Pink Line: ಮೆಟ್ರೋ ನಿಲ್ದಾಣಕ್ಕೆ 'ಅರೇಬಿಕ್ ಕಾಲೇಜು' ಹೆಸರು ಬೇಡ: ಐತಿಹಾಸಿಕ ಗುರುತಿಗೆ ಧಕ್ಕೆ ತರದಂತೆ ಸಂಸದ ಒತ್ತಾಯ

ಬೆಂಗಳೂರು: ಉದ್ಘಾಟನೆಗೊಳ್ಳಲಿರುವ ನಮ್ಮ ಮೆಟ್ರೋ ಗುಲಾಬಿ ಮಾರ್ಗದ ನಿಲ್ದಾಣಕ್ಕೆ ಹೆಸರು ಬದಲಾವಣೆ ವಿಚಾರ ಮತ್ತಷ್ಟು ಕಾವು ಪಡೆದುಕೊಂಡಿದೆ. ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣಕ್ಕೆ 'ಅರೇಬಿಕ್ ಕಾಲೇಜು' ಹೆಸರಿಡಲು ಮತ್ತೆ ಆಕ್ಷೇಪ ವ್ಯಕ್ತವಾಗಿದೆ. ಭೌಗೋಳಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಹೊಂದಿರುವ ಪ್ರಾಚೀನ ಬಡಾವಣೆಯ ಹೆಸರೇ ಮುಂದುವರಿಸುವಂತೆ ಬಿಜೆಪಿ ಸಂಸದ ಪಿಸಿ. ಮೋಹನ್ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸರ್ಕಾರ ಈ ಮಾರ್ಗದ ಮೂರು ನಿಲ್ದಾಣಗಳಿಗೆ ಹೆಸರು ಮರು ನಾಮಕರಣ ಮಾಡಿದೆ. ಇರುವ ಹೆಸರನ್ನು ಸಂಪೂರ್ಣವಾಗಿ ಬದಲಾಯಿಸಿಲ್ಲ. ಇತ್ತೀಚೆಗೆ ವಸತಿ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಅವರು ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣಕ್ಕೆ 'ಅರೇಬಿಕ್ ಕಾಲೇಜು' ಎಂದು ಹೆಸರಿಡಲು ಸಿಎಂ ಡಿಕೆ ಶಿವಕುಮಾರ್ ಅವರಿಗೆ ವಾರದ ಹಿಂದಷ್ಟೇ ಮನವಿ ಮಾಡಿದ್ದರು. ಇದು ನೆಟ್ಟಿಗರು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

Kadugondanahalli Namma Metro Station

ಇದೀಗ ಇದೇ ವಿಚಾರವಾಗಿ ಪಿಸಿ ಮೋಹನ್ ಅವರು, ಸಚಿವರಿಗೆ ಪತ್ರ ಬರೆದಿದ್ದು, ಪಿಂಕ್ ಲೈನ್ ನ ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣಕ್ಕೆ 'ಕಾಡುಗೊಂಡನಹಳ್ಳಿ ಮೆಟ್ರೋ' ಎಂಬ ಹೆಸರನ್ನೇ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.

ನಮ್ಮ ಮೆಟ್ರೋದ ಗುಲಾಬಿ ಮಾರ್ಗದಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೋ ನಿಲ್ದಾಣಕ್ಕೆ ಈಗಾಗಲೇ ಸೂಚಿಸಿರುವ 'ಕಾಡುಗೊಂಡನಹಳ್ಳಿ ಮೆಟ್ರೋ' ಎಂಬ ಹೆಸರೇ ಸೂಕ್ತವಾಗಿದೆ. ಕಾಡುಗೊಂಡನಹಳ್ಳಿಯು ತನ್ನದೇ ಆದ ಐತಿಹಾಸಿಕ, ಭೌಗೋಳಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಹೊಂದಿರುವ ಪ್ರಾಚೀನ ಬಡಾವಣೆಯಾಗಿದೆ. ಈ ಪ್ರದೇಶದ ದೀರ್ಘಕಾಲದ ಸ್ಥಳೀಯ ಗುರುತನ್ನು ಪ್ರತಿಬಿಂಬಿಸುವಂತೆ ಮೆಟ್ರೋ ನಿಲ್ದಾಣಕ್ಕೆ 'ಕಾಡುಗೊಂಡನಹಳ್ಳಿ ಮೆಟ್ರೋ' ಎಂಬ ಹೆಸರನ್ನು ನೀಡುವುದು ಹೆಚ್ಚು ಸೂಕ್ತ ಮತ್ತು ಸಮಂಜಸವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

'ಅರೇಬಿಕ್ ಕಾಲೇಜು' ಹೆಸರಿಗೆ ಮನ್ನಣೆ ಬೇಡ

ಸಂಸದರು ತಮ್ಮ ಪತ್ರದಲ್ಲಿ ಜಮೀರ್ ಅಹ್ಮದ್ ಅವರ ಹೆಸರು ಹೇಳದೇ, ಕೆಲವು ವ್ಯಕ್ತಿಗಳು ಹಾಗೂ ಗುಂಪುಗಳು ಸದರಿ ಮೆಟ್ರೋ ನಿಲ್ದಾಣಕ್ಕೆ 'ಅರೇಬಿಕ್ ಕಾಲೇಜು' ಎಂದು ಹೆಸರಿಡುವಂತೆ ಮನವಿ ಸಲ್ಲಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇಂತಹ ಮನವಿಗಳಿಗೆ ಮನ್ನಣೆ ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ನಿರ್ದಿಷ್ಟ ಖಾಸಗಿ ಶಿಕ್ಷಣ ಸಂಸ್ಥೆಯ ಹೆಸರಿಗಿಂತ, ಈ ಪ್ರದೇಶದ ಭೌಗೋಳಿಕ ಮತ್ತು ಐತಿಹಾಸಿಕ ಗುರುತನ್ನು ಪ್ರತಿನಿಧಿಸುವ 'ಕಾಡುಗೊಂಡನಹಳ್ಳಿ ಮೆಟ್ರೋ' ಎಂಬ ಹೆಸರೇ ಸೂಕ್ತವಾಗಿದೆ. ಮೆಟ್ರೋ ನಿಲ್ದಾಣಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು, ಅವುಗಳ ಹೆಸರುಗಳು ಆಯಾ ಪ್ರದೇಶಗಳ ಇತಿಹಾಸ, ಪರಂಪರೆ ಹಾಗೂ ಭೌಗೋಳಿಕ ಅಸ್ಮಿತೆಯನ್ನು ಪ್ರತಿಬಿಂಬಿಸುವಂತಿರಬೇಕು ಎಂದು ವಿವರಿಸಿದ್ದಾರೆ.

ಆದ್ದರಿಂದ, ಗುಲಾಬಿ ಮಾರ್ಗದಲ್ಲಿ ನಿರ್ಮಾಣವಾಗುತ್ತಿರುವ ಸದರಿ ಮೆಟ್ರೋ ನಿಲ್ದಾಣಕ್ಕೆ 'ಕಾಡುಗೊಂಡನಹಳ್ಳಿ ಮೆಟ್ರೋ' ಎಂಬ ಹೆಸರನ್ನೇ ಮುಂದುವರಿಸಬೇಕು. ಬೇರೆ ಯಾವುದೇ ಹೆಸರನ್ನು ಪರಿಗಣಿಸಬಾರದು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅವರು ಕೃಷ್ಣ ಬೈರೇಗೌಡರಲ್ಲಿ ಮನವಿ ಮಾಡಿದ್ದಾರೆ.

ಕೇಂದ್ರ ಮರು ನಾಮಕರಣ ಮಾಡಿದ 3ನಿಲ್ದಾಣಗಳಿವು..

ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಗುಲಾಬಿ ಮಾರ್ಗದ 7.5ಕಿಲೋ ಮೀಟರ್ ಎಲಿವೆಟೆಡ್ ಮಾರ್ಗದಲ್ಲಿ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ 'ಸುದ್ದಗುಂಟೆಪಾಳ್ಯ', ಜೆ.ಪಿ. ನಗರ 4ನೇ ಹಂತದ ನಿಲ್ದಾಣಕ್ಕೆ ಎನ್.ಎಸ್. ಪಾಳ್ಯ ಹಾಗೂ ಐಐಎಂಬಿ ನೆಟ್ರೀ ನಿಲ್ದಾಣವನ್ನು ಬಿಳೇಕಹಳ್ಳಿ-ಐಐಎಂಬಿ ಎಂದು ಮರುನಾಮಕರಣ ಮಾಡಿ ನೆನ್ನೆ ಬುಧವಾರ ಅನುಮೋದನೆ ನೀಡಿದೆ.

ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಲೋಕಾರ್ಪಣೆ

ನವೆಂಬರ್ 13ರಂದು ಶುಕ್ರವಾರ ಪಿಂಕ್ ಲೈನ್ ಮಾರ್ಗವನ್ನು ಐಐಎಂಬಿ ನಿಲ್ದಾಣದಲ್ಲಿ ಉದ್ಘಾಟಿಸಲಿದ್ದಾರೆ. ಅಲ್ಲಿಂದ ಅವರು ಅದೇ ಪಿಂಕ್ ಲೈನ್ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ. ನಂತರ ನವೆಂಬರ್ 14ರಂದು ಸಾರ್ವಜನಿಕರಿಗೆ ಮಾರ್ಗವು ಮುಕ್ತವಾಗಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+