Bengaluru Metro: ಗುಲಾಬಿ ಮಾರ್ಗ ತೆರೆಯುವ ಮುನ್ನವೇ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ

Bengaluru Metro Pink Line Updates: ಬೆಂಗಳೂರು ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಕಾರ್ಯಾಚರಣೆ ಆರಂಭಕ್ಕೂ ಮುನ್ನ ಪ್ರಯಾಣಿಕರಿಗೆ ಶಾಕಿಂಗ್ ಸಂಗತಿಯೊಂದು ಹೊರ ಬಿದ್ದಿದೆ. ಕಡಿಮೆ ಉದ್ದದ ಕಾಳೇನ ಅಗ್ರಹಾರ-ತಾವರೆಕರೆ ವರೆಗಿನ ಎಲಿವೆಟೆಡ್ ಕಾರಿಡಾರ್ ಮಾರ್ಗದಲ್ಲಿ ಪೀಕ್ ಸಮಯದಲ್ಲೂ 8ನಿಮಿಷಗಳಿಗೆ ರೈಲು ಓಡಿಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಮೂಲಗಳು ತಿಳಿಸಿವೆ.

ಹೌದು, ನವೆಂಬರ್ 13ರಂದು ಉದ್ಘಾಟನೆಗೆ ಸಿದ್ಧಗೊಂಡಿರುವ ಬೆಂಗಳೂರು ಮಟ್ರೋ ಗುಲಾಬಿ ಮಾರ್ಗದಲ್ಲಿ ಈ ಮೊದಲು ಪೀಕ್ ಸಮಯದಲ್ಲಿ 5ನಿಮಿಷಗಳಿಗೆ ಒಂದರಂತೆ ರೈಲುಗಳ ಸೇವೆ (ಆವರ್ತನ) ಒದಗಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು. ಆದರೀಗ ಬದಲಾದ ನಿರ್ಧಾರದಲ್ಲಿ ಮೆಟ್ರೋ ರೈಲುಗಳು ಬೆಳಗ್ಗೆ ಮತ್ತು ಸಂಜೆ ಆರು ನಿಲ್ದಾಣಗಳ ಮಧ್ಯೆ 8ನಿಮಿಷಕ್ಕೆ ಒಂದರಂತೆ ಸಂಚಾರ ಮಾಡಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Namma Metro Pink Line

5 ರೈಲುಳಲ್ಲಿ ನಾಲ್ಕೇ ರೈಲು ಸಂಚಾರ!

ಹೌದು ಕಾಲೇನ ಅಗ್ರಹಾರದಿಂದ - ತಾವರೆಕರೆ ವರೆಗಿನ 7.5 ಕಿಮೀ ಮಾರ್ಗದಲ್ಲಿ ಆರು ನಿಲ್ದಾಣಗಳಲ್ಲಿ ಜನರ ಸಂಚಾರಕ್ಕೆ ಅವಕಾಶ ದೊರೆತಿದೆ. ಈ ಗುಲಾಬಿ ಮಾರ್ಗಕ್ಕಾಗಿ ಐದು ಡ್ರೈವರ್ ಲೆಸ್ ರೈಲುಗಳು ಆಗಮಿಸಿವೆ. ರೈಲುಗಳ ತಪಾಸಣೆ ಎಲ್ಲವು ಪೂರ್ಣಗೊಂಡಿದೆ. ಲೈನ್ ಉದ್ಘಾಟನೆ ಆಗುತ್ತಿದ್ದಂತೆ ನಾಲ್ಕು ರೈಲುಗಳನ್ನು ಮಾತ್ರವೇ ಸೇವೆಗೆ ಬಳಸಿಕೊಳ್ಳಲಾಗುವುದು. ಉಳಿದ ಒಂದು ರೈಲನ್ನು ತುರ್ತು ಬಳಕೆಗೆ ಇಟ್ಟುಕೊಳ್ಳುವದಾಗಿ ಬಿಎಂಆರ್ ಸಿಎಲ್ ನಿರ್ಧರಿಸಿದೆ.

ಪ್ರಯಾಣಿಕರ ಬೇಡಿಕೆ, ಸಂಚಾರ ಹೆಚ್ಚಾದಲ್ಲಿ ರೈಲುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ ರೈಲಿನ ಆವರ್ತನ ಸಮಯದಲ್ಲೂ ಬದಲಾವಣೆ ಆಗುವ ನಿರೀಕ್ಷೆ ಇದೆ. ಪೀಕ್ ಸಮಯದಲ್ಲಿ ಎಂಟು ನಿಮಿಷಗಳ ಸಂಚಾರದಿಂದ ಕೆಲವೆಡೆ ದಟ್ಟಣೆ ಉಂಟಾಗುವ ನಿರೀಕ್ಷೆ ಇದೆ.

ನವೆಂಬರ್ 14ರಿಂದ ವಾಣಿಜ್ಯ ಸಂಚಾರ

ಲಭ್ಯ ಮಾಹಿತಿ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 13ರಂದು ಬೆಂಗಳೂರಿನ ಐಐಎಂಬಿ ಸಭಾಂಗಣದಲ್ಲಿ ಬೆಳಗ್ಗೆ 7.5 ಕಿಲೋ ಮೀಟರ್ ಉದ್ದದ ಪಿಂಕ್ ಲೈನ್ ನಲ್ಲಿ ಮೆಟ್ರೋ ವಾಣಿಜ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಡಲಿದ್ದಾರೆ. ಅದೇ ನಿಲ್ದಾಣದಿಂದಲೆ ಅವರು ಮೆಟ್ರೋದಲ್ಲಿ ಸಂಚಾರ ಮಾಡುವ ಸಾಧ್ಯತೆ ಇದೆ. ಆಗ ಸಿಎಂ ಡಿಕೆ ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ ಹಾಗೂ ಇತರ ಬಿಜೆಪಿ, ಕಾಂಗ್ರೆಸ್ ನಾಯಕರು ಇರಲಿದ್ದಾರೆ ಎನ್ನಲಾಗಿದೆ. ಬಳಿಕ ಮಾರನೇ ದಿನ ನವೆಂಬರ್ 14ರಿಂದ ಸಾರ್ವಜನಿಕ ಬಳಕೆಗೆ ಮಾರ್ಗವು ಮುಕ್ತವಾಗಲಿದೆ.

100 ಕಿಮೀ ದಾಟುತ್ತೆ ಮೆಟ್ರೋ ಜಾಲ

ಬೆಂಗಳೂರು ಮೆಟ್ರೋ ಜಾಲದ ನಾಲ್ಕನೇ ಮಾರ್ಗವಾಗಿ ಗುಲಾಬಿ ಮಾರ್ಗ ತೆರೆದುಕೊಳ್ಳಲಿದೆ. ಹಾಲಿ ನೇರಳೆ ಮಾರ್ಗ, ಹಸಿರು ಮಾರ್ಗ ಮತ್ತು ಹಳದಿ ಮೆಟ್ರೋ ಮಾರ್ಗದ ವ್ಯಾಪ್ತಿಯು 96ಕಿಲೋ ಮೀಟರ್ ಇದೆ. ಗುಲಾಬಿ ಮಾರ್ಗ ತೆರೆಯುವುದರೊಂದಿಗೆ ಮೊದಲ ಬಾರಿಗೆ ನಮ್ಮ ಮೆಟ್ರೋ ಜಾಲವು 100ಕಿಲೋ ಮೀಟರ್ ಗಡಿ ದಾಟಲಿದೆ. ಮುಂದಿನ 2030ರ ಹೊತ್ತಿಗೆ 250 ಕಿಲೋ ಮೀಟರ್ ಮೆಟ್ರೋ ಜಾಲ ವಿಸ್ತರಣೆಯ ಗುರಿ ಹಾಕಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+