ಬೆಂಗಳೂರು ಟ್ರಾಫಿಕ್ 50% ಇಳಿಕೆಗೆ ಮಾಸ್ಟರ್ ಪ್ಲ್ಯಾನ್: ಮೆಟ್ರೋ ಜಾಲ 500 ಕಿಮೀ ವಿಸ್ತರಣೆ: ಡಿಕೆಶಿ ಅಪ್ಡೇಟ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ಇಳಿಕೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಈ ಸಂಬಂಧ ನಮ್ಮ ಮೆಟ್ರೋ ಜಾಲ 500 ಕಿಲೋ ಮೀಟರ್ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಡಿಪಿಆರ್ ಮಾಡಿರುವ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಹಾಗೂ ವಿದೇಶಿ ಸಾಲ ಮರು ಪಾವತಿಯಲ್ಲಿ ಸರ್ಕಾರಗಳಿಗೆ ಸಮಾನ ಹಂಚಿಕೆ ಆಗಬೇಕೆಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದರು.

ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಬೆಂಗಳೂರು ಮೆಟ್ರೋ ಸಂಪರ್ಕವನ್ನು 500 ಕಿ.ಮೀ.ಗೆ ವಿಸ್ತರಣೆ ಮಾಡುವ ಗುರಿ ಇಟ್ಟಿಕೊಂಡಿದ್ದೇವೆ. ಇದರಿಂದ ನಗರದ ಸಂಚಾರ ದಟ್ಟಣೆ ಸಮಸ್ಯೆ ಶೇ.50ರಷ್ಟು ಇಳಿಕೆ ಆಗಲಿದೆ. ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ. ಉತ್ತಮ ಮೆಟ್ರೋ ಕೆಲಸದಿಂದ ಜನಸಾಮಾನ್ಯರು ಸಂಚಾರ ದಟ್ಟಣೆಯಲ್ಲಿ ತಗ್ಗಲಿದೆ. ಇದರಿಂದ ಜನರು ನಿತ್ಯ 2-3 ತಾಸು ದಟ್ಟಣೆಯಲ್ಲಿ ಕಾಲ ಕಳೆಯುವುದು ತಪ್ಪಲಿದೆ ಎಂದರು.

500Km Namma Metro Network

ಮೆಟ್ರೋ ಯೋಜನೆಗಳಿಗೆ ತ್ವರಿತ ಅನುಮೋದನೆ ನೀಡಿ

ಇಂದು ಪ್ರಧಾನಿಯವರಿಂದ ಪಿಂಕ್ ಲೈನ್ ಉದ್ಘಾಟನೆಯೊಂದಿಗೆ ಬೆಂಗಳೂರಿನ ಮೆಟ್ರೋ ಜಾಲ 103 ಕಿ.ಮೀ. ವಿಸ್ತರಣೆ ಆಗಿದೆ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು 500 ಕಿ.ಮೀ ವಿಸ್ತರಣೆ ಭಾಗವಾಗಿ ವಿವಿಧ ಮಹತ್ತರ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಕಳೆದ ಎರಡು ವರ್ಷಗಳಿಂದ ಮೆಟ್ರೋ ಯೋಜನಾ ಅನುಮತಿ ಬಾಕಿ ಉಳಿದಿವೆ.

Pink Line ಲೋಕಾರ್ಪಣೆಯೊಂದಿಗೆ 100 ಕಿಮೀ ಗಡಿ ದಾಟಿದ ನಮ್ಮ ಮೆಟ್ರೋ ಜಾಲ! ಮುಂಬೈ, ದೆಹಲಿ ನಗರಗಳು ಎಷ್ಟು ಮುಂದಿವೆ?
Pink Line ಲೋಕಾರ್ಪಣೆಯೊಂದಿಗೆ 100 ಕಿಮೀ ಗಡಿ ದಾಟಿದ ನಮ್ಮ ಮೆಟ್ರೋ ಜಾಲ! ಮುಂಬೈ, ದೆಹಲಿ ನಗರಗಳು ಎಷ್ಟು ಮುಂದಿವೆ?

ನಮ್ಮ ಮೆಟ್ರೋ ಕೆಂಪು ಮಾರ್ಗದ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದೇವೆ. ಈ ಯೋಜನೆಗೆ ಅನುಮತಿ ನೀಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮಾರ್ಗದರ್ಶನ ನೀಡುವಂತೆ ಪ್ರಧಾನಿ ಬಳಿಕ ಡಿಕೆ ಶಿವಕುಮಾರ್ ಕೋರಿದರು. ಯೋಜನೆಗಳಿಗೆ ನಾವು ಕೆಲವು ವರ್ಷಗಳ ಹಿಂದೆಯೇ ವಿಸ್ತೃತ ವರದಿ ಸಿದ್ಧಪಡಿಸಿದ್ದು, ಈ ವಿಳಂಬದಿಂದಾಗಿ ಯೋಜನಾ ವೆಚ್ಚ ಹೆಚ್ಚಾಗುತ್ತಿದೆ. ಯೋಜನೆಯ ಪರಿಷ್ಕೃತ ಡಿಪಿಆರ್ ಗೆ ಅನುಮತಿ ನೀಡುವುದು ಬಾಕಿ ಇದೆ ಎಂದರು.

ಸಾಲ ಮರುಪಾವತಿಯಲ್ಲಿ ಸರ್ಕಾರಗಳು ಸಮಾನವಾಗಿರಲಿ

ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ತ್ವರಿತ ಅನುಮತಿ ಸಿಗಬೇಕು. ಈ ವಿಳಂಬದಿಂದ ಹೆಚ್ಚುವ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನಾಗಿ ಹಂಚಿಕೆ ಮಾಡಿಕೊಳ್ಳಬೇಕು. ಜತೆಗೆ ಕಾರ್ಯಾಚರಣೆ ವೆಚ್ಚದ ನಷ್ಟವನ್ನು ಎರಡೂ ಸರ್ಕಾರಗಳು ಸಮಾನವಾಗಿ ಭರಿಸಬೇಕಿದೆ. ದೆಹಲಿ ಮೆಟ್ರೋ ಮಾದರಿಯಲ್ಲೇ ವಿದೇಶಿ ಸಾಲ ಮರುಪಾವತಿಯಲ್ಲೂ ಎರಡೂ ಸರ್ಕಾರಗಳು ಸಮಾನ ಹಂಚಿಕೆ ಮಾಡಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.

Bengaluru Metro: ನೂತನ ಗುಲಾಬಿ ಮಾರ್ಗದಲ್ಲಿ ಬೆಳಗ್ಗೆ, ರಾತ್ರಿ ಮೆಟ್ರೋ ಸಂಚಾರ ಸಮಯ, ವೇಳಾಪಟ್ಟಿ ಬಿಡುಗಡೆ
Bengaluru Metro: ನೂತನ ಗುಲಾಬಿ ಮಾರ್ಗದಲ್ಲಿ ಬೆಳಗ್ಗೆ, ರಾತ್ರಿ ಮೆಟ್ರೋ ಸಂಚಾರ ಸಮಯ, ವೇಳಾಪಟ್ಟಿ ಬಿಡುಗಡೆ

ಜಗತ್ತು ಭಾರತವನ್ನು ಐಟಿ ನಗರಿ ಬೆಂಗಳೂರಿನ ಮೂಲಕ ಕಾಣುತ್ತಿದೆ. ನಮ್ಮ ಮೆಟ್ರೋಗಾಗಿ ರಾಜ್ಯಕ್ಕೆ ಒಂದು ತಾಂತ್ರಿಕ ಸಂಸ್ಥೆ ಅಗತ್ಯವಿದೆ. ಇದರಿಂದ ಭಾರತದಲ್ಲಿರುವ ಎಲ್ಲಾ ಮೆಟ್ರೋ ನಗರಗಳಿಗೂ ನೆರವಾಗಲಿದೆ. ಮೆಟ್ರೋ ಯೋಜನೆಗಳನ್ನು ಈ ತಾಂತ್ರಿಕ ಸಮಿತಿ ಶಿಫಾರಸ್ಸಿನ ಅನುಸಾರ ಅನುಮತಿ ನೀಡಬಹುದು. ಇದರಿಂದ ಯೋಜನೆಗೆ ಅನುಮತಿಗೆ ವೇಗ ಸಿಗಲಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+