ಗಿಲ್ ಫೀಲ್ಡಿಂಗ್ ಯೋಜನೆಗೆ ದಿನೇಶ್ ಕಾರ್ತಿಕ್ ಅಸಮಾಧಾನ; ಡಿಕ್ಲೇರ್ ನಿರ್ಧಾರಕ್ಕೆ ಮಾತ್ರ ಬೆಂಬಲ..

Dinesh Karthik: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವ ಅವಕಾಶವಿದ್ದರೂ ಡ್ರಾಗೆ ತೃಪ್ತಿಪಟ್ಟುಕೊಂಡ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಅವರ ತಂತ್ರದ ಕುರಿತು ಆರ್‌ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬೇಸಿನ್ ರಿಸರ್ವ್ ಮೈದಾನದಲ್ಲಿ ಅಂತಿಮ ದಿನದಂದು ಗೆಲುವಿಗಾಗಿ ಎಂಟು ವಿಕೆಟ್‌ಗಳ ಅಗತ್ಯವಿದ್ದಾಗ ಭಾರತ, ಕೇವಲ ಮೂರು ವಿಕೆಟ್‌ಗಳನ್ನು ಪಡೆಯಲಷ್ಟೇ ಶಕ್ತವಾಯಿತು. ಪಂದ್ಯದುದ್ದಕ್ಕೂ ನ್ಯೂಜಿಲೆಂಡ್ ಬ್ಯಾಟರ್‌ಗಳು ಯಾವುದೇ ಒತ್ತಡವಿಲ್ಲದೆ ಸುಲಭವಾಗಿ ರನ್ ಗಳಿಸಲು ಗಿಲ್ ಅವರ ಫೀಲ್ಡಿಂಗ್ ನಿಯೋಜನೆಯೇ ಕಾರಣವಾಯಿತು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

Dinesh Karthik Criticises Shubman Gill s Field Placements After India vs New Zealand Test Draw

ಐದನೇ ದಿನದಂದು ಹೊಸ ಚೆಂಡಿನೊಂದಿಗೆ ವಿಕೆಟ್ ಕಬಳಿಸುವ ಉತ್ತಮ ಅವಕಾಶ ಭಾರತಕ್ಕಿತ್ತು. ಆದರೆ, ಸ್ಲಿಪ್ ಅಥವಾ ಬ್ಯಾಟರ್‌ಗಳ ಸಮೀಪದಲ್ಲಿ ಹೆಚ್ಚುವರಿ ಫೀಲ್ಡರ್‌ಗಳನ್ನು ನಿಲ್ಲಿಸುವ ಬದಲು, ಗಿಲ್ ಕವರ್ ಮತ್ತು ಬೌಂಡರಿ ಗೆರೆಯ ಬಳಿ ಆಟಗಾರರನ್ನು ನಿಯೋಜಿಸಿದ್ದರು. ಸೈಮನ್ ಡೌಲ್ ಮತ್ತು ಸುನಿಲ್ ಗವಾಸ್ಕರ್ ಕೂಡ ಈ ತಂತ್ರವನ್ನು ಪ್ರಶ್ನಿಸಿದ್ದರು.
ಕ್ರಿಕ್‌ಬಜ್‌ನಲ್ಲಿ ಈ ಕುರಿತು ಮಾತನಾಡಿದ ದಿನೇಶ್ ಕಾರ್ತಿಕ್ ಅವರು, ಕೈಯಲ್ಲಿ ದೊಡ್ಡ ಮೊತ್ತದ ಮುನ್ನಡೆ ಇದ್ದು, ಬೌಂಡರಿಗಳನ್ನು ಬಿಟ್ಟುಕೊಟ್ಟರೂ ಪರವಾಗಿಲ್ಲ. ವಿಕೆಟ್ ಪಡೆಯುವುದೇ ಮುಖ್ಯವಾಗಿರುವ ಸಂದರ್ಭದಲ್ಲಿ ಬೌಂಡರಿ ಲೈನ್‌ನಲ್ಲಿ ಫೀಲ್ಡರ್‌ಗಳನ್ನು ನಿಲ್ಲಿಸುವುದರ ಹಿಂದಿನ ತರ್ಕವೇನೆಂದು ಗಿಲ್ ಅವರನ್ನು ಕೇಳಲು ಬಯಸುತ್ತೇನೆ ಎಂದಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಇದೇ ರೀತಿ ಬೌಂಡರಿ ಲೈನ್‌ಗಳಲ್ಲಿ ಫೀಲ್ಡರ್‌ಗಳನ್ನು ಇರಿಸಲಾಗಿತ್ತು. ಆಧುನಿಕ ಕ್ರಿಕೆಟ್‌ನ ಬ್ಯಾಟರ್‌ಗಳು ದೊಡ್ಡ ಹೊಡೆತಗಳನ್ನು ಬಾರಿಸುವುದರ ಜೊತೆಗೆ ಸುಲಭವಾಗಿ ಒಂಟಿ ರನ್‌ಗಳನ್ನು ಕದಿಯಲು ಕಾಯುತ್ತಿರುತ್ತಾರೆ. ಮೈದಾನದ ಹೊರಗೆ ಫೀಲ್ಡರ್‌ಗಳಿದ್ದಾಗ ಬೌಲರ್‌ಗಳ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ನಾಯಕ ಯೋಚಿಸಬೇಕು ಎಂದು ಕಾರ್ತಿಕ್ ಹೇಳಿದ್ದಾರೆ.

ಮತ್ತೊಮ್ಮೆ ಗೆಲುವಿನ ಸನಿಹದಲ್ಲಿ ಎಡವಿದ ಗಿಲ್ ಪಡೆ

ಬಲಿಷ್ಠ ಸ್ಥಿತಿಯಲ್ಲಿದ್ದರೂ ಟೆಸ್ಟ್ ಪಂದ್ಯವನ್ನು ಗೆಲುವಿನ ದಡ ಸೇರಿಸಲು ಶುಭ್ಮನ್ ಗಿಲ್ ವಿಫಲವಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲೂ ಭಾರತ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಲು ಕೆಲವೇ ವಿಕೆಟ್‌ಗಳ ಅಗತ್ಯವಿತ್ತು.

ಆದರೆ ಸೋನಲ್ ದಿನುಶಾ ಮತ್ತು ಲಂಕಾ ಕೆಳಕ್ರಮಾಂಕದ ಬ್ಯಾಟರ್‌ಗಳು ಭಾರತದ ಬೌಲರ್‌ಗಳಿಗೆ ದಿಟ್ಟ ಪ್ರತಿರೋಧ ಒಡ್ಡಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ವೆಲ್ಲಿಂಗ್ಟನ್‌ನಲ್ಲೂ ರನ್‌ಔಟ್ ಅವಕಾಶ ಕೈತಪ್ಪಿದ್ದು ಮತ್ತು ದೇವದತ್ ಪಡಿಕ್ಕಲ್ ಬಳಿ ಹೋದ ಅರ್ಧ ಅವಕಾಶ ಬಿಟ್ಟರೆ ಭಾರತಕ್ಕೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿಲ್ಲ.

ಡಿಕ್ಲೇರ್ ನಿರ್ಧಾರವನ್ನು ಸಮರ್ಥಿಸಿದ ದಿನೇಶ್ ಕಾರ್ತಿಕ್

ಫೀಲ್ಡಿಂಗ್ ತಂತ್ರವನ್ನು ಟೀಕಿಸಿದರೂ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 720/9 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡ ಸಮಯದ ಬಗ್ಗೆ ಕಾರ್ತಿಕ್ ನಾಯಕನ ಬೆಂಬಲಕ್ಕೆ ನಿಂತಿದ್ದಾರೆ. ಭಾರತ ಬೇಗನೆ ಡಿಕ್ಲೇರ್ ಮಾಡಿಕೊಂಡಿದ್ದರೂ ಪಂದ್ಯದ ಫಲಿತಾಂಶ ಬದಲಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಾಯಕನಾಗಿ ಗಿಲ್ ಅವರ ಪರಿಸ್ಥಿತಿ ತಮಗೆ ಅರ್ಥವಾಗುತ್ತದೆ ಎಂದಿರುವ ಕಾರ್ತಿಕ್, ವೆಲ್ಲಿಂಗ್ಟನ್ ಪಿಚ್ ಸಂಪೂರ್ಣವಾಗಿ ಬ್ಯಾಟರ್‌ಗಳಿಗೆ ನೆರವಾಗುವಂತಿತ್ತು. ನ್ಯೂಜಿಲೆಂಡ್ ತಂಡಕ್ಕೆ ಇನ್ನೂ 60 ಓವರ್‌ಗಳ ಹೆಚ್ಚುವರಿ ಸಮಯ ಸಿಕ್ಕಿದ್ದರೂ ಅವರು ಸುಲಭವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಡಿಕ್ಲೇರ್ ನಿರ್ಧಾರ ತಪ್ಪಾಗಿರಲಿಲ್ಲ ಎಂದು ಹೇಳಿದ್ದಾರೆ.

ಮುಂದಿನ ಪಂದ್ಯಕ್ಕೆ ಹೆಚ್ಚಿದ ಒತ್ತಡ

2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತದ ಗೆಲುವಿನ ಶೇಕಡಾವಾರು ಪ್ರಮಾಣ 50.00ಕ್ಕೆ ಕುಸಿದಿದ್ದು, ಅಗ್ರ ಎರಡು ಸ್ಥಾನಗಳಿಗಿಂತ ಸಾಕಷ್ಟು ಹಿಂದಿದೆ. ಹೀಗಾಗಿ ನವೆಂಬರ್ 27ರ ಶುಕ್ರವಾರದಿಂದ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಯ ಗಳಿಸುವುದು ನಾಯಕ ಶುಭಮನ್ ಗಿಲ್ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+