Metro Pink Line ಪ್ರಧಾನಿಯಿಂದ ಚಾಲನೆ: 2027ರಲ್ಲಿ 4 ಹೊಸ ಮೆಟ್ರೋ ಲೈನ್‌ಗಳ ಉದ್ಘಾಟನೆ?: ಕೃಷ್ಣ ಬೈರೇಗೌಡ

ಬೆಂಗಳೂರು: ಇದೇ ನವೆಂಬರ್ 13ರಂದು ಮೆಟ್ರೋ ಗುಲಾಬಿ ಮಾರ್ಗ (Pink Line Metro Corridor) ಪ್ರಧಾನಿ ಮೋದಿಯವರು ಲೋಕಾರ್ಪಣೆಗೊಳಿಸಲಿದ್ದಾರೆ. ಅದರೊಂದಿಗೆ ನಮ್ಮ ಮೆಟ್ರೋ ಜಾಲ 100 ಕಿಲೋ ಮೀಟರ್ ಜಾಲ ದಾಟಲಿದೆ ಎಂದಿರುವ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮುಂದಿನ ಒಂದೂವರೆ ವರ್ಷದಲ್ಲಿ ಇತರ 4 ಹೊಸ ಮೆಟ್ರೋ ಮಾರ್ಗಗಳ ಉದ್ಘಾಟನೆ ಗುರಿ ಹಾಕಿಕೊಂಡಿರುವುದಾಗಿ ಮಹತ್ವದ ಮಾಹಿತಿ ನೀಡಿದ್ದಾರೆ.

ನಮ್ಮ ಮೆಟ್ರೋ ನೀಲಿ ಮಾರ್ಗದಲ್ಲಿ ಹೊಸ ಡ್ರೈವರ್ ಲೆಸ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭಿಸಿದ ಬೆನ್ನಲ್ಲೆ ಮೆಟ್ರೋ ಯೋಜನೆಗಳ ಕುರಿತು ಮಾತನಾಡಿರುವ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಮುಖ ಹೊಸ ಮಾರ್ಗಗಳನ್ನು ಮುಕ್ತಗೊಳಿಸುವ ಕುರಿತು, ಟಾರ್ಗೆಟ್ ಫಿಕ್ಸ್ ಆಗಿದ್ದರ ಬಗ್ಗೆ, ಅಧಿಕಾರಿಗಳಿಗೆ ಗಡುವು ನೀಡಿದ್ದರ ಬಗ್ಗೆ ವಿವರಿಸಿದ್ದಾರೆ.

Bengaluru Metro

ಕಾಳೇನ ಅಗ್ರಹಾರ-ತಾವರೆಕರೆ ವರೆಗಿನ 7.5 ಕಿಲೋ ಮೀಟರ್ ಮಾರ್ಗ ಸಾರ್ವಜನಿಕರಿಗೆ ಮುಕ್ತವಾಗುತ್ತಿದ್ದಂತೆ ಮೆಟ್ರೋ ಜಾಲ 100 ಕಿಲೋ ಮೀಟರ್ ದಾಟುತ್ತದೆ. ನಂತರ ಇದೇ ಗುಲಾಬಿ ಮಾರ್ಗದ ಮುಂದುವರಿದ ಸುರಂಗ ಮಾರ್ಗ (ತಾವರೆಕರೆ-ನಾಗವಾರ 13.5 ಕಿಮೀ)ಯುನ್ನು ಮುಂದಿನ 2027ರಲ್ಲಿ ತೆರೆಯಲು ಗುರಿ ಹಾಕಿಕೊಂಡಿದ್ದೇವೆ ಎಂದರು.

Bengaluru Metro: ಗುಲಾಬಿ ಮಾರ್ಗ ತೆರೆಯುವ ಮುನ್ನವೇ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ
Bengaluru Metro: ಗುಲಾಬಿ ಮಾರ್ಗ ತೆರೆಯುವ ಮುನ್ನವೇ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ

2027ರಲ್ಲಿ 4 ಹೊಸ ಮಾರ್ಗ ತೆರೆಯುವ ಗುರಿ!

ಭೂಗತ ಪಿಂಕ್ ಲೈನ್ ಮಾರ್ಗದಲ್ಲಿ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಮುಗಿದಿದೆ. ಇದರಲ್ಲಿ ಟ್ರಯಲ್ ರನ್ ಇತರ ಕಾರ್ಯಗಳು ನೆರವೇರಿಸಲಾಗುವುದು. 'ತಾವರೆಕರೆ-ನಾಗವಾರ' ವರೆಗಿನ ಮಾರ್ಗವನ್ನು 2027ರಲ್ಲಿ ತೆರೆಯಲಾಗುವುದು ಎಂದು ಹೇಳಿದರು.

ಇನ್ನೂ ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ.ಆರ್.ಪುರಂ, ಕೆ.ಆರ್.ಪುರಂ-ಹೆಬ್ಬಾಳ ಮತ್ತು ಹೆಬ್ಬಾಳ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗಿನ ನೀಲಿ ಮೆಟ್ರೋ ಮಾರ್ಗ (Namma Metro Blue Line) ಹಂತ ಹಂತವಾಗಿ ತೆರೆಯಲು ಗುರಿ ಹಾಕಿಕೊಳ್ಳಲಾಗಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಈ ಎಲ್ಲ ಮಾರ್ಗಗಳು ಪ್ರಯಾಣಿಕರಿಗೆ ಮುಕ್ತವಾಗಲಿವೆ ಎಂದರು.

ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ.ಆರ್.ಪುರಂ (19.75) ಕಿಲೋ ಮಿಟರ್ ನೀಲಿ ಮಾರ್ಗವು ಮುಂದಿನ ವರ್ಷ (2027ರ ಮಧ್ಯಭಾಗ) ಕಾರ್ಯರೂಪಕ್ಕೆ ಬರಲಿದೆ. ಇನ್ನು ಕೆ.ಆರ್.ಪುರಂನಿಂದ -ಹೆಬ್ಬಾಳ ಮತ್ತು ಹೆಬ್ಬಾಳದಿಂದ ಏರ್ ಪೋರ್ಟ್ ವರೆಗಿನ ಮಾರ್ಗ ಪೈಕಿ ಹೆಬ್ಬಾಳ-ಏರ್ ಪೋರ್ಟ್ ಲೈನ್ ತ್ವರಿತವಾಗಿ ಕಾರ್ಯಚರಣೆಗೆ ತರಲು ಸಿದ್ಧತೆ ನಡೆಸಿದ್ದೇವೆ. ಆದರೆ ಹೆಬ್ಬಾಳ-ಕೆ.ಆರ್.ಪುರಂ ನಡುವೆ ಒಂದಷ್ಟು ಸವಾಲುಗಳು ಎದುರಾಗಿವೆ. ಹೀಗಾಗಿ ಈ ಅಲ್ಪ ದೂರದ ಮಾರ್ಗದಲ್ಲಿ ಕಾರ್ಯಾಚರಣೆ ಅಷ್ಟು ಸುಲಭವಲ್ಲ ಎಂದು ವಿವರಿಸಿದ್ದಾರೆ.

Pink Line Metro: ನಿರೀಕ್ಷೆಗೂ ಮೊದಲೇ ಪಿಂಕ್ ಲೈನ್ ಓಪನ್! ನ.13ಕ್ಕೆ ಪ್ರಧಾನಿ ಮೋದಿ ಚಾಲನೆ
Pink Line Metro: ನಿರೀಕ್ಷೆಗೂ ಮೊದಲೇ ಪಿಂಕ್ ಲೈನ್ ಓಪನ್! ನ.13ಕ್ಕೆ ಪ್ರಧಾನಿ ಮೋದಿ ಚಾಲನೆ

59 ಕಿಮೀ ನೀಲಿ ಮಾರ್ಗ ಸಂಪೂರ್ಣ ಓಪನ್!

ಕೆ.ಆರ್.ಪುರಂ ಹೆಬ್ಬಾಳ ಮಾರ್ಗವಾಗಿ ಏರ್‍ಪೋರ್ಟ್‌ವರೆಗೆ ಒಟ್ಟು 38.4 ಕಿಲೋ ಮೀಟರ್ ಉದ್ದವಿದೆ. ಸೆಂಟ್ರಲ್ ಸಿಲ್ಕ್‌ಬೋರ್ಡ್‌ನಿಂದ ಒಟ್ಟಾರೆ 59 ಕಿಲೋ ಮೀಟರ್ ನೀಲಿ ಮಾರ್ಗ ತೆರೆಯಲು ಸವಾಲಿನ ಗುರಿ ಹಾಕಿಕೊಂಡಿದ್ದೇವೆ ಎಂದು ಖಚಿತಪಡಿಸಿದ್ದಾರೆ.

ಎಲ್ಲವು ಅಂದುಕೊಂಡಂತಾದರೆ ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ.ಆರ್.ಪುರಂವರೆಗಿನ ಹೊರ ವರ್ತುಲ ರಸ್ತೆ (ORR) ಸಂಚಾರ ದಟ್ಟಣೆ ನೀಗಲು ಇನ್ನೂ ಕೆಲವೇ ತಿಂಗಳುಗಳ ಕಾಲ ಕಾಯಬೇಕಿದೆ. ಹೆಬ್ಬಾಳ-ಸಿಲ್ಕ್ ಬೋರ್ಡ್ ನಡುವೆ ಸಾಕಷ್ಟು ದಟ್ಟಣೆ, ಜಾಗ ವಿಚಾರ, ಅಲ್ಲದೇ ಹೆಬ್ಬಾಳದ ಬಿಎಂಟಿಸಿ, ರೈಲು ಮಾರ್ಗ, ನಿಲ್ದಾಣಗಳು ಬರುವುದರಿಂದ ಅಲ್ಲಿ ಕಾಮಗಾರಿ ಪೂರ್ಣಗೊಳಿಸುವುದು ಸವಾಲಾಗಿದೆ. ಆ ಸಮಸ್ಯೆಗಳನ್ನು ಮೀರಿ ಯೋಜನೆ ಪೂರ್ಣಗೊಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+