Pink Line Metro: ನಿರೀಕ್ಷೆಗೂ ಮೊದಲೇ ಪಿಂಕ್ ಲೈನ್ ಓಪನ್! ನ.13ಕ್ಕೆ ಪ್ರಧಾನಿ ಮೋದಿ ಚಾಲನೆ

ಬೆಂಗಳೂರು: ರಾಜಧಾನಿ ಜನರ ಬಹುನಿರೀಕ್ಷೆಯ ಮತ್ತು ಕೆಲವು ಗಡುವು ಮೀರಿದ ನಮ್ಮ ಮೆಟ್ರೋ ಗುಲಾಬಿ ಮಾರ್ಗವು ನಿರೀಕ್ಷಿತಕ್ಕೂ ಎರಡು ದಿನ ಮುನ್ನವೇ ಲೋಕಾರ್ಪಣೆ ಗೊಳ್ಳಲಿದೆ. ನವೆಂಬರ್ 13ರಂದು ಕಾಳೇನ ಅಗ್ರಹಾರ-ತಾವರೆಕೆರೆ ವರೆಗಿನ 7.5 ಕಿಲೋ ಮೀಟರ್ ಉದ್ದದ ಎತ್ತರಿಸಿದ (ಎಲೆವೆಟೆಡ್ ಕಾರಿಡಾರ್) ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿದ್ದಾರೆ.

ದಸರಾ ಇಲ್ಲವೇ ನೆವೆಂಬರ್ 1ರಂದು ಈ ಮಾರ್ಗ ತೆರೆಯಲಾಗುತ್ತದೆ ಎಂದು ಊಹಿಸಲಾಗಿತ್ತು. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಡಿಕೆ ಶಿವಕುಮಾರ್ ಅವರ ಪ್ರಕಾರ ನವೆಂಬರ್ 15ರಂದು ಉದ್ಘಾಟನೆಗೆ ಮಹೂರ್ತ ಫಿಕ್ಸ್ ಆಗಿತ್ತು.

Namma Metro Pink Line

ಆದರೆ ಪ್ರಧಾನಿ ನರೇಂದ್ರ ಮೋದಿಯವರ ಕರ್ನಾಟಕದ ಪ್ರವಾಸಕ್ಕೆ ಅನುಗುಣವಾಗಿ ಎರಡು ದಿನ ಮೊದಲೇ ಅಂದರೆ ನವೆಂಬರ್ 13ರಂದು ಲೋಕಾರ್ಪಣೆಗೆ ನಿರ್ಧರಿಸಲಾಗಿದೆ. ಈ ಕುರಿತು ತೇಜಸ್ವಿ ಸೂರ್ಯ ಅವರು, 'ನವೆಂಬರ್ 13 ಪಿಂಕ್ ಲೈನ್' ಎಂದು ಹಾರ್ಟ್ ಎಮೋಜಿ ಹಾಕಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಉದ್ಘಾಟನೆ ಅಧಿಕೃತಗೊಂಡಿದೆ.

ಪಿಂಕ್ ಲೈನ್ ಮಾರ್ಗವು ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ.ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕರೆ ವರೆಗೆ ಒಟ್ಟು ಆರು ನಿಲ್ದಾಣಗಳ ವ್ಯಾಪ್ತಿಯಲ್ಲಿ ಸೇವೆ ಒದಗಿಸಲಿದೆ. ಈ ಭಾಗದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಕೊಡುಗೆ ನೀಡಲಿದೆ.

ಬಿಎಂಟಿಸಿ ಮೆಟ್ರೋ ಫೀಡರ್ ಬಸ್ ಆರಂಭ

ಇನ್ನೂ ಈ ನೂತನ ಮಾರ್ಗಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಏಳು ಮೀಟರ್ ಉದ್ದದ ಕಾಂಪ್ಯಾಕ್ಟ್ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ. ಅದಕ್ಕಾಗಿ ಐದು ಮಾರ್ಗಗಳನ್ನು ಫೈನಲ್ ಮಾಡಿದೆ. ಪ್ರಯಾಣಿಕರಿಗೆ ಅನುಕೂಲವಾಗುವ ನಿಲುಗಡೆ ನಿಲ್ದಾಣಗಳನ್ನು ಅಂತಿಮಗೊಳಿಸಿದೆ. ಪ್ರತಿ ಹತ್ತು ನಿಮಿಷಕ್ಕೆ ಒಂದಂತೆ ಈ ಬಸ್‌ಗಳು ಓಡಾಡಲಿವೆ ಎಂದು ಬಿಎಂಟಿಸಿ ಮತ್ತು ಬಿಎಂಆರ್ ಸಿಎಲ್ ಜಂಟಿಯಾಗಿ ಇತ್ತೀಚೆಗೆ ಮಾಹಿತಿ ನೀಡಿದ್ದವು.

2027ಕ್ಕೆ ಪಿಂಕ್ ಲೈನ್ ಫುಲ್ ಓಪನ್

ಒಟ್ಟು 21 ಕಿಲೋ ಮೀಟರ್ ಉದ್ದದ ಮೆಟ್ರೋ ಗುಲಾಬಿ ಮಾರ್ಗದಲ್ಲಿ 7.5 ಕಿಲೋ ಮೀಟರ್ ಇದ ಎಲಿವೆಟೆಡ್ ಕಾರಿಡಾರ್ ಆಗಿದ್ದು, ಮೇ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ತೆರೆಯಲಾಗುವುದು ಎಂದು ಪದೇ ಪದೇ ಗಡುವು ಮೀರಿದ್ದು, ಇದೀಗ ನವೆಂಬರ್ 13ಕ್ಕೆ ಫಿಕ್ಸ್ ಆಗಿದೆ.

ಉಳಿದ 13.5 ಕಿಲೋ ಮೀಟರ್ ಉದ್ದದ ಭೂಗತ ಗುಲಾಬಿ (ತಾವರೆಕರೆ-ನಾಗರವಾರ) ಮಾರ್ಗವನ್ನು ಇದೇ ಡಿಸೆಂಬರ್ 2026ಕ್ಕೆ ತೆರೆಯುವುದಿತ್ತು. ಕಾರಣಾಂತರಗಳಿಂದ 2027 ಮಾರ್ಚ್ ಹೊತ್ತಿಗೆ ತೆರೆಯಲು ಪ್ಲ್ಯಾನ್ ಮಾಡಲಾಗಿದೆ ಎಂದು ಬಿಎಂಆರ್ ಸಿಎಲ್ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+