ಕರ್ನಾಟಕದಲ್ಲಿ ಮಳೆ ಕೊರತೆ ಮುಂದುವರಿಕೆ; ನವೆಂಬರ್ 23ರಂದು ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
ದಕ್ಷಿಣ ಭಾರತವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಳೆ ಆಗುತ್ತಿದ್ದರೂ, ಕರ್ನಾಟಕದಲ್ಲಿ ಮಳೆ ಕೊರತೆ ಮುಂದುವರಿದಿದೆ. ಚಂಡಮಾರುತ ಪ್ರಸರಣ ಪ್ರಭಾವದಿಂದಾಗಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಸಾಧಾರಣ ಮಳೆ ಮುಂದುವರಿದಿದೆ.
ನೈಋತ್ಯ ಬಂಗಾಳ ಕೊಲ್ಲಿಯಿಂದ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಮೂಲಕ ಉತ್ತರ ಕರಾವಳಿ ಆಂಧ್ರ ಪ್ರದೇಶದವರೆಗೆ ಪೂರ್ವ ದಿಕ್ಕಿನ ಗಾಳಿಗಳಲ್ಲಿ ಒಂದು 'ಟ್ರಫ್' (trough - ವಾಯುಭಾರ ಕುಸಿತದಂತಹ ವಲಯ) ಉಂಟಾಗಿದೆ. ಇದು ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದವರೆಗೆ ವಿಸ್ತರಿಸಿದೆ. ಉತ್ತರ ಕರಾವಳಿ ಆಂಧ್ರಪ್ರದೇಶ ಮತ್ತು ಅದನ್ನು ಹೊಂದಿಕೊಂಡಿರುವ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಮೇಲೆ, ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಕಂಡುಬಂದ ಮೇಲೆ ವಾಯು ಸುಳಿಯು (Cyclonic circulation) 'ಟ್ರಫ್'ನೊಂದಿಗೆ ವಿಲೀನಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಸಾಧಾರಣ ಮಳೆಯ ಹೊರತಾಗಿಯೂ ಕರ್ನಾಟಕದಲ್ಲಿ ಜಲಾಶಯಗಳ ನೀರಿನ ಮಟ್ಟ ಸುಧಾರಿಸಿಲ್ಲ.

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರ ನವೆಂಬರ್ 23ಕ್ಕೆ ಎಷ್ಟಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಹಾರಂಗಿ ಜಲಾಶಯ
ಗರಿಷ್ಠ ಮಟ್ಟ: 2,859
ಇಂದಿನ ಮಟ್ಟ: 2,842.80
ಒಳಹರಿವು: 320
ಹೊರಹರಿವು: 200
ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ: 1,819 (ಅಡಿ)
ಇಂದಿನ ಮಟ್ಟ: 1,789.65
ಒಳಹರಿವು: 674
ಹೊರಹರಿವು: 2,735.34
ಭದ್ರಾ ಜಲಾಶಯ
ಗರಿಷ್ಠ ಮಟ್ಟ: 186 (ಅಡಿ)
ಇಂದಿನ ಮಟ್ಟ: 171.6
ಒಳಹರಿವು: 240
ಹೊರಹರಿವು: 1,027
ಮಾಣಿ ಜಲಾಶಯ
ಗರಿಷ್ಠ ಮಟ್ಟ: 595
ಇಂದಿನ ಮಟ್ಟ: 584.22
ಒಳಹರಿವು: 0
ಹೊರಹರಿವು: 315
ತುಂಗಾ ಜಲಾಶಯ
ಗರಿಷ್ಠ ಮಟ್ಟ: 588.24
ಇಂದಿನ ಮಟ್ಟ: 588
ಒಳಹರಿವು: 24;658
ಹೊರಹರಿವು: 658
ಪೂರ್ವ ದಿಕ್ಕಿನಲ್ಲಿ ಟ್ರಫ್ ಸೃಷ್ಟಿ
ಪೂರ್ವ ದಿಕ್ಕಿನ ಗಾಳಿಗಳಲ್ಲಿನ ಒಂದು ಟ್ರಫ್ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ, ಬಂಗಾಲ ಕೊಲ್ಲಿಯ ನೈರುತ್ಯ ಭಾಗದಿಂದ ಪಶ್ಚಿಮ- ಮಧ್ಯ ಭಾಗದವರೆಗೆ ವ್ಯಾಪಿಸಿದೆ. ಉತ್ತರ ಕೇರಳ ಮತ್ತು ಕರ್ನಾಟಕ ಕರಾವಳಿಯ ಹೊರಭಾಗದಲ್ಲಿ, ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಪೂರ್ವ ದಿಕ್ಕಿನ ಗಾಳಿಗಳಲ್ಲಿ ಒಂದು 'ಟ್ರಫ್' ಕಂಡುಬರುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಇನ್ನು ಕಳೆದ 24 ಗಂಟೆ ಅವಧಿಯಲ್ಲಿ ನೈಜ ಸಮಯದ ದತ್ತಾಂಶದ (real-time data) ಆಧಾರದ ಮೇಲೆ, ರಾಜ್ಯದಾದ್ಯಂತ ಕನಿಷ್ಠ ತಾಪಮಾನವು 11.4°C ನಿಂದ 22.1°C ವ್ಯಾಪ್ತಿಯಲ್ಲಿತ್ತು. ನೈಜ ಸಮಯದ ದತ್ತಾಂಶದ ಪ್ರಕಾರ, ಕರಾವಳಿ ಕರ್ನಾಟಕದ ಹೊನ್ನಾವರದಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಅತಿ ಗಮನಾರ್ಹವಾಗಿ ಕಡಿಮೆಯಿತ್ತು.
ಕರಾವಳಿ ಕರ್ನಾಟಕದ ಕಾರವಾರ; ಉತ್ತರ ಒಳನಾಡಿನ ಬೆಳಗಾವಿ ವಿಮಾನ ನಿಲ್ದಾಣ, ಬಾಗಲಕೋಟೆ, ಗದಗ ಮತ್ತು ಹಾವೇರಿ; ಹಾಗೂ ದಕ್ಷಿಣ ಒಳನಾಡಿನ ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಕಡಿಮೆಯಿತ್ತು. ಉತ್ತರ ಒಳನಾಡಿನ ಧಾರವಾಡ ಮತ್ತು ಕೊಪ್ಪಳ; ಹಾಗೂ ದಕ್ಷಿಣ ಒಳನಾಡಿನ ಚಿಂತಾಮಣಿ ಮತ್ತು ಮೈಸೂರಿನಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಿತ್ತು. ಉತ್ತರ ಒಳ ಕರ್ನಾಟಕದ ಕಲಬುರ್ಗಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಾಗಿತ್ತು. ಉಳಿದ ಕಡೆಗಳಲ್ಲಿ ತಾಪಮಾನವು ಸಾಮಾನ್ಯ ಸ್ಥಿತಿಯಲ್ಲಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.




Click it and Unblock the Notifications
