ನೇಪಾಳ PM ಬಾಲೇನ್ ಶಹಾಗೆ ಬೆಂಗಳೂರು ಜತೆಗಿದೆ ಭಾವನಾತ್ಮಕ ನಂಟು! ಕನ್ನಡ ಕಲಿತಿದ್ದ ಯುವ ನಾಯಕ 'ಅಪ್ಪು' ಅಪ್ಪಟ ಅಭಿಮಾನಿ

ಪ್ರಧಾನಿ ನರೇಂದ್ರ ಮೋದಿಯವರನ್ನು ಇತ್ತೀಚೆಗೆ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ ನೇಪಾಳದ ಯುವ ಪ್ರಧಾನಿ ಬಾಲೇಂದ್ರ ಶಹಾ (ಬಾಲೇನ್ ಶಹಾ) ಅವರ ಮನವಿಗೆ ಭಾರತವು ಬೃಹತ್ ಮೊತ್ತದ ಆರ್ಥಿಕ ನೆರವು ಘೋಷಿಸಿತು. ಅದರ ಬೆನ್ನಲ್ಲೆ ಶಹಾ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ. ನೇಪಾಳದ ರಾಜಧಾನಿ ಕಠ್ಮಂಡುವಿನ ಮೇಯರ್ ಹಾಗೂ 35 ವರ್ಷದ ಈ ಯುವ ಪ್ರಧಾನಿ ಬಾಲೇಂದ್ರ ಶಹಾ ಅವರಿಗೆ ಭಾರತದ ಸಿಲಿಕಾನ್ ಸಿಟಿ, ಕರ್ನಾಟಕ ರಾಜಧಾನಿ ಬೆಂಗಳೂರಿನೊಂದಿಗೆ ವಿಶೇಷ ಮತ್ತು ಭಾವನಾತ್ಮಕ ನಂಟಿದೆ. ಇಲ್ಲಿದ್ದಾಗಲೇ ಕನ್ನಡ ಕಲಿತಿದ್ದ ಅವರು ದಿ.ನಟ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ.

ಇದೇ 2026ರ ಜೂನ್‌ನಿಂದ ಹಿಮಾಲಯದ ಮಡಿಲಲ್ಲಿರುವ ನೇಪಾಳ ಮುನ್ನಡೆಸುತ್ತಿರುವ ಈ ಯುವ ನಾಯಕ, ಕೆಲ ವರ್ಷಗಳ ಹಿಂದಷ್ಟೇ ಬೆಂಗಳೂರಿನಲ್ಲಿ ವಿದ್ಯಾರ್ಥಿಯಾಗಿದ್ದರು. ಅವರಿಗೆ ಕನ್ನಡ ಭಾಷೆ, ಇಲ್ಲಿನ ಸಂಸ್ಕೃತಿ ಮತ್ತು ಕರ್ನಾಟಕದ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳಿಗೆ ಮನಸೋತಿದ್ದರು. ಅವರು ಅಪ್ಪಟ ಅಪ್ಪು ಅಭಿಮಾನಿಯಾಗಿದ್ದು, ಪುನೀತ್ ಸಿನಿಮಾಗಳೆಂದರೆ ಅಚ್ಚುಮೆಚ್ಚು. ಅಪ್ಪು ಸರಳತೆಯನ್ನು ಹೆಚ್ಚು ಇಷ್ಟಪಡುತ್ತಿದ್ದರು.

Nepal PM Balendra Shah Connect with Deep Bengaluru Roots Learned Kannada and Fan for Puneeth Rajkumar

ಉನ್ನತ ಶಿಕ್ಷಣ ಕಲಿತಿದ್ದೇ ಬೆಂಗಳೂರಲ್ಲಿ!

2016 ರಿಂದ 2018 ರ ಅವಧಿಯಲ್ಲಿ ಇಂದಿನ ನೇಪಾಳ ಪ್ರಧಾನಿ ಬಾಲೇನ್ ಶಹಾ ಅವರು ಬೆಂಗಳೂರಿನ ಯಲಹಂಕ ಸಮೀಪದಲ್ಲಿರುವ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎನ್‌ಎಂಐಟಿ) ಸ್ಟ್ರಕ್ಚರಲ್ ಎಂಜಿನಿಯರಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರ ಉನ್ನತ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ಮುಗಿಸಿ ಅಪಾರ ನೆನಪುಗಳೊಂದಿಗೆ ಅವರು ತಮ್ಮ ದೇಶಕ್ಕೆ ಮರಳಿದ್ದರು. ಈ ವರ್ಷದ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಸ್ಪರ್ಧಿಸಿ ಗೆದ್ದು ಇದೀಗ ನೇಪಾಳ ದೇಶದ ಯುಪ್ರಧಾನಿಯಾಗಿ ವಿಶ್ವದ ಗಮನ ಸೆಳೆದಿದ್ದಾರೆ.

ಬಿಜೆಪಿ ಪ್ರತಿಭಟನೆಗೆ ರಾಜ್ಯ ಸರ್ಕಾರದ ತಿರುಗೇಟು: ಬೆಲೆ ಏರಿಕೆ, ಬರ ಪರಿಹಾರದ ಬಗ್ಗೆ ಕೇಂದ್ರದತ್ತ ಬೊಟ್ಟು!
ಬಿಜೆಪಿ ಪ್ರತಿಭಟನೆಗೆ ರಾಜ್ಯ ಸರ್ಕಾರದ ತಿರುಗೇಟು: ಬೆಲೆ ಏರಿಕೆ, ಬರ ಪರಿಹಾರದ ಬಗ್ಗೆ ಕೇಂದ್ರದತ್ತ ಬೊಟ್ಟು!

ಶಿಕ್ಷಣಕ್ಕೆ ಬೆಂಗಳೂರು ಆಯ್ಕೆಗೆ ಸಹೋದರಿಯೇ ಕಾರಣ

ಇನ್ನು ಅವರ ಸಹೋದರಿ ಸುಜಾತಾ ಅವರು ಕಾರವಾರ ತಾಲೂಕಿನ ಗ್ರಾಮವೊಂದರ ನಿವಾಸಿ ಹರೀಶ್ ಕುಮಾರ್ ಸೇಜೆಕನ್ ಅವರನ್ನು ವರಿಸಿದ್ದಾರೆ. ಅವರೆಲ್ಲರು ಕುಟುಂಬ ಸಮೇತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದು, ಅಲ್ಲಿಂದುಕೊಂಡೇ ಶಹಾ ಅವರು ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಸಹೋದರಿ ಮನೆ ಬೆಂಗಳೂರಿನಲ್ಲಿದ್ದ ಕಾರಣಕ್ಕೇನೆ ಅವರು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರನ್ನು ಆಯ್ದು ಮಾಡಿಕೊಂಡರು ಎಂದು ವರದಿ ಆಗಿದೆ.

ಕನ್ನಡ ಭಾಷೆ ಮತ್ತು ನಟ. ದಿ.ಪುನೀತ್ ರಾಜ್‌ಕುಮಾರ್ ಮೇಲಿನ ಅಭಿಮಾನ ಹಾಗೂ ಬೆಂಗಳೂರಿನಲ್ಲಿದ್ದ ಕಾರಣಕ್ಕೆ ಅವರು ಈ ನೆಲದ ಭಾಷೆ ಕನ್ನಡವನ್ನು ಅತ್ಯಂತ ಆಸಕ್ತಿಯಿಂದ ಕಲಿತರು. ಇಲ್ಲಿ ಯಾರೇ ವಿಳಾಸ ಕೇಳಿದರೂ ಬೆಂಗಳೂರಿನವರಂತೆ ಸ್ಪಷ್ಟ ಕನ್ನಡದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಇದು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿತ್ತು. ಇದರೊಂದಿಗೆ ಅವರು ಸಹೋದರಿಗೂ ಕನ್ನಡ ಪದಗಳನ್ನು ತಿಳಿಸಿಕೊಟ್ಟಿದ್ದರು.

ಕಾಲೇಜಿಗೆ ತೆರಳಲು ಬಿಎಂಟಿಸಿ ಸೇರಿದಂತೆ ಇತರ ಸಾರಿಗೆ ಬಸ್‌ಗಳನ್ನು ಬಳಸುತ್ತಿದ್ದರು. ಕೆಲವೊಮ್ಮೆ ಭಾವ ಹರೀಶ್ ಅವರ ಸ್ಕೂಟರ್, ಕಾರಿನಲ್ಲಿ ತೆರಳಿದ್ದುಂಟು. ಶಿಕ್ಷಣದ ಜೊತೆ ಜೊತೆಗೆ ಇಲ್ಲಿನ ಗೆಳೆಯರೊಂದಿಗೆ ಅಮೂಲ್ಯ ಸಮಯ ಕಳೆಯುತ್ತಿದ್ದರು. ತೀರಾ ಸರಳ ಜೀವನ ನಡೆಸಿದ್ದ ಅವರು ಇಂದು ನೇಪಾಳದ ಪ್ರಧಾನಿಯಾಗಿದ್ದಾರೆ. ಭಾರತದ ಹೆಮ್ಮೆಯ ಪ್ರಧಾನಿ ಮೋದಿ ಅವರೊಂದಿಗೆ ಕೂತು ದೇಶದ ಆಗು ಹೋಗುಗಳ ಕುರಿತು ಮಾತುಕತೆ ನಡೆಸುವಂತಾಗಿದ್ದಾರೆ. ಅವರು ಬೆಂಗಳೂರಲ್ಲಿದ್ದ ದಿನಗಳನ್ನು ಅವರ ಭಾವ ಹರೀಶ್ ನೆನಪಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಟೊಯೋಟಾ ಉತ್ಪಾದನೆ ವಿಸ್ತರಣೆಗೆ ಸಹಕಾರ: ಜಪಾನ್ ಟ್ಯಾಕ್ಸಿ ಮಾಡೆಲ್ ಪರಿಚಯಿಸಲು ಡಿಕೆಶಿ ಒಲವು
ಕರ್ನಾಟಕದಲ್ಲಿ ಟೊಯೋಟಾ ಉತ್ಪಾದನೆ ವಿಸ್ತರಣೆಗೆ ಸಹಕಾರ: ಜಪಾನ್ ಟ್ಯಾಕ್ಸಿ ಮಾಡೆಲ್ ಪರಿಚಯಿಸಲು ಡಿಕೆಶಿ ಒಲವು

ದಕ್ಷಿಣ ಭಾರತೀಯ ಆಹಾರ ಅಚ್ಚು ಮೆಚ್ಚು

ಬೆಂಗಳೂರಿನ ರಸ್ತೆಬದಿಗಳಲ್ಲಿ ಸಿಗುವ ತಿಂಡಿ, ತಿನಿಸುಗಳಿಂದ ಹಿಂಡಿದು ಪ್ರಸಿದ್ಧ ಹೋಟೆಲುಗಳು, ಭಾರತದ ಸಾಂಪ್ರದಾಯಿಕ ತಿಂಡಿಗಳಾದ ಇಡ್ಲಿ ಮತ್ತು ದೋಸೆವರೆಗೆ ಎಲ್ಲವನ್ನು ಇಷ್ಟಪಟ್ಟು ತಿನ್ನುತ್ತಿದ್ದರು. ಬೆಂಗಳೂರಿನ ನೈಟ್‌ಲೈಫ್ ಸಂಸ್ಕೃತಿಯನ್ನು ತಿಳಿದುಕೊಂಡಿದ್ದರು. ಚರ್ಚ್ ಸ್ಟ್ರೀಟ್, ಕೋರಮಂಗಲ ಹಾಗೂ ಸ್ಕೈಬಾರ್‌ನಂತಹ ಜನಪ್ರಿಯ ತಾಣಗಳಿಗೆ ಬಿಡುವಿನ ವೇಳೆಯಲ್ಲಿ ಭೇಟಿ ನೀಡುತ್ತಿದ್ದರು.

ಇವರ ಆಪ್ತ ವಲಯದಲ್ಲಿ ನೇಪಾಳದ ಗೆಳೆಯರಾದ ಸುನಿಲ್ ಲಮ್ಸಾಲ್, ಪ್ರವೀಣ್ ಶಹಾ ಹಾಗೂ ಕರ್ನಾಟಕದ ಗೆಳೆಯ ಆಕಾಶ್ ಅವರೂ ಇದ್ದಾರೆ. ಎಂಜಿನಿಯರಿಂಗ್ ಪಾಠಗಳಿಗೆ ಸೀಮಿತವಾಗಿರದೇ ಇಲ್ಲಿನ ಆಡಳಿತ ವ್ಯವಸ್ಥೆ, ದೇಶದ, ಭವಿಷ್ಯ ಹಾಗೂ ರಾಜಕೀಯ ಬದಲಾವಣೆಗಳ ಕುರಿತು ಹೆಚ್ಚಾಗಿ ಮಾತನಾಡುತ್ತಿದ್ದರು. ಪ್ರತಿ ವಿಷಯದಲ್ಲೂ ಆಳವಾಗಿ ಜ್ಞಾನ ಸಂಪಾದಿಸುವ ತುಡಿತ ಅವರಲ್ಲಿತ್ತು. ಸಮಾಜಮುಖಿ ಚಿಂತನೆ, ನಾಯಕತ್ವದ ಗುಣಗಳು ಅವರಲ್ಲಿದ್ದವು.

ಸಾಮಾನ್ಯ ವಿದ್ಯಾರ್ಥಿಯಿಂದ ನೇಪಾಳದ ಉನ್ನತ ನಾಯಕನವರೆಗೆ

ಸ್ಟ್ರಕ್ಚರಲ್ ಎಂಜಿನಿಯರ್ ಗುರುತಿಸಿಕೊಂಡಿದ್ದ ಬಾಲೇನ್ ಶಹಾ, ಮುಂದೆ ನೇಪಾಳದ ರಾಜಕೀಯ ಪ್ರವೇಶಿಸಿ ಕಠ್ಮಂಡುವಿನ 15ನೇ ಮೇಯರ್ ಆಗಿ ಆಯ್ಕೆಯಾದರು. ಅಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರಿ ಬಹುಮತ ಪಡೆದ ಅವರು, ನೇಪಾಳದ ಪ್ರಮುಖ ನಾಯಕನಾಗಿ ಹೊರಹೊಮ್ಮಿದರು. ನಗರದ ಮೂಲಸೌಕರ್ಯ, ಸ್ವಚ್ಛತೆ ಮತ್ತು ಆಡಳಿತ ಸುಧಾರಣೆಯಲ್ಲಿ ಅವರು ಜಾರಿಗೊಳಿಸಿದ ಕ್ರಾಂತಿಕಾರಿ ನಿರ್ಧಾರಗಳು ಜಾಗತಿಕ ಗಮನ ಸೆಳೆದಿವೆ.

New Flyover: ಬೆಂಗಳೂರು ಏರ್‌ಪೋರ್ಟ್ ಪ್ರಯಾಣಿಕರಿಗೆ ಸಿಹಿಸುದ್ದಿ: ಹೆಬ್ಬಾಳ ಮಾದರಿಯಲ್ಲಿ ಹೊಸ ಫ್ಲೈಓವರ್ ನಿರ್ಮಾಣ
New Flyover: ಬೆಂಗಳೂರು ಏರ್‌ಪೋರ್ಟ್ ಪ್ರಯಾಣಿಕರಿಗೆ ಸಿಹಿಸುದ್ದಿ: ಹೆಬ್ಬಾಳ ಮಾದರಿಯಲ್ಲಿ ಹೊಸ ಫ್ಲೈಓವರ್ ನಿರ್ಮಾಣ

ಬೆಂಗಳೂರಿನ ಕಾಲೇಜಿನಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದ ತಮ್ಮ ಕಿರಿಯ ಸಹೋದರ ಇಂದು ಇಡೀ ನೇಪಾಳ ದೇಶಕ್ಕೆ ಮಾರ್ಗದರ್ಶಕನಾಗಿ ಬೆಳೆದು ನಿಂತಿರುವುದನ್ನು ಕಂಡು ಸಹೋದರಿ ಸುಜಾತಾ ಭಾವುಕರಾಗುತ್ತಾರೆ. ಅವರ ಈವರೆಗಿನ ರಾಜಕೀಯ ಸಾಧನೆಗೆ ಬೆಂಗಳೂರಿನ ವಾತಾವರಣ, ಕರ್ನಾಟಕದ ಜನಜೀವನ ಬಾಲೇನ್ ಶಹಾ ಅವರ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುದು ಹೆಮ್ಮೆಯ ಸಂಗತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+