ಅದಾನಿ ಗ್ರೂಪ್ ಕಚ್ ಕಾಪರ್‌ಗೆ ಮತ್ತೊಂದು ಗರಿ: ವೆರಾಮಾರ್ಕ್ ಮಾನ್ಯತೆ ಪಡೆದ ಭಾರತದ ಮೊದಲ ತಾಮ್ರ ಉತ್ಪಾದಕ ಕಂಪನಿ
ನವದೆಹಲಿ: ಭಾರತದ ಪ್ರಮುಖ ಉದ್ಯಮ ಸಮೂಹವಾದ ಅದಾನಿ ಗ್ರೂಪ್‌ನ ಅಂಗಸಂಸ್ಥೆ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ಗೆ ಸೇರಿದ ಕಚ್ ಕಾಪರ್ ಲಿಮಿಟೆಡ್(KCL) ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಜವಾಬ್ದಾರಿಯುತ ತಾಮ್ರ ಉತ್ಪಾದನೆಗಾಗಿ ನೀಡಲಾಗುವ ಜಾಗತಿಕ ಮಟ್ಟದ ಪ್ರತಿಷ್ಠಿತ ವೆರಾಮಾರ್ಕ್ ಅಶ್ಯೂರೆನ್ಸ್, ಅಂದರೆ ಈ ಹಿಂದಿನ 'ಕಾಪರ್ ಮಾರ್ಕ್'ಮಾನ್ಯತೆಯನ್ನ ಕಚ್ ಕಾಪರ್ ಪಡೆದುಕೊಂಡಿದೆ.
ಈ ಮೂಲಕ ಜಾಗತಿಕ ಚೌಕಟ್ಟಿನಡಿ ಈ ಅತ್ಯುನ್ನತ ಮಾನ್ಯತೆ ಪಡೆದ ಭಾರತದ ಮೊಟ್ಟಮೊದಲ ತಾಮ್ರ ಉತ್ಪಾದಕ ಕಂಪನಿ ಎಂಬ ಹೆಗ್ಗಳಿಕೆಗೆ ಕಚ್ ಕಾಪರ್ ಪಾತ್ರವಾಗಿದೆ. ಗುಜರಾತ್‌ನ ಮುಂದ್ರಾದಲ್ಲಿರುವ ಈ ಘಟಕವು ವಿಶ್ವದ ಅತಿ ದೊಡ್ಡ ಸಿಂಗಲ್-ಲೊಕೇಶನ್ ತಾಮ್ರ ಕರಗಿಸುವ ಘಟಕಗಳಲ್ಲಿ ಒಂದಾಗಿದೆ.

ಜಾಗತಿಕ ವೆರಾಮಾರ್ಕ್ ಮಾನ್ಯತೆ ಎಂದರೆ ಏನು?
ಹಿಂದೆ ಕಾಪರ್ ಮಾರ್ಕ್ ಎಂದು ಕರೆಯಲ್ಪಡುತ್ತಿದ್ದ 'ವೆರಾಮಾರ್ಕ್' ಒಂದು ಸ್ವತಂತ್ರ ಭರವಸೆಯ ಚೌಕಟ್ಟಾಗಿದೆ. ಇದು ತಾಮ್ರ, ನಿಕಲ್ ಮತ್ತು ಝೀಂಕ್‌ಗಳ ಮೌಲ್ಯ ಸರಪಳಿಗಳಾದ್ಯಂತ ಜವಾಬ್ದಾರಿಯುತ ಅಭ್ಯಾಸಗಳನ್ನ ಉತ್ತೇಜಿಸುತ್ತದೆ. ಯಾವುದೇ ಕಂಪನಿಯ ಪರಿಸರ, ಸಾಮಾಜಿಕ ಮತ್ತು ಆಡಳಿತ (ESG) ಕಾರ್ಯಕ್ಷಮತೆಯನ್ನ, ಸ್ವತಂತ್ರ ತರ್ಡ ಪಾರ್ಟಿ ಆಡಿಟ್ಸ್(Third-party audits) ಮೂಲಕ ಪರೀಕ್ಷಿಸಿ, ಅದರಲ್ಲಿ ಯಶಸ್ವಿಯಾದ ಘಟಕಗಳಿಗೆ ಮಾತ್ರ ಈ ಪ್ರತಿಷ್ಠಿತ ಮಾನ್ಯತೆಯನ್ನ ನೀಡಲಾಗುತ್ತದೆ.
ಕಚ್ ಕಾಪರ್ ಕಂಪನಿಯು ಈ ಕಾಪರ್ ಮಾರ್ಕ್ ಜವಾಬ್ದಾರಿಯುತ ಉತ್ಪಾದನಾ ಚೌಕಟ್ಟು ಮತ್ತು ಎಲ್ಲಾ ಮಾನದಂಡಗಳ ವಿರುದ್ಧ ಸ್ವತಂತ್ರ ಭರವಸೆಯನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಸುಸ್ಥಿರ ಉತ್ಪಾದನೆಗೆ ಬದ್ಧತೆ: ಎಂಡಿ ವಿನಯ್ ಪ್ರಕಾಶ್ ಪ್ರತಿಕ್ರಿಯೆ
ಈ ಐತಿಹಾಸಿಕ ಸಾಧನೆಯ ಕುರಿತು ಪ್ರತಿಕ್ರಿಯಿಸಿರುವ ಅದಾನಿ ನ್ಯಾಚುರಲ್ ರಿಸೋರ್ಸಸ್‌ನ ಸಿಇಒ ಮತ್ತು ಕಚ್ ಕಾಪರ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ವಿನಯ್ ಪ್ರಕಾಶ್, "ಭಾರತೀಯ ಉತ್ಪಾದಕರೊಬ್ಬರು ಮೊದಲ ಬಾರಿಗೆ ಕಾಪರ್ ಮಾರ್ಕ್ ಸಾಧಿಸಿರುವುದು, ಸುಸ್ಥಿರ ಮತ್ತು ಜವಾಬ್ದಾರಿಯುತ ಉತ್ಪಾದನೆಯೆಡೆಗಿನ ನಮ್ಮ ಬದ್ಧತೆಯನ್ನು ಎತ್ತಿ ತೋರಿಸುತ್ತದೆ" ಎಂದಿದ್ದಾರೆ. "ಜಾಗತಿಕ ವಿದ್ಯುದ್ದೀಕರಣ (Global electrification), ನವೀಕರಿಸಬಹುದಾದ ಇಂಧನ, ಆಧುನಿಕ ಚಲನಶೀಲತೆ ಮತ್ತು ಮೂಲಸೌಕರ್ಯಗಳಿಗೆ ತಾಮ್ರವು ಹೆಚ್ಚು ಪ್ರಮುಖವಾಗುತ್ತಿದೆ. ಹೀಗಾಗಿ, ಭವಿಷ್ಯದ ಭಾರತದ ಶಕ್ತಿಗಾಗಿ ಅಗತ್ಯವಿರುವ ಉತ್ತಮ ಗುಣಮಟ್ಟದ ಲೋಹವನ್ನ ಪೂರೈಸಲು ಕಚ್ ಕಾಪರ್ ಬದ್ಧವಾಗಿದೆ" ಎಂದು ಅವರು ಪರಿಸರ ಮತ್ತು ಸಾಮಾಜಿಕ ಉಸ್ತುವಾರಿಯ ಜಾಗತಿಕ ಮಾನದಂಡಗಳ ಪಾಲನೆಯನ್ನ ಒತ್ತಿ ಹೇಳಿದರು. ಈ ಮೈಲಿಗಲ್ಲು ಕಚ್ ಕಾಪರ್ ಅನ್ನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟು ಜಾಗತಿಕ ಉತ್ಪಾದಕರ ಸಾಲಿನಲ್ಲಿ ನಿಲ್ಲಿಸಿದೆ.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ
ಈ ಪ್ರಮಾಣೀಕರಣವು ಜವಾಬ್ದಾರಿಯುತ ಉತ್ಪಾದನೆಗೆ ಸಂಬಂಧಿಸಿದ ಪ್ರಮುಖ ಅಂತರಾಷ್ಟ್ರೀಯ ಮಾನದಂಡಗಳೊಂದಿಗೆ ಕಂಪನಿಯು ಹೊಂದಾಣಿಕೆಯಾಗಿರುವುದನ್ನ ತೋರಿಸುತ್ತದೆ. ಇದು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನ, ಅದರಲ್ಲೂ ವಿಶೇಷವಾಗಿ ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆಯ ಕುರಿತಾದ ಎಸ್‌ಡಿಜಿ 12 (SDG 12) ಅನ್ನು ಮುನ್ನಡೆಸುತ್ತದೆ.
ಬಿಎಚ್‌ಪಿ, ರಿಯೊ ಟಿಂಟೊ, ಫ್ರೀಪೋರ್ಟ್-ಮೆಕ್‌ಮೊರಾನ್, ಆಂಟೊಫಗಾಸ್ಟಾ ಮತ್ತು ಔರುಬಿಸ್‌ನಂತಹ ಪ್ರಮುಖ ಜಾಗತಿಕ ಗಣಿಗಾರಿಕೆ ಮತ್ತು ಲೋಹದ ಕಂಪನಿಗಳು ಈ ಚೌಕಟ್ಟನ್ನು ಅಳವಡಿಸಿಕೊಂಡಿವೆ. ಇದು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಿರಂತರ ಸುಧಾರಣೆಯನ್ನ ಉತ್ತೇಜಿಸುತ್ತದೆ.
ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹ ಪೂರೈಕೆದಾರನಾಗಿ ಕಚ್ ಕಾಪರ್
ಇಂದು ಜಗತ್ತಿನಾದ್ಯಂತ ನವೀಕರಿಸಬಹುದಾದ ಇಂಧನ , ಎಲೆಕ್ಟ್ರಿಕ್ ವಾಹನಗಳ ಬಳಕೆ, ವಿದ್ಯುತ್ ಪ್ರಸರಣ, ಡಿಜಿಟಲ್ ಮೂಲಸೌಕರ್ಯ ಮತ್ತು ಸುಧಾರಿತ ಉತ್ಪಾದನೆಯ ತ್ವರಿತ ವಿಸ್ತರಣೆಯಿಂದಾಗಿ ತಾಮ್ರದ ಬೇಡಿಕೆ ಭಾರಿ ವೇಗ ಪಡೆದುಕೊಂಡಿದೆ. ಪ್ರಪಂಚದಾದ್ಯಂತ ಗ್ರಾಹಕರು, ಹೂಡಿಕೆದಾರರು ಮತ್ತು ಪೂರೈಕೆ ಸರಪಳಿ ಪಾಲುದಾರರು ಜವಾಬ್ದಾರಿಯುತ ಹಾಗೂ ಸುಸ್ಥಿರ ಉತ್ಪಾದನಾ ಮಾನದಂಡಗಳನ್ನ ಪೂರೈಸುವ ತಯಾರಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ಈ ಜಾಗತಿಕ ಮಾನ್ಯತೆಯು ಕಚ್ ಕಾಪರ್ ಕಂಪನಿಯನ್ನ ಜವಾಬ್ದಾರಿಯುತವಾಗಿ ಉತ್ಪಾದಿಸುವ ತಾಮ್ರದ ವಿಶ್ವಾಸಾರ್ಹ ಪೂರೈಕೆದಾರನನ್ನಾಗಿ ಸ್ಥಾಪಿಸಿದೆ.


Click it and Unblock the Notifications
