Temple: ಧರ್ಮ ಬೇರೆ, ದೇವರ ಮೇಲಿನ ನಂಬಿಕೆ ಒಂದೇ; ಮುಸ್ಲಿಂ ಪ್ಲಾಂಟರ್ ನಿಂದ ದೇವಸ್ಥಾನಗಳ ಜೀರ್ಣೋದ್ಧಾರ!

ಚಿಕ್ಕಮಗಳೂರು: ಧರ್ಮ ಧರ್ಮಗಳ ಮಧ್ಯ ತಂದಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳಿಂದ ಸಮಾಜದಲ್ಲಿ ಸಾಮರಸ್ಯ ಹದಗೆಡುತ್ತಿದೆ. ಇದರಿಂದ ಸಮುದಾಗಳ ಮಧ್ಯೆ ಸಾಕಷ್ಟು ಘರ್ಷಣೆ, ಕೋಮು ಗಲಭೆಗಳು ಸೃಷ್ಟಿಯಾಗುತ್ತಿವೆ. ಈ ನಡುವೆ ಹಿಂದು, ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯ, ಸಹಬಾಳ್ವೆ ಬೆಳೆಯುವಂತಹ ಕೆಲಸ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ನಡೆದಿದೆ.

ಈ ಹಿಂದೆ ರಾಜ್ಯದ ರಾಮನಗರದಲ್ಲಿನ ದೇವಸ್ಥಾನವೊಂದನ್ನು ಮುಸ್ಲಿಂ ವ್ಯಕ್ತಿಯೊಬ್ಬರು ಅಭಿವೃದ್ಧಿಗೊಳಿಸಿದ್ದು ಸುದ್ದಿಯಾಗಿತ್ತು. ಇದೀಗ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಇಸ್ಲಾಂ ಧರ್ಮದ ಎಸ್ಟೇಟ್ ಮಾಲೀಕರೊಬ್ಬರು ಪಾಳುಬಿದ್ದಿದ್ದ ಎರಡು ಹಿಂದೂ ದೇವಸ್ಥಾನವನ್ನು ಪುನರ್ ನಿರ್ಮಿಸಿದ್ದಾರೆ. ಜೀರ್ಣೋದ್ಧಾರ ಬಳಿಕ ಹಿಂದೂ ಧರ್ಮದ ವಿಧಿ ವಿಧಾನಗಳು, ಸಾಂಪ್ರದಾಯದಂತೆ ಶಾಸ್ರೋಕ್ತವಾಗಿ ಉದ್ಘಾಟನೆ ನೆರವೇರಿಸಿದ್ದಾರೆ. ಈ ಮೂಲಕ ಸಮಾಜಕ್ಕೆ ಸೌಹಾರ್ದತೆ, ಸಾಮರಸ್ಯ ಸಂದೇಶ ಸಾರಿದ್ದಾರೆ.

Renovates Two Hindu Temples

'ನಲ್ಲಿ ಚಾಮುಂಡೇಶ್ವರಿ, ಗುಳಿಗ ದೇವಸ್ಥಾನ' ಜೀರ್ಣೋದ್ಧಾರ

ಬೆಂಗಳೂರು ಮೂಲದ ಮೊಹಮ್ಮದ್ ಹ್ಯಾರೀಸ್ ಅನ್ನವವರು ಕಳಸ ಎಸ್ಟೇಟ್ ನಲ್ಲಿ ವಾಸಿಸುತ್ತಿದ್ದಾರೆ. ಅವರ ತಮ್ಮ ಎರಡು ವರ್ಷಗಳ ಹಿಂದೆ ಇಲ್ಲಿ ಎಸ್ಟೇಟ್ ಖರೀದಿಸಿದ್ದರು. ಈ ಎಸ್ಟೇಟ್‌ನಲ್ಲಿ ಪಾಳುಬಿದ್ದಿದ್ದ 'ನಲ್ಲಿ ಚಾಮುಂಡೇಶ್ವರಿ' ಮತ್ತು 'ಗುಳಿಗ ದೇವಸ್ಥಾನಗಳ'ತ್ತ ಅವರ ಗಮನ ಹರಿಯಿತು. ಇವುಗಳ ಜೀರ್ಣೋದ್ಧಾರ ಮಾಡುವ ಆಲೋಚನೆ ಬಂತು. ಸ್ವಂತಹ ಹಣದಲ್ಲಿ ಅವರು, ಸ್ಥಳೀಯರಿಂದ ದೇಗುಲಗಳ ಮಾಹಿತಿ ಪಡೆದು, ಹಿರಿಯರ ಸೂಚನೆಯಂತೆ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಿದರು. ಸದ್ಯ ಇವೆರಡು ದೇವಸ್ಥಾನಗಳು ಸುಂದರವಾಗಿ ಕಂಗೊಳಿಸುತ್ತಿದೆ. ಪ್ರತಿ ವಾರ ಪೂಜೆ ನಡೆಸಲು ತೀರ್ಮಾನಿಸಲಾಗಿದೆ.

ಸೋಮವಾರ (ನವೆಂಬರ್ 2) ದಂದು ಹಿಂದೂ ಧಾರ್ಮಿಕ ಸಂಪ್ರದಾಯ, ಪದ್ಧತಿ ಹಾಗೂ ಆಚರಣೆಗಳಂತೆ ಅರ್ಚಕರಿಂದ ಅನುಗುಣವಾಗಿ ಜೀರ್ಣೋದ್ಧಾರಗೊಂಡ ದೇವಸ್ಥಾನಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.

ಧರ್ಮ ಬೇರೆಯಾದ್ರೂ ದೇವರುಗಳ ಮೇಲೆ ನಂಬಿಕೆ

ಈ ವೇಳೆ ಮಾತನಾಡಿದ ಮುಸ್ಲಿಂ ಪ್ಲಾಂಟರ್, ಬೆಂಗಳೂರಿನ ಉದ್ಯಮಿ ಮೊಹ ಮ್ಮದ್ ಹ್ಯಾರೀಸ್ ಅವರು, ನನ್ನದು ಮುಸ್ಲಿಂ ಧರ್ಮವಿರಬಹುದು. ಹಿಂದು ಧರ್ಮ ಬೇರೆ ಇರಬಹುದು. ಆದರೆ ನಾನು ಅಲ್ಲಾಹುವಿನ ಮೇಲೆ ಹೇಗೆ ನಂಬಿಕೆ ಇಟ್ಟಿದ್ದೇನೆಯೋ ಅದೇ ರೀತಿ ಹಿಂದೂ ಧರ್ಮ ದೈವ, ದೇವರುಗಳ ನನಗೆ ಅಪಾರ ನಂಬಿಕೆ, ಭಕ್ತಿ ಇದೆ. ಈ ಕಾರಣದಿಂದಲೇ ನನಗೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಶಕ್ತಿ ದೊರೆತಿದೆ ಎಂದು ತಿಳಿಸಿದರು.

ಟ್ರಸ್ಟ್‌ಗೆ ದೇವಸ್ಥಾನದ ಜಾಗ

ನನ್ನ ಎಸ್ಟೇಟ್‌ನಲ್ಲಿರುವ ದೇಗುಲಗಳು ಇರು ವಸ್ಥಳವನ್ನು ಟ್ರಸ್ಟ್‌ಗೆ ನೀಡುವ ಉದ್ದೇಶ ಹೊಂದಿದ್ದು, ಈ ಸಂಬಂಧ ಸ್ಥಳೀಯರೊಂದಿಗೆ ಚರ್ಚಿಸಿದ್ದೇನೆ. ಈಗಾಗಲೇ ಸ್ಥಳೀಯರನ್ನು ಒಳಗೊಂಡು ಒಂದು ಟ್ರಸ್ಟ್‌ ರಚನೆ ಮಾಡಿದ್ದೇವೆ. ಇನ್ನೂ ದೇಗುಲದಲ್ಲಿ ವಾರದಲ್ಲಿ ಒಂದು ದಿನ ವಿಶೇಷ ಪೂಜೆ, ಪುನಸ್ಕಾರಗಳು ನೆರವೇರುವಂತೆ ವ್ಯವಸ್ಥೆ ಮಾಡಿದ್ದೇನೆ. ಎರಡು ದೇಗುಲಗಳಿಗೆ ಒಬ್ಬರು ಪುರೋಹಿತರನ್ನೂ ನಿಯೋಜಿಸಲಾಗಿದೆ. ಪೂಜೆ ದಿನ ಊರಿನ ಎಲ್ಲ ಭಕ್ತರಿಗೂ ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶ ಇದೆ ಎಂದು ತಿಳಿಸಿದರು.

2 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ

ಒಂದು ವರ್ಷದ ಹಿಂದೆ ಸರಿಯಾಗಿ 2025ರ ನವೆಂಬರ್ ಮೊದಲ ವಾರ ರಾಮನಗರ ಜಿಲ್ಲೆ ಚನ್ನಪಟ್ಟಣದ ಮಂಗಳವಾರಪೇಟೆಯಲ್ಲಿ ಶೀಥಿಲಾವಸ್ಥೆಯಲ್ಲಿದ್ದ ದೇವಸ್ಥಾನವೊಂದನ್ನು ಮುಸ್ಲಿಂ ಉದ್ಯಮಿಯೊಬ್ಬರು ಅಭಿವೃದ್ಧಿಗೊಳಿಸಿದ್ದರು. ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ದೇಗುಲ ಜೀರ್ಣೋದ್ಧಾರಕ್ಕೆ ಶ್ರಮಿಸಿದ್ದರು.

ಎಸ್‌.ಕೆ.ಗ್ರೂಪ್ಸ್ ಮಾಲೀಕ ಸಾಹುಕಾರ್ ಎಸ್.ಕೆ.ಸೈಯದ್ ಸಾದತ್ ಉಲ್ಲಾ ಸಖಾಫ್ ಅವರು ದೇವಸ್ಥಾನಕ್ಕೆ ಹಣ ವಿನಿಯೋಗಿ ನಾಡಿಗೆ ಮಾದರಿಯಾಗಿದ್ದರು. ನಾವು ಸದುದ್ದೇಶದೊಂದಿಗೆ, ಆತ್ಮತಹಃ ಒಳ್ಳೆಯವರಾದರೆ ಯಾರೋ ನಮ್ಮ ನಡುವೆ ಜಗಳ ತಂದಿಡುವುದಿಲ್ಲ ಎಂಬ ಸ್ಪಷ್ಟ ಸಾಮರಸ್ಯದ ಸಂದೇಶ ಸಾರಿದ್ದರು.

ತಮಿಳುನಾಡಿನಿಂದ ಬಂದಿತ್ತು ಕಲ್ಲು

ಇಲ್ಲಿನ ಬಸವೇಶ್ವರ ದೇಗುಲ ಜೀರ್ಣೋದ್ಧಾರಕ್ಕಾಗಿ ತಮಿಳುನಾಡಿನಿಂದ ಕಲ್ಲುಗಳನ್ನು ತರಿಸಲಾಗಿತ್ತು. ಶ್ರೀ ಬಸವೇಶ್ವರ ವಿನಾಯಕ ಬಳಗದ ನೇತೃತ್ವದಲ್ಲಿ ಹಿಂದೂ ಸಂಪ್ರದಾಯದಂತೆ ಮೂರ್ತಿ ಪ್ರತಿಷ್ಠಾಪನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಇತರ ಧಾರ್ಮಿಕ ಕೈಂಕರ್ಯಗಳು 2025ರ ರಾಜ್ಯೋತ್ಸವದಂತೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+