Bengaluru Metro: ಗುಲಾಬಿ ಮಾರ್ಗಕ್ಕೆ ಸುರಕ್ಷತಾ ಅನುಮೋದನೆ, ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 100 ಕಿಲೋ ಮೀಟರ್ ನಮ್ಮ ಮೆಟ್ರೋ ಜಾಲ ವಿಸ್ತರಣೆಗೆ ಕಾರಣವಾಗಲಿರುವ 'ಮೆಟ್ರೋ ಗುಲಾಬಿ ಮಾರ್ಗ'ವು ಸುರಕ್ಷತಾ ಆಯುಕ್ತರಿಂದ ಸುರಕ್ಷತಾ ಅನುಮತಿ ಪಡೆದುಕೊಂಡಿದೆ. ಈ ಮೂಲಕ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ರಾಜ್ಯ ಸರ್ಕಾರ ಪ್ರಧಾನಿ ಮೋದಿ ಅವರ ಕಚೇರಿಯಿಂದ ಪ್ರತ್ಯುತ್ತರಕ್ಕಾಗಿ ಕಾಯುತ್ತಿದೆ. ನವೆಂಬರ್ ನಲ್ಲಿ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ.

ಕಾಳೇನ ಅಗ್ರಹಾರ-ತಾವರೆಕೆರೆ ವರೆಗಿನ 7.5 ಕಿಲೋ ಮೀಟರ್ ಉದ್ದದ ಪಿಂಕ್ ಲೈನ್ ಕಾರಿಡಾರ್ ಮಾರ್ಗಕ್ಕೆ ಇತ್ತೀಚೆಗೆ ತಪಾಸಣೆ ನಡೆಸಿದ್ದ ಮೆಟ್ರೋ ರೈಲು ಸುಕ್ಷತಾ ಆಯುಕ್ತರಿಂದ ಅನುಮತಿ ದೊರೆತಿದೆ. ಮಾರ್ಗ ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಮಾಡಬಹುದು ಎಂದು ಅನುಮೋದನೆ ನೀಡಿದ ವರದಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳ ಕೈ ಸೇರಿದೆ.

Bengaluru Pink Metro Line

ರಾಜ್ಯ ಸರ್ಕಾರ ಉದ್ಘಾಟನೆಗೆ ಸಿದ್ಧ: ಕೃಷ್ಣ ಬೈರೇಗೌಡ

ಎತ್ತರಿಸಿದ ಕಾರಿಡಾರ್ 'ಗುಲಾಬಿ ಮಾರ್ಗ'ಕ್ಕೆ ಸಿಎಂಆರ್‌ಎಸ್ (CMRS) ನಿಂದ ಅನುಮತಿ ದೊರೆತಿರುವುದು ಸಂತಸದ ವಿಷಯವಾಗಿದೆ. ನಿರಂತರ ಪ್ರಯತ್ನದ ಬಳಿಕ ಹೊಸ ಮಾರ್ಗಕ್ಕೆ ಸುರಕ್ಷತಾ ಅನುಮೋದನೆ ಸಿಕ್ಕಿದೆ ಎಂದು ಬಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ ಕೇಂದ್ರ ಸರ್ಕಾರವು ಉದ್ಘಾಟನೆಗೆ ದಿನಾಂಕವನ್ನು ನಿಗದಿಪಡಿಸಬೇಕಿದೆ. ಈ ಸಂಬಂಧ ರಾಜ್ಯವು ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದೆ. ಸಾರ್ವಜನಿಕ ಸೇವೆಗೆ ಗುಲಾಬಿ ಮಾರ್ಗ ಮುಕ್ತಗೊಳಿಸಲು ನಾವು ಸಿದ್ಧರಿದ್ದೇವೆ. ಕೇಂದ್ರ ದಿನಾಂಕ ತಿಳಿಸುತ್ತಿದ್ದಂತೆ ಅಧಿಕೃತ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುಧಾರಿಸಲು ಈ ಎತ್ತರಿಸಿದ ಗುಲಾಬಿ ಮಾರ್ಗ ಸಾಕಷ್ಟು ಕೊಡುಗೆ ನೀಡಲಿದೆ. 'ನಮ್ಮ ಮೆಟ್ರೋ' ಜಾಲವನ್ನು ವಿಸ್ತರಿಸಲು ಸರ್ಕಾರ ಉತ್ಸುಕವಾಗಿದೆ ಎಂದರು.

ಇತ್ತೀಚೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ಮಾರ್ಗವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದರು. ಈಗಾಗಲೇ ಕೆಲವು ಬಾರಿ ಗಡುವು ಮೀರಿದ್ದರಿಂದ ಕಳೆದ ವಿಜಯದಶಮಿ ಅಥವಾ ನವೆಂಬರ್ 1 ರಂದು ಉದ್ಘಾಟಿಸಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಪ್ರಧಾನಿ ಮೋದಿಯವರ ಕಚೇರಿಯಿಂದ ಯಾವುದೇ ಪ್ರತ್ಯುತ್ತರ ಬಾರದ ಹಿನ್ನೆಲೆಯಲ್ಲಿ ನವೆಂಬರ್ 1ರಂದು ರಾಜ್ಯೋತ್ಸವದ ದಿನ ಉದ್ಘಾಟನೆ ಆಗುವುದು ಅನುಮಾನ ಎನ್ನಲಾಗಿದೆ.

ನವೆಂಬರ್ ನಲ್ಲಿ ಉದ್ಘಾಟನೆ?

ನವೆಂಬರ್ 15ರಂದು ಈ ಪಿಂಕ್ ಲೈನ್ ತೆರೆಯಲು ರಾಜ್ಯ ಸರ್ಕಾರ ಹಾಗೂ ಬಿಎಂಆರ್ ಸಿಎಲ್ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಅಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಗಳು ಇವೆ ಎಂದು ತಿಳಿದು ಬಂದಿದೆ. ಶೀಘ್ರವೇ ಅಧಿಕೃತ ಮಾಹಿತಿ ಸಿಗಲಿದೆ.

ಭೂಗತ ಪಿಂಕ್ ಲೈನ್ 2027ಕ್ಕೆ ಪೂರ್ಣ

ಇನ್ನೂ ಸುರಂಗ ಮಾರ್ಗದಲ್ಲಿ ನಿರ್ಮಾಣವಾದ ಪಿಂಕ್ ಲೈನ್ ಎರಡನೇ ಹಂತದ ತಾವರೆಕೆರೆ-ನಾಗವಾರ ವರೆಗಿನ 13.5 ಕಿಮೀ ಮಾರ್ಗದ ಅಂತಿಮ ಹಂತದ ಕೆಲಸಗಳು 2027ರ ಹೊತ್ತಿಗೆ ಮುಗಿಯಲಿವೆ. ಇದೇ ಡಿಸೆಂಬರ್ ಹೊತ್ತಿಗೆ ಟ್ರಯಲ್ ರನ್ ನಡೆಸುವ ಸಾಧ್ಯತೆಗಳು ಇದ್ದು, ಮುಂದಿನ ವರ್ಷ ಮಾರ್ಚ್ ತೆರೆಯುವ ನಿರೀಕ್ಷೆಗಳು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+