53, 7, 28..384.91: ಅತೀ ವೇಗದ ದ್ವಿಶತಕದ ವಿಶ್ವದಾಖಲೆ ಬರೆದ ವೈಭವ್; ಒಂದೇ ಇನ್ನಿಂಗ್ಸ್‌ನಲ್ಲಿ ದಾಖಲೆಗಳ ಸುರಿಮಳೆ
Vaibhav Sooryavanshi: ಟೀಮ್ ಇಂಡಿಯಾ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಕ್ರಿಕೆಟ್ ಜಗತ್ತೇ ಬೆರಗಾಗುವಂತಹ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಂಗಳವಾರ (ನವೆಂಬರ್ 24) ದೋಹಾದಲ್ಲಿ ನಡೆದ ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧದ ಪಂದ್ಯದಲ್ಲಿ, ಭಾರತ 'ಎ' ತಂಡದ ಪರ ಕಣಕ್ಕಿಳಿದ ವೈಭವ್ ಕೇವಲ 52 ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕದ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
2024ರಲ್ಲಿ ನ್ಯೂಜಿಲೆಂಡ್‌ನ ಕ್ಯಾಂಟರ್‌ಬರಿ ಪರ ಚಾಡ್ ಬೋವ್ಸ್ 103 ಎಸೆತಗಳಲ್ಲಿ ಗಳಿಸಿದ್ದ ವೇಗದ ದ್ವಿಶತಕದ ದಾಖಲೆಯನ್ನು ವೈಭವ್ ಅರ್ಧಕ್ಕರ್ಧ ಎಸೆತಗಳ ಅಂತರದಲ್ಲಿ ಅಳಿಸಿಹಾಕಿದ್ದಾರೆ. ಅಂತಿಮವಾಗಿ ಕೇವಲ 53 ಎಸೆತಗಳನ್ನು ಎದುರಿಸಿದ ಈ ಎಡಗೈ ಬ್ಯಾಟರ್, 7 ಬೌಂಡರಿ ಹಾಗೂ 28 ಸಿಕ್ಸರ್‌ಗಳ ನೆರವಿನಿಂದ 204 ರನ್ ಚಚ್ಚಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಒಂದೇ ಲಿಸ್ಟ್-ಎ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವ ದಾಖಲೆಯನ್ನೂ ತಮ್ಮದಾಗಿಸಿಕೊಂಡರು. ಈ ಹಿಂದೆ 2018ರಲ್ಲಿ ಆಸ್ಟ್ರೇಲಿಯಾದ ಡಾರ್ಸಿ ಶಾರ್ಟ್ 23 ಸಿಕ್ಸರ್ ಬಾರಿಸಿದ್ದು ದಾಖಲೆಯಾಗಿತ್ತು.

14.2 ಓವರ್‌ಗಳಲ್ಲೇ ಗುರಿ ಮುಟ್ಟಿದ ಭಾರತ 'ಎ' ಟೀಮ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡವು ಆರಂಭಿಕ ಆಘಾತದ ನಡುವೆಯೂ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ಯುಎಇ ಪರ ಏಕಾಂಗಿ ಹೋರಾಟ ನಡೆಸಿದ ಭಾರತೀಯ ಮೂಲದ ಮಾಜಿ ದೇಶೀಯ ಆಟಗಾರ ಹರ್ಪ್ರೀತ್ ಸಿಂಗ್ ಭಾಟಿಯಾ 144 ಎಸೆತಗಳಲ್ಲಿ 130 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಭಾರತ 'ಎ' ಪರ ಅರ್ಷದ್ ಖಾನ್ 43 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.
ಆಕ್ರಮಣಕಾರಿ ಆಟ ಆಡಿದ ವೈಭವ್ ಸೂರ್ಯವಂಶಿ
250 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 'ಎ' ತಂಡಕ್ಕೆ ವೈಭವ್ ಸೂರ್ಯವಂಶಿ ಅವರ ಈ ರೌದ್ರಾವತಾರದ ಬ್ಯಾಟಿಂಗ್‌ನಿಂದಾಗಿ ಪಂದ್ಯ ಸಂಪೂರ್ಣ ಏಕಪಕ್ಷೀಯವಾಯಿತು. ಪರಿಣಾಮವಾಗಿ ಭಾರತ ತಂಡವು ಕೇವಲ 14.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 250 ರನ್‌ಗಳ ಗುರಿಯನ್ನು ತಲುಪಿ ಭರ್ಜರಿ ಜಯ ಸಾಧಿಸಿತು.
ಲಿಸ್ಟ್ ಎ ಏಕದಿನ ಕ್ರಿಕೆಟ್‌ನಲ್ಲಿ ಕಡಿಮೆ ಎಸೆತಗಳಲ್ಲಿ 200 ರನ್ ಸಿಡಿಸಿದವರು
* ವೈಭವ್ ಸೂರ್ಯವಂಶಿ (52 ಎಸೆತಗಳು): ಭಾರತ Vs ಯುಎಇ - 2026
* ಚಾಡ್ ಬೋವ್ಸ್ (103 ಎಸೆತಗಳು): ಕ್ಯಾಂಟರ್ಬರಿ Vs ಓಟಾಗೋ - 2024
* ಎನ್ ಜಗದೀಶನ್ (114 ಎಸೆತಗಳು): ತಮಿಳುನಾಡು Ve ಅರುಣಾಚಲ ಪ್ರದೇಶ - 2022
* ಹ್ಯಾರಿ ಬ್ರೂಕ್ (114 ಎಸೆತಗಳು): ಇಂಗ್ಲೆಂಡ್ Vs ಶ್ರೀಲಂಕಾ -2026
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಕಡಿಮೆ ಎಸೆತಗಳಲ್ಲಿ 150 ರನ್ ಸಿಡಿಸಿದವರು
* ವೈಭವ್ ಸೂರ್ಯವಂಶಿ (40 ಎಸೆತಗಳು): ಭಾರತ Vs ಯುಎಇ - 2026
* ವೈಭವ್ ಸೂರ್ಯವಂಶಿ (59 ಎಸೆತಗಳು): ಬಿಹಾರ Vs ಅವರುಣಾಚಲ ಪ್ರದೇಶ - 2025
* ಎಬಿ ಡಿ ವಿಲಿಲಿಯರ್ಸ್ (64 ಎಸೆತಗಳು): ದಕ್ಷಿಣ ಆಫ್ರಿಕಾ Vs ವೆಸ್ಟ್ ಇಂಡೀಸ್ - 2015
* ಜೋಸ್ ಬಟ್ಲರ್ (65 ಎಸೆತಗಳು): ಇಂಗ್ಲೆಂಡ್ Vs ನೆದರ್‌ಲ್ಯಾಂಡ್ - 2022
ಲಿಸ್ಟ್ ಎ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರು
* ವೈಭವ್ ಸೂರ್ಯವಂಶಿ (28 ಸಿಕ್ಸರ್‌ಗಳು): ಭಾರತ Vs ಯುಎಇ - 2026
* ಡಿ ಆರ್ಸಿ ಶಾರ್ಟ್ (23 ಸಿಕ್ಸರ್‌ಗಳು): ಪಶ್ಚಿಮ ಆಸ್ಟ್ರೇಲಿಯಾ Vs ಕ್ವೀನ್ಸ್‌ಲ್ಯಾಂಡ್ - 2018
* ಬೆವೊನ್ ಜಾಕೋಬ್ಸ್ (21 ಸಿಕ್ಸರ್‌ಗಳು): ಆಕ್ಲೆಂಡ್ Vs ಒಟಾಗೋ - 2026
ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದವರ ಪಟ್ಟಿ
* ವೈಭವ್ ಸೂರ್ಯವಂಶಿ (28 ಎಸೆತ) - ಭಾರತ 'ಎ' vs ಯುಎಇ (ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್)
* ಜೇಕ್ ಫ್ರೇಸರ್-ಮೆಕ್‌ಗುರ್ಕ್ (29 ಎಸೆತ) - ದಕ್ಷಿಣ ಆಸ್ಟ್ರೇಲಿಯಾ vs ತಾಸ್ಮೇನಿಯಾ
* ಎಬಿ ಡಿವಿಲಿಯರ್ಸ್ (31 ಎಸೆತ) - ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್
* ಸಕಿಬುಲ್ ಗನಿ (32 ಎಸೆತ): ಬಿಹಾರ vs ಅರುಣಾಚಲ ಪ್ರದೇಶ
* ಇಶಾನ್ ಕಿಶನ್ (33 ಎಸೆತ): ಜಾರ್ಖಂಡ್ vs ಕರ್ನಾಟಕ


Click it and Unblock the Notifications
