SIR: 11 ಮಾನದಂಡಗಳ ಪ್ರಕಾರ ಪಿಆರ್‌ಸಿ ಶಾಶ್ವತ ನಿವಾಸ ಪ್ರಮಾಣ ಪತ್ರ: ಡಿಸಿಎಂ ಜಿ. ಪರಮೇಶ್ವರ್ ಗುಡ್‌ನ್ಯೂಸ್
ಕರ್ನಾಟಕದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಚುರುಕು ಪಡೆದುಕೊಂಡಿದೆ. ಆದರೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕೆಲವೊಂದು ತೊಡಕುಗಳು ಎದುರಾಗಿವೆ. ಇದೀಗ 11 ಮಾನದಂಡಗಳ ಪ್ರಕಾರ ಪಿಆರ್‌ಸಿ ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡುವುದಾಗಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ನಮ್ಮ ಹೊಸ ಸರ್ಕಾರ ಮತ್ತೊಂದು ಹೆಜ್ಜೆಯನ್ನು ಜನರ ಸೇವೆ ಮಾಡಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಡುತ್ತಿದ್ದೇವೆ. ಭಾರತ ಸರ್ಕಾರ ಎಸ್‌ಐಆರ್ ಮಾಡಲು ಪ್ರಾರಂಭಿಸಿದ್ದಾರೆ. ಅದಕ್ಕೆ, ಒಂದು ರೀತಿಯಲ್ಲಿ ಸಹಾಯವಾಗಲು, ಅವರ ಕೊಟ್ಟಿರುವ ನಿಯಮಗಳಲ್ಲಿ ಯಾರು ಶಾಶ್ವತವಾಗಿ ನಿವಾಸಿಗಳಾಗಿದ್ದಾರೆ ಸರ್ಕಾರದ ವತಿಯಿಂದ ದಾಖಲಾತಿ ಇರಬೇಕು ಎಂದು 11 ಮಾನದಂಡಗಳ ಜೊತೆಯಲ್ಲಿ ಪಿಆರ್‌ಸಿ ನೀಡಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತೀರ್ಮಾನಿಸಿದ್ದಾರೆ ಎಂದು ಹೇಳಿದ್ದಾರೆ.
ಯಾವ ಆಧಾರದ ಮೇಲೆ ನೀಡಬೇಕು ಎಂಬ ಕೆಲವು ನಿಯಮಗಳನ್ನು ಮಾಡಿಕೊಂಡಿದ್ದೇವೆ. ಉದ್ಯೋಗ, ವಿವಾಹ, ರಾಜ್ಯದಲ್ಲಿ ಸತತವಾಗಿ ಹತ್ತು ವರ್ಷಗಳ ಕಾಲ ವಾಸ ಮಾಡಿರಬೇಕು. ಕರ್ನಾಟದಲ್ಲಿ ಜನಿಸಿರುವ ಆಧರದ ಮೇಲೆ ಪಿಅರ್‌ಸಿ ನೀಡಲು ತೀರ್ಮಾನಿಸಿದ್ದೇವೆ.

ಸರ್ಟಿಫಿಕೆಟ್‌ಗಳನ್ನು ಮನೆಮನೆಗೆ ತಲುಪಿಸುತ್ತೇವೆ. ಜನರು ಹತ್ತಾರು ಕಡೆ, ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಕಾರಣದಿಂದ ಈ ತೀರ್ಮಾನ ಮಾಡಿದ್ದೇವೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪ್ರವರ್ಗ 2ಎ, 2ಬಿ ಹಾಗೂ 3ಎ ಮತ್ತು 3ಬಿ 1.36 ಕೋಟಿ ಜನರಿದ್ದಾರೆ. ಪ್ರವರ್ಗ 1ರಲ್ಲಿ ಜಾತಿ ಪ್ರಮಾಣ ಪತ್ರಗಳ ಸಂಖ್ಯೆ 0.86 ಕೋಟಿ ಇದೆ. ಅನುಸೂಚಿ ಜಾತಿ ಮತ್ತು ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ 2.63 ಕೋಟಿ ಇದೆ. ಒಟ್ಟಾರೆ ಜಾತಿ ಪ್ರಮಾಣ ಪತ್ರವನ್ನು ನೀಡಲು ಲೆಕ್ಕ ಹಾಕಿರುವುದು 4.85 ಕೋಟಿ ಕೊಡಲು ಪ್ರಾರಂಭಿಸುತ್ತಿದ್ದೇವೆ.
ವೆಬ್‌ಸೈಟ್ ಮೂಲಕ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೋಬಳಿ ಮಟ್ಟದಲ್ಲಿ ಸಹಾಯ ಕೇಂದ್ರಗಳಿಂದ ಪಡೆಯಬಹುದು. ವಾಟ್ಸಪ್ ಮೂಲಕ ಮತ್ತು ನೇರವಾಗಿ ಪಡೆದುಕೊಳ್ಳಬಹುದು. ಈ ರೀರಿಯ ಅವಕಾಶ ಕಲ್ಪಿಸಿಕೊಟ್ಟಿದ್ದೇವೆ. ನಾಡಕಚೇರಿ, ಗ್ರಾಮ 1ರಲ್ಲಿ ಅರ್ಜಿ ಸಲ್ಲಿಸಿದ್ದರೆ ಅಥವಾ ಬಾಪೂಜಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದರೆ ವೆಬ್‌ಸೈಟ್ ಮೂಲಕ ಪಡೆದುಕೊಳ್ಳುವ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ. ಯಾವುದಾದರು ರೀತಿಯಲ್ಲಿ ತೊಂದರೆ ಆಗಿರುವ ದೂರುಗಳು ಬಂದರೆ ಪರಿಶೀಲಿಸಲು ಸಕ್ಷಮ ಪ್ರಾಧಿಕಾರ ಮಾಡಲಾಗಿದೆ. ತಹಶೀಲ್ದಾರ್, ಉಪತಹಶೀಲ್ದಾರ್‌ಗ ಹಾಗೂ ಉಪವಿಭಾಗಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಯಾವುದಾದರು ಅರ್ಜಿಗೆ ತೊಂದರೆ ಇದ್ದರೆ, ದೂರು ಆಧರಿಸಿ ಪುನರ್ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳು ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಪಿಆರ್‌ಸಿ ಪಡೆಯಲು ಇರಬೇಕಾದ ಪ್ರಮುಖ ಮಾನದಂಡಗಳು
ಪಿಆರ್‌ಸಿ ಪಡೆಯಲು ಅರ್ಜಿ ಸಲ್ಲಿಸಲು ಕರ್ನಾಟಕದಲ್ಲಿ ಜನಿಸಿರಬೇಕು.
ಸಾಮಾನ್ಯ ವಾಸಸ್ಥಳ ಅರ್ಜಿದಾರರ ಪಾಲಕರು ಸಾಅಮನ್ಯವಾಗಿ ಕನಿಷ್ಟವಾಗಿ ಹತ್ತು ವರ್ಷ ಕರ್ನಾಟಕದಲ್ಲಿ ವಾಸ ಇರಬೇಕು.
ಅರ್ಜಿದಾರರು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ದ್ವಿತೀಯ ಪಿಯುಸಿ ಅಥವಾ ಸತತ ಹತ್ತು ವರ್ಷ ವ್ಯಾಸಂಗ ಮಾಡಿರಬೇಕು.
ಪೋಷಕರು ಅಥವಾ ಸಂಗಾತಿಯ ವಾಸಸ್ಥಳ, ಅರ್ಜಿದಾರರ ತಂದೆ-ತಾಯಿ, ಕಾನೂನು ಬದ್ಧ ಪಾಲಕರು ಅಥವಾ ಪತಿ-ಪತ್ನಿ ಕರ್ನಾಟಕದಲ್ಲಿ ಸಾಮಾನ್ಯ ನಿವಾಸಿಯಾಗಿರಬೇಕು.
ಅರ್ಜಿದಾರರು ಅಥವಾ ಕುಟುಂಬ ಕರ್ನಾಟಕದಲ್ಲಿ ವಸತಿ ಅಥವಾ ಸ್ಥಿರಾಸ್ಥಿಯ ಮಾಲಿಕತ್ವ ಹೊಂದಿರಬೇಕು. ಕಾನೂನು ಬದ್ಧ ವಾರಸುದಾರರಾಗಿರಬೇಕು.
ಮತದಾರರ ಪಟ್ಟಿಯಲ್ಲಿ ಅರ್ಜಿದಾರರ ಹೆಸರು ಇರಬೇಕು.
ಆಧಾರ್, ಕಂದಾಯ ದಾಖಲೆಗಳು, ಪಡಿತರ ಚೀಟಿ ಅಥವಾ ಇತರೆ ಸರ್ಕಾರಿ ದಾಖಲೆಗಳಲ್ಲಿ ಅರ್ಜಿದಾರರ ಪೋಷಕರ ಹೆಸರು ಸಾಮಾನದಯ ನಿವಾಸಿಯಾಗಿ ದಾಖಲಾಗಿರಬೇಕು.
ಸರ್ಕಾರಿ ಅಥವಾ ಸಾರ್ವಜನಿಕ ಸೇವೆಯಲ್ಲಿ ಗಣನೀಯ ಅವಧಿ 7 ವರ್ಷ ಸೇವೆ ಸಲ್ಲಿಸಿರಬೇಕು.
ಅರ್ಜಿದಾರರು ಕರ್ನಾಟಕದಲ್ಲಿ ವಾಸಿಸುವ ವ್ಯಕ್ತಿಯನ್ನು ವಿವಾಹವಾಗಿದ್ದರೆ ಅರ್ಹತೆ.
ಯಾವುದೇ ಅಂಶಗಳನ್ನು ಒಳಗೊಂಡ ಲಭ್ಯ ಇದ್ದರೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಮನೆಮನೆಗೆ ತಲುಪಿಸುವ ಕೆಲಸವನ್ನು ಮಾಡುತ್ತೇವೆ. 4.8 ಕೋಟಿ ಸರ್ಟಿಫಿಕೇಟ್‌ಗಳನ್ನು ಅಟಲ್ ಜನಸ್ನೇಹಿ ಕೇಂದ್ರಗಳ ಜಿಲ್ಲಾಧಿಕಾರಿಗಳಿಗೆ ಮೂಲಕ ಕಳಿಸಲಾಗಿದೆ. ಜಿಲ್ಲೆಯಲ್ಲಿ ಅರ್ಜಿ ಹಾಕುವವರಿಗೆ ತಹಶೀಲ್ದಾರರು ಮತ್ತು ಕೆಳ ಹಂತದ ಅಧಿಕಾರಿಗಳು ಮನೆಮನೆಗೆ ತಲುಪಿಸುತ್ತಾರೆ.
ಪಿಆರ್‌ಸಿ ಅನೇಕ ರೀತಿಯಲ್ಲಿ ಉಪಯೋಗ ಆಗುತ್ತದೆ. ಎಸ್‌ಐಆರ್‌ಗೆ ಅನುಕೂಲವಾಗುವುದರ ಜೊತೆಗೆ ಕರ್ನಾಟಕದಲ್ಲಿ ಹೊರಗಿನವರು ನೆಲೆಸಿದ್ದಾರೆ ಎಂದು ಅನೇಕ ಸಂದರ್ಭದಲ್ಲಿ ಅಧಿವೇಶನದಲ್ಲಿ ಪ್ರಶ್ನೆಗಳು ಬರುತ್ತವೆ. ಅಕ್ರಮ ವಲಸಿಗರು ಇದ್ದಾರೆ, ಸವಲತ್ತುಗಳನ್ನು ಪಡೆಯುತ್ತಾರೆ ಎಂಬ ಆರೋಪಗಳು ಬಂದಿವೆ. ಈಗ, ಈ ಅರ್ಹತೆಗಳಿಗೆ ಒಳಪಡದಿರುವವರು ಹೊರಗೆ ಉಳಿಯುತ್ತಾರೆ ಎಂದೂ ಅವರು ಹೇಳಿದ್ದಾರೆ.


Click it and Unblock the Notifications
