ಬೆಂಗಳೂರು 'ಸಂಚಾರಿ ಪಶುವೈದ್ಯಕೀಯ ಸೇವೆ'ಗೆ ಉತ್ತಮ ಸ್ಪಂದನೆ: ಕಡಿಮೆ ಅವಧಿಯಲ್ಲಿ 487 ಪಶುಗಳಿಗೆ ಚಿಕಿತ್ಸೆ

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಆರಂಭಿಸಲಾದ 'ಸಂಚಾರಿ ಪಶುವೈದ್ಯಕೀಯ ಸೇವೆ' ಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಸಮುದಾಯ ಪ್ರಾಣಿಗಳ ಆರೋಗ್ಯ ರಕ್ಷಣೆಗೆ ಒದಗಿಸುವ ಉದ್ದೇಶದಿಂದ ಈ ಸೇವೆ (ಸಂಚಾರಿ ಮೊಬೈಲ್ ಪಶುವೈದ್ಯಕೀಯ ಕ್ಲಿನಿಕ್) ಆರಂಭಿಸಲಾಗಿದೆ.

ಸಮುದಾಯ ಪ್ರಾಣಿಗಳಿಗೆ ಸ್ಥಳದಲ್ಲಿಯೇ ವೈದ್ಯಕೀಯ ನೆರವು ತಲುಪಿಸುವಲ್ಲಿ ಈ ಸೇವೆಯು ಮಹತ್ವದ ಪಾತ್ರ ವಹಿಸುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅನಾರೋಗ್ಯಕ್ಕೀಡಾದ, ಗಾಯಗೊಂಡ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಪ್ರಾಣಿಗಳಿಗೆ ಸಕಾಲದಲ್ಲಿ ಪಶುವೈದ್ಯಕೀಯ ಚಿಕಿತ್ಸೆ ಮತ್ತು ಅಗತ್ಯ ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ. ಕಳೆದ ಐದೇ ತಿಂಗಳಲ್ಲಿ 487 ಪ್ರಕರಣಗಳಲ್ಲಿ ಪಶುಗಳಿಗೆ ಚಿಕಿತ್ಸೆ ನೀಡಲಗಿದೆ.

Mobile Veterinary Clinic

ಗಾಯಗೊಂಡ, ಅನಾರೋಗ್ಯಕ್ಕೆ ತುತ್ತಾದ ಹಾಗೂ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿರುವ ಸಮುದಾಯ ಪ್ರಾಣಿಗಳಿಗೆ ಈ ಸಂಚಾರಿ ವ್ಯಾನ್‌ನಿಂದ ತಕ್ಷಣದ ಚಿಕಿತ್ಸೆ ದೊರೆಯುತ್ತಿದೆ. ಜುಲೈ ತಿಂಗಳಿಂದ ನವೆಂಬರ್‌ 22ರ ವರೆಗಿನ ಐದು ತಿಂಗಳ ಅವಧಿಯಲ್ಲಿ (ಒಟ್ಟು 487 ಪ್ರಕರಣಗಳಿಗೆ) ಸೂಕ್ತ ಕಾಲದಲ್ಲಿ ಪ್ರಾಣಿಗಳಿಗೆ ವೈದ್ಯಕೀಯ ನೆರವು ಲಭಿಸಿದೆ ಎಂದು ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ತಿಳಿಸಿದರು.

ಬೆಂಗಳೂರು ಮೆಜೆಸ್ಟಿಕ್ ಪ್ರವೇಶ ಮತ್ತಷ್ಟು ಸುಲಭ: ಓಕಳಿಪುರಂ ಅಷ್ಟಪಥ ಕಾರಿಡಾರ್ ಕಾಮಗಾರಿಗೆ ವೇಗ
ಬೆಂಗಳೂರು ಮೆಜೆಸ್ಟಿಕ್ ಪ್ರವೇಶ ಮತ್ತಷ್ಟು ಸುಲಭ: ಓಕಳಿಪುರಂ ಅಷ್ಟಪಥ ಕಾರಿಡಾರ್ ಕಾಮಗಾರಿಗೆ ವೇಗ

ಯಾವುದಕ್ಕೆಲ್ಲ ಸಂಚಾರಿ ಪಶುವೈದ್ಯಕೀಯ ಸೇವೆ ಸಿಗುತ್ತೆ?

* ಸಾಮಾನ್ಯ ಕಾಯಿಲೆಗಳು: ಪ್ರಾಣಿಗಳಲ್ಲಿ ಕಂಡುಬರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ.

* ಗಾಯಗಳು ಮತ್ತು ತುರ್ತು ಪರಿಸ್ಥಿತಿಗಳು: ಗಾಯಗಳು, ಕಡಿತಗಳು ಹಾಗೂ ಅಪಘಾತಗಳಿಂದ ಉಂಟಾದ ಗಾಯಗಳಿಗೆ ವೈದ್ಯಕೀಯ ನೆರವು.

* ಚರ್ಮದ ಸಮಸ್ಯೆಗಳು: ಚರ್ಮದ ಸೋಂಕುಗಳು ಹಾಗೂ ಇತರೆ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ.

* ಜೀರ್ಣಾಂಗ ಮತ್ತು ಉಸಿರಾಟದ ಸಮಸ್ಯೆಗಳು: ಜೀರ್ಣಕ್ರಿಯೆ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಚಿಕಿತ್ಸೆ.

* ಇತರೆ ಆರೋಗ್ಯ ಸಮಸ್ಯೆಗಳು: ನರಮಂಡಲ, ಸ್ನಾಯು ಮತ್ತು ಮೂಳೆ, ಹೃದಯರಕ್ತನಾಳ, ಅಂತಃಸ್ರಾವಕ ವ್ಯವಸ್ಥೆ, ಮೂತ್ರ ಹಾಗೂ ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ.

* ಲಸಿಕಾ ಸೇವೆಗಳು: ರೋಗ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಲಸಿಕೆಗಳನ್ನು ನೀಡುವುದು.

* ಆಂಬುಲೆನ್ಸ್ ಸೇವೆಗಳು: ಸಂಚಾರಿ ಮೊಬೈಲ್ ಪಶುವೈದ್ಯಕೀಯ ಘಟಕದ ಮೂಲಕ ಪ್ರಾಣಿಗಳಿಗೆ ತುರ್ತು ಪಶುವೈದ್ಯಕೀಯ ನೆರವು ಮತ್ತು ಸಾಗಣೆ.

ಮಾಸಿಕ ಪ್ರಕರಣಗಳ ಚಿಕಿತ್ಸಾ ವಿವರ

ಸಂಚಾರಿ ಮೊಬೈಲ್ ಪಶುವೈದ್ಯಕೀಯ ಘಟಕದ ಮಾಸಿಕ ವರದಿಗಳ ಪ್ರಕಾರ, ಸಮುದಾಯ ಪ್ರಾಣಿಗಳಿಗೆ ಚಿಕಿತ್ಸೆ ನೀಡಿದ ಪ್ರಕರಣಗಳ ತಿಂಗಳುವಾರು ವಿವರಗಳು ಈ ಕೆಳಗಿನಂತಿವೆ.

Namma Metro: ಗೋರಗುಂಟೆಪಾಳ್ಯದಿಂದ ಬೊಮ್ಮಸಂದ್ರಕ್ಕೆ ಯಶಸ್ವಿ 'ಹೃದಯ' ಸಾಗಣೆ! 70 ನಿಮಿಷಗಳ ಜರ್ನಿ ಹೇಗಿತ್ತು?
Namma Metro: ಗೋರಗುಂಟೆಪಾಳ್ಯದಿಂದ ಬೊಮ್ಮಸಂದ್ರಕ್ಕೆ ಯಶಸ್ವಿ 'ಹೃದಯ' ಸಾಗಣೆ! 70 ನಿಮಿಷಗಳ ಜರ್ನಿ ಹೇಗಿತ್ತು?

ಜುಲೈ ತಿಂಗಳಲ್ಲಿ - 9, ಆಗಸ್ಟ್ - 95, ಸೆಪ್ಟೆಂಬರ್ - 133, ಅಕ್ಟೋಬರ್ - 155, ನವೆಂಬರ್‌ (22 ರವರೆಗೆ) - 95 ಸೇರಿ ಈವರೆಗೆ ಒಟ್ಟು 487 ಪ್ರಕರಣಗಳಲ್ಲಿ ಚಿಕಿತ್ಸೆ ನೀಡಲಾಗಿದೆ.

ಪ್ರಾಣಿಗಳ ಕಲ್ಯಾಣ, ಆರೋಗ್ಯ ರಕ್ಷಣೆಗೆ ಆದ್ಯತೆ

ಸಮುದಾಯ ಪ್ರಾಣಿಗಳಿಗೆ ಅಗತ್ಯವಿರುವ ಸಂದರ್ಭದಲ್ಲಿ ಉಚಿತ ವೈದ್ಯಕೀಯ ಸೇವೆ ಸುಲಭವಾಗಿ ದೊರೆಯುವಂತೆ ಮಾಡುವುದರ ಜೊತೆಗೆ, ಪಶುವೈದ್ಯಕೀಯ ಸೇವೆಗಳು ತಲುಪಲು ಕಷ್ಟವಾಗುವ ಪ್ರದೇಶಗಳಲ್ಲಿಯೂ ನೆರವು ಒದಗಿಸುವಲ್ಲಿ ಈ ಸಂಚಾರಿ ಘಟಕ ಸಹಕಾರಿಯಾಗಿದೆ. ಸಮುದಾಯದ ಮಟ್ಟದಲ್ಲಿಯೇ ಪಶುವೈದ್ಯಕೀಯ ಸೇವೆಗಳನ್ನು ತಲುಪಿಸುವ ಮೂಲಕ ಪ್ರಾಣಿಗಳ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.

Metro Pink Line: ಟನಲ್ ಪಿಂಕ್ ಲೈನ್‌ನಲ್ಲಿ ಟ್ರಯಲ್ ರನ್‌ಗೆ ಸಿದ್ಧತೆ: ನಾಗವಾರ ತೆರಳಿದ್ರೆ ಬೆಂಗಳೂರು ಏರ್‍‌ಪೋರ್ಟ್ ಹತ್ತಿರ!
Metro Pink Line: ಟನಲ್ ಪಿಂಕ್ ಲೈನ್‌ನಲ್ಲಿ ಟ್ರಯಲ್ ರನ್‌ಗೆ ಸಿದ್ಧತೆ: ನಾಗವಾರ ತೆರಳಿದ್ರೆ ಬೆಂಗಳೂರು ಏರ್‍‌ಪೋರ್ಟ್ ಹತ್ತಿರ!

ಪ್ರಾಣಿಗಳ ಕಲ್ಯಾಣ ಹಾಗೂ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿರುವ ಬೆಂಗಳೂರು ಪೂರ್ವ ನಗರ ಪಾಲಿಕೆಯು, ಪಶುವೈದ್ಯಕೀಯ ಸೌಲಭ್ಯಗಳನ್ನು ಇನ್ನಷ್ಟು ಉನ್ನತೀಕರಿಸಲು ಮೊಬೈಲ್ ಪಶುವೈದ್ಯಕೀಯ ಸೇವೆ ಮುಂದುವರಿಸುವ ಬದ್ಧತೆ ಹೊಂದಿದೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+