ಶಬರಿಮಲೆ ಭಕ್ತರಿಗೆ ಮಹತ್ವದ ಸೂಚನೆ: ಪಾವಿತ್ರ್ಯತೆ, ಸ್ವಚ್ಛತೆಗಾಗಿ ಕಟ್ಟುನಿಟ್ಟಿನ ಆದೇಶ! ವಿಶೇಷ ಮನವಿ ಮಾಡಿದ ಕೇರಳ ಸಿಎಂ

ತಿರುವನಂತಪುರಂ: ಶಬರಿಮಲೆ ಭಕ್ತರು ಗಮನಿಸಲೇಬೇಕಾದ ಹಾಗೂ ಅನುಸರಿಸಬೇಕಾದ ಅಪ್ಡೇಟ್ ಸಿಕ್ಕಿದೆ. ಮಾಲಾಧಾರಿಗಳು ಶಬರಿಮಲೆಗೆ ಯಾತ್ರೆಗೆ ತೆರಳಲು ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಯಾತ್ರ ವೇಳೆ ನದಿಗೆ ಬಟ್ಟೆ, ಪ್ಲಾಸ್ಟಿಕ್, ತ್ಯಾಜ್ಯ ಎಸೆದರೆ 5000 ರೂಪಾಯಿ ದಂಡ ವಿಧಿಸಲು ಕೇರಳ ಸರ್ಕಾರ ತಕ್ಷಣದಿಂದಲೇ ನಿರ್ಧರಿಸಿದೆ.

ಕೇರಳ ಸರ್ಕಾರದ ಹೊಸ ಆದೇಶ ಬಳಿಕ ಸ್ವತಃ ಸಿಎಂ ವಿ.ಡಿ ಸತೀಶನ್ ಅವರು ಎಕ್ಸ್ ಪೋಸ್ಟ್ ಮೂಲಕವು ಮನವಿ ಮಾಡಿದ್ದಾರೆ. ಸ್ವಚ್ಛತೆ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. 'ಶಬರಿಮಲೆಯ ಪಾವಿತ್ರ್ಯವನ್ನು ಹಾಗೂ ಪವಿತ್ರ ಪಂಬಾ/ಪಂಪಾ ನದಿಯ ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಎಲ್ಲಾ ಭಕ್ತರಲ್ಲಿ ನನ್ನ ವಿನಮ್ರ ಮನವಿ ದಯವಿಟ್ಟು ಪಂಬಾ ನದಿಗೆ ಬಟ್ಟೆ, ಪ್ಲಾಸ್ಟಿಕ್ ಅಥವಾ ಇತರ ತ್ಯಾಜ್ಯಗಳನ್ನು ಎಸೆಯಬೇಡಿ. ಶಬರಿಮಲೆ ಮತ್ತು ಪಂಬಾ ಪರಿಸರವನ್ನು ಸ್ವಚ್ಛವಾಗಿಡಲು ಎಲ್ಲರೂ ಸಹಕರಿಸಿ' ಎಂದು ಕೋರಿದ್ದಾರೆ.

Sabarimala Pilgrims Alert Medical Certificate Mandatory Rs 5 000 Fine for Littering Waste Pamba River

ತೀರ್ಥಯಾತ್ರೆ ವೇಳೆ ಭಕ್ತಾಧಿಕಾರಿಗಳು ತಾವು ಬಳಕೆ ಮಾಡಿದ ಬಟ್ಟೆಗಳನ್ನು, ತಿಂಡಿ, ತಿನಿಸುಗಳ ಪ್ಲಾಸ್ಟಿಕ್‌ ಮತ್ತು ಇತರ ತ್ಯಾಜ್ಯವನ್ನು ಪಂಪಾ, ನೀಲಕ್ಕಲ್, ಸನ್ನಿಧಾನಂನಲ್ಲಿರುವ ಲಕ್ಷಾಂತರ ಭಕ್ತರಿಗೆ ಮತ್ತು ನದಿಗಳ ಕೆಲಭಾಗದ ಜನರಿಗೆ ಈ ನೀರೇ ಆಧಾರವಾಗಿರುತ್ತದೆ. ಆದ್ದರಿಂದ ಪವಿತ್ರ ನದಗಳ ಸ್ವಚ್ಛತೆಗೆ, ಯಾತ್ರೆಯುದ್ದಕ್ಕೂ ನೈರ್ಮಲ್ಯತೆಗೆ ಆದ್ಯತೆ ನೀಡಬೇಕು. ನಿಯಮ ಉಲ್ಲಂಘಿಸಿದರೆ 5000 ರೂ. ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿ ಸರ್ಕಾರ ತಿಳಿಸಿದೆ.

Temple: ಧರ್ಮ ಬೇರೆ, ದೇವರ ಮೇಲಿನ ನಂಬಿಕೆ ಒಂದೇ; ಮುಸ್ಲಿಂ ಪ್ಲಾಂಟರ್ ನಿಂದ ದೇವಸ್ಥಾನಗಳ ಜೀರ್ಣೋದ್ಧಾರ!
Temple: ಧರ್ಮ ಬೇರೆ, ದೇವರ ಮೇಲಿನ ನಂಬಿಕೆ ಒಂದೇ; ಮುಸ್ಲಿಂ ಪ್ಲಾಂಟರ್ ನಿಂದ ದೇವಸ್ಥಾನಗಳ ಜೀರ್ಣೋದ್ಧಾರ!

ದಂಡ ಕಟ್ಟದಿದ್ದರೆ ಕಾನೂನು ಕ್ರಮ

ಯಾತ್ರಿಕರು ನಿಯಮ ಉಲ್ಲಂಘಿಸಿದ ಸ್ಥಳದಲ್ಲೇ 5,000 ರೂ.ಗಳವರೆಗೆ ದಂಡ ವಿಧಿಸಲಾಗುವುದು. 15 ದಿನಗಳಲ್ಲಿ ದಂಡ ಪಾವತಿಸಬೇಕು. ಇಲ್ಲವಾದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), 2023 ರ ಸೆಕ್ಷನ್ 163 ರ ಅಡಿಯಲ್ಲಿ ಮತ್ತು ಕೇರಳ ಪಂಚಾಯತ್ ರಾಜ್ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

ಶಬರಿಮಲೆಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತದೆ. ಈ ನವೆಂಬರ್ ಅಂತ್ಯದಿಂದ ಜನವರಿ ಮಧ್ಯ ಭಾಗದವರೆಗೂ ಯಾತ್ರಿಕರು ಇಲ್ಲಿಗೆ ಬರುತ್ತಾರೆ. ಈ ವೇಳೆ ನದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ರೋಗ ರುಜಿನಗಳು, ಮಾಲಿನ್ಯ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದರ ದುಷ್ಪರಿಣಾಮ ಮಾನವರ ಮೇಲೂ ಆಗುತ್ತದೆ. ಈ ಕಾರಣಕ್ಕೆ ದಂಡ ಹೇರುವ ನಿಯಮ ಜಾರಿಗೊಳಿಸಲಾಗಿದೆ. ಸಂಗ್ರಹಿಸಿದ ದಂಡದ ಹಣವನ್ನು ಪಂಚಾಯಿತಿ ನಿಧಿಗೆ ನೀಡಲಾಗುವುದು ಅಂತಲೂ ತಿಳಿಸಿದೆ.

ಟನ್‌ಗಟ್ಟಲೇ ಬಟ್ಟೆ ತ್ಯಾಜ್ಯ ಸಂಗ್ರಹ

ಶಬರಿಮಲೆ ದೇವಸ್ಥಾನ ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿ ವತಿಯಿಂದ ನದಿಗಳ ಸಚ್ಛತಾ ಕೆಲಸವು ನಡೆದಿದೆ. ತೀವ್ರ ನಿಗಾ ಇಡಲಾಗಿದೆ. ಈ ಹಿಂದೆ ತೀರ್ಥಯಾತ್ರೆಯ ಋತುಗಳಲ್ಲಿ ಹತ್ತಾರು ಟನ್‌ಗಳಷ್ಟು ಯಾತ್ರಿಕರು ಎಸೆದ ಬಟ್ಟೆಗಳನ್ನು ಸಂಗ್ರಹಿಸಲಾಗಿತ್ತು. ಈ ಬಟ್ಟೆಗಳನ್ನು ಒಂದೆಡೆ ಹಾಕಲು ಸ್ನಾನಗೃಹಗಳ ಬಳಿ ಗೊತ್ತುಪಡಿಸಿದ ಸಂಗ್ರಹಣಾ ಕೌಂಟರ್ ನಿರ್ಮಿಸಲಾಗಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು.

ಚಾಮುಂಡಿ ದರ್ಶನಕ್ಕೆ ಆನ್‌ಲೈನ್ ಟಿಕೆಟ್: ಇನ್ಮುಂದೆ ಕ್ಯೂನಲ್ಲಿ ನಿಲ್ಲುವಂತಿಲ್ಲ, ಕುಳಿತಲ್ಲಿಯೇ ಆನ್‌ಲೈನ್ ಮೂಲಕ ಪೂಜೆ
ಚಾಮುಂಡಿ ದರ್ಶನಕ್ಕೆ ಆನ್‌ಲೈನ್ ಟಿಕೆಟ್: ಇನ್ಮುಂದೆ ಕ್ಯೂನಲ್ಲಿ ನಿಲ್ಲುವಂತಿಲ್ಲ, ಕುಳಿತಲ್ಲಿಯೇ ಆನ್‌ಲೈನ್ ಮೂಲಕ ಪೂಜೆ

ಕಠಿಣ ಪಾದಯಾತ್ರೆಗೆ ವೈದ್ಯರ ಪ್ರಮಾಣ ಪತ್ರ ಕಡ್ಡಾಯ

ಕೇರಳ ಆರೋಗ್ಯ ಇಲಾಖೆಯು ಮಹತ್ವದ ಮಾರ್ಗಸೂಚಿ ಹೊರಡಿಸಿದ್ದು, ಶಬರಿಮಲೆ ಯಾತ್ರೆಯು ಕಠಿಣ ಪಾದಯಾತ್ರೆಯಾಗಿರುತ್ತದೆ. ಹೀಗಾಗಿ ಇಲ್ಲಿಗೆ ಬರುವ ಮಾಲಾಧಾರಿಗಳು, ಭಕ್ತರು ತಾವು ಆರೋಗ್ಯವಾಗಿ, ದೈಹಿಕವಾಗಿ ಸದೃಢರಾಗಿರುವ ಬಗ್ಗೆ ತಪಾಸಣೆ ನಡೆಸಬೇಕು. ವೈದ್ಯರಿಂದ ಪ್ರಮಾಣ ಪತ್ರ ಪಡೆದಿರಬೇಕು. ಎಲ್ಲ ಭಕ್ತರು ಸುರಕ್ಷತೆಯ ನಿಯಮಗಳನ್ನು ಪಾಲಿಸುವಂತೆ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.

ಯಾರಿಗಾದರೂ ಹಾರ್ಟ್‌ ಸಂಬಂಧ ಅಥವಾ ಇತರ ಚಿಕಿತ್ಸೆಗಳಿಗೆ ಒಳಪಟ್ಟಿದ್ದರೆ, ತಮ್ಮ ಕುಟುಂಬ ವೈದ್ಯರು, ತಜ್ಞ ವೈದ್ಯರ ಸಲಹೆ ಮೇರೆಗೆ ಪಾದಯಾತ್ರೆ ಕೈಗೊಳ್ಳಬೇಕು. ನಿಯಮ ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+