ಹಿಂದೂ ಎಂದು ನಂಬಿಸಿ ಮದುವೆಯಾಗಿ ಯುವತಿಗೆ ವಂಚನೆ; ಆಧಾರ್ ಕಾರ್ಡ್ ನೋಡಿದಾಗ ಮುಸ್ಲಿಂ ಎಂಬ ಸತ್ಯ ಬಯಲು

ಹರಿಯಾಣದ ಸೋನಿಪತ್‌ನಲ್ಲಿ ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ನಡೆದ ಅತಿದೊಡ್ಡ ವಂಚನೆಯೊಂದು ಇದೀಗ ಬೆಳಕಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾಗಳು ಕೇವಲ ಮನರಂಜನೆಗೆ ಮಾತ್ರವಲ್ಲದೆ, ಇಂತಹ ಮೋಸದ ಜಾಲಗಳಿಗೂ ವೇದಿಕೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಆನ್‌ಲೈನ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ, ತನ್ನ ನಿಜವಾದ ಹೆಸರು ಹಾಗೂ ಧಾರ್ಮಿಕ ಗುರುತನ್ನ ಮರೆಮಾಚಿ ಹಿಂದೂ ಯುವತಿಯನ್ನ ಮದುವೆಯಾಗಿದ್ದಾನೆ. ವಿವಾಹವಾಗಿ ಕೆಲವು ತಿಂಗಳು ಕಳೆದ ಬಳಿಕ ಆತ ಮುಸ್ಲಿಂ ಹಾಗೂ ಅದಾಗಲೇ ಆತನಿಗೆ ಮೊದಲೇ ಮದುವೆಯಾಗಿ ಮಕ್ಕಳಿರುವ ಸತ್ಯ ತಿಳಿದು ಮಹಿಳೆ ತೀವ್ರ ಆಘಾತಕ್ಕೊಳಗಾಗಿದ್ದಾಳೆ.

Haryana Woman Alleges Husband Hid Muslim Identity Forced Her For Conversion After Hindu Wedding

ಇದೀಗ ಆಕೆ ಪತಿ ಹಾಗೂ ಆತನ ಕುಟುಂಬದ ವಿರುದ್ಧ ಕಿರುಕುಳ, ಬೆದರಿಕೆ ಹಾಗೂ ಮತಾಂತರದ ಆರೋಪ ಹೊರಿಸಿ ಪೊಲೀಸ್ ಮೆಟ್ಟಿಲೇರಿದ್ದಾರೆ.

ಇನ್‌ಸ್ಟಾಗ್ರಾಮ್ ಪರಿಚಯ ಮತ್ತು ಹಿಂದೂ ಸಂಪ್ರದಾಯದಂತೆ ಮದುವೆ

ಈ ಪ್ರಕರಣದ ಸಂತ್ರಸ್ತ ಮಹಿಳೆಯು ಇನ್‌ಸ್ಟಾಗ್ರಾಮ್ ಮೂಲಕ ಈ ವ್ಯಕ್ತಿಯನ್ನ ಪರಿಚಯಿಸಿಕೊಂಡಿದ್ದಳು. ಚಾಟಿಂಗ್ ಮಾಡುವಾಗ ಆತ ತನ್ನನ್ನು ತಾನು 'ಜಾನಿ' ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೆ, ತಾನು ಹಿಂದೂ ಸಮುದಾಯಕ್ಕೆ ಸೇರಿದವನು ಎಂದು ಆಕೆಯನ್ನ ನಂಬಿಸಿದ್ದ. ಇಬ್ಬರ ನಡುವಿನ ಈ ಆನ್‌ಲೈನ್ ಸ್ನೇಹ ದಿನಕಳೆದಂತೆ ಪರಸ್ಪರ ಪ್ರೀತಿಗೆ ತಿರುಗಿತ್ತು.

ಆತನ ಮಾತುಗಳನ್ನ ಸಂಪೂರ್ಣವಾಗಿ ನಂಬಿದ ಮಹಿಳೆ, ಹಿಂದೂ ಸಂಪ್ರದಾಯದಂತೆ ಆತನನ್ನ ವಿವಾಹವಾಗಲು ಸಮ್ಮತಿಸಿದ್ದಳು. ಅದರಂತೆ ಇಬ್ಬರೂ ಒಪ್ಪಿಗೆಯಿಂದ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದರು. ಮದುವೆಯ ನಂತರ ಇವರಿಬ್ಬರೂ ಗಂಡ-ಹೆಂಡತಿಯಾಗಿ ಒಟ್ಟಿಗೆ ಸುಖವಾಗಿ ವಾಸಿಸಲು ಪ್ರಾರಂಭಿಸಿದ್ದರು. ಆರಂಭದ ದಿನಗಳಲ್ಲಿ ಎಲ್ಲವೂ ಸುಗಮವಾಗಿಯೇ ಇತ್ತು ಎಂದು ಮಹಿಳೆ ತಿಳಿಸಿದ್ದಾಳೆ.

ಆಧಾರ್ ಕಾರ್ಡ್‌ನಿಂದ ಬಯಲಾಯ್ತು ಅಸಲಿ ಸತ್ಯ

ಮದುವೆಯಾಗಿ ಸುಮಾರು ಆರು ತಿಂಗಳು ಕಳೆದ ಬಳಿಕ, ಮಹಿಳೆಗೆ ತನ್ನ ಗಂಡನ ನಡವಳಿಕೆ ಹಾಗೂ ನಿಜವಾದ ಗುರುತಿನ ಬಗ್ಗೆ ಸಣ್ಣ ಅನುಮಾನಗಳು ಶುರುವಾದವು. ಒಂದು ದಿನ ಆಕೆ ಮನೆಯಲ್ಲಿ ಗಂಡನ ಬ್ಯಾಗ್‌ನಲ್ಲಿದ್ದ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿದಾಗ ಆಕೆಗೆ ದೊಡ್ಡ ಆಘಾತವೇ ಕಾದಿತ್ತು. ಆ ಗುರುತಿನ ಚೀಟಿಯಲ್ಲಿ ಆತನ ಹೆಸರು 'ಜಾನಿ' ಬದಲಿಗೆ 'ಜಾವೇದ್ ಖಾನ್' ಎಂದು ಸ್ಪಷ್ಟವಾಗಿ ನಮೂದಾಗಿತ್ತು.

ತಾನು ಇಷ್ಟು ದಿನ ಪ್ರೀತಿಸಿ, ನಂಬಿ ಮದುವೆಯಾದವನು ಹಿಂದೂ ಅಲ್ಲ, ಆತ ಮುಸ್ಲಿಂ ಎಂಬ ಸತ್ಯ ಆಕೆಗೆ ಅರಿವಾಯಿತು. ಈ ವಿಚಾರವನ್ನ ಮತ್ತಷ್ಟು ಆಳವಾಗಿ ವಿಚಾರಿಸಿದಾಗ, ಸೋನಿಪತ್ ನಿವಾಸಿಯಾಗಿರುವ ಜಾವೇದ್ ಖಾನ್‌ಗೆ 12 ವರ್ಷಗಳ ಹಿಂದೆಯೇ ಮೊದಲ ಮದುವೆಯಾಗಿದ್ದು, ಆತನ ಮೊದಲನೇ ಹೆಂಡತಿಗೆ ಮೂವರು ಮಕ್ಕಳಿದ್ದಾರೆ ಎಂಬ ಆಘಾತಕಾರಿ ವಿಚಾರವೂ ಬಯಲಿಗೆ ಬಂದಿತು.

ಮೊದಲ ಪತ್ನಿಯ ಆಗಮನ ಮತ್ತು ಮತಾಂತರದ ಆರೋಪ

ಈ ಸತ್ಯ ಹೊರಬೀಳುತ್ತಿದ್ದಂತೆಯೇ, ಜಾವೇದ್ ಖಾನ್‌ನ ಮೊದಲ ಪತ್ನಿ ಇವರು ವಾಸವಿದ್ದ ಮನೆಗೆ ಬಂದು ಗಲಾಟೆ ಮಾಡಿದ್ದಾಳೆ. ತೀವ್ರ ವಾಗ್ವಾದದ ಬಳಿಕ ಆಕೆ ಜಾವೇದ್‌ನನ್ನ ತನ್ನೊಂದಿಗೆ ಬಲವಂತವಾಗಿ ಕರೆದೊಯ್ದಿದ್ದಾಳೆ. ಕೆಲವು ದಿನಗಳ ನಂತರ ವಾಪಸಾದ ಜಾವೇದ್, 'ತನ್ನ ಮನೆಯವರು ನಿನ್ನೊಂದಿಗೆ ಇರಬಾರದು ಎಂದು ಒತ್ತಡ ಹೇರುತ್ತಿದ್ದಾರೆ' ಎಂದು ಎರಡನೇ ಪತ್ನಿಗೆ ತಿಳಿಸಿದ್ದಾನೆ. ಆದರೂ, ಇಬ್ಬರೂ ಒಟ್ಟಿಗೆ ವಾಸಿಸುವುದನ್ನ ಮುಂದುವರಿಸಿದ್ದರು. ನಂತರ ಕಾರಣಾಂತರಗಳಿಂದ ಉತ್ತರ ಪ್ರದೇಶದ ಬುಧಾನಾಗೆ ಸ್ಥಳಾಂತರಗೊಂಡ ಇವರಿಗೆ ಅಲ್ಲಿ ಒಂದು ಮಗು ಕೂಡ ಜನಿಸಿದೆ. ಬಳಿಕ ಮತ್ತೆ ಸೋನಿಪತ್‌ಗೆ ಮರಳಿದ್ದರು. ಈ ವೇಳೆ ಜಾವೇದ್ ಮತ್ತು ಆತನ ಕುಟುಂಬಸ್ಥರು ತನಗೆ ಮತ್ತು ತನ್ನ ಮಕ್ಕಳಿಗೆ ಇಸ್ಲಾಂ ಧರ್ಮಕ್ಕೆ ಬದಲಾಯಿಸುವಂತೆ ತೀವ್ರ ಒತ್ತಾಯಿಸಿದ್ದಾರೆ ಎಂಬ ಗಂಭೀರ ಆರೋಪವನ್ನ ಮಹಿಳೆ ಮಾಡಿದ್ದಾರೆ.

ಪೊಲೀಸ್ ಠಾಣೆಯಲ್ಲಿ ದೂರು

ಕಳೆದ ಒಂದು ವಾರದಿಂದ ಜಾವೇದ್ ಹಾಗೂ ಆತನ ಕುಟುಂಬಸ್ಥರು ಯಾವುದೇ ಮಾಹಿತಿ ನೀಡದೆ ದಿಢೀರನೆ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದಿಕ್ಕುತೋಚದಂತಾದ ಸಂತ್ರಸ್ತ ಮಹಿಳೆಯು ಕೊನೆಗೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ತನ್ನನ್ನ ವಂಚಿಸಿ ಮದುವೆಯಾಗಿದ್ದಲ್ಲದೆ, ತನ್ನ ಮೇಲೆ ಹಲ್ಲೆ, ದೈಹಿಕ ಕಿರುಕುಳ ಹಾಗೂ ಪ್ರಾಣಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 'ಹಿಂದೂ ರಕ್ಷಾ ಸೇನೆ' ಸಂಘಟನೆಯ ಪ್ರತಿನಿಧಿಗಳು ಕೂಡ ಮಹಿಳೆಯ ಪರವಾಗಿ ನಿಂತಿದ್ದು, ಬೆಂಬಲ ವ್ಯಕ್ತಪಡಿಸಿದ್ದಾರೆ. ಸೋನಿಪತ್ ಪೊಲೀಸರು ಮಹಿಳೆಯ ದೂರನ್ನು ಸ್ವೀಕರಿಸಿ ತೀವ್ರ ತನಿಖೆ ಆರಂಭಿಸಿದ್ದಾರೆ. ಎರಡೂ ಕಡೆಯವರನ್ನ ವಿಚಾರಣೆಗೆ ಕರೆಸಲಾಗಿದ್ದು, ತನಿಖೆಯ ನಂತರವೇ ಘಟನೆಯ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+