ದಸರಾಗೆ ರೈಲಿನಲ್ಲಿ ತೆರಳಿದ ಕೃಷ್ಣ ಬೈರೇಗೌಡ; ಸಚಿವರ ಸರಳತೆಗೆ ಬಿಜೆಪಿ ನಾಯಕನ ಮೆಚ್ಚುಗೆ!
ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಸರಳ ರಾಜಕಾರಣಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮೈಸೂರಿನ ದಸರಾ ಹಬ್ಬದಲ್ಲಿ ಪಾಲ್ಗೊಳ್ಳಲು ಅವರು ಮಂಗಳವಾರ ಸಾಂಸ್ಕೃತಿಕ ನಗರಿ ಮೈಸೂರಿನತ್ತ ತೆರಳಲಿದ್ದಾರೆ. ಸಾರ್ವಜನಿಕ ಸಾರಿಗೆ ಉತ್ತೇಜಿಸಿದ ಸಚಿವರ ಸರಳ ನಡೆಗೆ ಬಿಜೆಪಿ ನಾಯಕರೇ ' ಸ್ಪೂರ್ತಿದಾಯಕ ರೋಲ್ ಮಾಡೆಲ್..' ಎಂದು ಶ್ಲಾಘಿಸಿದ್ದಾರೆ.
ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಬಳಿಕ ನಗರ ಅಭಿವೃದ್ಧಿ, ಒತ್ತುವರಿ ಸೇರಿದಂತೆ ಒಂದಷ್ಟು ಕೆಲಸಗಳನ್ನು ಓಡಾಡಿಕೊಂಡೆ ಮಾಡಿದ್ದರು. ಅವರ ಶ್ರಮಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಅದೇ ಸಚಿವರು ದಸರಾದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಇತರ ರಾಜಕಾರಣಿಗಳಿಗೂ ಮಾದರಿಯಾಗಿದ್ದಾರೆ. ಅವರ ಈ ಸರಳ ನಡೆ, ಸಾರ್ವಜನಿಕ ಸಾರಿಗೆ ಉತ್ತೇಜನ ಕಂಡು ಬಿಜೆಪಿ ನಾಯಕ, ಬೆಂಗಳೂರಿನ ಮಾಜಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರು ಹೊಗಳಿದ್ದಾರೆ.

ಸಚಿವರು ತಾವು ಮೈಸೂರಿಗೆ ತೆರಳುವ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಭಾಸ್ಕರ್ ರಾವ್ ಅವರು, 'ನೀವು ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುತ್ತಿರುವುದು ಅದ್ಭುತವಾಗಿದೆ... ಸ್ಪೂರ್ತಿದಾಯಕ ರೋಲ್ ಮಾಡೆಲ್..' ಎಂದು ಕಾಮೆಂಟ್ ಹಾಕಿದ್ದಾರೆ. ಈ ಮೂಲಕ ರಾಜಕಾರಣಿಯೊಬ್ಬರು ಸರಳತೆ ಇತರರಿಗೆ ಮಾದರಿಯಾಗುತ್ತದೆ. ಅದನ್ನು ಇನ್ನಷ್ಟು ಉತ್ತೇಜಿಸಬೇಕು, ಅಂತಹ ನಡೆಯನ್ನು ಪ್ರಶಂಸಿಸಿದರೆ ಸಾರ್ವಜನಿಕರಿಗೆ ಅದು ಸ್ಪೂರ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ಭಾಸ್ಕರ್ ರಾವ್ ಶ್ಲಾಘಿಸಿದ್ದಾರೆ.
ಕೃಷ್ಣ ಬೈರೇಗೌಡ ಪೋಸ್ ನಲ್ಲೇನಿದೆ?
ಎಕ್ಸ್ ಪೋಸ್ಟ್ ಮಾಡಿರುವ ಸಚಿವರು, 'ಮೈಸೂರು ದಸರಾ ಕೇವಲ ಒಂದು ಹಬ್ಬವಲ್ಲ; ಇದು ಕರ್ನಾಟಕದ ಶ್ರೀಮಂತ ಪರಂಪರೆ, ಸುದೀರ್ಘ ಸಂಸ್ಕೃತಿ ಮತ್ತು ನಾಡಿನ ಜನರ ಹೆಮ್ಮೆಯ ಸಂಭ್ರಮದ ಪ್ರತೀಕ' ಎಂದಿದ್ದಾರೆ.
'ಪ್ರಾಚೀನ ನಾಡಹಬ್ಬ ಮೈಸೂರು ದಸರಾದಲ್ಲಿ ಭಾಗವಹಿಸಲು ಮೈಸೂರಿನತ್ತ ಪ್ರಯಾಣಿಸುತ್ತಿದ್ದು, ಕರ್ನಾಟಕದ ಸಾಂಸ್ಕೃತಿಕ ವೈಭವ, ಸಂಪ್ರದಾಯ ಮತ್ತು ನಾಡಿನ ಏಕತೆಯನ್ನು ಸಾರುವ ಈ ಅದ್ಧೂರಿ ಆಚರಣೆಯ ಭಾಗವಾಗಿ ಸಂತಸವಾಗುತ್ತಿದೆ' ಎಂದು ರೈಲಿನ ಪ್ರಯಾಣ ಕುರಿತು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಇತರರು ಕಾಮೆಂಟ್ ಮಾಡಿದ್ದಾರೆ. ದಸರಾ ಶುಭಾಶಯ ಕೋರಿದ್ದಾರೆ.
'ಹೌದು ಸರ್ ನಿಜವಾಗಿ ನಿಮ್ಮ ಭಾಗವಹಿಸುವಿಕೆ ಮಹಾ ಹಬ್ಬಕ್ಕೆ ರಂಗು ಮತ್ತು ವೈಭವವನ್ನು ನೀಡುತ್ತದೆ ಎಂಜಾಯ್ ಮಾಡಿ ಶ್ರೀ ಕೃಷ್ಣ ಬೈರೇಗೌಡ ಅವರೇ' ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರೆ. ಎರಡನೇಯವರು, ದಸರಾ ಹಬ್ಬದ ಶುಭಾಯಶಗಳನ್ನು ತಿಳಿಸಿದ್ದಾರೆ. 'ಪ್ರಧಾನಿ ಮೋದಿಯವರನ್ನು ಟೀಕಿಸುತ್ತೀರಿ. ಆದರೆ ಅವರ ದೂರದೃಷ್ಠಿಯಲ್ಲಿ ಅಪ್‌ಗ್ರೇಡ್ ಆದ ರೈಲಿನಲ್ಲಿ ಪ್ರಯಾಣಿಸುತ್ತೀರಿ' ಎಂದು ಮೂರನೇ ಬಳಕೆದಾರರು ಕಾಲೆಳೆದಿದ್ದಾರೆ.
ಮೈಸೂರು ದಸರಾ ಕೇವಲ ಒಂದು ಹಬ್ಬವಲ್ಲ; ಇದು ಕರ್ನಾಟಕದ ಶ್ರೀಮಂತ ಪರಂಪರೆ, ಸುದೀರ್ಘ ಸಂಸ್ಕೃತಿ ಮತ್ತು ನಾಡಿನ ಜನರ ಹೆಮ್ಮೆಯ ಸಂಭ್ರಮದ ಪ್ರತೀಕ.ಐತಿಹಾಸಿಕ ನಾಡಹಬ್ಬ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಮೈಸೂರಿನತ್ತ ಪ್ರಯಾಣಿಸುತ್ತಿದ್ದು, ಕರ್ನಾಟಕದ ಸಾಂಸ್ಕೃತಿಕ ವೈಭವ, ಸಂಪ್ರದಾಯ ಮತ್ತು ನಾಡಿನ ಏಕತೆಯನ್ನು ಸಾರುವ ಈ ಅದ್ಧೂರಿ ಆಚರಣೆಯ ಭಾಗವಾಗಲು ಸಂತಸವಾಗುತ್ತಿದೆ.Mysuru Dasara is more than a festival; it is a celebration of Karnataka’s rich heritage, timeless traditions and the spirit of its people.On our way to Mysuru to be part of this historic Nada Habba, we look forward to celebrating a tradition that brings Karnataka together in all its cultural splendour and pride.#MysuruDasara #NammaKarnataka
— Krishna Byre Gowda (@krishnabgowda) October 20, 2026


Click it and Unblock the Notifications
