RSS: ಬಗ್ಗೆ ದೇಶದ ಬಹುಸಂಖ್ಯಾತರು ಒಪ್ಪಿಕೊಂಡಿದ್ದಾರೆ ಎಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ: ಬಿಕೆ ಹರಿಪ್ರಸಾದ್ ತಿರುಗೇಟು

RSS ಬಗ್ಗೆ ದೇಶದ ಬಹುಸಂಖ್ಯಾತರು ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿದ್ದಾರೆ. ಇದಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ತಿರುಗೇಟು ಕೊಟ್ಟಿದ್ದಾರೆ. "Basic Etiquettes" ನ ಪಿತಾಮಹ ಪ್ರಹ್ಲಾದ ಜೋಶಿ ಅವರು ಮೊದಲು ತಮ್ಮ ಪಕ್ಷದ ನಾಯಕರಿಗೆ ಹಾಗೂ ಅದರ ಬಾಲಗೊಂಚಿ ಭಕ್ತರಿಗೆ ಸಾರ್ವಜನಿಕ ಭಾಷೆಯ ಬಗ್ಗೆ ಪಾಠ ಮಾಡಲಿ. ಪೋಕ್ಸೋ ಆರೋಪಿಗಳನ್ನು, ಚೆಕ್ ಮೂಲಕ ಲಂಚ ಪಡೆದು, ತಮ್ಮದೇ ಪಕ್ಷದ ನಾಯಕರಿಂದ "ಎಳಸು" ಅಧ್ಯಕ್ಷ ಎಂದು ಬಿರುದಾಂಕಿತರ ಸಾರ್ವಜನಿಕ ಭಾಷೆಯನ್ನು ಅವರದ್ದೇ ಭಾಷೆಯಲ್ಲಿ ಉತ್ತರಿಸುತ್ತೇನೆ ಹೊರತು, "ಜೀ ಹುಜೂರು" ಎನ್ನುವ ಬಿಜೆಪಿಯ ಸಂಸ್ಕೃತಿಯನ್ನು ನನ್ನಿಂದ ನಿರೀಕ್ಷೆ ಮಾಡುವುದು ಮೂರ್ಖತನ.

"Basic Etiquettes" ಬಗ್ಗೆ ಪುಂಖಾನುಪುಂಖ ಮಾತ್ನಾಡುವ ಜೋಶಿ, ತನ್ನದೇ ಒಡಹುಟ್ಟಿದ ಸಹೋದರ "ಗೋಪಾಲ" ಮಾಡಿದ ಗೋಲ್ಮಾಲ್ ಬಗ್ಗೆ ಮಾತ್ನಾಡುವ "Basic Etiquettes" ಇಲ್ವಾ? ಲೋಕಸಭೆಯ ಟಿಕೆಟ್ ಕೊಡಿಸುವುದಾಗ ಅಮಾಯಕ ದಲಿತ ಹೆಣ್ಣು ಮಗಳನ್ನು ಎರಡು ಕೋಟಿ ಅನ್ಯಾಯ ಮಾಡಿದ್ದು "Basic Etiquettes" ವ್ಯಾಪ್ತಿಯೊಳಗೆ ಬರೋದಿಲ್ವಾ? ಅಣ್ಣನ ಚುನಾವಣೆಗೆ ಮತ ಕೇಳುವಾಗ ಸಂಬಂಧ ಇತ್ತು, ಗೋಲ್ಮಾಲ್ ಮಾಡಿದಾಗ ಸಂಬಂಧವೇ ಇಲ್ಲ ಎನ್ನುವ "Basic Etiquettes" ಯಾರಿಗೂ ಕಲಿಸಲು ಹೋಗಬೇಡಿ.

RSS

ಆರ್‌ಎಸ್‌ಎಸ್‌ ಬಗ್ಗೆ ದೇಶದ ಬಹುಸಂಖ್ಯಾತರು ಒಪ್ಪಿಕೊಂಡಿದ್ದಾರೆ ಎಂದು ಪ್ರಹ್ಲಾದ್ ಜೋಷಿ ಹೇಳುತ್ತಿದ್ದಾರೆ. ಆದರೆ, ಬಹುಸಂಖ್ಯಾತರ ಭಾವನೆಗಳನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಅಧಿಕಾರಕ್ಕೇರುವುದು ಪ್ರಹ್ಲಾದ್ ಜೋಷಿಯಂತಹ ಪೇಶ್ವೆ ಮನಸ್ಥಿತಿಯ ರಾಜಕಾರಣಿಗಳ ರಾಜಕೀಯ ತಂತ್ರ ಎಂದು ಕುಮಾರಸ್ವಾಮಿಯವರೇ ಹೇಳಿದ್ದನ್ನು ಮೊದಲು ನೆನಪಿಸಿಕೊಳ್ಳಲಿ. ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರೇ ಪ್ರಹ್ಲಾದ್ ಜೋಷಿಯನ್ನು "ಮರಾಠಿ ಪೇಶ್ವೆ ವಂಶಸ್ಥ" ಎಂದು ಕರೆದಿದ್ದನ್ನು ಮರೆತಿದ್ದಾರೆಯೇ? 'ತಾವೇ ಬೆಳೆದ ಬೆಳೆಯಲ್ಲಿ ಪಾರ್ಥೇನಿಯಂ ಬೆಳೆದಂತೆ ಆಗಿದೆ ಬಿಜೆಪಿಯ ಪರಿಸ್ಥಿತಿ. ಪ್ರಲ್ಹಾದ್ ಜೋಶಿ ಅಂತಹ ಪಾರ್ಥೇನಿಯಂ' ಎಂದು ಕೂಡಾ ಹೆಚ್ ಡಿ ಕುಮಾರಸ್ವಾಮಿಯವರು ಹೇಳಿದ್ದರು.‌ ಅಂತಹ ಪಾರ್ಥೇನಿಯಂ ಜೊತೆಗೆ ನಮ್ಮ ಗಂಭೀರ ಚರ್ಚೆಯಿಲ್ಲ.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಿಖ್ ಹತ್ಯಾಕಾಂಡವನ್ನು ನೆನಪಿಸಿದ್ದಾರೆ. ಆ ಘಟನೆಗೆ ಸಂಬಂಧಿಸಿದಂತೆ ತನಿಖೆಗಳು ನಡೆದಿವೆ, ನ್ಯಾಯಾಂಗ ಪ್ರಕ್ರಿಯೆಗಳು ನಡೆದಿವೆ ಮತ್ತು ಕಾಂಗ್ರೆಸ್ ಪಕ್ಷವೂ ಹಲವು ಸಂದರ್ಭಗಳಲ್ಲಿ ವಿಷಾದ ವ್ಯಕ್ತಪಡಿಸಿದೆ. ಘಟನೆಗೆ ಕಾರಣರಾದ ಎಲ್ಲರನ್ನು ಪಕ್ಷದಿಂದ ಉಚ್ಚಾಟಿಸಿ ಕಾಂಗ್ರೆಸ್ ತೀವ್ರತರವಾದ ಕ್ರಮಗಳನ್ನೂ ತೆಗೆದುಕೊಂಡಿದೆ. ಈಗ ಅದೇ ಧೈರ್ಯದಿಂದ ಪ್ರಹ್ಲಾದ್ ಜೋಷಿಯವರು 2002ರ ಗುಜರಾತ್ ಹತ್ಯಾಕಾಂಡದ ಬಗ್ಗೆ ಉತ್ತರಿಸಲಿ. ಗುಜರಾತ್ ಗಲಭೆ ಮಾಡಿ ನೂರಾರು ಮಹಿಳೆಯರು ಮಕ್ಕಳನ್ನು ಕೊಂದು ಸಜೀವ ದಹನ ಮಾಡಿದ ಆರೋಪಕ್ಕೆ ಕಾರಣರಾಗಿ ಗಡಿಪಾರಾದ ವ್ಯಕ್ತಿ ಈಗ ದೇಶದ ಗೃಹ ಸಚಿವರಾಗಿದ್ದಾರೆ. ರಾಜೀನಾಮೆ ಕೇಳುವ ಧೈರ್ಯ ಇದೆಯೇ? ಅಥವಾ ಕನಿಷ್ಟ ಪಕ್ಷ ವಿಶಾದವನ್ನಾದರೂ ವ್ಯಕ್ತಪಡಿಸುವ ಮಾನವೀಯತೆ ಉಳಿದಿದಯೇ?

ಗುಜರಾತ್‌ನ ಅಂದಿನ ಡಿಜಿಪಿ ಸಂಜೀವ್ ಭಟ್ ಪ್ರಕಾರ ಗುಜರಾತ್ ಗಲಭೆಗೆ ಕಾರಣವೇ ಅಂದಿನ ಮುಖ್ಯಮಂತ್ರಿಯಾಗಿದ್ದ, ಈಗಿನ ಪ್ರಧಾನಿ ನರೇಂದ್ರ ಮೋದಿ. ವಡೋದರದ ಬೀದಿಯಲ್ಲಿ ಗರ್ಭಿಣಿ ಹೆಣ್ಣುಮಗಳ ಹೊಟ್ಟೆಯಲ್ಲಿ ತ್ರಿಶೂಲ ಚು* ಮೆರವಣಿಗೆ ಮಾಡಿದ ಗೂಂಡಾಗಿರಿ ಸಂಸ್ಕೃತಿ ಯಾರದ್ದು?
ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅತ್ಯಾಚಾರ ಮತ್ತು ಹತ್ಯೆಗೆ ಶಿಕ್ಷೆಗೊಂಡ ಅಪರಾಧಿಗಳು ಬಿಡುಗಡೆಯಾದಾಗ ಅವರನ್ನು ಹೂಮಾಲೆ ಹಾಕಿ ಸ್ವಾಗತಿಸಿದವರು ಯಾರ ಸೈದ್ದಾಂತಿಕ ಪರಿವಾರದವರು ಎಂಬುದನ್ನು ದೇಶವೇ ನೋಡಿದೆ. ಬಿ ಕೆ ಹರಿಪ್ರಸಾದ್ ಅವರು ಗೂಂಡಾಗಿರಿ ಅನುಭವದಿಂದ ಹೇಳಿಕೆ ನೀಡಿದ್ದಾರೆ ಎಂದು 'ಪಾರ್ಥೇನಿಯಂ ಜೋಷಿ'ಯವರು ಹೇಳಿದ್ದಾರೆ. ನಾನು ಹಿಂದುತ್ವದ ಹೆಸರಿನಲ್ಲೋ, ಜಾತಿ ಹೆಸರಿನಲ್ಲೋ ಗೂಂಡಾಗಿರಿ ಮಾಡಿಲ್ಲ. ನನ್ನ ಮೇಲೆ ಜಾತ್ಯಾತೀತತೆ, ಸಂವಿಧಾನ ರಕ್ಷಣೆಗಾಗಿ ನಡೆದ ಹೋರಾಟಕ್ಕಾಗಿನ ಪ್ರಕರಣ ಹೊರತುಪಡಿಸಿದರೆ ಇನ್ನಾವುದೇ ಪ್ರಕರಣವೂ ಇಲ್ಲ.‌

ನಾನು 'ಪಾರ್ಥೇನಿಯಂ ಜೋಷಿ'ಯವರ ಹೈಕಮಾಂಡ್ ನಂತೆ ಯಾವತ್ತೂ ಗಡಿಪಾರಾಗಿಲ್ಲ. ನಾನು ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗಾಗಿನ ಹೋರಾಟದ ಮೂಲಕ ರಾಜಕೀಯ ಮಾಡುತ್ತಿದ್ದೇನೆ. ಹೆಚ್ ಡಿಕೆಯವರಿಂದ ಪೇಶ್ವೆ ಬಿರುದಾಂಕಿತ ಜೋಷಿಯವರು ಸಮಾಜವನ್ನು ಧರ್ಮ, ಜಾತಿ ಮತ್ತು ದ್ವೇಷದ ಹೆಸರಿನಲ್ಲಿ ವಿಭಜಿಸಿ, ಹಿಂದುಳಿದವರನ್ನು ಜೈಲಿಗೆ ಕಳುಹಿಸಿ, ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ವಾತಾವರಣ ನಿರ್ಮಿಸಿ ಅಧಿಕಾರದ ಗದ್ದುಗೆ ಏರಿದ್ದಾರೆ, ಏರುತ್ತಾರೆ. ಇದುವೇ ನಿಜವಾದ ಸೈದ್ಧಾಂತಿಕ ಗೂಂಡಾಗಿರಿಯ ರಾಜಕಾರಣ ಎಂದು ತೀಕ್ಷ್ಣ ಪದಗಳನ್ನು ಬಳಸಿ ವಾಗ್ದಾಳಿ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+