RCB ಒಡತಿ ಅನನ್ಯಾ ಬಿರ್ಲಾ ಹೊಸ ಹೆಜ್ಜೆ; 'ಕನ್ನಡದ ಅಳಿಯ'ನ ನಟನೆಯ ಸಿನಿಮಾಗೆ ಭಾರಿ ಹೂಡಿಕೆ

ಐಪಿಎಲ್ 2027 ಮಿನಿ ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಲಕಿ ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈ ವರ್ಷದ ಆರಂಭದಲ್ಲಿ ಬರೋಬ್ಬರಿ 16,600 ಕೋಟಿ ರೂಪಾಯಿಗೂ ಅಧಿಕ ಮೊತ್ತ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸುವ ಮೂಲಕ ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಬಿರ್ಲಾ ಕುಟುಂಬ, ಇದೀಗ ಮನರಂಜನಾ ಕ್ಷೇತ್ರದಲ್ಲೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಮುಂದಾಗಿದೆ. ಉದ್ಯಮಿ ಹಾಗೂ ಗಾಯಕಿ ಅನನ್ಯಾ ಬಿರ್ಲಾ ತಮ್ಮ 'ಬಿರ್ಲಾ ಸ್ಟುಡಿಯೋಸ್' ಮೂಲಕ ಭಾರತೀಯ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದು, ಈ ಬಾರಿ ದಕ್ಷಿಣ ಭಾರತದ ತಾರೆಯರೊಂದಿಗೆ ಕೈಜೋಡಿಸಿರುವುದು ವಿಶೇಷವಾಗಿದೆ.

RCB Owner Ananya Birla Enters Film Industry with Ranveer Singh s RS 300 Crore Movie Pralay Viral

ಅನನ್ಯಾ ಬಿರ್ಲಾ ಹೂಡಿಕೆ..

ಖ್ಯಾತ ನಿರ್ದೇಶಕ ಜೈ ಮೆಹ್ತಾ ಆಕ್ಷನ್ ಕಟ್ ಹೇಳುತ್ತಿರುವ 'ಪ್ರಳಯ್' ಎಂಬ ಬೃಹತ್ ಬಜೆಟ್‌ನ ಜೋಂಬಿ ಆಕ್ಷನ್-ಥ್ರಿಲ್ಲರ್ ಚಿತ್ರಕ್ಕೆ ಅನನ್ಯಾ ಬಿರ್ಲಾ ಹೂಡಿಕೆ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ 'ಕನ್ನಡದ ಅಳಿಯ' ಖ್ಯಾತಿಯ ಬಾಲಿವುಡ್ ನಟ ರಣವೀರ್ ಸಿಂಗ್ ನಾಯಕನಾಗಿ ನಟಿಸುತ್ತಿದ್ದರೆ, ದಕ್ಷಿಣ ಭಾರತದ ಜನಪ್ರಿಯ ನಟಿ ಕಲ್ಯಾಣಿ ಪ್ರಿಯದರ್ಶನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆರ್‌ಸಿಬಿ ಒಡತಿ ಮತ್ತು ಸೌತ್ ಇಂಡಿಯನ್ ನಂಟು ಹೊಂದಿರುವ ಈ ತಾರೆಯರ ಸಮಾಗಮ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ.

300 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ

ನಟನೆಯ ಜೊತೆಗೆ ರಣವೀರ್ ಸಿಂಗ್ ತಮ್ಮದೇ ಆದ 'ಮಾ ಕಸಂ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಮತ್ತೊಂದೆಡೆ ಇಮ್ತಿಯಾಜ್ ಅಲಿ ನಿರ್ದೇಶನದ 'ಮೈ ವಾಪಸ್ ಆವುಂಗಾ' ಚಿತ್ರದ ಬಳಿಕ ಅನನ್ಯಾ ಬಿರ್ಲಾ ನಿರ್ಮಿಸುತ್ತಿರುವ ಅತ್ಯಂತ ದುಬಾರಿ ಚಿತ್ರ ಇದಾಗಿದ್ದು, ಸುಮಾರು 300 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ.

ಬಾಲಿವುಡ್‌ಗೆ ಕಲ್ಯಾಣಿ ಎಂಟ್ರಿ, ಮುಂಬೈನಲ್ಲಿ ಭರ್ಜರಿ ತಯಾರಿ

ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಕಲ್ಯಾಣಿ ಪ್ರಿಯದರ್ಶನ್, 'ಪ್ರಳಯ್' ಚಿತ್ರದ ಮೂಲಕ ಅಧಿಕೃತವಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಹೈ-ವೋಲ್ಟೇಜ್ ಆಕ್ಷನ್ ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಕಲ್ಯಾಣಿ ಕಳೆದ ಕೆಲವು ತಿಂಗಳುಗಳಿಂದ ಮುಂಬೈನಲ್ಲೇ ಟಿಕಾಣಿ ಹೂಡಿದ್ದು, ಕಠಿಣ ಹಾಗೂ ವಿಶೇಷ ಆಕ್ಷನ್ ತರಬೇತಿಯನ್ನು ಪಡೆದುಕೊಂಡಿದ್ದಾರೆ.

ಶೂಟಿಂಗ್‌ಗೆ ಮರಳಿದ ರಣವೀರ್ ಸಿಂಗ್

ವೈಯಕ್ತಿಕ ಜೀವನದಲ್ಲೂ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿ ಸಂಭ್ರಮದಲ್ಲಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಈ ದಂಪತಿಗೆ ಎರಡನೇ ಹೆಣ್ಣು ಮಗು ಜನಿಸಿದ್ದು, ಮಗುವಿನ ಆರೈಕೆಗಾಗಿ ಪಿತೃತ್ವದ ರಜೆ ಪಡೆದಿದ್ದ ರಣವೀರ್ ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಪ್ರಸ್ತುತ ಮುಂಬೈನ ವಿವಿಧೆಡೆ 'ಪ್ರಳಯ್' ಚಿತ್ರದ ರೋಚಕ ರಾತ್ರಿ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕ್ರೀಡಾ ಲೋಕದಲ್ಲಿ ಆರ್‌ಸಿಬಿ ಮೂಲಕ ಕನ್ನಡಿಗರ ಮನಗೆದ್ದಿರುವ ಅನನ್ಯಾ ಬಿರ್ಲಾ, ಇದೀಗ ಈ ಬೃಹತ್ ಸಿನಿಮಾ ಮೂಲಕ ಬಾಕ್ಸ್ ಆಫೀಸ್‌ನಲ್ಲೂ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ಟಾಕ್ ಶೋ 'ಕಾಫಿ ವಿತ್ ಕರಣ್ ಸೀಸನ್ 9'ರ ಇತ್ತೀಚಿನ ಸಂಚಿಕೆಯಲ್ಲಿ ನಟಿ ಅನನ್ಯಾ ಪಾಂಡೆ ಅವರೊಂದಿಗೆ ಭಾಗವಹಿಸಿದ್ದ ಅನನ್ಯಾ ಬಿರ್ಲಾ, ತಮ್ಮ 'ಬಿರ್ಲಾ ಸ್ಟುಡಿಯೋಸ್' ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಶೋನಲ್ಲಿ ಗಮನ ಸೆಳೆದ ಮತ್ತೊಂದು ವಿಶೇಷ ಸಂಗತಿ

ಕಾರ್ಯಕ್ರಮದ ನಡುವೆ ಅನನ್ಯಾ ಬಿರ್ಲಾ ಅವರು ಕರಣ್ ಜೋಹರ್ ಅವರನ್ನು ಪ್ರೀತಿಯಿಂದ 'ಪಾಪ್ಸ್' ಎಂದು ಕರೆದಿದ್ದು, ಇದಕ್ಕೆ ಅನನ್ಯಾ ಪಾಂಡೆ ಅಚ್ಚರಿ ವ್ಯಕ್ತಪಡಿಸಿದರು. ಅಲ್ಲದೆ, ವೃತ್ತಿಜೀವನದ ಸವಾಲುಗಳ ಬಗ್ಗೆ ಮಾತನಾಡುವಾಗ ಅನನ್ಯಾ ಬಿರ್ಲಾ 'ನನಗೆ ಸಾಕಷ್ಟು ಅಡೆತಡೆಗಳು ಎದುರಾಗಿವೆ. ಆದರೆ ನಾನು ಎಂದಿಗೂ ಕಷ್ಟಪಟ್ಟು ಹೋರಾಟ ಮಾಡಿಲ್ಲ,' ಎಂದಾಗ, 'ಸ್ಟ್ರಗಲ್' ಎಂಬ ಪದ ನನಗೆ ಮುಜುಗರ ತರುತ್ತದೆ ಎಂದು ಅನನ್ಯಾ ಪಾಂಡೆ ಪ್ರತಿಕ್ರಿಯಿಸಿದ್ದು ಶೋನಲ್ಲಿ ನಗುವಿನ ಅಲೆ ಎಬ್ಬಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+