಗಕ್ಕೆ ಬ್ರೇಕ್‌ ಹಾಕಿದ ಅರ್ಷದ್

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ ಆರಂಭಿಕ ಆಘಾತ ಅನುಭವಿಸಿದರೂ, ಭಾರತೀಯ ಮೂಲದ ಆಟಗಾರ ಹರ್ಪ್ರೀತ್ ಸಿಂಗ್ ಭಾಟಿಯಾ (144 ಎಸೆತಗಳಲ್ಲಿ 130 ರನ್) ಅವರ ಜವಾಬ್ದಾರಿಯುತ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ ಕಲೆಹಾಕಿತ್ತು. ಭಾರತ 'ಎ' ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಅರ್ಷದ್ ಖಾನ್ 43 ರನ್ ನೀಡಿ 4 ವಿಕೆಟ್ ಕಬಳಿಸಿ ಯುಎಇ ರನ್ ವೇಗಕ್ಕೆ ಕಡಿವಾಣ ಹಾಕಿದರು.

ಟೀಕಾಕಾರರ ಬಾಯಿ ಮುಚ್ಚಿಸಿದ ವೈಭವ್ ಆಟ

250 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಭಾರತ 'ಎ' ತಂಡಕ್ಕೆ ವೈಭವ್ ಅವರ ಈ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಾಗಿ ಗೆಲುವು ನೀರು ಕುಡಿದಷ್ಟು ಸುಲಭವಾಯಿತು. ವೈಭವ್ ಏಕಾಂಗಿ ಅಬ್ಬರದ ಮುಂದೆ ಯುಎಇ ಬೌಲರ್‌ಗಳು ತತ್ತರಿಸಿದರು. ಪರಿಣಾಮವಾಗಿ ಭಾರತ ತಂಡ ಕೇವಲ 14.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 250 ರನ್‌ಗಳ ಗುರಿ ಮುಟ್ಟಿ ಭರ್ಜರಿ ಜಯ ಸಾಧಿಸಿತು. ಈ ಐತಿಹಾಸಿಕ ಇನ್ನಿಂಗ್ಸ್‌ನೊಂದಿಗೆ ವೈಭವ್ ಸೂರ್ಯವಂಶಿ ತಾವು ಕೇವಲ ಭವಿಷ್ಯದ ತಾರೆಯಲ್ಲ, ಈಗಿನಿಂದಲೇ ವಿಶ್ವ ಕ್ರಿಕೆಟ್ ಆಳುವ ಸಾಮರ್ಥ್ಯ ಹೊಂದಿರುವ ಆಟಗಾರ ಎಂಬುದನ್ನು ಸಾಬೀತುಪಡಿಸಿ ಟೀಕಾಕಾರರ ಬಾಯಿಗೆ ಬೀಗ ಜಡಿದಿದ್ದಾರೆ ಅಂತಲೇ ಗಹೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+