Metro Pink Line: ಟನಲ್ ಪಿಂಕ್ ಲೈನ್‌ನಲ್ಲಿ ಟ್ರಯಲ್ ರನ್‌ಗೆ ಸಿದ್ಧತೆ: ನಾಗವಾರ ತೆರಳಿದ್ರೆ ಬೆಂಗಳೂರು ಏರ್‍‌ಪೋರ್ಟ್ ಹತ್ತಿರ!

ಬೆಂಗಳೂರು: ನಮ್ಮ ಮೆಟ್ರೋ ಗುಲಾಬಿ ಮಾರ್ಗದ (ಕಾಳೇನ ಅಗ್ರಹಾರ-ಎಸ್‌.ಜಿ.ಪಾಳ್ಯ) ಕಾರಿಡಾರ್ ಓಪನ್ ಆದ ಬೆನ್ನಲ್ಲೇ ಸುರಂಗ ಮಾರ್ಗದ ತೆರೆಯುವ ಕುರಿತು ಬಿಗ್ ಅಪ್ಡೇಟ್ ಸಿಕ್ಕಿದೆ. ಇನ್ನೂ ನೀಲಿ ಮಾರ್ಗ ತೆರೆಯುವ ಮುನ್ನವೇ ಪ್ರಯಾಣಿಕರು ನಾಗವಾರವರೆಗೂ ತೆರಳಿ ಅಲ್ಲಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬಹುದು. ಈ ಮೂಲಕ 2027ರಲ್ಲಿ ಬೆಂಗಳೂರು ಏರ್ ಪೋರ್ಟ್‌ಗೆ ನಗರಕ್ಕೆ ಮತ್ತಷ್ಟು ಹತ್ತಿರವಾಗಲಿದೆ.

ಮೆಟ್ರೋ ಗುಲಾಬಿ ಸುರಂಗ ಮಾರ್ಗದ ಕಾಮಗಾರಿಗಳೆಲ್ಲವು ಮುಗಿದಿವೆ. ಎಸ್‌.ಜಿ.ಪಾಳ್ಯ-ನಾಗವಾರವರೆಗೆ ಸುರಂಗ ಮಾರ್ಗದಲ್ಲಿ ಮೆಟ್ರೋ ಟ್ರಯಲ್ ರನ್ ನಡೆಸಲು ಪ್ಲ್ಯಾನ್ ಮಾಡಲಾಗಿದೆ. ಒಂದಷ್ಟು ವಿಳಂಬದ ಬಳಿಕ ಮುಂದಿನ ಕೆಲವೇ ತಿಂಗಳಲ್ಲಿ ಈ ಮಾರ್ಗವು ಲೋಕಾರ್ಪಣೆಗೊಳ್ಳಲಿದೆ. ನೀಲಿ ಮಾರ್ಗ ತೆರೆಯುವವರಿಗೂ ನಾಗವಾರ ನಿಲ್ದಾಣ ಬೆಂಗಳೂರು ಏರ್ ಪೋರ್ಟ್ಗೆ ಹತ್ತಿರದ ಮೆಟ್ರೋ ನಿಲ್ದಾಣವಾಗಲಿದೆ. ವಿಮಾನಯಾನ ಪ್ರಯಾಣಿಕರು ನಾಗವಾರವರೆಗೂ ತೆರಳಿ ಅಲ್ಲಿಂದ ಏರ್ ಪೋರ್ಟ್‌ಗೆ ಪ್ರಯಾಣಿಸಬಹುದಾಗಿದೆ.

Namma Metro Pink Line Underground Stretch to Open by May 2027 Bringing Bengaluru Airport Closer

ಏರ್ ಪೋರ್ಟ್ ಪ್ರಯಾಣಿಕರಿಗೆ ಅನುಕೂಲ

ಬೆಂಗಳೂರು ಹೃದಯ ಭಾಗದಿಂದ ಏರ್ ಪೋರ್ಟ್‌ಗೆ ಹೆಬ್ಬಾಳ ಜಂಕ್ಷನ್ ಮಾರ್ಗವಾಗಿ ಸಂಚಾರ ದಟ್ಟಣೆಯಲ್ಲಿ ತೆರಳಬೇಕಿದೆ. ಈ ಸಂಬಂಧ ಸಿಲ್ಕ್‌ ಬೋರ್ಡ್‌ನಿಂದ-ಕೆ.ಆರ್.ಪುರಂ ಮಾರ್ಗವಾಗಿ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಲು ನೀಲಿ ಮಾರ್ಗ ನಿರ್ಮಿಸಲಾಗುತ್ತಿದೆ. ಇದು ತೆರೆಯಲು ಇನ್ನೂ ಹಲವು ತಿಂಗಳು ಹಿಡಿಯಲಿದೆ. ಅಷ್ಟರಲ್ಲಾಗಲೇ ನಾಗವಾರವರೆಗೂ ಪಿಂಕ್ ಲೈನ್ ಓಪನ್ ಆದಲ್ಲಿ ಏರ್ ಪೋರ್ಟ್ ಪ್ರಯಾಣಿಕರಿಗೆ ಸುಮಾರು 10 ಕಿಮೀ ದೂತ ಕ್ರಮಿಸುವುದು ತಪ್ಪಲಿದೆ.

Namma Metro: ವಾರ್ಷಿಕ ಮೆಟ್ರೋ ಪ್ರಯಾಣಿಕರ ಸಂಚಾರ ಶೇ.12 ಏರಿಕೆ; ಟಿಕೆಟ್ ಆದಾಯದಲ್ಲಿ ಭರ್ಜರಿ ದಾಖಲೆ
Namma Metro: ವಾರ್ಷಿಕ ಮೆಟ್ರೋ ಪ್ರಯಾಣಿಕರ ಸಂಚಾರ ಶೇ.12 ಏರಿಕೆ; ಟಿಕೆಟ್ ಆದಾಯದಲ್ಲಿ ಭರ್ಜರಿ ದಾಖಲೆ

ಪಿಂಕ್ ಲೈನ್‌ನಿಂದಾಗಿ ಏರ್ ಪೋರ್ಟ್‌ ತುಸು ಹತ್ತಿರ!

ವಿಜಯನಗರ, ಮೆಜೆಸ್ಟಿಕ್, ಎಂಜಿ ರಸ್ತೆಯ ಭಾಗದ ಪ್ರದೇಶಗಳು ಮತ್ತು ಅವುಗಳ ಸುತ್ತಮುತ್ತಲಿನಿಂದ ಏರ್‍‌ ಪೋರ್ಟ್‌ಗೆ ತೆರಳಲು ಪ್ರಯಾಣಿಕರು ವಾಹನಗಳನ್ನು ಅವಲಂಬಿಸಿದ್ದಾರೆ. ಇಲ್ಲಿಂದ ಸುಮಾರು 40 ಕಿಲೋ ಮೀಟರ್ ಪ್ರಯಾಣಿಸಬೇಕಿದ್ದು, ದಟ್ಟಣೆಯಲ್ಲಿ ಸಮಯ ಹೆಚ್ಚು ಹಿಡಿಯುತ್ತದೆ. ಅದೇ ಭೂಗತ ಪಿಂಕ್ ಲೈನ್ ಲೋಕಾರ್ಪಣೆ ಬಳಿಕ ನಾಗವಾರವರೆಗೂ ಮೆಟ್ರೋದಲ್ಲಿ ತೆರಳಿ ಅಲ್ಲಿಂದ ಏರ್ ಪೋರ್ಟ್‌ಗೆ ತೆರಳಿದರೆ ಸುಮಾರು ಹತ್ತು ಕಿಲೋ ಮೀಟರ್ ಉಳಿತಾಯವಾಗಲಿದೆ. ಉದಾಹರಣೆಗೆ ಎಂಜಿ ರಸ್ತೆಯಿಂದ KIA ಏರ್ ಪೋರ್ಟ್‌ ಅಂದಾಜು 35 ಕಿಮೀ ಇದ್ದು, ನಾಗವಾರದಿಂದ KIA 26ಕಿಲೋ ಮೀಟರ್ ದೂರ ಇದೆ. ಹೀಗಾಗಿ ಪಿಂಕ್ ಲೈನ್ ಮೆಟ್ರೋ ವಿಮಾನಯಾನ ಪ್ರಯಾಣಿಕರಿಗೂ ಅನುಕೂಲ ಒದಗಿಸಲಿದೆ.

2027ರ ಮೇ ಗೆ ಗುಲಾಬಿ ಸುರಂಗ ಮಾರ್ಗ ಓಪನ್

ಆರು ನಿಲ್ದಾಣಗಳ 7.5 ಕಿಮೀ ಪಿಂಕ್ ಲೈನ್ ಕಾರಿಡಾರ್‌ ಅನ್ನು ನ.13ರಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಇದರಿಂದ ಜಯದೇವ ಮೆಟ್ರೋ ಭಾಗದಲ್ಲಿ, ಬನ್ನೇರುಘಟ್ಟ ರಸ್ತೆಯಲ್ಲಿನ ದಟ್ಟಣೆಗೆ ಕಡಿಮೆ ಅಗಿದೆ. ಮೊದಲ ದಿನವೇ ಸುಮಾರು 30 ಸಾವಿರಕ್ಕು ಅಧಿಕ ಮಂದಿ ಪ್ರಯಾಣಿಸಿದ್ದಾರೆ. ಈ ಮಾರ್ಗದ ಮುಂದುವರಿದ ಭೂಗತ (ಟನಲ್) ಪಿಂಕ್ ಲೈನ್‌ ಮಾರ್ಗದಲ್ಲಿ ಮೆಟ್ರೋ ಟ್ರಯಲ್ ರನ್ ನಡೆಸಲು ಅಧಿಕಾರಿಗಳು ಎಲ್ಲ ಸಿದ್ಧತೆ ನಡೆಸಿದ್ದಾರೆ. 2027ರ ಮೇ ತಿಂಗಳಲ್ಲಿ ಪಿಂಕ್ ಲೈನ್ ಸಂಪೂರ್ಣ (21 ಕಿಮೀ) ಪ್ರಯಾಣಿಕರಿಗೆ ಮುಕ್ತಗೊಳ್ಳಲಿದೆ.

Metro Blue Line: ಟ್ರಯಲ್ ರನ್ ಮಾರತ್ತಹಳ್ಳಿವರೆಗೂ ವಿಸ್ತರಣೆ! 2ಎ-2ಬಿ ಲೈನ್ ಅಪ್ಡೇಟ್, ನಿಲ್ದಾಣಗಳು, ಉದ್ಘಾಟನೆ?
Metro Blue Line: ಟ್ರಯಲ್ ರನ್ ಮಾರತ್ತಹಳ್ಳಿವರೆಗೂ ವಿಸ್ತರಣೆ! 2ಎ-2ಬಿ ಲೈನ್ ಅಪ್ಡೇಟ್, ನಿಲ್ದಾಣಗಳು, ಉದ್ಘಾಟನೆ?

ಗುಲಾಬಿ ಸುರಂಗ ಮಾರ್ಗದ ನಿಲ್ದಾಣಗಳು

ಪಿಂಕ್ ಲೈನ್ ಸೌಥ್ ಎಂಡ್ ವೃತ್ತ, ಡೈರಿ ವೃತ್ತ, ಲಕ್ಕಸಂದ್ರ, ಎಂ.ಜಿ.ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಪಾಟರಿ ಟೌನ್, ಟ್ಯಾನರಿ ರಸ್ತೆ, ವೆಂಕಟಾಪುರ, ಕಾಡುಗೊಂಡನಹಳ್ಳಿ, ನಾಗವಾರ ವರೆಗೆ 11 ನಿಲ್ದಾಣಗಳು ಸುರಂಗದಲ್ಲಿ ಬರಲಿವೆ. ಈ ಮಾರ್ಗ ಪ್ರಯಾಣಿಕರಿಗೆ ಮುಂದಿನ ವರ್ಷ ಗುಡ್‌ನ್ಯೂಸ್ ಸಿಗಲಿದೆ.

ಪಿಂಕ್‌ ಲೈನ್‌ ಸಂಪರ್ಕಿಸುವ ಇಂಟರ್‌ಚೇಂಜ್ ನಿಲ್ದಾಣಗಳು

ಕಾಳೇನ ಅಗ್ರಹಾರದಿಂದ ಎಸ್‌.ಜಿ.ಪಾಳ್ಯ ನಡುವಿನ ಕಾರಿಡಾರ್‌ ನಲ್ಲಿ ಜಯದೇವೆ ಮೆಟ್ರೋ ನಿಲ್ದಾಣ (ಹಳದಿ ಮಾರ್ಗ) ಇಂಟರ್‌ಚೇಂಜ್‌ ನಿಲ್ದಾಣವಾಗಲಿದೆ. ಅದೇ ರೀತಿ ಭೂಗತ ಪಿಂಕ್ ಲೈನ್‌ನ ಮಾರ್ಗದಲ್ಲಿ ಎಂಜಿ ರಸ್ತೆ ನಿಲ್ದಾಣ (ನೇರಳೆ ಮಾರ್ಗ), ನಾಗವಾರ ನಿಲ್ದಾಣಗಳು (ನೀಲಿ ಮಾರ್ಗ) ಇಂಟರ್‌ಚೇಂಜ್ ನಿಲ್ದಾಣಗಳಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+