Adani: ಬಿಹಾರದ ಮೆಗಾ ವಿದ್ಯುತ್ ಪ್ರಸರಣ ಯೋಜನೆ ಪಡೆದ ಅದಾನಿ ಎನರ್ಜಿ ಸೊಲ್ಯೂಷನ್ಸ್! ₹500 ಕೋಟಿ ಆದಾಯ ನಿರೀಕ್ಷೆ

ಬಿಹಾರದಲ್ಲಿ ಬೃಹತ್ ವಿದ್ಯುತ್ ಪ್ರಸರಣ ಯೋಜನೆ ಗೆದ್ದ ಅದಾನಿ ಎನರ್ಜಿ ಸೊಲ್ಯೂಷನ್ಸ್
ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ (AESL) ಬಿಹಾರದಲ್ಲಿ ಪೀರ್‌ಪೈಂತಿ ಅಲ್ಟ್ರಾ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಪ್ಲಾಂಟ್‌ನಿಂದ 2,400 ಮೆಗಾವ್ಯಾಟ್ ವಿದ್ಯುತ್ ಅನ್ನು ಸ್ಥಳಾಂತರಿಸಲು ಯೋಜನೆ ಪಡೆದಿದ್ದಾರೆ. ರಾಜ್ಯದ ಪ್ರಮುಖ ವಿದ್ಯುತ್ ಪ್ರಸರಣ ಯೋಜನೆ ಇದಾಗಿದೆ.

ಅದಾನಿ ಗ್ರೂಪ್‌ನ ಪ್ರಮುಖ ವಿಭಾಗವಾದ ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ (AESL) ಬಿಹಾರದಲ್ಲಿ ಬೃಹತ್ ವಿದ್ಯುತ್ ಪ್ರಸರಣ ಯೋಜನೆಗೆ ಕೈ ಹಾಕಿದೆ. ಪೀರ್‌ಪೈಂತಿ ಅಲ್ಟ್ರಾ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಪ್ಲಾಂಟ್‌ನಿಂದ ಉತ್ಪಾದನೆಯಾಗುವ 2,400 ಮೆಗಾವಾಟ್ ವಿದ್ಯುತ್ ಅನ್ನು ಯಶಸ್ವಿಯಾಗಿ ರವಾನಿಸಲು ಈ ಯೋಜನೆ ನಿರ್ಣಾಯಕವಾಗಿದೆ. ಸುಂಕ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ (TBCB) ಪ್ರಕ್ರಿಯೆಯ ಮೂಲಕ ಈ ಯೋಜನೆಯನ್ನು ಧಕ್ಕಿಸಿಕೊಂಡಿದೆ.ಕಾಮಗಾರಿ ಪೂರ್ಣಗೊಂಡ ನಂತರ ಕಂಪನಿಗೆ ವಾರ್ಷಿಕ ಸುಮಾರು 500 ಕೋಟಿ ರೂಪಾಯಿ ಆದಾಯ ದೊರೆಯುವ ಸಾಧ್ಯತೆ ಇದೆ.

Adani Energy Solutions

2028ಕ್ಕೆ ಕಾಮಗಾರಿ ಪೂರ್ಣ ಗುರಿ

ಈ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಕ್ರಮಶಿಲಾ ಪವರ್ ಟ್ರಾನ್ಸ್‌ಮಿಷನ್ ಲಿಮಿಟೆಡ್ ಎಂಬ ವಿಶೇಷ ಉದ್ದೇಶದ ವಾಹನವನ್ನು ರೂಪಿಸಲಾಗಿದೆ. ಕಂಪನಿಯು 2028ರ ಕೊನೆಯ ತ್ರೈಮಾಸಿಕದ ವೇಳೆಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಅದಾನಿ ಗ್ರೂಪ್‌ ಕಚ್ ಕಾಪರ್‌ಗೆ ಮತ್ತೊಂದು ಗರಿ: ವೆರಾಮಾರ್ಕ್ ಮಾನ್ಯತೆ ಪಡೆದ ಭಾರತದ ಮೊದಲ ತಾಮ್ರ ಉತ್ಪಾದಕ ಕಂಪನಿ
ಅದಾನಿ ಗ್ರೂಪ್‌ ಕಚ್ ಕಾಪರ್‌ಗೆ ಮತ್ತೊಂದು ಗರಿ: ವೆರಾಮಾರ್ಕ್ ಮಾನ್ಯತೆ ಪಡೆದ ಭಾರತದ ಮೊದಲ ತಾಮ್ರ ಉತ್ಪಾದಕ ಕಂಪನಿ

ನೂತನ ವಿದ್ಯುತ್ ಸ್ಥಾವರದಿಂದ ವಿದ್ಯುತ್ ರವಾನಿಸುವುದರ ಜೊತೆಗೆ, ಬಿಹಾರದ ಒಟ್ಟು ವಿದ್ಯುತ್ ಪ್ರಸರಣ ಜಾಲವನ್ನು ಬಲಪಡಿಸಲು ಮತ್ತು ರಾಜ್ಯಾದ್ಯಂತ ತಡೆರಹಿತ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಲು ಈ ಯೋಜನೆ ನೆರವಾಗಲಿದೆ.

ಯೋಜನೆಯ ತಾಂತ್ರಿಕತೆ, ಸಾಮರ್ಥ್ಯ ಹೆಚ್ಚಳ

ಯೋಜನೆಯ ಭಾಗವಾಗಿ ಒಟ್ಟು 881 ಸರ್ಕ್ಯೂಟ್ ಕಿಲೋಮೀಟರ್ ಪ್ರಸರಣ ಮಾರ್ಗಗಳು ಹಾಗೂ 3,160 ಎಂವಿಎ ಪರಿವರ್ತನಾ ಸಾಮರ್ಥ್ಯ ಜಾಲಕ್ಕೆ ಸೇರ್ಪಡೆಗೊಳಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಜಾಂಜಾರ್‌ಪುರ, ಬೆಥೌಲಿ ಮತ್ತು ಬೆಗುಸರಾಯ್‌ಗಳಲ್ಲಿ ನಾಲ್ಕು ಗ್ಯಾಸ್ ಇನ್ಸುಲೇಟೆಡ್ ಸಬ್‌ಸ್ಟೇಷನ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಪ್ರಸರಣ ಜಾಲವು ಪೀರ್‌ಪೈಂತಿ, ಜಾಂಜಾರ್‌ಪುರ, ಬೆಗುಸರಾಯ್ ಮತ್ತು ಭಕ್ತಿಯಾರ್‌ಪುರಗಳನ್ನು ಸಂಪರ್ಕಿಸುವ 400 ಕೆವಿ ಹಾಗೂ 220 ಕೆವಿ ಡಬಲ್ ಸರ್ಕ್ಯೂಟ್ ಮಾರ್ಗಗಳನ್ನು ಒಳಗೊಂಡಿರಲಿದೆ.

ಪರಿವರ್ತನಾ ಸಾಮರ್ಥ್ಯ ಏರಿಕೆ

ಈ ಹೊಸ ಯೋಜನೆಯ ಸೇರ್ಪಡೆಯೊಂದಿಗೆ ಅದಾನಿ ಎನರ್ಜಿ ಸೊಲ್ಯೂಷನ್ಸ್‌ನ ಒಟ್ಟು ಪ್ರಸರಣ ಜಾಲವು 30,683 ಸರ್ಕ್ಯೂಟ್ ಕಿಲೋ ಮೀಟರ್‌ಗೆ ಹಾಗೂ ಒಟ್ಟು ಪರಿವರ್ತನಾ ಸಾಮರ್ಥ್ಯವು 1,46,585 ಎಂವಿಎಗೆ ಏರಿಕೆಯಾಗಲಿದೆ. ಇದರೊಂದಿಗೆ ಕಂಪನಿಯ ಪ್ರಸರಣ ವಿಭಾಗದ ಒಟ್ಟು ಬಂಡವಾಳ ವೆಚ್ಚದ ಯೋಜನೆಗಳ ಮೌಲ್ಯ ಸುಮಾರು 91,500 ಕೋಟಿ ರೂಪಾಯಿಗೆ ತಲುಪಿದೆ.

ಅದಾನಿ ವಿಂಡ್‌ನಿಂದ ಹೊಸ ಮೈಲಿಗಲ್ಲು: ಭಾರತದ ಅತಿ ಉದ್ದದ 91.2 ಮೀಟರ್ ವಿಂಡ್ ಟರ್ಬೈನ್ ಬ್ಲೇಡ್ ಉತ್ಪಾದನೆ ಶುರು
ಅದಾನಿ ವಿಂಡ್‌ನಿಂದ ಹೊಸ ಮೈಲಿಗಲ್ಲು: ಭಾರತದ ಅತಿ ಉದ್ದದ 91.2 ಮೀಟರ್ ವಿಂಡ್ ಟರ್ಬೈನ್ ಬ್ಲೇಡ್ ಉತ್ಪಾದನೆ ಶುರು

ಬಿಹಾರದ ಯೋಜನೆ ಪಡೆದುಕೊಂಡಿದ್ದರ ಕುರಿತು ಪ್ರತಿಕ್ರಿಯಿಸಿದ ಅದಾನಿ ಎನರ್ಜಿ ಸೊಲ್ಯೂಷನ್ಸ್ ಸಿಇಒ ಕಂದರ್ಪ್ ಪಟೇಲ್ ಅವರು, ಈ ಯೋಜನೆಯು ರಾಜ್ಯದ ವಿದ್ಯುತ್ ಮೂಲಸೌಕರ್ಯಕ್ಕೆ ದೊಡ್ಡ ಬೆಂಬಲ ನೀಡಲಿದೆ ಎಂದು ಹೇಳಿದರು. ಬೆಳೆಯುತ್ತಿರುವ ವಿದ್ಯುತ್ ಬೇಡಿಕೆಯನ್ನು ಈಡೇರಿಸಲು, ಗ್ರಿಡ್ ವ್ಯವಸ್ಥೆಯ ನಂಬಿಕೆಯನ್ನು ಹೆಚ್ಚಿಸಲು ಮತ್ತು ದೇಶದ ದೀರ್ಘಕಾಲೀನ ಇಂಧನ ಭದ್ರತೆಗೆ ಕೊಡುಗೆ ನೀಡಲು ಈ ಪ್ರಸರಣ ಜಾಲವು ಅತ್ಯಂತ ಅಗತ್ಯವಾಗಿದೆ ಎಂದು ಅವರು ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+